• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರು ಸೇರಿ 50ಕ್ಕೂ ಹೆಚ್ಚು ನಗರಗಳಲ್ಲಿ ಫ್ಲಿಪ್ ಕಾರ್ಟ್ ದಿನಸಿ ಸೇವೆ

|

ಬೆಂಗಳೂರು, ಮಾರ್ಚ್ 02: ಬೆಂಗಳೂರು ಮೂಲದ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ತನ್ನ ದಿನಸಿ ಸೇವೆಗಳನ್ನು ದೇಶವ್ಯಾಪಿ ಮಾರುಕಟ್ಟೆಗೆ ವಿಸ್ತರಿಸುತ್ತಿದೆ. ಮೈಸೂರು ಸೇರಿದಂತೀ ದೇಶದ 50ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಣೆ ಮಾಡಿದೆ. ಈ ವಿಸ್ತರಣೆಯಿಂದಾಗಿ 7 ಮೆಟ್ರೋ ನಗರಗಳು ಮತ್ತು 40 ಕ್ಕೂ ಹೆಚ್ಚು ಸುತ್ತಮುತ್ತಲಿನ ನಗರಗಳಿಗೆ ಗುಣಮಟ್ಟದ ದಿನಸಿ ಉತ್ಪನ್ನಗಳು ದೊರೆಯಲಿವೆ. ಉಳಿತಾಯ ಮತ್ತು ಕೊಡುಗೆಗಳು, ತ್ವರಿತವಾಗಿ ವಿತರಣೆ ಹಾಗೂ ತಡೆರಹಿತವಾದ ದಿನಸಿ ಶಾಪಿಂಗ್ ಅನುಭವಗಳು ದೊರೆಯಲಿವೆ.

ಕಳೆದ ಹಲವು ವರ್ಷಗಳಲ್ಲಿ ಫ್ಲಿಪ್ ಕಾರ್ಟ್ ದಿನಸಿ ಸೇವೆಗಳನ್ನು ಕ್ಷಿಪ್ರವಾಗಿ ವಿಸ್ತರಣೆ ಮಾಡಲು ಹೂಡಿಕೆ ಮಾಡುತ್ತಾ ಬಂದಿದೆ ಮತ್ತು ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ವಿಸ್ತರಣೆ ಮಾಡಿದೆ. ಕೊಲ್ಕತ್ತಾ, ಪುಣೆ ಮತ್ತು ಅಹ್ಮದಾಬಾದ್ ನಂತಹ ಮೆಟ್ರೋ ನಗರಗಳಲ್ಲಿನ ಫ್ಲಿಪ್ ಕಾರ್ಟ್ ಪ್ರತ್ಯೇಕವಾದ ಗ್ರಾಸರಿ ಫುಲ್ ಫಿಲ್ಮೆಂಟ್ ಸೆಂಟರ್‌ಗಳ ನೆರವಿನಿಂದ ಗ್ರಾಹಕರಿಗೆ ಅತ್ಯುತ್ತಮವಾದ ಗ್ರಾಸರಿ ಸೇವೆಗಳನ್ನು ಒದಗಿಸಲಾಗುತ್ತದೆ. ಫ್ಲಿಪ್ ಕಾರ್ಟ್ ಮೆಟ್ರೋ ನಗರಗಳಲ್ಲದೇ ಮೈಸೂರು, ವಾರಂಗಲ್, ಕಾನ್ಪುರ, ಅಲಹಾಬಾದ್, ಆಲಿಘರ್, ಜೈಪುರ, ಚಂಡೀಘಡ, ರಾಜ್ ಕೋಟ್, ವಡೋದರ, ವೆಲ್ಲೂರು, ತಿರುಪತಿ ಮತ್ತು ದಮನ್ ನಂತಹ ನಗರಗಳಿಗೂ ಈ ಸೇವೆಯನ್ನು ಒದಗಿಸುತ್ತಿದೆ.

