ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್‌ಕಾರ್ಟ್‌ನಿಂದ ಕರ್ನಾಟಕದಲ್ಲಿ 3 ಫುಲ್ ಫಿಲ್ಮೆಂಟ್ ಕೇಂದ್ರಗಳ ಸ್ಥಾಪನೆ

|
Google Oneindia Kannada News

ಬೆಂಗಳೂರು, ಆಗಸ್ಟ್ 26: ಭಾರತದ ದೇಸೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಮುಂಬರುವ ಹಬ್ಬದ ಅವಧಿಯಲ್ಲಿ ಇನ್ನೂ ಮೂರು ಕೇಂದ್ರಗಳನ್ನು ಆರಂಭಿಸುವ ಮೂಲಕ ಕರ್ನಾಟಕದಲ್ಲಿ ತನ್ನ ಸಪ್ಲೈ ಚೇನ್ ಅನ್ನು ಬಲಗೊಳಿಸಿಕೊಳ್ಳಲಿದೆ. ಈ ಹೊಸ ಫುಲ್ ಫಿಲ್ಮೆಂಟ್ ಕೇಂದ್ರಗಳು ರಾಜ್ಯದಲ್ಲಿರುವ ಸಾವಿರಾರು ಮಾರಾಟಗಾರರಿಗೆ, ಎಂಎಸ್ಎಂಇಗಳಿಗೆ ಮತ್ತು ಸಣ್ಣ ರೈತರಿಗೆ ಬೆಂಬಲವನ್ನು ನೀಡಲಿವೆ. ಇದಲ್ಲದೇ, ಬೆಳೆಯುತ್ತಿರುವ ಗ್ರಾಹಕ ಬೇಡಿಕೆಯನ್ನು ಇದರ ಮೂಲಕ ಪೂರೈಸಿದಂತಾಗುತ್ತದೆ.

ಇದೆಲ್ಲಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ಗ್ರಾಹಕರಿಗೆ ಉತ್ಪನ್ನಗಳನ್ನು ತ್ವರಿತಗತಿಯಲ್ಲಿ ತಲುಪಿಸುವ ನಿಟ್ಟಿನಲ್ಲಿ ಹೊಸ ಮಾರಾಟ ಪ್ರತಿನಿಧಿಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಮತ್ತಷ್ಟು ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ರಾಜ್ಯದ ಗ್ರಾಹಕರಿಗೆ ಯಾವುದೇ ತೊಡಕಿಲ್ಲದೇ ತ್ವರಿತವಾಗಿ ಉತ್ಪನ್ನಗಳನ್ನು ತಲುಪಿಸುವ ಫ್ಲಿಪ್‌ಕಾರ್ಟ್‌ನ ಬದ್ಧತೆಗೆ ಈ ಹೊಸ ಸೆಂಟರ್‌ಗಳು ಪೂರಕವಾಗಿವೆ. ಇದರೊಂದಿಗೆ ರಾಜ್ಯದ ಗ್ರಾಹಕರು ಹಾಗೂ ಮಾರಾಟಗಾರರಿಗೆ ಮತ್ತು ರಾಜ್ಯದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಲಿವೆ. ಹೊಸ ಸೌಲಭ್ಯಗಳ ಸೇರ್ಪಡೆಯು ಇ-ಕಾಮರ್ಸ್ ಪರಿಸರ ವ್ಯವಸ್ಥೆಯನ್ನು ಮುಂದುವರಿಸುವ ಫ್ಲಿಪ್‌ಕಾರ್ಟ್‌ನ ಬದ್ಧತೆಗೆ ಸಾಕ್ಷಿಯಾಗಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ಕರ್ನಾಟಕದ ಧಾರವಾಡದಲ್ಲಿ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಈ ಕೇಂದ್ರಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಬೆಳಗಾವಿ ಲೋಕಸಭಾ ಸದಸ್ಯರಾದ ಮಂಗಳ ಸುರೇಶ್ ಅಂಗಡಿ ಮತ್ತು ಇನ್ನಿತರೆ ಅಧಿಕಾರಿಗಳು ಇದ್ದರು.

