• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಟಾರ್ಟ್‌ಅಪ್‌ಗಳ ಉತ್ತೇಜನಕ್ಕೆ ಫ್ಲಿಪ್‌ಕಾರ್ಟ್‌ನಿಂದ ಫ್ಲಿಪ್‌ಕಾರ್ಟ್‌ ಲೀಪ್‌ ಕಾರ್ಯಕ್ರಮ

|

ಬೆಂಗಳೂರು, ಆಗಸ್ಟ್‌ 10, 2020: ದೇಶೀಯ ಇ-ಕಾಮರ್ಸ್‌ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್‌ ಕಾರ್ಟ್‌ ಇಂದು 'ಫ್ಲಿಪ್‌ ಕಾರ್ಟ್‌ ಲೀಪ್' ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ಇದು ಮೊದಲ ಸ್ಟಾರ್ಟ್‌ಅಪ್‌ ಉತ್ತೇಜನ ಕಾರ್ಯಕ್ರಮವಾಗಿದೆ. ಇದರ ಪ್ರಮುಖ ಉದ್ದೇಶ ಹೊಸ ಮತ್ತು ಮುಂಬರುವ ಸ್ಟಾರ್ಟ್‌ಅಪ್‌ಗಳಿಗೆ ನೆರವಾಗುವುದಾಗಿದೆ.

ಅಂದರೆ, ಸ್ಟಾರ್ಟ್‌ಅಪ್‌ಗಳು ಬೆಳವಣಿಗೆ ಹೊಂದುವುದು, ತಮ್ಮ ಮಟ್ಟವನ್ನು ಹೆಚ್ಚಿಸಿಕೊಳ್ಳುವುದು, ಸವಾಲುಗಳನ್ನು ಎದುರಿಸುವುದು ಮತ್ತು ಭಾರತದಲ್ಲಿ ಬೆಳೆಯುತ್ತಿರುವ ಉದ್ಯಮಶೀಲತ್ವ ಪರಿಸರಕ್ಕೆ ಕೊಡುಗೆಯನ್ನು ನೀಡುವುದು ಹಾಗೂ 'ಸ್ಟಾರ್ಟಪ್ ಇಂಡಿಯಾ'ಗೆ ಪ್ರೋತ್ಸಾಹ ನೀಡುವುದಾಗಿದೆ.

ಆಗಸ್ಟ್‌ನಿಂದ ಫ್ಲಿಪ್‌ಕಾರ್ಟ್ ಹೋಲ್ ಸೇಲ್ ಶುರು: 5 ಅಂಶಗಳು ಇಲ್ಲಿವೆ

ಈ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಸಿಕೊಳ್ಳುವ ಪ್ರಕ್ರಿಯೆಯನ್ನು ಇಂದಿನಿಂದ ಆರಂಭ ಮಾಡಲಾಗಿದ್ದು, ಫ್ಲಿಪ್‌ ಕಾರ್ಟ್‌ ಲೀಪ್‌ ಬಿ2ಸಿ ಮತ್ತು ಬಿ2ಬಿ ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಲಿದೆ ಮತ್ತು ಸಮಗ್ರ 16 ವಾರಗಳ ವರ್ಚುವಲ್‌ ಕಾರ್ಯಕ್ರಮದ ಮೂಲಕ ತಮ್ಮ ಮಟ್ಟವನ್ನು ಹೆಚ್ಚಳ ಮಾಡಿಕೊಳ್ಳಲು ಸಹಾಯ ಮಾಡಲಿದೆ. ಈ ಕಾರ್ಯಕ್ರಮದಲ್ಲಿ ಫ್ಲಿಪ್‌ಕಾರ್ಟ್‌ನ ಬ್ಯುಸಿನೆಸ್‌, ಆಪರೇಷನ್, ಉತ್ಪನ್ನ ಮತ್ತು ತಂತ್ರಜ್ಞಾನ ಪರಿಣತರು ಆಯ್ದ ಸ್ಟಾರ್ಟ್‌ಅಪ್‌ಗಳಿಗೆ ಸಂಯೋಜಕರಾಗಿರಲಿದ್ದಾರೆ ಮತ್ತು ಅವುಗಳ ಬೆಳವಣಿಗೆಗೆ ಪೂರಕವಾದ ಪದ್ಧತಿಗಳನ್ನು ಹೇಳಿಕೊಡಲಿದ್ದಾರೆ. ಇದಲ್ಲದೇ, ಉದ್ಯಮದ ಪರಿಣತರಿಂದ ವಿಶೇಷ ತರಗತಿಗಳೂ ಇರಲಿವೆ.

