• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿ ಬಿಗ್ ಬಿಲಿಯನ್ ಡೇಸ್: ಟಾಪ್ 100+ ಫ್ಯಾಷನ್ ಬ್ರಾಂಡ್ ಜತೆ ಫ್ಲಿಪ್ ಕಾರ್ಟ್ ಒಪ್ಪಂದ

|

ಬೆಂಗಳೂರು, ಸೆ. 24: ಈ ವರ್ಷ, ಫ್ಲಿಪ್‍ಕಾರ್ಟ್ ಫ್ಯಾಷನ್ ಕೂಡ ದಿ ಬಿಗ್ ಬಿಲಿಯನ್ ಡೇಸ್‍ನ ಅತಿದೊಡ್ಡ ಆವೃತ್ತಿಯಲ್ಲಿ ಪಾಲ್ಗೊಳ್ಳಲಿದ್ದು, ಮೆಟ್ರೋಗಳಿಂದ ಟೈರ್ 2 ನಗರಗಳು ಹಾಗೂ ಅದರಾಚೆಗೂ- ಭಾರತದಾದ್ಯಂತ ಗ್ರಾಹಕರಿಗೆ ಅತ್ಯುತ್ತಮವಾದದ್ದನ್ನು ಒದಗಿಸಲಿದೆ.

100ಕ್ಕೂ ಅಧಿಕ ಮುಂಚೂಣಿಯಲ್ಲಿರುವ ಬ್ರ್ಯಾಂಡ್‍ಗಳು ಹಾಗೂ ಭಾರತದ ವಿಸ್ತೃತ ಮಾರಾಟ ಜಾಲದ ಸಹಭಾಗಿತ್ವದಲ್ಲಿ, ಫ್ಲಿಪ್‍ಕಾರ್ಟ್ ಸಂಸ್ಥೆಯು ಫ್ಯಾಷನ್ ವಿಭಾಗವೊಂದರಲ್ಲೇ ವ್ಯಾಪಕ ಶ್ರೇಣಿಯನ್ನು ಅನಾವರಣಗೊಳಿಸಲಿದೆ.

ಫ್ಲಿಪ್‍ಕಾರ್ಟ್‍ನಿಂದ ಹಬ್ಬದ ಸೀಸನ್‍ನಲ್ಲಿ 50 ಸಾವಿರ ನೇರ ಉದ್ಯೋಗ

ಉಡುಗೆಗಳಿಂದ ಹಿಡಿದು ಪರಿಕರಣಗಳವರೆಗೆ ಅಂದರೆ ಬ್ಯಾಗ್‍ಗಳು, ಸನ್‍ಗ್ಲಾಸ್‍ಗಳು, ಸುಗಂಧದ್ರವ್ಯಗಳಿಂದ ಪಾದರಕ್ಷೆವರೆಗೆ, ಈ ವ್ಯಾಪಕ ಶ್ರೇಣಿಯು ವಿವಿಧ ವಯೋಮಾನದ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ಅನೇಕ ಉತ್ಪನ್ನಗಳನ್ನು ಒಳಗೊಂಡಿರಲಿವೆ. ಪ್ರಸಕ್ತ ವರ್ಷದ ದಿ ಬಿಗ್ ಬಿಲಿಯನ್ ಡೇಸ್ ಭಾಗವಾಗಿ, ಹೊಸ ಹೊಸ ಕೊಡುಗೆಗಳು, ಸೀಮಿತ-ಆವೃತ್ತಿಯ ಉತ್ಪನ್ನಗಳು ಮತ್ತು ಕಲೆಕ್ಟಿಬಲ್‍ಗಳೂ ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ದೇಶಾದ್ಯಂತದ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲಿದೆ.

