ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಥಳೀಯ ಉದ್ಯಮಿಗಳಿಗಾಗಿ ಫ್ಲಿಪ್‌ಕಾರ್ಟ್ ಶಾಪ್ಸಿ ಆರಂಭ

|
Google Oneindia Kannada News

ಬೆಂಗಳೂರು, ಜುಲೈ 1: ಸ್ಥಳೀಯ ಉದ್ಯಮಿಗಳಿಗಾಗಿ ಫ್ಲಿಪ್‌ಕಾರ್ಟ್ ಶಾಪ್ಸಿ ವಿನೂತನ ಯೋಜನೆ ಆರಂಭಿಸಲಾಗಿದೆ. ಭಾರತದ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸರ್ ಆಗಿರುವ ಫ್ಲಿಪ್ ಕಾರ್ಟ್ ಇಂದು ಶಾಪ್ಸಿ ಎಂಬ ವಿನೂತನವಾದ ಯೋಜನೆಯನ್ನು ಪ್ರಕಟಿಸಿದೆ.

ಇದು ಆ್ಯಪ್ ಆಧಾರಿತ ಸೇವೆಯಾಗಿದ್ದು, ಇದರ ಮೂಲಕ ಭಾರತೀಯರು ಯಾವುದೇ ಪೂರ್ವ ಬಂಡವಾಳವನ್ನು ತೊಡಗಿಸದೇ ತಮ್ಮ ಆನ್ ಲೈನ್ ವ್ಯವಹಾರಗಳನ್ನು ಆರಂಭಿಸಬಹುದಾಗಿದೆ.

ತಮ್ಮ ಸ್ಥಳೀಯ ಜಾಲದ ಮೇಲೆ ಪ್ರಭಾವ ಬೀರುವ ಹಾಗೂ ಅವರ ಆಕಾಂಕ್ಷೆಗಳನ್ನು ಈಡೇರಿಸುವ ಸಾಮರ್ಥ್ಯದೊಂದಿಗೆ, ಶಾಪ್ಸಿಯ ಬಳಕೆದಾರರು ಫ್ಲಿಪ್ ಕಾರ್ಟ್ ಮಾರಾಟಗಾರರು ನೀಡುವ 15 ಕೋಟಿಗೂ ಅಧಿಕ ಉತ್ಪನ್ನಗಳ ವ್ಯಾಪಕ ಆಯ್ಕೆಯ ಕ್ಯಾಟಲಾಗ್ ಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

Flipkart Launches Shopsy App To Help Local Entrepreneurs: All You Need To Know In Kannada

ಇದರಲ್ಲಿ ಫ್ಯಾಶನ್, ಸೌಂದರ್ಯ, ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉತ್ಪನ್ನಗಳನ್ನು ಜನಪ್ರಿಯ ಸಾಮಾಜಿಕ ಮಾಧ್ಯಮ ಮತ್ತು ಸಂದೇಶವಾಹಕ ಆ್ಯಪ್ ಗಳಿಂದ ವ್ಯವಹಾರ ನಡೆಸಬಹುದಾಗಿದೆ.

ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಗಳ ಮೂಲಕ ಸರಳವಾಗಿ ಶಾಪ್ಸಿ ಆ್ಯಪ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಮತ್ತು ತಮ್ಮ ಆನ್ ಲೈನ್ ಉದ್ಯಮಶೀಲತ್ವದ ಪ್ರಯಾಣವನ್ನು ಆರಂಭಿಸಬಹುದು.

ಹೂಡಿಕೆ, ದಾಸ್ತಾನು ಅಥವಾ ಲಾಜಿಸ್ಟಿಕ್ ನಿರ್ವಹಣೆಯ ತೊಂದರೆಯಿಲ್ಲದೇ ತಮ್ಮ ನಂಬಿಕಾರ್ಹ ಜನರ ನೆಟ್ ವರ್ಕ್ ಗೆ ಪ್ರವೇಶವನ್ನು ಹೊಂದಿರುವವರೆಗೆ ಉದ್ಯಮಿಗಳು ತಮ್ಮ ವ್ಯವಹಾರವನ್ನು ಸ್ಥಾಪಿಸಿಕೊಳ್ಳಬಹುದಾಗಿದೆ.

