ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರು ಹೊಸ ನಗರಗಳಲ್ಲಿ ಫ್ಲಿಪ್ ಕಾರ್ಟ್ ಕ್ವಿಕ್ ಸೇವೆ ಆರಂಭ

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ತನ್ನ ಹೈಪರ್ ಲೋಕಲ್ ಸೇವೆಯಾದ ಫ್ಲಿಪ್ ಕಾರ್ಟ್ ಕ್ವಿಕ್ ಅನ್ನು ಹೊಸದಾಗಿ ಆರು ನಗರಗಳಾದ ದೆಹಲಿ, ಗುರುಗಾಂವ್, ಗಾಜಿಯಾಬಾದ್, ನೋಯ್ಡಾ, ಹೈದ್ರಾಬಾದ್ ಮತ್ತು ಪುಣೆಗಳಿಗೆ ವಿಸ್ತರಣೆ ಮಾಡಿದೆ.

ಫ್ಲಿಪ್ ಕಾರ್ಟ್ ಈ ಹೈಪರ್ ಲೋಕಲ್ ಸೇವೆಯನ್ನು ಉಳಿದ ಮೆಟ್ರೋ ನಗರಗಳು ಮತ್ತು ನಗರಗಳಿಗೆ ಈ ವರ್ಷ ಹಂತಹಂತವಾಗಿ ವಿಸ್ತರಣೆ ಮಾಡುವ ಗುರಿಯನ್ನು ಹೊಂದಿದೆ.

ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಫ್ಲಿಪ್ ಕಾರ್ಟ್ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಮತ್ತು ಕಳೆದ ಹಲವು ತಿಂಗಳಿಂದ ಸ್ಥಳೀಯ ಆಡಳಿತಗಳು ಹೊರಡಿಸುತ್ತಿರುವ ಆದೇಶಗಳು ಮತ್ತು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ.

Flipkart Quick hyperlocal service expands in 6 new cities.

2020ರಲ್ಲಿ ಫ್ಲಿಪ್ ಕಾರ್ಟ್ ಕ್ವಿಕ್ ಅನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿತ್ತು. ಇದರ ಮೂಲಕ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರಿಗೆ ಅವರಿರುವ ಸ್ಥಳಗಳಿಗೆ ವಿಸ್ತಾರವಾದ ಉತ್ಪನ್ನಗಳ ಲಭ್ಯತೆ ಮತ್ತು ತ್ವರಿತ ವಿತರಣೆ ಸಾಧ್ಯವಾಗುತ್ತಿದೆ. ತಾಜಾ ಹಣ್ಣುಗಳು ಮತ್ತು ತರಕಾರಿಗಳು. ಡೈರಿ ಉತ್ಪನ್ನಗಳು, ಮಾಂಸ, ದಿನಸಿ, ಮೊಬೈಲ್ ಗಳು, ಎಲೆಕ್ಟ್ರಾನಿಕ್ಸ್ ಮತ್ತು ಮಕ್ಕಳ ಆರೈಕೆ ಉತ್ಪನ್ನಗಳು ಸೇರಿದಂತೆ 3000 ಕ್ಕೂ ಅಧಿಕ ಉತ್ಪನ್ನಗಳನ್ನು ಹೈಪರ್ ಲೋಕಲ್ ಡೆಲಿವರಿ ಸೇವೆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ.

ಫ್ಲಿಪ್ ಕಾರ್ಟ್ ಕ್ವಿಕ್ ಕಂಪನಿಯ ನಿಂಜಾಕಾರ್ಟ್ ನಲ್ಲಿನ ಹೂಡಿಕೆ ಮತ್ತು ಇತರೆ ಸ್ಥಳೀಯ ಮಾರಾಟಗಾರರೊಂದಿಗೆ ಕಾರ್ಯತಂತ್ರದ ಸಹಭಾಗಿತ್ವವನ್ನು ಹೊಂದುವ ಮೂಲಕ ಗ್ರಾಹಕರಿಗೆ ಅಗತ್ಯವಾದ ಸೇವೆಗಳನ್ನು ಒದಗಿಸುತ್ತಿದೆ.

ಫ್ಲಿಪ್ ಕಾರ್ಟ್ ಕ್ವಿಕ್ ಗ್ರಾಹಕರು ಆನ್ ಲೈನ್ ನಲ್ಲಿ ತಮಗೆ ಬೇಕಾದ ಉತ್ಪನ್ನಗಳನ್ನು ಆರ್ಡರ್ ಮಾಡಿದ 90 ನಿಮಿಷಗಳೊಳಗೆ ಅವುಗಳನ್ನು ಪಡೆದುಕೊಳ್ಳಲು ಅವಕಾಶ ನೀಡುತ್ತದೆ. ಅಲ್ಲದೇ, ಅವರ ಅನುಕೂಲಕ್ಕೆ ತಕ್ಕಂತೆ 2 ಗಂಟೆಯ ಅವಧಿಯಲ್ಲಿ ಆರ್ಡರ್ ಮಾಡಿದ ಉತ್ಪನ್ನಗಳನ್ನು ಪಡೆದುಕೊಳ್ಳಬಹುದಾಗಿದೆ. ಗ್ರಾಹಕರು ತಮ್ಮ ಮೊದಲ ಆರ್ಡರ್ ಅನ್ನು ಉಚಿತವಾಗಿ ಡೆಲಿವರಿ ಪಡೆದುಕೊಳ್ಳಬಹುದಾಗಿದೆ ಮತ್ತು 499 ರೂಪಾಯಿಗಿಂತ ಅಧಿಕ ಮೊತ್ತದ ಉತ್ಪನ್ನಗಳನ್ನು ಆರ್ಡರ್ ಮಾಡಿದರೆ ಉಚಿತ ಡೆಲಿವರಿ ಸೇವೆಯನ್ನು ಪಡೆದುಕೊಳ್ಳಬಹುದು. ಗ್ರಾಹಕರು ಯಾವುದೇ ಸಮಯದಲ್ಲಿಯೂ ಉತ್ಪನ್ನಗಳಿಗೆ ಆರ್ಡರ್ ಮಾಡಬಹುದು ಮತ್ತು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ವಿತರಣೆ ಪಡೆದುಕೊಳ್ಳಲು ಅವಕಾಶವಿದೆ.

English summary
Flipkart, India’s homegrown e-commerce marketplace, has expanded its hyperlocal service Flipkart Quick to six new cities - Delhi, Gurgaon, Ghaziabad, Noida, Hyderabad and Pune.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X