• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫ್ಲಿಪ್ ಕಾರ್ಟ್ ನಿಂದ MarQ ಆ್ಯಂಡ್ರಾಯ್ಡ್ 9.0 ಸ್ಮಾರ್ಟ್ ಟಿವಿ ಬಿಡುಗಡೆ : ಬೆಲೆ 11,999 ರೂಪಾಯಿ

|

ಬೆಂಗಳೂರು, ಸೆಪ್ಟೆಂಬರ್ 18: ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್, ಇಂದು ಹೊಸ ಶ್ರೇಣಿಯ ಆ್ಯಂಡ್ರಾಯ್ಡ್ 9.0 ಹೊಂದಿರುವ MarQ ಸ್ಮಾರ್ಟ್‌ ಟಿವಿಗಳನ್ನು ಬಿಡುಗಡೆ ಮಾಡಿದೆ. MarQ ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಗ್ರಾಹಕರನ್ನು ವೇಗವಾಗಿ ಸೆಳೆಯುತ್ತಿರುವ ಫ್ಲಿಪ್ ಕಾರ್ಟ್ ಅನ್ನು ಪ್ರವೇಶಿಸಿದಂತಾಗಿದೆ.

MarQ ಸ್ಮಾರ್ಟ್ ಟಿವಿಗಳು ಫ್ಲಿಪ್ ಕಾರ್ಟ್ ನಲ್ಲಿ 32 ಇಂಚುಗಳ ಎಚ್ ಡಿ ಮತ್ತು 43 ಇಂಚುಗಳ ಪೂರ್ಣವಾದ ಎಚ್ ಡಿ ಹಾಗೂ 4ಕೆ ಅಲ್ಟ್ರಾ ಎಚ್ ಡಿ ರೂಪಾಂತರಗಳನ್ನು ಹೊಂದಿದ್ದು, ಇವುಗಳ ಬೆಲೆ 11,999 ರೂಪಾಯಿಗಳಿಂದ ಆರಂಭವಾಗುತ್ತದೆ.

ಗಡಿ ವಿವಾದದ ನಡುವೆ ಚೀನಾದ ಟೆನ್ಸೆಂಟ್ ಕಂಪನಿ Flipkartನಲ್ಲಿ 62.8 ಮಿಲಿಯನ್ ಡಾಲರ್ ಹೂಡಿಕೆ

ಭಾರತೀಯ ಸ್ಮಾರ್ಟ್ ಟಿವಿ ಮಾರುಕಟ್ಟೆ ಒಟಿಟಿ ಬಳಕೆಯಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಾಣುತ್ತಿದೆ. ಇದರ ಜತೆಗೆ ಇಂಟರ್ನೆಟ್ ಬೆಂಬಲಿತ ಸ್ಮಾರ್ಟ್ ಟಿವಿಗಳ ಬಳಕೆಯಲ್ಲಿಯೂ ಗಮನಾರ್ಹವಾದ ಬೆಳವಣಿಗೆಯನ್ನು ಕಾಣುತ್ತಿದೆ. ಇತ್ತೀಚಿನ ಡಿಎಎನ್ ಇಂಡಿಯಾ ವರದಿ ಪ್ರಕಾರ, ಭಾರತದಲ್ಲಿ ಹಿಂದೆಂದಿಗಿಂತಲೂ ಒಟಿಟಿ ಕಂಟೆಂಟ್ ಬಳಕೆ ಅತ್ಯಧಿಕವಾಗಿದೆ.

ವಿಶೇಷವಾಗಿ ಪ್ರಸ್ತುತ ಸನ್ನಿವೇಶದಲ್ಲಿ ಮಿಲೇನಿಯಲ್ಸ್ ಮತ್ತು ಜೆನ್ ಝಡ್ ಪ್ರತಿದಿನ ನಾಲ್ಕು ಗಂಟೆಗಳ ಕಂಟೆಂಟ್ ಅನ್ನು ಬಳಸುತ್ತಿದ್ದಾರೆ. ಈ ಅಂಶವನ್ನು ಮನಗಂಡು MarQ Android 9.0 ಸ್ಮಾರ್ಟ್ ಟಿವಿಗಳು ರೆಟಿನಾ ಸೇಫ್ ತಂತ್ರಜ್ಞಾನ ಸೇರಿದಂತೆ ಇನ್ನಿತರೆ ವಿಶೇಷ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶ ಮಾಡಿವೆ. ಈ ತಂತ್ರಜ್ಞಾನವು ಟಿವಿ ವೀಕ್ಷಕರ ಕಣ್ಣಿನ ಒತ್ತಡವನ್ನು ಕಡಿಮೆ ಮಾಡಲಿದೆ.