ಈ ಬಳಕೆದಾರರು ಜನಪ್ರಿಯ ಸಾಮಾಜಿಕ ಮಾಧ್ಯಮ ಮತ್ತು ಸಂದೇಶ ಆ್ಯಪ್ ಗಳ ಮೂಲಕ ಈ ತರಹೇವಾರಿ ಉತ್ಪನ್ನಗಳ ಕ್ಯಾಟಲಾಗ್ ಅನ್ನು ಸಾಕಷ್ಟು ಗ್ರಾಹಕರಿಗೆ ಹಂಚಿಕೊಳ್ಳಬಹುದು, ಗ್ರಾಹಕರ ಪರವಾಗಿ ಉತ್ಪನ್ನಗಳಿಗೆ ಆರ್ಡರ್ ಮಾಡಿಕೊಳ್ಳಬಹುದು ಮತ್ತು ವ್ಯವಹಾರಗಳ ಮೇಲೆ ಕಮೀಷನ್ ಪಡೆಯಲು ಅವಕಾಶವಿದೆ.

Flipkart Launches Shopsy App To Help Local Entrepreneurs: All You Need To Know In Kannada

ಆರ್ಡರ್ ಮಾಡಿದ ಉತ್ಪನ್ನಗಳ ಕ್ಯಾಟಲಾಗ್ ಆಧಾರದಲ್ಲಿ ಕಮೀಷನ್ ಶೇಕಡ ನಿಗದಿಯಾಗುತ್ತದೆ. ವಿಶ್ವಾಸಾರ್ಹವಾದ ವ್ಯಕ್ತಿಯೊಂದಿಗಿನ ಸಂವಾದಗಳ ಮೂಲಕ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ ಡಿಜಿಟಲ್ ವಾಣಿಜ್ಯ ಗ್ರಾಹಕರಿಗೆ ಉತ್ಪನ್ನಗಳಿಗೆ ಹೊಸ ಪ್ರವೇಶವನ್ನು ಒದಗಿಸುವ ಉದ್ದೇಶ ಈ ಪ್ಲಾಟ್ ಫಾರ್ಮ್ ದ್ದಾಗಿದೆ.

ಫ್ಲಿಪ್ ಕಾರ್ಟ್‌ನ ಗ್ರೋಥ್ ಆಂಡ್ ಮಾನಿಟೈಸೇಶನ್ ವಿಭಾಗದ ಸೀನಿಯರ್ ವೈಸ್ ಪ್ರೆಸಿಡೆಂಟ್ ಪ್ರಕಾಶ್ ಸಿಕಾರಿಯಾ ಅವರು ಈ ಬಗ್ಗೆ ಮಾತನಾಡಿ, ಕಳೆದ ಹಲವಾರು ವರ್ಷಗಳಲ್ಲಿ ಫ್ಲಿಪ್ ಕಾರ್ಟ್ ದೇಶಾದ್ಯಂತ ನೇರ ಮತ್ತು ಪರೋಕ್ಷ ಉದ್ಯೋಗಗಳ ಅವಕಾಶಗಳನ್ನು ಕಲ್ಪಿಸುವಲ್ಲಿ ತನ್ನ ಬದ್ಧತೆಯನ್ನು ತೋರುತ್ತಾ ಬಂದಿದೆ. ಈ ಬದ್ಧತೆಯನ್ನು ಮತ್ತಷ್ಟು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಇದೀಗ ಶಾಪ್ಸಿಯನ್ನು ಆರಂಭಿಸಲಾಗಿದೆ ಮತ್ತು ಇದರ ಮೂಲಕ ಭಾರತದ ಮಿಲಿಯನ್ ಗಟ್ಟಲೆ ಜನರಿಗೆ ಹೆಚ್ಚುವರಿ ಆದಾಯ ಗಳಿಸುವ ಅವಕಾಶಗಳನ್ನು ಕಲ್ಪಿಸುತ್ತಿದೆ.

ಈಗ, ಯಾರು ಬೇಕಾದರೂ, ಎಲ್ಲಿಂದ ಬೇಕಾದರೂ ಶೂನ್ಯ ಬಂಡವಾಳದೊಂದಿಗೆ ತಮ್ಮ ಆನ್ ಲೈನ್ ವ್ಯವಹಾರವನ್ನು ಆರಂಭಿಸಬಹುದಾಗಿದೆ. ಇದರ ಜತೆಗೆ ನಾವು ಭಾರತೀಯ ಉದ್ಯಮಿಗಳಿಗೆಂದೇ ಫ್ಲಿಪ್ ಕಾರ್ಟ್ ಇ-ಕಾಮರ್ಸ್ ಪರಿಣತಿಯನ್ನು ಆರಂಭಿಸುತ್ತಿದ್ದೇವೆ. ಉದ್ಯಮಿಗಳಿಗೆ ಈಗ ಫ್ಲಿಪ್ ಕಾರ್ಟ್ ನ ಕ್ಯಾಟಲಾಗ್, ಸ್ಥಾಪಿತವಾದ ವಿತರಣಾ ಜಾಲಗಳು ಮತ್ತು ಮೂಲಸೌಕರ್ಯಗಳನ್ನು ವಿಶ್ವಾಸಾರ್ಹತೆ ಮತ್ತು ವೇಗವಾಗಿ ಬಳಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.