ಮೂರೂ ಕೇಂದ್ರಗಳು ಸುಮಾರು 7 ಲಕ್ಷ ಚದರಡಿ ವಿಸ್ತೀರ್ಣ

ಮೂರೂ ಕೇಂದ್ರಗಳು ಸುಮಾರು 7 ಲಕ್ಷ ಚದರಡಿ ವಿಸ್ತೀರ್ಣ

ಈ ಫುಲ್ ಫಿಲ್ಮೆಂಟ್ ಸೆಂಟರ್‌ಗಳು ವಿಶೇಷ ಸೌಲಭ್ಯಗಳಾಗಿದ್ದು, ಅಲ್ಲಿ ಈ ಪ್ರದೇಶದಾದ್ಯಂತ ಮಾರಾಟಗಾರರಿಂದ ಉತ್ಪನ್ನಗಳನ್ನು ಸ್ವೀಕರಿಸಲಾಗುತ್ತದೆ, ಸಂಗ್ರಹಿಸಲಾಗುತ್ತದೆ ಮತ್ತು ಪ್ಯಾಕ್ ಮಾಡಲಾಗುತ್ತದೆ. ಈ ಪ್ರಕ್ರಿಯೆಗಳ ನಂತರ ಗ್ರಾಹಕರಿಗೆ ತಲುಪಿಸಲು ವಿಂಗಡಣೆ ಕೇಂದ್ರಗಳು ಮತ್ತು ವಿತರಣಾ ಕೇಂದ್ರಗಳಿಗೆ ರವಾನಿಸಲಾಗುತ್ತದೆ. ಕೋಲಾರ, ಹುಬ್ಬಳ್ಳಿ ಮತ್ತು ಆನೇಕಲ್‌ಗಳಲ್ಲಿ ಇರುವ ಈ ಕೇಂದ್ರಗಳು ದೊಡ್ಡ ಮಟ್ಟದ ಫರ್ನಿಚರ್, ಮೊಬೈಲ್ ಗಳು, ಜವಳಿ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರಾಟಗಾರರಿಗೆ ಅವಕಾಶವನ್ನು ಕಲ್ಪಿಸುತ್ತದೆ.

ಈ ಮೂರೂ ಕೇಂದ್ರಗಳು ಸುಮಾರು 7 ಲಕ್ಷ ಚದರಡಿ ವಿಸ್ತೀರ್ಣವನ್ನು ಹೊಂದಿದ್ದು, 15.6 ಲಕ್ಷ ಕ್ಯೂಬಿಕ್ ಅಡಿಯಷ್ಟು ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದ್ದು, 10,500 ಕ್ಕೂ ಹೆಚ್ಚು ಮಾರಾಟಗಾರರಿಗೆ ನೆರವಾಗಲಿದೆ. ಈ ವಿಸ್ತರಣೆಯಿಂದ ಹೆಚ್ಚುವರಿಯಾಗಿ 14,000 ಕ್ಕೂ ಅಧಿಕ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಒದಗಿಸಲಿದೆ ಮತ್ತು ರಾಜ್ಯದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಿದಂತಾಗುತ್ತದೆ. ಇದಲ್ಲದೇ ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುವ ಅವಕಾಶವನ್ನು ಒದಗಿಸುತ್ತದೆ.

