ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್‌ಕಾರ್ಟ್‌ನಿಂದ ಕ್ಯೂಆರ್‌-ಕೋಡ್‌ ಆಧಾರಿತ ‘ಪೇ-ಆನ್‌ ಡೆಲಿವರಿ’

|
Google Oneindia Kannada News

ಬೆಂಗಳೂರು, ಜೂನ್ 8: ಭಾರತದ ದೇಶೀಯ ಇ-ಕಾಮರ್ಸ್‌ ಮಾರುಕಟ್ಟೆ ಪ್ರದೇಶ ಫ್ಲಿಪ್‌ಕಾರ್ಟ್‌, ತನ್ನ ಎಲ್ಲಾ ವಿತರಣೆ ವೇಳೆ ಹಣ ಪಾವತಿ (ಪೇ ಆನ್‌ ಡೆಲಿವರಿ) ಶಿಪ್‌ಮೆಂಟ್‌ಗಳಿಗೆ ಸಂಪರ್ಕರಹಿತ, ಕ್ಯೂಆರ್‌-ಕೋಡ್‌-ಆಧಾರಿತ ಪಾವತಿ ಸೌಲಭ್ಯಗಳನ್ನು ಆರಂಭಿಸಿದೆ.

ಈ ಹಿಂದೆ ಕ್ಯಾಷ್ ಆನ್‌ ಡೆಲಿವರಿ ಆಯ್ಕೆ ಮಾಡಿದ್ದ ಗ್ರಾಹಕರು ಈಗ ಈ ವ್ಯವಸ್ಥೆ ಬಳಸಿಕೊಳ್ಳಬಹುದು, ತಮ್ಮ ಖರೀದಿಯೊಂದಿಗೆ ಲಗತ್ತಿಸಿರುವ ಕ್ಯೂಆರ್‌ ಕೋಡ್‌ ಅನ್ನು ಸ್ಕ್ಯಾನ್ ಮಾಡಿ ನಂತರ ವಿತರಣೆ ವೇಳೆ ಯಾವುದೇ ಯುಪಿಐ ಆ್ಯಪ್‌ ಮೂಲಕ ಡಿಜಿಟಲ್‌ ಪಾವತಿ ಮಾಡಬಹುದು. ಇದು ಗ್ರಾಹಕರಿಗೆ ಅತ್ಯಂತ ಕಡಿಮೆ ವೈಯಕ್ತಿಕ ಸಂಪರ್ಕದ ಜೊತೆಗೆ, ಉತ್ತಮ ಸುರಕ್ಷತೆಯನ್ನು ಒದಗಿಸುತ್ತದೆ.

ಫ್ಲಿಪ್ ಕಾರ್ಟ್ ಸಾಮಾಗ್ರಿ, ಸಿಬ್ಬಂದಿಗಳು ಸೋಂಕು ರಹಿತಫ್ಲಿಪ್ ಕಾರ್ಟ್ ಸಾಮಾಗ್ರಿ, ಸಿಬ್ಬಂದಿಗಳು ಸೋಂಕು ರಹಿತ

ಯುಪಿಐ-ಆಧಾರಿತ ಪಾವತಿಗಳ ಸಂಖ್ಯೆ ಕಳೆದ ಕೆಲ ವರ್ಷಗಳಲ್ಲಿ ಭಾರಿ ಹೆಚ್ಚಳವಾಗಿದ್ದು, 2020ರ ಡಿಸೆಂಬರ್‌ವರೆಗೆ ಆಫ್‌ಲೈನ್‌ ವ್ಯಕ್ತಿ-ವ್ಯಾಪಾರಿಯ ವ್ಯವಹಾರ ಪ್ರಮಾಣ ಶೇ.42.5ರಷ್ಟಿದೆ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಯುಪಿಐ ಪಾವತಿ ಇನ್ನಷ್ಟು ಹೆಚ್ಚಾಗಿದ್ದು, ಎನ್‌ಪಿಸಿಐ ದತ್ತಾಂಶದ ಪ್ರಕಾರ, 2021ರ ಏಪ್ರಿಲ್‌ ವೇಳೆ 2.64 ಬಿಲಿಯನ್‌ ವಹಿವಾಟು ದಾಖಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.100ರಷ್ಟು ಹೆಚ್ಚಳವಾಗಿದೆ. ಫ್ಲಿಪ್‌ಕಾರ್ಟ್‌ನ ಹೊಸ ಕ್ಯೂಆರ್‌ ಕೋಡ್‌-ಆಧಾರಿತ ಪಾವತಿ ಸೌಕರ್ಯ, ಡಿಜಿಟಲ್‌ ವಹಿವಾಟಿನ ಮೇಲಿನ ಜನರ ನಂಬಿಕೆಯನ್ನು ಇನ್ನಷ್ಟು ವೃದ್ಧಿಸುವ ನಿರೀಕ್ಷೆಯಿದ್ದು, ಇದು ಡಿಜಿಟಲ್‌ ಕಾಮರ್ಸ್‌ನ ಒಟ್ಟಾರೆ ಅಳವಡಿಕೆಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತಿದೆ.