ಸಂಪೂರ್ಣವಾಗಿ ಇ ವಾಹನ ಬಳಕೆಗೆ ಫ್ಲಿಪ್ ಕಾರ್ಟ್‌ನಿಂದ ಸಂಕಲ್ಪ

ಸಾಂಕ್ರಾಮಿಕವು ಲಕ್ಷಾಂತರ ಜನರು ಇ-ಕಾಮರ್ಸ್ ಶಾಪಿಂಗ್, ಅನುಕೂಲಕರ ಹಾಗೂ ಡಿಜಿಟಲ್ ವ್ಯವಹಾರಗಳತ್ತ ಕಡೆಗೆ ಒಲವು ತೋರುವಂತೆ ಮಾಡಿದೆ. ಇದು ಇ-ಗ್ರಾಸರಿಗೆ ಗ್ರಾಹಕರಿಂದ ಹೆಚ್ಚು ಬೇಡಿಕೆ ಬರುವಂತೆ ಮಾಡಿದೆ. ಕೇವಲ ಮೆಟ್ರೋ ನಗರಗಳಲ್ಲದೇ, 2 ನೇ ಶ್ರೇಣಿಯ ನಗರಗಳಿಂದಲೂ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ.

 7000 ಕ್ಕೂ ಅಧಿಕ ಗ್ರಾಸರಿ ಉತ್ಪನ್ನ

7000 ಕ್ಕೂ ಅಧಿಕ ಗ್ರಾಸರಿ ಉತ್ಪನ್ನ

ಇಂದು ಫ್ಲಿಪ್ ಕಾರ್ಟ್ 200 ಕ್ಕೂ ಹೆಚ್ಚು ವಿಭಾಗಗಗಳಲ್ಲಿ 7000 ಕ್ಕೂ ಅಧಿಕ ಗ್ರಾಸರಿ ಉತ್ಪನ್ನಗಳನ್ನು ಹೊಂದಿದೆ. ಗೃಹೋಪಯೋಗಿ ಪೂರೈಕೆಗಳು, ಸ್ಟಾಪಲ್ಸ್, ಅಟ್ಟಾ, ದಾಲ್, ಖಾದ್ಯತೈಲ, ತುಪ್ಪ, ಸ್ನ್ಯಾಕ್ಸ್ & ಬೇವರೇಜಸ್, ಕಾನ್ಫೆಕ್ಷನರಿ, ಪರ್ಸನಲ್ ಕೇರ್, ಡೈರಿ & ಮೊಟ್ಟೆ ಸೇರಿದಂತೆ ಇನ್ನೂ ಅನೇಕ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿದೆ. ದಿನಸಿ ವಿಭಾಗವು ಆನ್ ಲೈನ್ ಶಾಪಿಂಗ್ ನಲ್ಲಿ ಬಹುದೊಡ್ಡ ವಿಭಾಗವಾಗುತ್ತಿದೆ ಮತ್ತು ಫ್ಲಿಪ್ ಕಾರ್ಟ್ ಗೆ ಹೊಸ ಹೊಸ ಗ್ರಾಹಕರನ್ನು ಆನ್ ಲೈನ್ ವ್ಯಾಪ್ತಿಗೆ ತರಲು ಆದ್ಯತೆ ನೀಡಲು ಸಾಧ್ಯವಾಗಿಸುತ್ತಿದೆ. ಕಂಪನಿಯ ಈ ದಿನಸಿ ಕಾರ್ಯಾಚರಣೆಗಳು ಸ್ಥಳೀಯ ಆಹಾರ ಸಂಸ್ಕರಣೆ ಉದ್ಯಮ, ಆಹಾರ ಉತ್ಪನ್ನಗಳನ್ನು ಉತ್ಪಾದಿಸುವ ರೈತರನ್ನು ಲಕ್ಷಾಂತರ ಗ್ರಾಹಕರಿಗೆ ತಂತ್ರಜ್ಞಾನ ಆಧಾರಿತ ಮಾರ್ಕೆಟ್ ಪ್ಲೇಸ್ ಗೆ ಸಂಪರ್ಕ ಸಾಧಿಸಲು ಆದ್ಯತೆ ನೀಡುತ್ತವೆ ಮತ್ತು ನೆರವಾಗುತ್ತವೆ.