ಪ್ರಹ್ಲಾದ ಜೋಶಿ ಮಾತನಾಡಿ

ಪ್ರಹ್ಲಾದ ಜೋಶಿ ಮಾತನಾಡಿ

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು, ''ದೇಸೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ರಾಜ್ಯದಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕವು ದೇಶದ ಸಿಲಿಕಾನ್ ಕಣಿವೆಯಾಗಿದ್ದು, ದೇಶದಲ್ಲಿ ಅತ್ಯಂತ ಯಶಸ್ವಿ ಸ್ಟಾರ್ಟಪ್ ಗಳನ್ನು ಹೊಂದಿರುವ ರಾಜ್ಯವಾಗಿದೆ. ಇದಕ್ಕೆ ಪ್ರಮುಖ ಕಾರಣ ರಾಜ್ಯದಲ್ಲಿ ಜಾರಿಯಲ್ಲಿರುವ ಸ್ನೇಹಿ ನೀತಿಗಳು, ಸೂಕ್ತ ಮೂಲಸೌಕರ್ಯಗಳು ಮತ್ತು ದೊಡ್ಡ ಪ್ರಮಾಣದಲ್ಲಿ ಪ್ರತಿಭೆಗಳ ಲಭ್ಯತೆಯಾಗಿದೆ. ಫ್ಲಿಪ್ ಕಾರ್ಟ್ ಒಂದು ಸ್ಟಾರ್ಟಪ್ ಪ್ಯಾನ್ ಇಂಡಿಯಾ ಸಂಘಟನೆಯಾಗಿ ಬೆಳೆದು ಎಲ್ಲರಿಗೂ ಮೌಲ್ಯ ಸೃಷ್ಟಿಯನ್ನು ವೇಗಗೊಳಿಸಲು ತನ್ನ ರಾಜ್ಯದಲ್ಲಿ ಗಮನಾರ್ಗವಾದ ಹೂಡಿಕೆಗಳನ್ನು ಮಾಡುತ್ತಿರುವುದು ಬಹಳ ಹೆಮ್ಮೆಯ ವಿಚಾರವಾಗಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಪೂರೈಕೆ ಜಾಲದ ಮೂಲಸೌಕರ್ಯ ವಿಸ್ತರಣೆಯು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ ಮತ್ತು ರಾಜ್ಉದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯಮಶೀಲತೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡುತ್ತದೆ. ಈ ದಿಸೆಯಲ್ಲಿ ನಾವು ಫ್ಲಿಪ್ ಕಾರ್ಟ್ ಗೆ ಸಂಪೂರ್ಣ ಬೆಂಬಲದ ಭರವಸೆಯನ್ನು ನೀಡುತ್ತೇವೆ'' ಎಂದು ತಿಳಿಸಿದರು.

9 ಪೂರೈಕೆ ಸರಪಳಿ ಸೌಲಭ್ಯಗಳನ್ನು ಹೊಂದಿದೆ

9 ಪೂರೈಕೆ ಸರಪಳಿ ಸೌಲಭ್ಯಗಳನ್ನು ಹೊಂದಿದೆ

ಫ್ಲಿಪ್ ಕಾರ್ಟ್ 9 ಪೂರೈಕೆ ಸರಪಳಿ ಸೌಲಭ್ಯಗಳನ್ನು ಹೊಂದಿದ್ದು, ಕರ್ನಾಟಕದಲ್ಲಿ 23 ಲಕ್ಷ ಚದರ ಅಡಿಗಳಷ್ಟು ವಿಸ್ತಾರದಲ್ಲಿ 26,000 ನೇರ ಮತ್ತು ಪರೋಕ್ಷ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಿದೆ.

ಈ ಪ್ರದೇಶವು ಇ-ಕಾಮರ್ಸ್ ಸೇವೆಗಳಿಗೆ ಬಲವಾದ ಬೇಡಿಕೆಗೆ ಸಾಕ್ಷಿಯಾಗಿರುವುದರಿಂದ, ಹೊಸ ಸೌಲಭ್ಯಗಳ ಸೇರ್ಪಡೆಯು ಫ್ಲಿಪ್ ಕಾರ್ಟ್ ನ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ, ರಾಜ್ಯದ ಸಾವಿರಾರು ಮಾರಾಟಗಾರರಿಗೆ ಮತ್ತು ದೇಶಾದ್ಯಂತ ಲಕ್ಷಾಂತರ ಮೊದಲ ಬಾರಿಯ ಗ್ರಾಹಕರಿಗೆ ಇ-ಕಾಮರ್ಸ್ ಮೌಲ್ಯವನ್ನು ಹೆಚ್ಚಿಸುತ್ತದೆ.

