ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1,500 ಕೋಟಿಗೆ ಫ್ಲಿಪ್ ಕಾರ್ಟ್ ಪಾಲಾಗಲಿರುವ ಆದಿತ್ಯ ಬಿರ್ಲಾ ಫ್ಯಾಷನ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 23: ಗ್ರಾಹಕ ಫ್ಯಾಷನ್ ಅನುಭವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಗ್ರೂಪ್ ಮತ್ತು ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ಲಿಮಿಟೆಡ್ (ಎಬಿಎಫ್ಆರ್ ಎಲ್) ಇಂದು ಪರಸ್ಪರ ರಚನಾತ್ಮಕ ಒಪ್ಪಂದ ಮಾಡಿಕೊಂಡಿವೆ. 1500 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯೊಂದಿಗೆ ಫ್ಲಿಪ್ ಕಾರ್ಟ್ ಎಬಿಎಫ್ಆರ್ ಎಲ್ ನ ಶೇ.7.8 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಈ ಮೂಲಕ ಎರಡೂ ಕಂಪನಿಗಳ ಪಾಲುದಾರಿಕೆಯು ದೇಶದ ಫ್ಯಾಷನ್ ವಿಭಾಗದಲ್ಲಿ ಮುಂಚೂಣಿಗೆ ಬರುವ ಯೋಜನೆಗಳನ್ನು ರೂಪಿಸಲಿವೆ.

ಫ್ಲಿಪ್ ಕಾರ್ಟ್ ನ ಹೂಡಿಕೆಯನ್ನು ಎಬಿಎಫ್ಆರ್ ಎಲ್ ತನ್ನ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಲಿದೆ. ಕಂಪನಿಯು ಫ್ಯಾಷನ್ ವಿಭಾಗಗಳಾದ ಇನ್ನರ್ ವೇರ್/ಅಥ್ಲೆಸಿಸರ್, ಕಾಶುವಲ್ ವೇರ್ ಮತ್ತು ಎಥ್ನಿಕ್ ವೇರ್ ನ ಬೆಳವಣಿಗೆಗೆ ಯೋಜನೆಗಳನ್ನು ರೂಪಿಸಲಿದೆ. ಇದಲ್ಲದೇ, ಎಬಿಎಫ್ಆರ್ ಎಲ್ ತನ್ನ ದೊಡ್ಡ ಮಟ್ಟದ ಡಿಜಿಟಲ್ ರೂಪಾಂತರ ಕಾರ್ಯತಂತ್ರವನ್ನು ಇನ್ನಷ್ಟು ಆಳವಾಗಿ ಪ್ರಗತಿಗೆ ಬಳಸಿಕೊಂಡು ಮತ್ತಷ್ಟು ಗ್ರಾಹಕರನ್ನು ತಲುಪಲಿದೆ. ತನ್ನ ಹಿನ್ನೆಲೆಯ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಂಡು ದೇಶದಲ್ಲಿ ಅತ್ಯಂತ ಸಮಗ್ರ ಒಮ್ಲಿ-ಚಾನೆಲ್ ಫ್ಯಾಷನ್ ಸಂಸ್ಥೆಯಾಗಿ ಸ್ಥಾನ ಪಡೆದಿದೆ.

ನಿಂಜಾಕಾರ್ಟ್‌ನಲ್ಲಿ ವಾಲ್ಮಾರ್ಟ್ -ಫ್ಲಿಪ್ ಕಾರ್ಟ್ ಗ್ರೂಪ್ ಹೂಡಿಕೆನಿಂಜಾಕಾರ್ಟ್‌ನಲ್ಲಿ ವಾಲ್ಮಾರ್ಟ್ -ಫ್ಲಿಪ್ ಕಾರ್ಟ್ ಗ್ರೂಪ್ ಹೂಡಿಕೆ