ಈ ಪ್ರಯೋಜನಗಳು ಅಂತಿಮ ಹಂತದ ಗ್ರಾಹಕರ ಅನುಭವವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಮತ್ತು ಅವರ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿವೆ'' ಎಂದರು.
ವಿಶ್ವಾಸಾರ್ಹತೆ ಮತ್ತು ಸರಳೀಕರಣದ ಸವಾಲುಗಳಿಂದಾಗಿ ಭಾರತದಲ್ಲಿ ಅನೇಕ ಆನ್ ಲೈನ್ ಬಳಕೆದಾರರು ಆನ್ ಲೈನ್ ನಲ್ಲಿ ವ್ಯವಹಾರ ನಡೆಸಲು ಸಾಧ್ಯವಾಗುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ವಿತರಿತ ವಾಣಿಜ್ಯ'ವು ಒಂದು ಜಾಲವಾಗಿದ್ದು, ಇಂತಹ ಸಮಸ್ಯೆಗಳು ಅಥವಾ ಸವಾಲುಗಳನ್ನು ಪರಿಹರಿಸಿ ಅವರ ವ್ಯವಹಾರವನ್ನು ಗರಿಷ್ಠ ಮಟ್ಟದಲ್ಲಿ ಬೆಳವಣಿಗೆ ಹೊಂದಲು ನೆರವಾಗುತ್ತಿದೆ. ಇದೇ ನಿಟ್ಟಿನಲ್ಲಿ ಇದೀಗ ಶಾಪ್ಸಿ ಆರಂಭವಾಗಿದ್ದು, ಸಮುದಾಯಗಳಿಗೆ ಇ-ಕಾಮರ್ಸ್ ಶಕ್ತಿಯನ್ನು ತುಂಬಲಿದೆ.

ಇದಲ್ಲದೇ, ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹಲವಾರು ವೈಯಕ್ತಿಕ ಉದ್ಯಮಿಗಳು ಅಥವಾ ಸ್ವಯಂ-ಉದ್ಯಮಿಗಳು ತಮ್ಮ ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸಲು ಹೆಣಗಾಡುತ್ತಿದ್ದಾರೆ ಮತ್ತು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ.

ಇದರ ಪರಿಣಾಮ ಅವರಲ್ಲಿ ಅನೇಕರು ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದಾರೆ. ಈ ಸಾಂಕ್ರಾಮಿಕವು ಉದ್ಯಮಿಗಳು ತಮ್ಮ ವ್ಯಹವಾರ, ಗ್ರಾಹಕರು ತಮ್ಮ ಶಾಪಿಂಗ್ ಹಾಗೂ ಅನೇಕ ಸಣ್ಣ ಮತ್ತು ಸೂಕ್ಷ್ಮ ವ್ಯವಹಾರಗಳನ್ನು ಲಾಭದಾಯಕವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಡಿಜಿಟಲ್ ವಾಣಿಜ್ಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಮಾಡಿದೆ. ಅದೇ ರೀತಿ ನವೀನ ಇ-ಕಾಮರ್ಸ್ ಮಾದರಿಗಳಿಗೆ ಇದು ಬಹು ದೊಡ್ಡ ಅವಕಾಶಗಳನ್ನು ಕಲ್ಪಿಸಿದಂತಾಗಿದೆ.

ಇದು ಈ ವ್ಯವಹಾರಗಳಿಗೆ ಡಿಜಿಟಲ್ ಬ್ರ್ಯಾಂಡ್ ಆಗಲು ಸಹಾಯ ಮಾಡುವುದರೊಂದಿಗೆ ದೇಶಾದ್ಯಂತ ಗ್ರಾಹಕರ ನೆಲೆಗಳನ್ನು ಪೂರೈಸುವುದರ ಜತೆಗೆ ಗಟ್ಟಿಯಾಗಿ ನೆಲೆಯೂರಲು ಸಹಕಾರಿಯಾಗಿದೆ.

English summary
Flipkart launched Shopsy app that will provide opportunities to enterprising Indians to start their own online business with no upfront investment. All you need to know in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X