ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಪಿಂಗ್ ಹೊಸ ಅನುಭವಕ್ಕೆ ಫ್ಲಿಪ್‌ಕಾರ್ಟ್ ಕ್ಯಾಮೆರಾ ಬಳಸಿ

|
Google Oneindia Kannada News

ಬೆಂಗಳೂರು, ಜುಲೈ 22: ಭಾರತದ ಸ್ವದೇಶಿ ಇ-ಕಾಮರ್ಸ್ ಮಾರುಕಟ್ಟೆಯಾಗಿರುವ ಫ್ಲಿಪ್‌ಕಾರ್ಟ್, ಫ್ಲಿಪ್‌ಕಾರ್ಟ್ ಕ್ಯಾಮೆರಾವನ್ನು ಪರಿಚಯಿಸಿದ್ದು, ಇದರೊಂದಿಗೆ ಇ-ಕಾಮರ್ಸ್ ಅನುಭವದ ಪರಿಚಯವನ್ನು ಪ್ರಕಟಿಸಿದೆ. ಇದೊಂದು ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿ ವರ್ಧಿತವಾದ ರಿಯಾಲಿಟಿ ಸಾಮರ್ಥ್ಯವಾಗಿದೆ. ಈ ಕೊಡುಗೆಯು ಖರೀದಿದಾರರಿಗೆ ಉತ್ಪನ್ನವನ್ನು ಖರೀದಿಸುವ ಮೊದಲು ಉತ್ಪನ್ನದ ವಾಸ್ತವತೆ ಹೇಗಿರುತ್ತದೆ ಎಂಬುದನ್ನು ಚಿತ್ರದ ಮೂಲಕ ನೋಡಿ ತಿಳಿದುಕೊಳ್ಳಲು ಅವಕಾಶವನ್ನು ನೀಡುತ್ತದೆ.

ವರ್ಧಿತ ರಿಯಾಲಿಟಿ (ಆಗ್ಮೆಂಟೆಡ್ ರಿಯಾಲಿಟಿ)ಯಂತಹ ತಂತ್ರಜ್ಞಾನಗಳನ್ನು ಬಳಸಿಕೊಂಡು ಗ್ರಾಹಕರಿಗೆ ನಿಜ-ಜೀವನದ ಖರೀದಿ ಅನುಭವಗಳನ್ನು ನೀಡಲು ಅವಕಾಶ ಕೊಡುವ ಅಗತ್ಯತೆ ಇದೆ. ಜೆನ್ ಝಡ್ ಮತ್ತು ಮಿಲೇನಿಯಲ್ಸ್ ಅಗ್ಮೆಂಟೆಡ್ ರಿಯಾಲಿಟಿ(ಎಆರ್) ಮತ್ತು ವರ್ಚುವಲ್ ರಿಯಾಲಿಟಿ (ವಿಆರ್) ವೈಶಿಷ್ಟ್ಯತೆಗಳ ಬೇಡಿಕೆಯಲ್ಲಿ ಹೆಚ್ಚಳವಾಗಿದೆ. ಶೇ.30 ಕ್ಕೂ ಅಧಿಕ ಸ್ಯಾಂಪಲ್ ಸ್ಪೇಸ್ ತಮ್ಮ ಶಾಪಿಂಗ್ ಅನುಭವದಲ್ಲಿ ಹೆಚ್ಚಿನ ಎಆರ್/ವಿಆರ್ ಸಾಮರ್ಥ್ಯಗಳನ್ನು ಸಂಯೋಜಿಸಲು ಬಯಸುತ್ತದೆ.

ಫರ್ನಿಚರ್, ಲಗೇಜ್ ಮತ್ತು ದೊಡ್ಡ ಅಪ್ಲಾಯನ್ಸ್ ವಿಭಾಗಗಳಲ್ಲಿ ಗ್ರಾಹಕರು ಉತ್ಪನ್ನವನ್ನು ಖರೀದಿಸುವ ಮುನ್ನ ಅದರ ಗಾತ್ರ ಮತ್ತು ಹೊಂದಾಣಿಕೆಯ ಬಗ್ಗೆ ಅಂದಾಜು ಮಾಡಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಫ್ಲಿಪ್ ಕಾರ್ಟ್ ಕ್ಯಾಮೆರಾವನ್ನು ಬಳಸಿಕೊಂಡು ಉತ್ಪನ್ನಗಳನ್ನು ದೃಶ್ಯದ ಮೂಲಕ ವೀಕ್ಷಿಸಿ 3ಡಿ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

Flipkart introduces an immersive augmented reality e-commerce experience with Flipkart Camera

