• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2030ರ ವೇಳೆಗೆ ಸಾಗಣೆ ವ್ಯವಸ್ಥೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನ ಬಳಕೆಗೆ ಫ್ಲಿಪ್‌ಕಾರ್ಟ್ ಸಂಕಲ್ಪ

|

ಬೆಂಗಳೂರು, ಆಗಸ್ಟ್ 25, 2020: ಭಾರತದಲ್ಲಿ ಮುಂಚೂಣಿಯಲ್ಲಿರುವ ಫ್ಲಿಪ್ ಕಾರ್ಟ್ ತನ್ನ ಇ-ಕಾಮರ್ಸ್ ಸಪ್ಲೈ ವ್ಯಾಲ್ಯೂ ಚೇನ್ ನಾದ್ಯಂತ ದೀರ್ಘಾವಧಿಯ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ಬದ್ಧತೆಯ ಮುಂದುವರಿದ ಭಾಗವಾಗಿ ತನ್ನೆಲ್ಲಾ ಬಳಕೆಗೆ ಎಲೆಕ್ಟ್ರಿಕ್ ವಾಹನಗಳನ್ನು(ಇವಿ) ಬಳಸುವ ಉಪಕ್ರಮವನ್ನು ಇಂದು ಘೋಷಣೆ ಮಾಡಿದೆ. ಈ ಮೂಲಕ ಹವಾಮಾನ ಗುಂಪಿನ ಜಾಗತಿಕ ಎಲೆಕ್ಟ್ರಿಕ್ ಸಾರಿಗೆ ಉಪಕ್ರಮವಾದ ಇವಿ 100 ರಲ್ಲಿ ಸೇರ್ಪಡೆಗೊಂಡಿದೆ.

   GaganaChukki Falls - ಮೈದುಂಬಿ ಹರಿಯುತ್ತಿದೆ ಗಗನಚುಕ್ಕಿ ಜಲಪಾತ | Oneindia Kannada

   ಸಾರಿಗೆ ವ್ಯವಸ್ಥೆಯನ್ನು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸಿಕೊಳ್ಳುವ ಅಥವಾ ಪರಿವರ್ತನೆ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ವೇಗಗೊಳಿಸುವ ಮತ್ತು 2030 ರ ವೇಳೆಗೆ ವಿದ್ಯುತ್ ಚಾಲಿತ ಸಾರಿಗೆಯನ್ನು ಹೊಸ ಸಾರಿಗೆ ವ್ಯವಸ್ಥೆಯನ್ನಾಗಿ ಮಾಡುವ ಬದ್ಧತೆ ಹೊಂದಿದೆ.

   ಮನೆಗಳಿಗೆ ಮದ್ಯ ಡಿಲಿವರಿ ನೀಡಲು ಫ್ಲಿಪ್‌ಕಾರ್ಟ್‌ ಚಿಂತನೆ: ಎರಡು ನಗರಗಳಿಂದ ಆರಂಭ?

   ಈ ಬದ್ಧತೆ ಮತ್ತು ಇವಿಗಳ ವಿಸ್ತಾರವಾದ ಸೇರ್ಪಡೆಯೊಂದಿಗೆ ಫ್ಲಿಪ್ ಕಾರ್ಟ್ 2030 ರ ವೇಳೆಗೆ ತನ್ನ ಸಂಪೂರ್ಣ ಸಾಗಾಣೆ ವ್ಯವಸ್ಥೆಯಲ್ಲಿ (ನೇರ ಮಾಲೀಕತ್ವ ಅಥವಾ ಗುತ್ತಿಗೆ ಆಧಾರ) ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಗುರಿ ಹೊಂದಿದೆ. ಸೇವಾ ಕಾಂಟ್ರಾಕ್ಟ್ ಗಳಲ್ಲಿ ಅಗತ್ಯವಾದ ಮೂಲಸೌಕರ್ಯಗಳನ್ನು ಪೂರೈಸುವ ಮೂಲಕ ಇದನ್ನು ಜಾರಿಗೆ ತರಲಾಗುತ್ತದೆ, ತನ್ನ 1400 ಸಪ್ಲೈ ಚೈನ್ ಘಟಕಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಅಳವಡಿಸುವುದು.

   ಇದಲ್ಲದೇ, ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳು ಮತ್ತು ವಿತರಣಾ ಪ್ರತಿನಿಧಿಗಳಿಗೆ ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮವನ್ನೂ ರೂಪಿಸಿದೆ. ಸಿಬ್ಬಂದಿ, ವಿತರಣಾ ಪಾಲುದಾರರು ಮತ್ತು ಕಾರ್ಮಿಕರ ಪರಿಸರ ವ್ಯವಸ್ಥೆಯ ವಿಸ್ತಾರದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವುದು ಅಥವಾ ಬಳಕೆ ಮಾಡುವುದರೊಂದಿಗೆ ಫ್ಲಿಪ್ ಕಾರ್ಟ್ ಈ ಕ್ಷೇತ್ರದ ಸುಸ್ಥಿರ ಪರಿವರ್ತನೆಗೆ ಮುಂದಡಿ ಇಟ್ಟಿದೆ ಮತ್ತು 2030 ರ ವೇಳೆಗೆ ಶೇ.30 ರಷ್ಟು ವಿದ್ಯುತ್ ಚಾಲಿತ ಪ್ರಕ್ರಿಯೆಗಳನ್ನು ಖಾತರಿಪಡಿಸುವ ಭಾರತದ ಮಹತ್ವಾಕಾಂಕ್ಷೆಯನ್ನು ಬೆಂಬಲಿಸಲಿದೆ.

   ಜೊತೆಗೆ ಜಾಗತಿಕವಾಗಿ ಪ್ರಮಾಣೀಕೃತವಾದ ಇವಿ 100 ಉಪಕ್ರಮದಲ್ಲಿ ಸೇರ್ಪಡೆಯಾಗುತ್ತಿರುವ ಭಾರತದ ಮೊದಲ ಇ-ಕಾಮರ್ಸ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಫ್ಲಿಪ್ ಕಾರ್ಟ್ ಪಾತ್ರವಾಗಿದೆ.ಭಾರತದಲ್ಲಿನ ಎಲೆಕ್ಟ್ರಿಕ್ ವಾಹನಗಳ ಉನ್ನತಿ ಮಾಡುವ ನಿಟ್ಟಿನಲ್ಲಿ ಕಾರ್ಪೊರೇಟ್ ನಾಯಕತ್ವದ ವೇಗವನ್ನು ಹೆಚ್ಚಿಸುವ ಇವಿ100 ಗುರಿಯನ್ನು ಫ್ಲಿಪ್ ಕಾರ್ಟ್ ಅನನ್ಯವಾಗಿಸಿದೆ. ಜಗತ್ತಿನಾದ್ಯಂತದ 70 ಕ್ಕೂ ಹೆಚ್ಚು ಕಂಪನಿಗಳು ಈ ಉಪಕ್ರಮದಲ್ಲಿ ಭಾಗಿಯಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಯ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬದ್ಧತೆ ಹೊಂದಿವೆ.

   English summary
   Walmart-owned e-commerce firm Flipkart has committed to a complete transition to electric vehicles (EVs) by 2030 by partnering with Climate Group’s global electric mobility initiative, EV100.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X