ಈ ಪಾಲುದಾರಿಕೆ ಮೂಲಕ ಫ್ಲಿಪ್ ಕಾರ್ಟ್ ಗ್ರೂಪ್ ತನ್ನ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಾದ ಫ್ಲಿಪ್ ಕಾರ್ಟ್ ಮತ್ತು ಮೈಂತ್ರಾದಲ್ಲಿ ವಿವಿಧ ಶ್ರೇಣಿಯ ಬ್ರ್ಯಾಂಡ್ ಗಳನ್ನು ವಿಸ್ತಾರಗೊಳಿಸಲಿದೆ. ಎಬಿಎಫ್ಆರ್ ಎಲ್ ನೊಂದಿಗಿನ ತನ್ನ ಆಳವಾದ ಸಂಬಂಧದ ಮೂಲಕ ಫ್ಲಿಪ್ ಕಾರ್ಟ್ ಪ್ರೀಮಿಯಂ ಅಂತಾರಾಷ್ಟ್ರೀಯ ಮತ್ತು ಭಾರತೀಯ ಬ್ರ್ಯಾಂಡ್ ಗಳನ್ನು ನೀಡಲಿದೆ. ಫ್ಲಿಪ್ ಕಾರ್ಟ್ ನ ತಂತ್ರಜ್ಞಾನದ ಪ್ರಭಾವವು ಎಬಿಎಫ್ಆರ್ ಎಲ್ ಒಮ್ನಿ ಚಾಲನೆಲ್ ನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದಲ್ಲದೇ ಗ್ರಾಹಕರ ಅನುಭವಗಳನ್ನು ಉತ್ಕೃಷ್ಠಗೊಳಿಸುತ್ತದೆ ಹಾಗೂ ಪ್ರೀಮಿಯಂ ರಾಯಲ್ಟಿ ಕಾರ್ಯಕ್ರಮಗಳಿಗೆ ಪ್ರವೇಶವನ್ನು ಒದಗಿಸುತ್ತದೆ ಹಾಗೂ ಫ್ಲಿಪ್ ಕಾರ್ಟ್ ತಿಳಿದಿರುವ ಕೈಗೆಟುಕುವ ರಚನೆಗಳನ್ನು ನಿರ್ಮಾಣ ಮಾಡುತ್ತದೆ.

Flipkart Group and ABFRL enter into a strategic partnership

ಈ ಬೆಳವಣಿಗೆ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ಗ್ರೂಪ್ ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅವರು, ''ಫ್ಲಿಪ್ ಕಾರ್ಟ್ ಗ್ರೂಪ್ ನಲ್ಲಿ ನಾವು ಬೆಳೆಯುತ್ತಿರುವ ಭಾರತೀಯ ಗ್ರಾಹಕರ ಬೇಡಿಕೆಗಳನ್ನು ಉತ್ತಮ ಗುಣಮಟ್ಟ ಮತ್ತು ಮೌಲ್ಯಯುತವಾಗಿ ಪೂರೈಸಲು ಪೂರಕವಾಗಿ ಹೊಸ ಹೊಸ ಪಾಲುದಾರಿಕೆಗಳನ್ನು ಮಾಡಿಕೊಳ್ಳುವತ್ತ ಗಮನಹರಿಸುತ್ತಿದ್ದೇವೆ. ದೇಶಾದ್ಯಂತ ವಿವಿಧ ರೀಟೇಲ್ ಸ್ವರೂಪಗಳಲ್ಲಿನ ಫ್ಯಾಷನ್ ಪ್ರಜ್ಞೆಯ ಗ್ರಾಹಕರಿಗೆ ವ್ಯಾಪಕವಾದ ಶ್ರೇಣಿಯ ಉತ್ಪನ್ನಗಳನ್ನು ಲಭ್ಯವಾಗುವಂತೆ ಮಾಡಲು ಎಬಿಎಫ್ಆರ್ ಎಲ್ ನ ಪಾಲುದಾರಿಕೆಯೊಂದಿಗೆ ಕಾರ್ಯತತ್ಪರವಾಗಿದ್ದೇವೆ. ಭಾರತದಲ್ಲಿ ಉಡುಪು ಉದ್ಯಮದ ಭರವಸೆಯ ಅವಕಾಶವನ್ನು ನಾವು ತಿಳಿಸುತ್ತಿರುವುದರಿಂದ ಎಬಿಎಫ್ಆರ್ ಎಲ್ ನೊಂದಿಗೆ ಮತ್ತು ಅದರ ಸುಸ್ಥಾಪಿತವಾದ ಹಾಗೂ ಸಮಗ್ರ ಫ್ಯಾಷನ್, ಚಿಲ್ಲರೆ ಮೂಲಸೌಕರ್ಯಗಳೊಂದಿಗೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇವೆ'' ಎಂದು ತಿಳಿಸಿದರು.