ಈ ಒಂದು ಅವಕಾಶವು ಗ್ರಾಹಕರು ಉತ್ಪನ್ನವನ್ನು ಖರೀದಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಉತ್ಪನ್ನಗಳನ್ನು ನೋಡಿ ಅವುಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ಪಡೆಯುತ್ತಾರೆ. ಗ್ರಾಹಕರು ಮನೆಯಲ್ಲಿಯೇ ಇದ್ದುಕೊಂಡು ಆರಾಮವಾಗಿ ಶಾಪಿಂಗ್ ಮಾಡುವ ಪ್ರಮಾಣ ಹೆಚ್ಚುತ್ತಿದೆ. ಕೋವಿಡ್-19 ನಿರ್ಬಂಧಗಳ ಈ ಸಂದರ್ಭದಲ್ಲಿ ಗ್ರಾಹಕರು ಹೊರಗೆ ಹೋಗದೇ ಮನೆಯಲ್ಲಿಯೇ ಕುಳಿತು ಸೂಕ್ತವಾದ ಉತ್ಪನ್ನವನ್ನು ಖರೀದಿಸಲು ಈ ಹೊಸ ಅನುಭವ ಅವಕಾಶ ನೀಡುತ್ತದೆ.

ಈ ಬಗ್ಗೆ ಮಾತನಾಡಿದ ಫ್ಲಿಪ್‌ಕಾರ್ಟ್ ನ ಚೀಫ್ ಪ್ರಾಡಕ್ಟ್ ಅಂಡ್ ಟೆಕ್ನಾಲಜಿ ಆಫೀಸರ್ ಜಯೇಂದ್ರನ್ ವೇಣುಗೋಪಾಲ್, ''ಫ್ಲಿಪ್ ಕಾರ್ಟ್ ನಲ್ಲಿ ನಾವು ಗ್ರಾಹಕರಿಗೆ ಇ-ಕಾಮರ್ಸ್ ಅನ್ನು ಅತ್ಯಂತ ಸುಲಭ ಮತ್ತು ಅನುಕೂಲಕರವಾದ ಅನುಭವ ನೀಡುವ ನಿಟ್ಟಿನಲ್ಲಿ ಮಾಡಲು ನಿರಂತರವಾಗಿ ಕಾರ್ಯಪ್ರವೃತ್ತರಾಗಿದ್ದೇವೆ. ಈ ಫ್ಲಿಪ್ ಕಾರ್ಟ್ ಕ್ಯಾಮೆರಾ ವೈಶಿಷ್ಟ್ಯತೆಯ ಮೂಲಕ ನಾವು ಗ್ರಾಹಕರ ಲೀವಿಂಗ್ ರೂಂ ಸೌಕರ್ಯದಿಂದ ಉತ್ಪನ್ನಗಳ ಆಂತರಿಕ ಪ್ರದರ್ಶನಗಳನ್ನು ನೀಡುವುದರೊಂದಿಗೆ ಶಾಪಿಂಗ್ ಅನುಭವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದೇವೆ. ಅಲ್ಲದೇ, ಈ ಮೂಲಕ ಉತ್ಪನ್ನವನ್ನು ಖರೀದಿಸುವ ಮುನ್ನ ಅದರ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಹೊಂದುವಲ್ಲಿ ಅವರಿಗೆ ಸಹಾಯ ಮಾಡಲಾಗುತ್ತದೆ. ಈ ತಂತ್ರಜ್ಞಾನವು ದೂರಗಾಮಿ ಅಪ್ಲಿಕೇಶನ್ ಗಳನ್ನು ಹೊಂದಿದ್ದು, ಗ್ರಾಹಕರ ಅನುಭವವನ್ನು ಅನೇಕ ಪಟ್ಟು ಸುಧಾರಣೆ ಮಾಡಲಿದೆ ಮತ್ತು ಸೂಕ್ತ, ಸರಿಯಾದ ಉತ್ಪನ್ನವನ್ನು ಕಂಡುಕೊಳ್ಳಲು ಗ್ರಾಹಕರಿಗೆ ಸಹಾಯ ಮಾಡುತ್ತದೆ'' ಎಂದು ತಿಳಿಸಿದರು.

Recommended Video

ಮೈತ್ರಿ ಸರ್ಕಾರ ಪತನ ಮಾಡಿದ ದಿನದಿಂದಲೇ ಇವೆಲ್ಲ ಶುರುವಾಯ್ತು | Oneindia Kannada

English summary
Flipkart Camera feature will enable shoppers to leap from ‘imagining’ to ‘experiencing’ what a product will look like in reality before making a purchase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X