ರಜನೀಶ್ ಕುಮಾರ್ ಅವರು ಮಾತನಾಡಿ

ರಜನೀಶ್ ಕುಮಾರ್ ಅವರು ಮಾತನಾಡಿ

ಫ್ಲಿಪ್ ಕಾರ್ಟ್ ಗ್ರೂಪ್ ನ ಚೀಫ್ ಕಾರ್ಪೊರೇಟ್ ಅಫೇರ್ ಆಫೀಸರ್ ರಜನೀಶ್ ಕುಮಾರ್ ಅವರು ಮಾತನಾಡಿ, ''ಬದ್ಧತೆಯ ಕಾರ್ಪೊರೇಟ್ ಪ್ರಜೆಯಾಗಿ, ನಮ್ಮ ಲಕ್ಷಾಂತರ ಎಂಎಸ್ಎಂಇಗಳು ಮತ್ತು ಸಣ್ಣ ಮಾರಾಟಗಾರರಿಗೆ ನಾವು ದೇಶಾದ್ಯಂತದ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸಲು ನಮ್ಮ ಎಲ್ಲಾ ಪಾಲುದಾರರಿಗೆ ಮೌಲ್ಯವನ್ನು ಸೃಷ್ಟಿಸುತ್ತದೆ. ಈ ಪ್ರಯಾಣದಲ್ಲಿ ನಾವು ಟೆಕ್ ಸಕ್ರಿಯ ಪೂರೈಕೆ ಜಾಲದಲ್ಲಿ ಹೂಡಿಕೆ ಮಾಡಿದ್ದೇವೆ. ಅದು ದೇಶಾದ್ಯಂತ ಸಾವಿರಾರು ನೇರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಮತ್ತು ಸಂಬಂಧಿತ ಕೈಗಾರಿಕೆಗಳಲ್ಲಿ ಪರೋಕ್ಷವಾದ ಉದ್ಯೋಗಾವಕಾಶಗಳಿಗೆ ನೆರವಾಗುತ್ತದೆ. ಹೊಸ ಅತ್ಯಾಧುನಿಕ ಸೌಲಭ್ಯಗಳು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ನೆರವಾಗುತ್ತದೆ ಮತ್ತು ಉದ್ಯಮದಲ್ಲಿ ಒಂದು ಮೈಲಿಗಲ್ಲನ್ನು ಸ್ಥಾಪಿಸುತ್ತದೆ. ಇದರ ಮೂಲಕ ಮಾರಾಟಗಾರರು, ಎಂಎಸ್ಎಂಇಗಳು, ಸಣ್ಣ ರೈತರು, ಕಿರಾಣಗಳು ಮತ್ತು ಕುಶಲಕರ್ಮಿಗಳು ಸೇರಿದಂತೆ ಎಲ್ಲಾ ಪಾಲುದಾರರಿಗೆ ಇ-ಕಾಮರ್ಸ್ ಕಾರ್ಯಾಚರಣೆಗಳಿಗೆ ಕರ್ನಾಟಕವನ್ನು ಇನ್ನಷ್ಟು ಆಕರ್ಷಕವಾಗಿಸುತ್ತದೆ'' ಎಂದು ಹೇಳಿದರು.

11 ಭಾರತೀಯ ಭಾಷೆಗಳಲ್ಲಿ ಭಾಷಾ ಇಂಟರ್ಫೇಸ್

11 ಭಾರತೀಯ ಭಾಷೆಗಳಲ್ಲಿ ಭಾಷಾ ಇಂಟರ್ಫೇಸ್

ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕವು ಇ-ಕಾಮರ್ಸ್ ಕ್ಷೇತ್ರದಲ್ಲಿ ಬಲಯುತವಾದ ಮಾರುಕಟ್ಟೆಯ ಕೇಂದ್ರವಾಗಿ ಬೆಳವಣಿಗೆಯಾಗಿದೆ. ಇಲ್ಲಿ ಲಕ್ಷಾಂತರ ಹೊಸ ಗ್ರಾಹಕರು, ಮಾರಾಟಗಾರರು ಮತ್ತು ಕಿರಾಣ ಪಾಲುದಾರರು ತಮ್ಮ ವ್ಯವಹಾರಗಳನ್ನು ಇ-ಕಾಮರ್ಸ್ ಕ್ಷೇತ್ರಕ್ಕೆ ಬದಲಾಯಿಸಿಕೊಂಡಿದ್ದಾರೆ. ಇದರ ಜತೆಯಲ್ಲಿ ಫ್ಲಿಪ್ ಕಾರ್ಟ್ ದೇಶಾದ್ಯಂತ ಗ್ರಾಹಕರಿಗೆ ಇ-ಕಾಮರ್ಸ್ ಅನ್ನು ಹೆಚ್ಚು ಒಳಗೊಳ್ಳುವಂತೆ ಮಾಡುತ್ತಿದೆ, ಫ್ಲಿಪ್ ಕಾರ್ಟ್ ಆ್ಯಪ್ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ 11 ಭಾರತೀಯ ಭಾಷೆಗಳಲ್ಲಿ ಭಾಷಾ ಇಂಟರ್ಫೇಸ್ ಹೊಂದಿದೆ.

English summary
Flipkart introduces three new fulfillment and sortation centers in Karnataka inaugurated virtually by Pralhad Joshi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X