ಮಾರುಕಟ್ಟೆಗೆ ಸಿದ್ಧವಾದ ಪರಿಹಾರಗಳನ್ನು ನಿರ್ಮಾಣ ಮಾಡಲು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡುವ ಮೂಲಕ ವಿಶ್ವದರ್ಜೆಯ ಮೌಲ್ಯಾಧಾರಿತ ಉತ್ಪನ್ನಗಳನ್ನು ತಯಾರಿಸಲು ಪೂರಕವಾದ ಟೂಲ್‌ಗಳು, ಫ್ರೇಂವರ್ಕ್, ಜ್ಞಾನವನ್ನು ನೀಡುವಂತಹ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಈ ಕಾರ್ಯಕ್ರಮ ನೆರವಾಗಲಿದೆ.

ಫ್ಲಿಪ್‌ಕಾರ್ಟ್‌ನ ಉನ್ನತ ಮಟ್ಟದ ಸಂಯೋಜಕರಿಂದ ತಂತ್ರಜ್ಞಾನ ಮತ್ತು ಆಳವಾದ ಉದ್ಯಮದ ಪರಿಣತಿಯನ್ನು ಪಡೆಯುವುದರೊಂದಿಗೆ ಸ್ಟಾರ್ಟ್‌ಅಪ್‌ಗಳು ಡೈನಾಮಿಕ್ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ದಾಪುಗಾಲು ಇಟ್ಟು ಸಮರ್ಥವಾದ ಸ್ಪರ್ಧೆಯನ್ನು ನೀಡಬಹುದಾಗಿದೆ. ಸೂಕ್ತವಾದ ಹೆಚ್ಚು ಸಾಧ್ಯತೆ ಇರುವ ಸ್ಟಾರ್ಟ್‌ಅಪ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಫ್ಲಿಪ್ ಕಾರ್ಟ್‌ ಲೀಪ್‌ ಗೆ ಐದು ಪರಿಕಲ್ಪನೆಗಳನ್ನು ಅಥವಾ ವಿಷಯಗಳನ್ನು ಶಾರ್ಟ್‌ ಲೀಸ್ಟ್ ಮಾಡಲಿದೆ. ಇವುಗಳೆಂದರೆ, ವಿನ್ಯಾಸ ಮತ್ತು ಮೇಕ್ ಫಾರ್ ಇಂಡಿಯಾ, ಡಿಜಿಟಲ್‌ ಕಾಮರ್ಸ್‌ ನಲ್ಲಿ ನಾವೀನ್ಯತೆ, ರೀಟೇಲ್ ವ್ಯವಸ್ಥೆಯನ್ನು ಸಬಲೀಕರಣಗೊಳಿಸಲು ತಂತ್ರಜ್ಞಾನಗಳು ಆಗಿವೆ.

ಅತ್ಯಂತ ಹೆಚ್ಚು ನಾವೀನ್ಯತೆಯ ಹಾಗೂ ಭಾರತೀಯ ಗ್ರಾಹಕರಿಗೆ ಪರಿಹಾರಗಳನ್ನು ಒದಗಿಸಲು ಪೂರಕವಾಗಿ ಈ ವಿಷಯಗಳನ್ನು ಗುರುತಿಸಲಾಗುತ್ತಿದೆ. ಈ ವಿಷಯಗಳ ಕ್ಷೇತ್ರದಲ್ಲಿ ಡಿಜಿಟಲೀಕರಣ ಮತ್ತು ತಾಂತ್ರಿಕ ಸುಧಾರಣೆಯನ್ನು ತರಲು ಆದ್ಯತೆ ನೀಡಲಾಗುತ್ತದೆ. ಯಾವುದೇ ಮುಂದಿನ ಐದು ವರ್ಷಗಳಲ್ಲಿ ಇ-ಕಾಮರ್ಸ್ ಕ್ಷೇತ್ರದ ಸುಧಾರಣೆಗೆ ಅತ್ಯಂತ ವಿನೂತನವಾದ ಪರಿಹಾರಗಳನ್ನು ಕಂಡು ಹಿಡಿಯುವಂತಹ ಸ್ಟಾರ್ಟ್‌ಅಪ್‌ಗಳಿಗೂ ಸಹ ಆದ್ಯತೆ ನೀಡಲಾಗುತ್ತದೆ.

English summary
Flipkart, India’s homegrown e-commerce marketplace, today announced the launch of ‘Flipkart Leap’ the company’s first startup accelerator program to help new and upcoming startups.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X