ಗ್ರಾಹಕರು ಇತ್ತೀಚೆಗೆ ಹೆಚ್ಚು ಹೆಚ್ಚು ಫ್ಯಾಷನ್ ಪ್ರಜ್ಞೆ ಬೆಳೆಸಿಕೊಳ್ಳುತ್ತಿದ್ದು, ಟ್ರೆಂಡ್‍ಗಳ ಬಗ್ಗೆ ಆಸಕ್ತಿಯೂ ಹೆಚ್ಚಾಗಿದೆ. ಅದರಂತೆ, ಭಾರತದ ಫ್ಯಾಷನ್ ಪ್ರೇಮವನ್ನು ಬದಲಾಯಿಸುವಲ್ಲಿ ಪ್ರಮುಖ ಪಾಲುದಾರನಾಗಿ ಫ್ಲಿಪ್‍ಕಾರ್ಟ್ ಮುಂದುವರಿದಿದೆ. ದೊಡ್ಡ ಮಟ್ಟದ ಗ್ರಾಹಕ ಸಮುದಾಯವನ್ನು ತಲುಪಲು ಮತ್ತು ಟೈರ್ 2 ಮತ್ತು ಟೈರ್ 3 ನಗರಗಳಲ್ಲಿ ಬ್ರ್ಯಾಂಡ್‍ನ ಅಸ್ತಿತ್ವವನ್ನು ವಿಸ್ತರಿಸಲು, ಇತ್ತೀಚೆಗಷ್ಟೇ ಫ್ಲಿಪ್‍ಕಾರ್ಟ್ ತನ್ನ ಪ್ಲಾಟ್ ಫಾರಂನಲ್ಲಿ 'ಹಿಂದಿ' ಇಂಟರ್ ಫೇಸ್ ಅನ್ನು ಪರಿಚಯಿಸಿದ್ದು, ಅದರ ಮೂಲಕ ಮುಂದಿನ 200 ದಶಲಕ್ಷ ಗ್ರಾಹಕರನ್ನು ತಲುಪುವ ಉದ್ದೇಶ ಇಟ್ಟುಕೊಂಡಿದೆ.

700 ನಗರಗಳಲ್ಲಿ27,000 ಕಿರಾಣಿ ಮಳಿಗೆ

700 ನಗರಗಳಲ್ಲಿ27,000 ಕಿರಾಣಿ ಮಳಿಗೆ

ಹಬ್ಬದ ಋತು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಫ್ಲಿಪ್‍ಕಾರ್ಟ್ ಸಂಸ್ಥೆಯು 700 ನಗರಗಳಲ್ಲಿ 27,000 ಕಿರಾಣಿ ಮಳಿಗೆಗಳನ್ನು ತೆರೆದಿದ್ದು, ಭಾರತದಾದ್ಯಂತ ಪೂರೈಕೆಯ ಸರಣಿಯನ್ನು ವೃದ್ಧಿಸುವ, ಆ ಮೂಲಕ ದೇಶದಾದ್ಯಂತ ಇರುವ ಎಲ್ಲ ಗ್ರಾಹಕರೂ ಅತ್ಯಾಧುನಿಕ ಸ್ಟೈಲ್‍ಗಳು ಹಾಗೂ ಆಫರಿಂಗ್‍ಗಳನ್ನು ಒದಗಿಸಲು ನಿರ್ಧರಿಸಿದೆ.

ಫ್ಲಿಪ್‍ಕಾರ್ಟ್ ಫ್ಯಾಷನ್‍ನ ಉಪಾಧ್ಯಕ್ಷ- ದೇವ್

ಫ್ಲಿಪ್‍ಕಾರ್ಟ್ ಫ್ಯಾಷನ್‍ನ ಉಪಾಧ್ಯಕ್ಷ- ದೇವ್

ದಿ ಬಿಗ್ ಬಿಲಿಯನ್ ಡೇಸ್‍ಗಾಗಿ ಅನಾವರಣಗೊಂಡ ಫ್ಲಿಪ್‍ಕಾರ್ಟ್ ಫ್ಯಾಷನ್‍ನ ಉತ್ಪನ್ನಗಳ ಕುರಿತು ಮಾತನಾಡಿದ ಫ್ಲಿಪ್‍ಕಾರ್ಟ್ ಫ್ಯಾಷನ್‍ನ ಉಪಾಧ್ಯಕ್ಷ- ದೇವ್ ಅಯ್ಯರ್, "ಪ್ರತಿ ವರ್ಷ, ದಿ ಬಿಗ್ ಬಿಲಿಯನ್ ಡೇಸ್ ಎನ್ನುವುದು ಭಾರತದ ಹಬ್ಬದ ಋತುವಿನ ಆರಂಭವನ್ನು ಪ್ರತಿಬಿಂಬಿಸುತ್ತದೆ. ಅಂತೆಯೇ ನಾವು ಅತ್ಯಾಧುನಿಕ ಫ್ಯಾಷನ್ ಮತ್ತು ಟ್ರೆಂಡ್‍ಗಳನ್ನು ದೇಶದಾದ್ಯಂತ ಇರುವ ನಮ್ಮ ಗ್ರಾಹಕರಿಗೆ ಪೂರೈಸಲು ಸಿದ್ಧರಾಗಿದ್ದೇವೆ. ಪ್ರಸಕ್ತ ವರ್ಷ, ನಾವು ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿದ್ದೇವೆ. 100+ ಪ್ರಮುಖ ಫ್ಯಾಷನ್ ಬ್ರ್ಯಾಂಡ್‍ಗಳು ಮತ್ತು ವ್ಯಾಪಕ ಮಾರಾಟ ಜಾಲದೊಂದಿಗೆ ಸಹಭಾಗಿತ್ವ ಸಾಧಿಸಿ ಕ್ಯುರೇಟೆಡ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಆ ಮೂಲಕ ಗ್ರಾಹಕರಿಗೆ ಒಂದೇ ಸೂರಿನಡಿ 2019ರ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 4ರವರೆಗೆ ಅತ್ಯುತ್ತಮ ಸಂಗ್ರಹಗಳನ್ನು ಖರೀದಿಸುವ ಅವಕಾಶ ಕಲ್ಪಿಸಿದ್ದೇವೆ" ಎಂದರು.

