• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಡಿಯೋ-ಆಧಾರಿತ ಶಾಪಿಂಗ್ ಅನುಭವ ನೀಡುವ ಫ್ಲಿಪ್ ಕಾರ್ಟ್ 2GUD

|

ಬೆಂಗಳೂರು, ಜುಲೈ 08: ಭಾರತೀಯ ಮೂಲದ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಇಂದು ತನ್ನ ಸ್ವತಂತ್ರ ಮೌಲ್ಯಾಧಾರಿತ ಪ್ಲಾಟ್ ಫಾರ್ಮ್ ಆಗಿರುವ 2GUD ನಲ್ಲಿ ಸಾಮಾಜಿಕ ವಾಣಿಜ್ಯವನ್ನು ಆರಂಭಿಸಿದೆ.

ಫ್ಲಿಪ್ ಕಾರ್ಟ್, ಎಲ್ಲಾ ಆಲ್-ಆ್ಯಪ್ ಗ್ರಾಹಕರಿಗೆ ಈ ಸೋಶಿಯಲ್ ಕಾಮರ್ಸ್ ವೈಶಿಷ್ಟ್ಯತೆ ಲಭ್ಯವಿದೆ. 2GUD ನ ಸೋಶಿಯಲ್ ಕಾಮರ್ಸ್ ಪ್ಲಾಟ್ ಫಾರ್ಮ್ ಬಳಕೆದಾರರಿಗೆ ತಡೆರಹಿತವಾದ ವಿಡಿಯೋ ಶಾಪಿಂಗ್ ಅನುಭವವನ್ನು ನೀಡಲಿದೆ. ಇತ್ತೀಚಿನ ಫ್ಯಾಷನ್ ಟ್ರೆಂಡ್ಸ್, ಗ್ಯಾಜೆಟ್ ಗಳ ವಿಮರ್ಶೆಗಳು, ಬ್ಯೂಟಿ ಟಿಪ್ಸ್ ಶೇರಿಂಗ್ ಸೇರಿದಂತೆ ಹಲವು ಬಗೆಯ ಮಾಹಿತಿಗಳನ್ನು ಈ ಸೋಶಿಯಲ್ ಕಾಮರ್ಸ್ ಪ್ಲಾಟ್ ಫಾರ್ಮ್ ನಲ್ಲಿ ನೀಡಲಾಗುತ್ತದೆ.

2GUD ನ ಸೋಶಿಯಲ್ ಕಾಮರ್ಸ್ ಪ್ಲಾಟ್ ಫಾರ್ಮ್ ಹಲವಾರು ವಿಷಯಗಳು ಮತ್ತು ವಿಭಾಗಗಳ ಬಗೆಗಿನ ವಿಡಿಯೋಗಳೊಂದಿಗೆ ಸೂಕ್ತ ಚಿತ್ರಣವನ್ನು ಬಳಕೆದಾರರಿಗೆ ನೀಡುತ್ತದೆ. ಅಂದರೆ, ಇವುಗಳು ಒಂದು ರೀತಿಯಲ್ಲಿ ಪ್ರಭಾವಿಗಳ(ಇನ್ ಫ್ಲುಯೆನ್ಸರ್) ರೀತಿಯಲ್ಲಿ ಕೆಲಸ ಮಾಡುತ್ತವೆ. ವರ್ಚುವಲ್ ಸ್ಟೋರ್ ನಲ್ಲಿ ತಮ್ಮ ಸಂಗ್ರಹದ ಭಾಗವಾಗಿ ಗ್ರಾಹಕರ ನೆಚ್ಚಿನ ಉತ್ಪನ್ನಗಳನ್ನು ಈ ಇನ್ ಫ್ಲುಯೆನ್ಸರ್ ಗಳು ನೀಡುತ್ತವೆ.

ಮೋದಿ ಕರೆಯಂತೆ ಮೇಡ್ ಇನ್ ಇಂಡಿಯಾ ಫರ್ನಿಚರ್: ಫ್ಲಿಪ್ ಕಾರ್ಟ್

ಗ್ರಾಹಕರು ವಿಭಾಗಗಳಲ್ಲಿನ ಸ್ಟೈಲಿಂಗ್ ಜರ್ನಿಗೆ ಸಾಕ್ಷಿಯಾಗುವಂತೆ ಮಾಡಲಿವೆ. ಗ್ರಾಹಕರು ವಿಡಿಯೋ ಭಾಗವಾಗಿರುವ ಉತ್ಪನ್ನಗಳನ್ನು ಶಾಪ್ ಮಾಡಲು ಇವ ಅನುವು ಮಾಡಿಕೊಡಲಿವೆ. ಈ ಮೂಲಕ ಗ್ರಾಹಕರು ತಡೆ ರಹಿತವಾದ, ನೈಸರ್ಗಿಕವಾದ ಶಾಪ್ ಮಾಡಬಹುದಾಗಿದೆ.