Flipkart introduces QR-based pay on delivery for consumers

ಫ್ಲಿಪ್‌ಕಾರ್ಟ್‌ನ ಫಿನ್‌ಟೆಕ್ ಮತ್ತು ಪಾವತಿ ಗುಂಪಿನ ಮುಖ್ಯಸ್ಥ ರಂಜಿತ್ ಬೋಯನಪಲ್ಲಿ, "ಇ-ಕಾಮರ್ಸ್ ಮಾರುಕಟ್ಟೆ ಮತ್ತು ಫಿನ್‌ಟೆಕ್ ನಡುವಿನ ಒಪ್ಪಂದದಿಂದ, ಗ್ರಾಹಕರ ವಿಕಾಸಗೊಳ್ಳುತ್ತಿರುವ ಅಗತ್ಯತೆಗಳು ಮತ್ತು ಸಮಸ್ಯೆಗಳನ್ನು ಪರಿಹರಿಸುವುದು ಸುಲಭವಾಘುತ್ತದೆ. ಸಾಂಕ್ರಾಮಿಕ ರೋಗವು ಆನ್‌ಲೈನ್ ಶಾಪಿಂಗ್‌ಗೆ ಸ್ಥಳಾಂತರಗೊಳ್ಳುವಂತೆ ಹಲವಾರು ಗ್ರಾಹಕರನ್ನು ಪ್ರೋತ್ಸಾಹಿಸುತ್ತಿದೆ. 'ಪೇ-ಆನ್-ಡೆಲಿವರಿ' ತಂತ್ರಜ್ಞಾನದೊಂದಿಗೆ, ಗ್ರಾಹಕರು ತಮ್ಮ ಪಾವತಿಯ ಮೇಲೆ ವಿಶ್ವಾಸ ಹೊಂದಿದ್ದಾರೆಂದು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ ಮತ್ತು ಜನರು ಅವರ ಮನೆಗಳ ಸುರಕ್ಷತೆಯೊಳಗೆ ಶಾಪಿಂಗ್ ಮಾಡಬಹುದು" ಎಂದಿದ್ದಾರೆ.

ಫ್ಲಿಪ್‌ಕಾರ್ಟ್‌ನ ಕ್ಯೂಆರ್-ಕೋಡ್-ಆಧಾರಿತ ವೈಶಿಷ್ಟ್ಯವು ಸಾಮಾನ್ಯ ಕ್ಯಾಶ್ ಆನ್ ಡೆಲಿವರಿ (ಕಾಡ್) ವಹಿವಾಟನ್ನು ಡಿಜಿಟಲ್ ಪಾವತಿಗಳಿಗೆ ಬದಲಾಯಿಸಲಿದೆ. ಸರಳೀಕೃತ ಮತ್ತು ಸುಲಭವಾಗಿ ಲಭ್ಯತೆಯ ಫಿನ್‌ಟೆಕ್ ಪರಿಹಾರಗಳ ಅಗತ್ಯವನ್ನು ಗುರುತಿಸಿದ ಫ್ಲಿಪ್‌ಕಾರ್ಟ್, ದೇಶಾದ್ಯಂತದ ವ್ಯಾಪಾರಿಗಳಿಗೆ ಸುರಕ್ಷಿತ ಪಾವತಿ ಆಯ್ಕೆಗಳನ್ನು ಸಕ್ರಿಯಗೊಳಿಸಲು ತನ್ನ ಡಿಜಿಟಲ್ ಕೊಡುಗೆಗಳ ವಿತರಣಾ ವ್ಯಾಪ್ತಿಯನ್ನು ಹೆಚ್ಚಿಸಿದೆ. ಫ್ಲಿಪ್‌ಕಾರ್ಟ್‌ನ ಪಾವತಿ ರಚನೆಗಳು ಮತ್ತು ಮನೆಯೊಳಗಿನ ಫಿನ್‌ಟೆಕ್ ಆವಿಷ್ಕಾರಗಳು ಹೊಸ-ಅಂತರ್ಜಾಲ ಗ್ರಾಹಕರನ್ನು ಸಶಕ್ತಗೊಳಿಸುತ್ತಿವೆ ಮತ್ತು ಮುಂದಿನ 200 ಮಿಲಿಯನ್ ಬಳಕೆದಾರರನ್ನು ವೇದಿಕೆಗೆ ತರಲು ಸಹಾಯ ಮಾಡುತ್ತವೆ.(ಐಎಎನ್ಎಸ್)

English summary
Flipkart on Monday launched a contactless, QR-code based payment facility for all its pay-on-delivery shipments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X