 ಒಂದು ವರ್ಷದಲ್ಲಿ 3 ಪಟ್ಟು ಬೆಳವಣಿಗೆ ಕಂಡಿದೆ

ಒಂದು ವರ್ಷದಲ್ಲಿ 3 ಪಟ್ಟು ಬೆಳವಣಿಗೆ ಕಂಡಿದೆ

ಫ್ಲಿಪ್ ಕಾರ್ಟ್ ಗ್ರಾಸರಿ ಕಳೆದ ಒಂದು ವರ್ಷದಲ್ಲಿ 3 ಪಟ್ಟು ಬೆಳವಣಿಗೆ ಕಂಡಿದೆ.ದೇಶದ ಅತ್ಯಂತ ವಿಸ್ತಾರವಾದ ಸಂಸ್ಥೆಗಳಲ್ಲಿ ಒಂದಾಗಿರುವ ಫ್ಲಿಪ್ ಕಾರ್ಟ್ ಗ್ರೂಪ್ ದೇಶಾದ್ಯಂತ ಸಂಘಟಿತವಾದ ಕೃಷಿಉತ್ಪನ್ನಗಳ ಪೂರೈಕೆ ಚೇನ್ ಮೂಲಕ ಅನೇಕ ರೈತರು/ಫಾರ್ಮರ್ ಪ್ರಡ್ಯೂಸರ್ ಆರ್ಗನೈಸೇಷನ್ ಗಳ ಜತೆಗೆ ಕಾರ್ಯ ನಿರ್ವಹಣೆ ಮಾಡುವುದರೊಂದಿಗೆ ಅವರ ಜೀವನ ಮಟ್ಟ ಸುಧಾರಣೆಗೆ ಕ್ರಮ ಕೈಗೊಂಡಿದೆ. ಸಾಂಕ್ರಾಮಿಕದ ಅವಧಿಯಲ್ಲಿ ಗ್ರಾಹಕರಿಗೆ ಉತ್ತಮವಾದ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಗ್ರಾಸರಿ ಕೇವಲ ಪ್ರಮುಖ ರೀಟೇಲರ್ ಗಳ ಜತೆಯಲ್ಲಲ್ಲದೇ ಅನೇಕ ಎಫ್ ಪಿಒಗಳ ಜತೆಗೂ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಈ ಮೂಲಕ ದೇಶದ ರೈತ ಸಮುದಾಯವನ್ನೂ ಅಧಿಕೃತವಾಗಿ ಡಿಜಿಟಲ್ ವ್ಯಾಪ್ತಿಗೆ ತರುವ ಪ್ರಯತ್ನವನ್ನು ಮಾಡಿದೆ.

1,500 ಕೋಟಿಗೆ ಫ್ಲಿಪ್ ಕಾರ್ಟ್ ಪಾಲಾಗಲಿರುವ ಆದಿತ್ಯ ಬಿರ್ಲಾ ಫ್ಯಾಷನ್

 ಹೈಪರ್ ಲೋಕಲ್ ಡೆಲಿವರಿ

ಹೈಪರ್ ಲೋಕಲ್ ಡೆಲಿವರಿ

ಇತ್ತೀಚಿನ ರೆಡ್ ಸೀರ್ ಕನ್ಸಲ್ಟಿಂಗ್ ವರದಿಯ ಮುಖ್ಯಾಂಶಗಳ ಪ್ರಕಾರ ಶೇ.50 ಕ್ಕೂ ಹೆಚ್ಚು (ಸುಮಾರು 570 ಬಿಲಿಯನ್ ಡಾಲರ್) ಭಾರತದಲ್ಲಿ ಇ-ಗ್ರಾಸರಿ ವೇದಿಕೆಗಳ ಮೂಲಕ ರೀಟೇಲ್ ವಹಿವಾಟನ್ನು ನಡೆಸಲಾಗಿದೆ. ಇದರಲ್ಲಿ ಶೇ.61 ರಷ್ಟು ಭಾಗ ಗೃಹೋಪಯೋಗಿ ಉತ್ಪನ್ನಗಳ ಮಾರಾಟವಾಗಿದೆ. ಮೆಟ್ರೋ ಮತ್ತು 1 ನೇ ಶ್ರೇಣಿಯ ನಗರಗಳ ಮಾರುಕಟ್ಟೆಗಳಲ್ಲಿ ಈ ಇ-ಗ್ರಾಸರಿ ಶಾಪಿಂಗ್ ಅವಕಾಶವನ್ನು ಶೇ.40 ರಷ್ಟು ಮಂದಿ ಪಡೆದುಕೊಂಡಿದ್ದಾರೆ.