2GUD ನ ಮುಖ್ಯಸ್ಥ ಚಾಣಕ್ಯ ಗುಪ್ತಾ

2GUD ನ ಮುಖ್ಯಸ್ಥ ಚಾಣಕ್ಯ ಗುಪ್ತಾ

ಈ ಹೊಸ ಉಪಕ್ರಮದ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ನಲ್ಲಿ 2GUD ನ ಮುಖ್ಯಸ್ಥ ಚಾಣಕ್ಯ ಗುಪ್ತಾ ಅವರು,ನಾವು ಮುಂದಿನ 200 ದಶಲಕ್ಷ ಗ್ರಾಹಕರು ಈ ಸೋಶಿಯಲ್ ಕಾಮರ್ಸ್ ಆರಾಮದಾಯಕತೆಯನ್ನು ಅನುಭವಿಸುವುದನ್ನು ಕಾಣಬಯಸಿದ್ದೇವೆ ಮತ್ತು ಶಾಪಿಂಗ್ ಅನುಭವವನ್ನು ಪಡೆಯಲು 2GUD ಮೇಲೆ ವಿಶ್ವಾಸವನ್ನು ನಿರ್ಮಾಣ ಮಾಡಲು ಬಯಸಿದ್ದೇವೆ. ಈ ಗ್ರಾಹಕರು ವಿಶ್ವಾಸಾರ್ಹತೆ ಮತ್ತು ಸ್ಟ್ಐಲ್ ಕೊರತೆಯನ್ನು ಎದುರಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ವ್ಯಕ್ತಿಯೊಬ್ಬರಿಂದ ಅಥವಾ ಇನ್ ಫ್ಲುಯೆನ್ಸರ್ ನಿಂದ ಬರುವ ಶಿಫಾರಸುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ಈ ಇನ್ ಫ್ಲುಯೆನ್ಸರ್ ಗಳು ಆನ್ ಲೈನ್ ರೀಟೇಲ್ ನ ಲ್ಯಾಂಡ್ ಸ್ಕೇಪ್ ಅನ್ನು ಬದಲಾವಣೆ ಮಾಡುತ್ತಾರೆ ಮತ್ತು ಭಾರತದಲ್ಲಿ ಸೋಶಿಯಲ್ ಕಾಮರ್ಸ್ ಪ್ಲಾಟ್ ಫಾರ್ಮ್ ಗಳಿಗೆ ಒಂದು ಅತ್ಯದ್ಭುತವಾದ ಅವಕಾಶಗಳನ್ನು ಕಲ್ಪಿಸುತ್ತಾರೆ. ದೇಶಾದ್ಯಂತ ಲಕ್ಷಾಂತರ ಫಾಲೋವರ್ ಗಳನ್ನು ಹೊಂದುವ ಮೂಲಕ ಗ್ರಾಹಕರ ಖರೀದಿ ನಿರ್ಧಾರಗಳ ಮೇಲೆ ಸಾಕಷ್ಟು ಸಾಧ್ಯತೆಗಳನ್ನು ಹೊಂದುತ್ತಾರೆ. ಎಂದರು.

ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ತಲುಪಬಹುದು

ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ತಲುಪಬಹುದು

ಸಾಮಾಜಿಕ ಮಾಧ್ಯಮಗಳ ಆಗಮನದೊಂದಿಗೆ ಕಳೆದ ಕೆಲವು ವರ್ಷಗಳಿಂದ ಗ್ರಾಹಕರು ವಿಷಯಗಳನ್ನು ಗ್ರಹಿಸುವ ವಿಧಾನಗಳು ಗಮನಾರ್ಹವಾದ ರೀತಿಯಲ್ಲಿ ಬದಲಾಗಿವೆ. ಇನ್ ಫ್ಲುಯೆನ್ಸರ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ವಿಶೇಷವಾಗಿ ಮೆಟ್ರೋ ನಗರಗಳ ಹೊರತಾದ ಪ್ರದೇಶಗಳಲ್ಲಿ ಹೊಸ ತಲೆಮಾರಿನ ವಿಷಯ ರಚನೆಕಾರರಿಗೆ ಒಂದು ಮಾರ್ಗವನ್ನು ನೀಡಿದಂತಾಗಿದೆ. ಅವರು ಆಳವಾದ ವೈಯಕ್ತಿಕ ಸಂಪರ್ಕಗಳನ್ನು ಹೆಚ್ಚಿಸಲು ಸಮರ್ಥರಾಗಿದ್ದಾರೆ ಮತ್ತು ಮೆಟ್ರೋ ನಗರಗಳನ್ನು ಮೀರಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ಸಂಬಂಧಿಸಿರುತ್ತಾರೆ.

