ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಫ್ಲಿಪ್‌ಕಾರ್ಟ್‌

|
Google Oneindia Kannada News

ಬೆಂಗಳೂರು, ಜುಲೈ 28: ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ತನಿಖೆಯನ್ನು ಪ್ರಶ್ನಿಸಿ ಇ-ಕಾಮರ್ಸ್‌ ಸಂಸ್ಥೆ ಫ್ಲಿಪ್‌ಕಾರ್ಟ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.ಜುಲೈ 23ರ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಫ್ಲಿಪ್‌ಕಾರ್ಟ್‌ ಸಂಸ್ಥೆಯು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಯು.ಎಸ್. ಸಂಸ್ಥೆಗಳು ಆಯ್ದ ಮಾರಾಟಗಾರರನ್ನು ತಮ್ಮ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಉತ್ತೇಜಿಸುತ್ತವೆ. ಸ್ಪರ್ಧೆಯನ್ನು ನಿಗ್ರಹಿಸಲು ಬೇಕಾಬಿಟ್ಟಿ ರಿಯಾಯಿತಿಗಳನ್ನು ನೀಡುತ್ತದೆ ಎಂಬ ಚಿಲ್ಲರೆ ವ್ಯಾಪಾರಿಗಳ ಆರೋಪದ ನಂತರ ಭಾರತ ಸ್ಪರ್ಧಾ ಆಯೋಗವು (ಸಿಸಿಐ) ಕಳೆದ ವರ್ಷ ತನಿಖೆಗೆ ಆದೇಶಿಸಿತ್ತು. ಮುಖ್ಯವಾಗಿ ಸ್ಮಾರ್ಟ್‌ಫೋನ್‌ ಮಾರಾಟ ಮಾಡುವಾಗ ಸ್ಪರ್ಧಾತ್ಮಕ ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂದು ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ವಿರುದ್ಧ ಸಿಸಿಐ ತನಿಖೆಗೆ ಆದೇಶಿಸಿತ್ತು.

ಇ-ಕಾಮರ್ಸ್‌ ಸಂಸ್ಥೆಗಳು ತನಿಖೆ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾ ಮಾಡಿತ್ತು. ಬಳಿಕ ನ್ಯಾಯಮೂರ್ತಿಗಳಾದ ಸತೀಶ್‌ ಚಂದ್ರ ಶರ್ಮಾ ಮತ್ತು ನಟರಾಜ್‌ ರಂಗಸ್ವಾಮಿ ಅವರಿದ್ದ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿದಿತ್ತು.

Flipkart moves SC against Karnataka HC order that allowed CCI probe

Recommended Video

ದೇವರ ಹೆಸರಲ್ಲಿ ಬಸವರಾಜ್ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ ಕ್ಷಣ | Oneindia Kannada

"ಸಿಸಿಐ ತನಿಖೆ ತ್ವರಿತವಾಗಿ ಮುಂದುವರಿಯಬೇಕು ಎಂದು ಈ ಆದೇಶವು ಮತ್ತಷ್ಟು ಬಲವಾಗಿ ಹೇಳಿದೆ," ಎಂದು ವ್ಯಾಪಾರಿ ಗುಂಪಿನ ಪರವಾಗಿ ಫ್ಲಿಪ್‌ಕಾರ್ಟ್‌ನ ಅಮೆಜಾನ್ ವಿರುದ್ಧ ಆಂಟಿಟ್ರಸ್ಟ್ ಪ್ರಕರಣವನ್ನು ದಾಖಲಿಸಿದ ಸರ್ವಾಡಾ ಲೀಗಲ್‌ನ ಅಬೀರ್ ರಾಯ್ ತಿಳಿಸಿದ್ದರು.

English summary
Flipkart has moved the Supreme Court with an appeal against the July 23 order of the Karnataka High Court's division bench that allowed a probe against the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X