ಬಿಗ್ ಬಿಲಿಯನ್ ಡೇಸ್ ಗೂ ಮುನ್ನ ಪೂರೈಕೆ ಜಾಲ ವಿಸ್ತರಿಸಿಕೊಂಡ ಫ್ಲಿಪ್ ಕಾರ್ಟ್

ಪ್ರತಿಯೊಬ್ಬ ಗ್ರಾಹಕನಿಗೂ ವಿಶಿಷ್ಟವಾದ ಶಾಪಿಂಗ್

ಪ್ರತಿಯೊಬ್ಬ ಗ್ರಾಹಕನಿಗೂ ವಿಶಿಷ್ಟವಾದ ಶಾಪಿಂಗ್

"ಅನನ್ಯಾ ಪಾಂಡೆಯವರ ಓನ್ಲಿ ವಿಶೇಷ ಕಲೆಕ್ಷನ್ ನಿಂದ ಹಿಡಿದು, ಜಾಕ್ವೆಲಿನ್ ಫೆರ್ನಾಂಡಿಸ್ ಅವರ ಇಮಾರಾ ಫೂಟ್‍ವೇರ್, ಫ್ಲೈಯಿಂಗ್ ಮಷೀನ್ ಅವರ ಜಗತ್ತಿನ ಹಗುರ ವಿಮೆನ್ಸ್ ಡೆನಿಮ್‍ನಿಂದ ರೇಮಂಡ್ ಅವರ ಖಾದಿ ಕಲೆಕ್ಷನ್‍ವರೆಗೆ, ಪ್ರತಿಯೊಬ್ಬ ಗ್ರಾಹಕನಿಗೂ ಒಂದಲ್ಲ ಒಂದು ವಿಶೇಷವನ್ನು ಒದಗಿಸುತ್ತಿದ್ದೇವೆ. ಈ ಎಲ್ಲ ಕೊಡುಗೆಗಳ ಮೂಲಕ ನಾವು ನಮ್ಮ ವೇದಿಕೆಗೆ ಭೇಟಿ ನೀಡುವ ಪ್ರತಿಯೊಬ್ಬ ಗ್ರಾಹಕನಿಗೂ ವಿಶಿಷ್ಟವಾದ ಶಾಪಿಂಗ್ ಅನುಭವವನ್ನು ನೀಡುವುದನ್ನು ಮುಂದುವರಿಸಿದ್ದೇವೆ'' ಎಂದು ದೇವ್ ಹೇಳಿದರು.