ಇದಲ್ಲದೇ, MarQ Android 9.0 ಸ್ಮಾರ್ಟ್ ಟಿವಿಗಳು ಅತ್ಯುತ್ತಮ ಧ್ವನಿ ಗುಣಮಟ್ಟವನ್ನು ಹೊಂದಿದ್ದು, ಗ್ರಾಹಕರಿಗೆ ಕರ್ಕಶ ಧ್ವನಿಯ ಬಾಧೆ ಇರುವುದಿಲ್ಲ. 3 ಎಚ್ ಡಿಎಂಐ ಮತ್ತು 2 ಯುಎಸ್ ಬಿ ಪೋರ್ಟ್ ಗಳನ್ನು ಹೊಂದುವ ಮೂಲಕ ಗ್ರಾಹಕರಿಗೆ ಅಡ್ಡಿ ರಹಿತ ಮನೋರಂಜನೆಯನ್ನು ನೀಡಲಿವೆ. 43 ಇಂಚುಗಳ ಅಲ್ಟ್ರಾ ಎಚ್ ಡಿ ಶ್ರೇಣಿಯು 4 ಎಚ್ ಡಿಎಂಐ ಮತ್ತು 3 ಯುಎಸ್ ಬಿ ಪೋರ್ಟ್ ಗಳನ್ನು ಒಳಗೊಂಡಿರುತ್ತದೆ.

""ಹಬ್ಬದ ಈ ಸಂದರ್ಭದಲ್ಲಿ ಗ್ರಾಹಕರು ತಮ್ಮ ಜೀವನಶೈಲಿಗಳಿಗೆ ಹೆಚ್ಚು ಮೌಲ್ಯವನ್ನು ತಂದುಕೊಡುವಂತಹ ಹೊಸ ಉತ್ಪನ್ನಗಳನ್ನು ಎದುರು ನೋಡುತ್ತಿರುತ್ತಾರೆ. ಇಂತಹ ವಿಭಾಗದಲ್ಲಿ ಸ್ಮಾರ್ಟ್ ಟಿವಿಯೂ ಒಂದಾಗಿದೆ. ಈ ತಿಂಗಳುಗಳಲ್ಲಿ ಸ್ಮಾರ್ಟ್ ಟಿವಿಗಳ ಬಗ್ಗೆ ಹೆಚ್ಚು ಗ್ರಾಹಕರು ಒಲವು ತೋರುವುದನ್ನು ಕಾಣಬಹುದಾಗಿದೆ. ವಿಶೇಷವಾಗಿ ಮನೆಯಲ್ಲೇ ಹೆಚ್ಚು ಸಮಯ ಇರುವ ಈ ಸಮಯದಲ್ಲಿ ಗ್ರಾಹಕರು ಸ್ಮಾರ್ಟ್ ಟಿವಿಯನ್ನು ಹೆಚ್ಚು ಬಯಸುತ್ತಿದ್ದಾರೆ. ಫ್ಲಿಪ್ ಕಾರ್ಟ್ ನಿಂದ MarQ ಸದಾ ಕಾಲ ಗ್ರಾಹಕರ ಅಗತ್ಯತೆ ಮತ್ತು ಅಭಿರುಚಿಗೆ ತಕ್ಕಂತೆ ಇರಲಿದೆ. ಹೊಸ ಶ್ರೇಣಿಯ ಸ್ಮಾರ್ಟ್ ಟಿವಿಗಳು ಈ ದಿಸೆಯಲ್ಲಿ ಹೆಜ್ಜೆ ಇಟ್ಟಿವೆ'' ಎಂದು ಫ್ಲಿಪ್ ಕಾರ್ಟ್ ನ ಪ್ರೈವೇಟ್ ಬ್ರ್ಯಾಂಡ್ ವಿಭಾಗದ ಉಪಾಧ್ಯಕ್ಷ ದೇವ್ ಅಯ್ಯರ್ ಹೇಳಿದ್ದಾರೆ.

ಫ್ಲಿಪ್ ಕಾರ್ಟ್ ನ MarQ ಸ್ಮಾರ್ಟ್‌ ಟಿವಿ ಜೊತೆಗೆ MarQ ಸ್ಮಾರ್ಟ್ ಹೋಂ ಸ್ಪೀಕರ್ ಗಳನ್ನೂ ಬಿಡುಗಡೆ ಮಾಡುತ್ತಿದೆ. MarQ ಸ್ಮಾರ್ಟ್ ಹೋಂ ಸ್ಪೀಕರ್ಸ್ ಸುಪೀರಿಯರ್ ಆಡಿಯೋ & ಬಾಸ್ ಗುಣಮಟ್ಟ ಹಾಗೂ ಹೆಚ್ಚಿಸಿದ ಧ್ವನಿ ಸಾಮರ್ಥ್ಯದಿಂದ ಗ್ರಾಹಕರ ಮನೋರಂಜನೆ ಅನುಭವವನ್ನು ಹೆಚ್ಚಳ ಮಾಡಲಿದೆ. ಈ MarQ ಸ್ಮಾರ್ಟ್ ಹೋಂ ಸ್ಪೀಕರ್ಸ್ ಫ್ಲಿಪ್ ಕಾರ್ಟ್ ನಲ್ಲಿ 3,499 ರೂಪಾಯಿಗಳಿಗೆ ಲಭ್ಯವಿವೆ.

English summary
Bengaluru based E-commerce flipkart Today Launches MarQ Android 9.0 Smart TVs and Smart Home Speakers. Price details here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X