45 ದಿನ ಇಂಟರ್ನ್ ಶಿಪ್, ದಿನಕ್ಕೆ 500 ಸಂಬಳ, ವಿದ್ಯಾರ್ಥಿಗಳೇ ಗಮನಿಸಿ45 ದಿನ ಇಂಟರ್ನ್ ಶಿಪ್, ದಿನಕ್ಕೆ 500 ಸಂಬಳ, ವಿದ್ಯಾರ್ಥಿಗಳೇ ಗಮನಿಸಿ

Flipkart Group and ABFRL enter into a strategic partnership

ಎಬಿಎಫ್ಆರ್ ಎಲ್ ನ ವ್ಯವಸ್ಥಾಪಕ ನಿರ್ದೇಶಕ ಆಶಿಶ್ ದೀಕ್ಷಿತ್ ಅವರು ಮಾತನಾಡಿ, ''ನಾವು ಫ್ಲಿಪ್ ಕಾರ್ಟ್ ಗ್ರೂಪ್ ನೊಂದಿಗಿನ ಈ ಪಾಲುದಾರಿಕೆಯನ್ನು ಎದುರು ನೋಡುತ್ತಿದ್ದೇವೆ ಮತ್ತು ಯುವ ಹಾಗೂ ಮಹತ್ವಾಕಾಂಕ್ಷೆಯ ಭಾರತದ ಗ್ರಾಹಕರನ್ನು ಸಂತೋಷಪಡಿಸುವತ್ತ ಗಮನಹರಿಸಿದ್ದೇವೆ. ಎಬಿಎಫ್ಆರ್ ಎಲ್ ಮತ್ತು ಫ್ಲಿಪ್ ಕಾರ್ಟ್ ಗ್ರೂಪ್ ನ ಪೂರಕ ಸಾಮರ್ಥ್ಯವನ್ನು ಗಮನಿಸಿದರೆ, ಈ ಪಾಲುದಾರಿಕೆಯು ಭಾರತದ ಉಡುಪು ಉದ್ಯಮದ ಬೆಳವಣಿಗೆಯನ್ನು ವೇಗಗೊಳಿಸುವುದು ಮತ್ತು ಉಡುಪು ವಾಣಿಜ್ಯವನ್ನು ಮರು ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ಎರಡೂ ಸಂಸ್ಥೆಗಳ ನಡುವಿನ ಈ ಒಪ್ಪಂದವು ಅಸ್ತಿತ್ವದಲ್ಲಿರುವ ಬ್ರ್ಯಾಂಡ್ ಗಳ ಪ್ರಮಾಣವನ್ನು ವೃದ್ಧಿಸಿಕೊಳ್ಳಲು ಮತ್ತು ಅದರ ಬ್ರ್ಯಾಂಡ್ ಪೋರ್ಟ್ ಫೋಲಿಯೋವನ್ನು ಉದಯೋನ್ಮುಖವಾದ ಗ್ರಾಹಕ ವಿಭಾಗಗಳಾಗಿ ವಿಸ್ತರಣೆ ಮಾಡಲು ಒಂದು ಅತ್ಯದ್ಭುತವಾದ ಅವಕಾಶವನ್ನು ಕಲ್ಪಿಸುತ್ತದೆ'' ಎಂದು ಅಭಿಪ್ರಾಯಪಟ್ಟರು.

English summary
Flipkart Group and ABFRL enter into a strategic partnership. Flipkart to buy 7.8% stake in ABFRL for Rs 1,500 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X