2012ರಲ್ಲಿ ಫ್ಲಿಪ್ ಕಾರ್ಟ್ ಫ್ಯಾಷನ್ ಅನಾವರಣ

2012ರಲ್ಲಿ ಫ್ಲಿಪ್ ಕಾರ್ಟ್ ಫ್ಯಾಷನ್ ಅನಾವರಣ

2012ರಲ್ಲಿ ಫ್ಲಿಪ್ ಕಾರ್ಟ್ ಫ್ಯಾಷನ್ ಅನಾವರಣಗೊಂಡಂದಿನಿಂದ, ನಮ್ಮ ಬ್ರ್ಯಾಂಡ್ ಜನರ ಮನೆ ಬಾಗಿಲಿಗೇ ವಿವಿಧ ದರಗಳುಳ್ಳ ವ್ಯಾಪಕ ಶ್ರೇಣಿಯ ಬ್ರ್ಯಾಂಡ್‍ಗಳು ಹಾಗೂ ಅತ್ಯಾಧುನಿಕ ಸ್ಟೈಲ್‍ಗಳನ್ನು ಸರಬರಾಜು ಮಾಡುವ ಮೂಲಕ ಇಡೀ ಭಾರತಕ್ಕೆ ಫ್ಯಾಷನ್ ಅತ್ಯಂತ ಸುಲಭದಲ್ಲಿ ಹಾಗೂ ಅಗ್ಗದ ದರದಲ್ಲಿ ಸಿಗುವಂತೆ ಮಾಡಿದೆ. ಪ್ರತಿ ತಿಂಗಳೂ ಸುಮಾರು 20,000 ಹೊಸ ಸ್ಟೈಲ್‍ಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಅದು ನಮ್ಮ ಪ್ಲಾಟ್‍ಫಾರಂನಲ್ಲಿ ಅತ್ಯಾಧುನಿಕ ಸ್ಟೈಲ್‍ಗಳು ಹಾಗೂ ಟ್ರೆಂಡ್‍ಗಳ ಲಭ್ಯತೆಯನ್ನು ಖಾತ್ರಿಪಡಿಸಿದೆ.

ಅಂಡರ್ ಆರ್ಮರ್, ಗ್ಯಾಪ್, ಮಾರ್ಕ್ಸ್ ಆಂಡ್ ಸ್ಪೆನ್ಸರ್, ಸಿಮನ್ ಕಾರ್ಟರ್ ಲಂಡನ್ ಮತ್ತಿತರ ಜಾಗತಿಕ ಬ್ರ್ಯಾಂಡ್‍ಗಳು

● ಎಂಎಸ್ ಧೋನಿ ಅವರ ಸೆವೆನ್- ಧೋನಿ ಸಹಿ ಮಾಡಿರುವಂಥ ಟೀಶರ್ಟ್ ಗಳು

● ಓನ್ಲಿ ಅನನ್ಯ ಪಾಂಡೆಯವರ ಕಲೆಕ್ಷನ್

● ಫ್ಲೈಯಿಂಗ್ ಮಷೀನ್ ಅವರ ಜಗತ್ತಿನಲ್ಲೇ ಅತ್ಯಂತ ಹಗುರವಾದ ವಿಮೆನ್ಸ್ ಡೆನಿಮ್

● ಗೇಲ್ ಅವರ ಸಿಗ್ನೇಚರ್ ಕಲೆಕ್ಷನ್ ಆದ ಆಟಿಟ್ಯೂಟ್- ಕ್ರಿಸ್ ಗೇಲ್ ಸಹಿ ಹಾಕಿರುವ ಟಿಶರ್ಟ್‍ಗಳ ಸಂಗ್ರಹ

● ಜಾಕ್ವೆಲಿನ್ ಫೆರ್ನಾಂಡಿಸ್ ಅವರ ಇಮಾರಾ ಫೂಟ್‍ವೇರ್ ಕಲೆಕ್ಷನ್

● ಖಾದಿ ಗ್ರಾಮೋದ್ಯೋಗದ ಎಥ್ನಿಕ್ಸ್ (ರೇಮಂಡ್ ಸಂಸ್ಥೆಯ ಖಾದಿ ಸಂಗ್ರಹದ ಆನ್‍ಲೈನ್ ಮಾರಾಟಕ್ಕೆ ಚಾಲನೆ)