ರೀಟೇಲ್ ಮಾರುಕಟ್ಟೆಯಲ್ಲಿ ಶೇ.15-20 ರಷ್ಟು ಹೆಚ್ಚಳ

ರೀಟೇಲ್ ಮಾರುಕಟ್ಟೆಯಲ್ಲಿ ಶೇ.15-20 ರಷ್ಟು ಹೆಚ್ಚಳ

ಉದ್ಯಮದ ವರದಿಗಳ ಪ್ರಕಾರ ವಿಸ್ತರಣೆಯ ಭಾಗವಾಗಿ ಸೋಶಿಯಲ್ ಕಾಮರ್ಸ್ ಈಗಾಗಲೇ ಇಂದು ಆನ್ ಲೈನ್ ರೀಟೇಲ್ ಮಾರುಕಟ್ಟೆಯಲ್ಲಿ ಶೇ.15-20 ರಷ್ಟು ಹೆಚ್ಚಳ ಮಾಡಿದೆ. ಮುಂದಿನ ದಶಕದಲ್ಲಿ ಇದರ ವ್ಯವಹಾರ 70 ಬಿಲಿಯನ್ ಡಾಲರ್ ಗೆ ತಲುಪುವ ನಿರೀಕ್ಷೆ ಇದೆ. ಕಡಿಮೆ ದರದಲ್ಲಿ ಲಭ್ಯವಿರುವ ಡೇಟಾದಿಂದಾಗಿ ಮತ್ತು ಭಾರತದಲ್ಲಿ ಮೊದಲ ಬಾರಿಗೆ ಇಂಟರ್ನೆಟ್ ಬಳಕೆದಾರರ ಮಾರುಕಟ್ಟೆ ವಿಸ್ತಾರಗೊಂಡಿದೆ. ವಿಶೇಷವಾಗಿ 2 ಮತ್ತು 3 ನೇ ಹಂತದ ನಗರಗಳಲ್ಲಿ ಈ ಹೆಚ್ಚಳ ಕಂಡುಬರುತ್ತಿದ್ದು, ಸೋಶಿಯಲ್ ಕಾಮರ್ಸ್ ಉದ್ಯಮದ ಬೆಳವಣಿಗೆಗೆ ಒಂದು ಉತ್ತಮ ಅವಕಾಶವನ್ನು ಕಲ್ಪಿಸಿದಂತಾಗಿದೆ.

2GUD ತನ್ನ ಎಂ-ಸೈಟ್, ವೆಬ್ ಸೈಟ್ ನಲ್ಲಿ ವಿಸ್ತರಣೆ

2GUD ತನ್ನ ಎಂ-ಸೈಟ್, ವೆಬ್ ಸೈಟ್ ನಲ್ಲಿ ವಿಸ್ತರಣೆ

ತನ್ನ ಆ್ಯಪ್ ನಲ್ಲಿ ಸೋಶಿಯಲ್ ಕಾಮರ್ಸ್ ಅನ್ನು ಆರಂಭಿಸುವುದರೊಂದಿಗೆ 2GUD ತನ್ನ ಎಂ-ಸೈಟ್ ಮತ್ತು ವೆಬ್ ಸೈಟ್ ನಲ್ಲಿ ಮತ್ತಷ್ಟು ವಿಸ್ತರಣೆ ಮಾಡಲಿದೆ. 2GUD ಪ್ರಸ್ತುತ 600 ಕ್ಕೂ ಅಧಿಕ ಆಫರ್ ಗಳನ್ನು ನೀಡುತ್ತಿದ್ದು, ಹಾಲಿ ಇರುವ ಉತ್ಪನ್ನಗಳ ವಿಭಾಗಗಳನ್ನು ಮತ್ತಷ್ಟು ಸದೃಢಗೊಳಿಸುತ್ತಿದೆ. ಈ ಪ್ಲಾಟ್ ಫಾರ್ಮ್ ಭಾರತಾದ್ಯಂತ 15,000 ಕ್ಕೂ ಅಧಿಕ ಸ್ಥಳಗಳಲ್ಲಿ ಲಕ್ಷಾಂತರ ಗ್ರಾಹಕರನ್ನು ಹೊಂದಿದೆ.

ಫ್ಲಿಪ್ ಕಾರ್ಟ್ ಸಾಮಾಗ್ರಿ, ಸಿಬ್ಬಂದಿಗಳು ಸೋಂಕು ರಹಿತ

English summary
Flipkart's e commerce platform has taken a plunge in social commerce with its independent value platform, 2GUD.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more