ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮಾರುಕಟ್ಟೆಗೆ ನೊಕಿಯಾ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ಫ್ಲಿಪ್‌ಕಾರ್ಟ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಬಹು ನಿರೀಕ್ಷಿತ ನೊಕಿಯಾ ಪ್ಯೂರ್ ಬುಕ್ X14 ಲ್ಯಾಪ್ ಟಾಪ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಹೊಸ ನೊಕಿಯಾ ಪ್ಯೂರ್ ಬುಕ್ X14 ಲ್ಯಾಪ್ ಟಾಪ್ 1.1 ಕೆಜಿ ತೂಕವಿದ್ದು, 16.8 ಎಂಎಂ ಸ್ಲೀಕ್ ಆಗಿದೆ. 14 ಇಂಚುಗಳ ಪೂರ್ಣ ಎಚ್ ಡಿ ಸ್ಕ್ರೀನ್ ಅನ್ನು ಒಳಗೊಂಡಿರುವ ಈ ಲ್ಯಾಪ್ ಟಾಪ್ ಡಾಲ್ಬಿ ವಿಷನ್ ಅನ್ನು ಒಳಗೊಂಡಿದೆ. ಈ ಮೂಲಕ ಹೊಸ ಲ್ಯಾಪ್ ಟಾಪ್ ಅಲ್ಟ್ರಾ-ವಿವಿಡ್ ಚಿತ್ರದ ಗುಣಮಟ್ಟವನ್ನು ನೀಡುತ್ತದೆ. ಇದರ ಬೆಲೆ 59,990 ರೂಪಾಯಿಗಳಾಗಿದ್ದು, ಡಿಸೆಂಬರ್ 18, 2020 ರಿಂದ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ.

ಫ್ಲಿಪ್‌ಕಾರ್ಟ್‌ನಿಂದ 2ಗುಡ್ ಲೋಕಲ್ ಯೋಜನೆ ಆರಂಭ : ಆಫ್‌ಲೈನ್ ರಿಟೇಲ್ ಉತ್ಪನ್ನಗಳು, ಆನ್‌ಲೈನ್‌ನಲ್ಲಿ ಲಭ್ಯಫ್ಲಿಪ್‌ಕಾರ್ಟ್‌ನಿಂದ 2ಗುಡ್ ಲೋಕಲ್ ಯೋಜನೆ ಆರಂಭ : ಆಫ್‌ಲೈನ್ ರಿಟೇಲ್ ಉತ್ಪನ್ನಗಳು, ಆನ್‌ಲೈನ್‌ನಲ್ಲಿ ಲಭ್ಯ

ಗ್ರಾಹಕರ ಕೆಲಸಗಳು ಮತ್ತು ಮನೋರಂಜನೆಯ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ನೊಕಿಯಾ ಪ್ಯೂರ್ ಬುಕ್ X14 ಲ್ಯಾಪ್ ಟಾಪ್, 4.2 GHz ಟರ್ಬೊ ಇಂಟೆಲ್ ಐ5 10 ನೇ ತಲೆಮಾರಿನ ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ ಹಾಗೂ ವಿಂಡೋಸ್ 10 ಹೋಂ ಅನ್ನು ಮೊದಲೇ ಸ್ಥಾಪಿಸಲಾಗಿದ್ದು, ಹೆಡ್ ಫೋನ್ ಗಳಿಗೆ ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮೊಸ್ ನೊಂದಿಗೆ ಅತ್ಯುತ್ಕೃಷ್ಠವಾದ ಆಡಿಯೋ-ವಿಷ್ಯುವಲ್ ಅನುಭವವನ್ನು ನೀಡಲಿದೆ.

Flipkart Launches Nokia Laptops In India

512ಜಿಬಿ ಎನ್ ವಿಎಂಇ ಎಸ್ಎಸ್ ಡಿಯೊಂದಿಗೆ ಇತ್ತೀಚಿನ ಪ್ರೊಸೆಸರ್ ಸೂಪರ್ ಫಾಸ್ಟ್ ಬೂಟ್ ಅಪ್, ಸಂಸ್ಕರಣೆ ಮತ್ತು ಸಿಮ್ಯುಲೇಷನ್ ಗಳು, ಡೇಟಾ ಕ್ರಂಚಿಂಗ್ ಮತ್ತು ವಿಷಯ ರಚನೆಯ ವೇಳೆಯಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದರಲ್ಲಿ ವಿಂಡೋಸ್ ಹೆಲೋ ಫೇಸ್ ಅನ್ಲಾಕ್ ನೊಂದಿಗೆ ಎಚ್ ಡಿ ಐಆರ್, ಬ್ರೈಟ್ ನೆಸ್ ಅನ್ನು ಹೊಂದಿಸಿಕೊಳ್ಳವುದರೊಂದಿಗೆ ಬ್ಯಾಕ್ ಲಿಟ್ ಕೀಬೋರ್ಡ್ ಮತ್ತು ಅತ್ಯುತ್ತಮ ಕಾರ್ಯನಿರ್ವಹಣೆಗೆ ಮಲ್ಟಿಪಲ್ ಗೆಸ್ಚರ್ ಆಯ್ಕೆಗಳು ಇರುವ ಪ್ರೆಸಿಶನ್ ಟಚ್ ಪ್ಯಾಡ್ ಹಾಗೂ ಮನೆಯಿಂದಲೇ ಕೆಲಸ ಮಾಡಲು ಸುಲಭ ಬಳಕೆಗೆ ಸೂಕ್ತವಾದ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