● ವರುಣ್ ಧವನ್ ಅವರ ಎಕ್ಸ್ ಫಾಸಿಲ್ ವಾಚ್, ಫ್ಲೈಯಿಂಗ್ ಮಷೀನ್ ವಾಚ್‍ಗಳ ಅನಾವರಣ

● ಯುಎಸ್‍ಪಿಎ ಸಹಭಾಗಿತ್ವದಲ್ಲಿ ರಚಿಸಲಾದ ವಿಶೇಷ ಪೋಲೋ ಟೀ ಶರ್ಟ್‍ಗಳ ಸಂಗ್ರಹ

● ಬೇಬಿ ಚಕ್ರ ಎಕ್ಸ್ ಮಿಸ್ ಆಂಡ್ ಚೀಫ್ ಬೇಬಿ ಸ್ಟಾರ್ಟರ್ ಪ್ಯಾಕ್

● ಕಡು ಬಣ್ಣದ ಫ್ಲಿಪ್ ಫ್ಲಾಪ್‍ಗಳ ಸಂಗ್ರಹವುಳ್ಳ ಮಾರ್ವೆಲ್ ಗ್ಲೋ

ಫ್ಲಿಪ್‍ಕಾರ್ಟ್ ಬಗ್ಗೆ

ಫ್ಲಿಪ್‍ಕಾರ್ಟ್ ಬಗ್ಗೆ

ದಿ ಫ್ಲಿಪ್‍ಕಾರ್ಟ್ ಸಮೂಹವು ಭಾರತದ ಮುಂಚೂಣಿಯಲ್ಲಿರುವ ಡಿಜಿಟಲ್ ವಾಣಿಜ್ಯ ಸಂಸ್ಥೆಗಳಲ್ಲಿ ಒಂದಾಗಿದ್ದು, ಇದರಲ್ಲಿ ಫ್ಲಿಪ್‍ಕಾರ್ಟ್, ಮೈಂತ್ರ, ಜಬಾಂಗ್ ಮತ್ತು ಫೆÇೀನ್‍ಪೇ ಎಂಬ ಗ್ರೂಪ್ ಕಂಪನಿಗಳು ಒಳಗೊಂಡಿವೆ. 2007ರಲ್ಲಿ ಅಸ್ತಿತ್ವಕ್ಕೆ ಬಂದ ಫ್ಲಿಪ್‍ಕಾರ್ಟ್, ಕೋಟ್ಯಂತರ ಗ್ರಾಹಕರು, ಮಾರಾಟಗಾರರು, ವ್ಯಾಪಾರಿಗಳು ಹಾಗೂ ಸಣ್ಣ ಉದ್ದಿಮೆದಾರರನ್ನು ಭಾರತದ ಇ-ಕಾಮರ್ಸ್ ಕ್ರಾಂತಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿತು. ಫ್ಲಿಪ್‍ಕಾರ್ಟ್ ಸುಮಾರು 160 ದಶಲಕ್ಷ ನೋಂದಾಯಿತ ಗ್ರಾಹಕರನ್ನು ಹೊಂದಿದ್ದು, 80+ ವಿಭಾಗಗಳಲ್ಲಿ ಸುಮಾರು 150 ದಶಲಕ್ಷ ಉತ್ಪನ್ನಗಳನ್ನು ಒದಗಿಸುತ್ತಿದೆ. ಕ್ಯಾಷ್‍ಆನ್ ಡೆಲಿವರಿ, ನೋಕಾಸ್ಟ್ ಇಎಂಐ ಮತ್ತು ಈಸಿ ರಿಟರ್ನ್ಸ್‍ನಂಥ ಸೇವೆಗಳನ್ನು ಆರಂಭಿಸಿರುವ ಹೆಗ್ಗಳಿಕೆಯೂ ಫ್ಲಿಪ್‍ಕಾರ್ಟ್‍ಗೆ ಸಲ್ಲುತ್ತದೆ. ಅಲ್ಲದೆ, ಇಂಥ ಗ್ರಾಹಕ ಕೇಂದ್ರಿತ ನಾವೀನ್ಯತೆಗಳ ಮೂಲಕ ಫ್ಲಿಪ್‍ಕಾರ್ಟ್ ಸಂಸ್ಥೆಯು ಕೋಟ್ಯಂತರ ಭಾರತೀಯರಿಗೆ ಆನ್‍ಲೈನ್ ಶಾಪಿಂಗ್ ಅನ್ನು ಸುಲಭದಲ್ಲಿ ಹಾಗೂ ಅಗ್ಗದ ದರದಲ್ಲಿ ಸಿಗುವಂತೆ ಮಾಡಿದೆ. ಆನ್‍ಲೈನ್ ಫ್ಯಾಷನ್ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಹೊಂದಿರುವಂಥ ಮೈಂತ್ರ ಮತ್ತು ಜಬಾಂಗ್, ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಪಾವತಿ ಪ್ಲಾಟ್‍ಫಾರಂ ಪೋನ್‍ಪೇದೊಂದಿಗೆ ಕೈಜೋಡಿಸಿರುವ ಫ್ಲಿಪ್‍ಕಾರ್ಟ್ ಸಮೂಹವು, ತಂತ್ರಜ್ಞಾನದ ಮೂಲಕವಾಗಿ ಭಾರತದಲ್ಲಿ ವಾಣಿಜ್ಯ ಕ್ಷೇತ್ರದಲ್ಲೇ ಬದಲಾವಣೆ ತರುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ.

English summary
Flipkart has formed a strategic partnership with 100 plus Fashion brands for the Big Billion day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X