ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನ ಇಕ್ವಿಟಿ ಸ್ವತ್ತನ್ನು ಹೆಚ್ಚಿಸಿಕೊಂಡ ಫ್ಲಿಪ್‌ಕಾರ್ಟ್‌: 24.9 ಬಿಲಿಯನ್ ಡಾಲರ್‌ ಮೌಲ್ಯ

|
Google Oneindia Kannada News

ನವದೆಹಲಿ, ಜುಲೈ 15: ಫ್ಲಿಪ್‌ಕಾರ್ಟ್‌ ಮಂಗಳವಾರ ತನ್ನ ಪ್ರಮುಖ ಮಾಲೀಕ ವಾಲ್‌ಮಾರ್ಟ್‌ ಇಂಕ್ ನೇತೃತ್ವದ ಹೂಡಿಕೆಯಲ್ಲಿ 1.2 ಬಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದೆ.

ಫ್ಲಿಪ್‌ಕಾರ್ಟ್ ಗ್ರೂಪ್ ತನ್ನ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಹೆಚ್ಚುವರಿ 1.2 ಬಿಲಿಯನ್ ಇಕ್ವಿಟಿ ಸ್ವತ್ತನ್ನು ಹೆಚ್ಚಿಸಿಕೊಂಡಿದೆ. ಫ್ಲಿಪ್​ಕಾರ್ಟ್​ನ ಬಹುಪಾಲು ಪಾಲುದಾರಿಕೆ ಹೊಂದಿರುವ ವಾಲ್​ಮಾರ್ಟ್​ ನೇತೃತ್ವದಲ್ಲಿ ಕಂಪನಿಯ ಇತರೆ ಷೇರುದಾರರು ಈ ಹೂಡಿಕೆ ಮಾಡಿದ್ದಾರೆ. ಇದರೊಂದಿಗೆ ಕಂಪನಿಯ ಮೌಲ್ಯ 24.9 ಬಿಲಿಯನ್ ಡಾಲರ್ ಆಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಹಣವನ್ನು ಎರಡು ಕಂತುಗಳಲ್ಲಿ ನೀಡಲಾಗುವುದು ಎಂದು ಹೇಳಲಾಗಿದೆ.

Vocal for Local: ಕರ್ನಾಟಕ ಕೈಮಗ್ಗ ಜೊತೆ ಫ್ಲಿಪ್ ಕಾರ್ಟ್ ಡೀಲ್Vocal for Local: ಕರ್ನಾಟಕ ಕೈಮಗ್ಗ ಜೊತೆ ಫ್ಲಿಪ್ ಕಾರ್ಟ್ ಡೀಲ್

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಫ್ಲಿಪ್‌ಕಾರ್ಟ್ ಕೋವಿಡ್ -19 ಬಿಕ್ಕಟ್ಟಿನಿಂದ ಭಾರತ ಹೊರಹೊಮ್ಮುತ್ತಿದ್ದಂತೆ ತನ್ನ ಇ-ಕಾಮರ್ಸ್ ಮಾರುಕಟ್ಟೆಯ ಮುಂದುವರಿದ ಅಭಿವೃದ್ಧಿಗೆ ಬಳಸುತ್ತದೆ ಎಂದು ಅದು ಹೇಳಿದೆ.

Flipkart Raises 1.2 Billion Dollar In Walmart-Led Funding

ಈ ಬಗ್ಗೆ ಮಾತನಾಡಿರುವ ಫ್ಲಿಪ್​ಕಾರ್ಟ್​ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ, 'ಕೊರೋನಾ ವೈರಸ್ ನಂತಹ ಸಾಂಕ್ರಾಮಿಕ ಸವಾಲಿನ ಸಮಯದಲ್ಲಿ ನಾವು ನಮ್ಮ ಸಂಸ್ಥೆಯನ್ನು ಸದೃಢವಾಗಿ ಬೆಳೆಸುವುದಕ್ಕೆ ಮತ್ತು ಭಾರತೀಯರ ಅವಶ್ಯಕತೆಗಳನ್ನು ಪೂರೈಸುವಿಕೆ ಹೆಚ್ಚುತ್ತಿರುವುದರಿಂದ ನಮ್ಮ ಷೇರುದಾರರು ಬೆಂಬಲವಾಗಿ ನಿಂತಿದ್ದಕ್ಕೆ ಅವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಹೇಳಿದ್ದಾರೆ.

ಅಂತೆಯೇ ಫ್ಲಿಪ್‌ಕಾರ್ಟ್‌ನಲ್ಲಿ ವಾಲ್‌ಮಾರ್ಟ್‌ ಹೂಡಿಕೆ ಆರಂಭ ಆದಾಗಿನಿಂದಲೂ ನಮ್ಮ ತಂತ್ರಜ್ಞಾನ, ಪಾಲುದಾರಿಕೆ ಮತ್ತು ಹೊಸ ಸೇವೆಗಳ ಮೂಲಕ ನಾವು ನಮ್ಮ ಕೊಡುಗೆಯನ್ನು ಹೆಚ್ಚು ವಿಸ್ತರಿಸಿಕೊಂಡಿದ್ದೇವೆ. ಇಂದು, ನಾವು ಎಲೆಕ್ಟ್ರಾನಿಕ್ಸ್ ಮತ್ತು ಫ್ಯಾಷನ್‌ನಲ್ಲಿ ಹೆಚ್ಚು ಮುನ್ನಡೆಯುತ್ತಿದ್ದೇವೆ. ಮತ್ತು ನಮ್ಮ ಗ್ರಾಹಕರಿಗೆ ತಡೆರಹಿತ ಪಾವತಿ ಮತ್ತು ವಿತರಣೆ ಇತರೆ ಸಾಮಾನ್ಯ ಸರಕು ವಿಭಾಗಗಳು ಮತ್ತು ದಿನಸಿಗಳಲ್ಲಿ ಪಾಲನ್ನು ಹೆಚ್ಚಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ 200 ಮಿಲಿಯನ್ ಭಾರತೀಯ ವ್ಯಾಪಾರಿಗಳನ್ನು ಆನ್‌ಲೈನ್‌ ವ್ಯವಸ್ಥೆಯಡಿ ತರುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

2007 ರಲ್ಲಿ ಸ್ಥಾಪನೆಯಾದ ಫ್ಲಿಪ್‌ಕಾರ್ಟ್ ಸಮೂಹವು, ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್​ಗಳಾದ ಫೋನ್ ಪೇ, ಫ್ಯಾಶನ್ ಸ್ಪೆಷಾಲಿಟಿ, ಮತ್ತು ಇ-ಕಾರ್ಟ್ ಅನ್ನು ಒಳಗೊಂಡಿದೆ.

English summary
Flipkart said on Tuesday it raised $1.2 billion in an investment led by its majority owner Walmart Inc, valuing the Indian e-commerce firm at $24.9 billion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X