''ಈ ಹೊಸ ನೊಕಿಯಾ ಬ್ರ್ಯಾಂಡ್ ಅನ್ನು ಬಿಡುಗಡೆ ಮಾಡುವ ಮೂಲಕ ಫ್ಲಿಪ್ ಕಾರ್ಟ್ ನೊಂದಿಗಿನ ನಮ್ಮ ಯಶಸ್ವಿ ಸಹಯೋಗಕ್ಕೆ ಸಾಕ್ಷಿಯಾಗಿದೆ. ಈ ಮೂಲಕ ಭಾರತದಲ್ಲಿ ಗ್ರಾಹಕರಿಗೆ ನೊಕಿಯಾ ಬ್ರ್ಯಾಂಡೆಡ್ ಲ್ಯಾಪ್ ಟಾಪ್ ಅನ್ನು ನೀಡಲು ನಾವು ಉತ್ಸುಕರಾಗಿದ್ದೇವೆ. ಈ ಹೊಸ ಲ್ಯಾಪ್ ಟಾಪ್ ಮಾರುಕಟ್ಟೆಯಲ್ಲಿನ ಬೇಡಿಕೆಯ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮುನ್ನಡಿ ಇಟ್ಟಿದೆ. ಇದರ ಜೊತೆಗೆ ನೊಕಿಯಾ ಬ್ರ್ಯಾಂಡ್ ಈಗಾಗಲೇ ಭಾರತದಲ್ಲಿ ಜನಪ್ರಿಯವಾಗಿದ್ದು, ಇದರ ಶೈಲಿ, ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ಗ್ರಾಹಕರಿಗೆ ನೀಡಲಿದೆ'' ಎಂದು ನೊಕಿಯಾ ಬ್ರ್ಯಾಂಡ್ ಪಾರ್ಟ್‌ನರ್‌ಶಿಪ್‌ನ ಉಪಾಧ್ಯಕ್ಷ ವಿಪುಲ್ ಮೆಹ್ರೋತ್ರ ಹೇಳಿದ್ದಾರೆ.

ಆನ್ ಲೈನ್ ಶಿಕ್ಷಣ ಮತ್ತು ಮನೆಯಿಂದಲೇ ಕೆಲಸ ಮಾಡುವುದು ಈಗ ಮಾಮೂಲಿಯಾಗಿದೆ. ಇದರ ಪರಿಣಾಮ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ 2.3 ಪಟ್ಟು ಹೆಚ್ಚಾಗಿದೆ. ಫ್ಲಿಪ್ ಕಾರ್ಟ್ ಗ್ರಾಹಕರು ಲ್ಯಾಪ್ ಟಾಪ್ ಖರೀದಿಯ ನೆಚ್ಚಿನ ತಾಣವೆನಿಸಿದೆ. ಪ್ರೀಮಿಯಂ ಪಿಕ್ಚರ್ ಕ್ವಾಲಿಟಿ, ಬಹು ಕ್ರಿಯಾತ್ಮಕ, ಅಲ್ಟ್ರಾ ಲೈಟ್ ವೇಟ್ ಮತ್ತು ಸ್ಲೀಕ್ ಡಿಸೈನ್ ನಂತಹ ಲ್ಯಾಪ್ ಟಾಪ್ ಗಳಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಲಕ್ಷಾಂತರ ಗ್ರಾಹಕರಲ್ಲಿ ನಡೆಸಿದ ಅವಲೋಕನ ಮತ್ತು ಅಧ್ಯಯನದಿಂದ ಬಹಿರಂಗವಾಗಿದೆ. ಈ ಒಳನೋಟಗಳ ಮಾರ್ಗದರ್ಶನದೊಂದಿಗೆ ಫ್ಲಿಪ್ ಕಾರ್ಟ್ ನೊಕಿಯಾದೊಂದಿಗೆ ಸೇರಿ ಲ್ಯಾಪ್ ಟಾಪ್ ಬಳಕೆದಾರರ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

English summary
Flipkart introduced Most anticipated Nokia laptops in indian market
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X