ಫ್ಲಿಪ್ ಕಾರ್ಟ್ ಗ್ರಾಸರಿ ತನ್ನ ಶಕ್ತಿಯುತವಾದ ಪೂರೈಕೆ ಜಾಲ, ವಿಸ್ತಾರವಾದ ಉತ್ಪನ್ನಗಳ ಲಭ್ಯತೆ ಮತ್ತು ಸ್ಥಳೀಯ ಮತ್ತು ತಡೆರಹಿತವಾದ ಶಾಪಿಂಗ್ ಅನುಭವದೊಂದಿಗೆ ನಿಯಮಿತ ಅವಧಿಯಲ್ಲಿ ವಿತರಣೆಯನ್ನು ಮಾಡುತ್ತಿದೆ. ಫ್ಲಿಪ್ ಕಾರ್ಟ್ ನ ಧ್ವನಿ ಆಧಾರಿತ ಶಾಪಿಂಗ್ ಅನ್ನು ಗ್ರಾಸರಿಯಲ್ಲಿ ಪರಿಚಯಿಸಲಾಗಿದೆ. ಕ್ರೆಡಿಟ್ ಆಫರಿಂಗ್ ಗಳು, ಓಪನ್ ಬಾಕ್ಸ್ ಡೆಲಿವರಿಗಳು ಲಕ್ಷಾಂತರ ಗ್ರಾಹಕರಿಗೆ ತಡೆರಹಿತ ಗ್ರಾಸರಿ ಶಾಪಿಂಗ್ ಅನುಭವವನ್ನು ನೀಡುತ್ತಿವೆ. ಇದಲ್ಲದೇ, ಫ್ಲಿಪ್ ಕಾರ್ಟ್ ''ಫ್ಲಿಪ್ ಕಾರ್ಟ್ ಕ್ವಿಕ್'' ಎಂಬ ಹೈಪರ್ ಲೋಕಲ್ ಡೆಲಿವರಿ ಮಾಡೆಲ್ ಅನ್ನು ಬೆಂಗಳೂರಿನಲ್ಲಿ ಪರಿಚಯಿಸಿದ್ದು, ಆರ್ಡರ್ ಮಾಡಿದ ಕೇವಲ 90 ನಿಮಿಷಗಳಲ್ಲಿ ಉತ್ಪನ್ನಗಳ ಡೆಲಿವರಿಯಾಗಲಿದೆ.

Vocal for Local: ಕರ್ನಾಟಕ ಕೈಮಗ್ಗ ಜೊತೆ ಫ್ಲಿಪ್ ಕಾರ್ಟ್ ಡೀಲ್

 ಗ್ರಾಸರಿ ವಿಭಾಗದ ಮನೀಶ್ ಕುಮಾರ್ ಮಾತನಾಡಿ

ಗ್ರಾಸರಿ ವಿಭಾಗದ ಮನೀಶ್ ಕುಮಾರ್ ಮಾತನಾಡಿ

ಫ್ಲಿಪ್ ಕಾರ್ಟ್ ನ ಜನರಲ್ ಮರ್ಚೆಂಡೈಸ್ ಮತ್ತು ಫರ್ನಿಚರ್, ಗ್ರಾಸರಿ ವಿಭಾಗದ ಸೀನಿಯರ್ ವೈಸ್ ಪ್ರೆಸಿಡೆಂಟ್ ಮನೀಶ್ ಕುಮಾರ್ ಅವರು ಈ ಬಗ್ಗೆ ಮಾತನಾಡಿ, ''ಬಳಕೆದಾರರಿಂದ ಗುಣಮಟ್ಟದ ಆಹಾರ ಮತ್ತು ಗೃಹೋಪಯೋಗಿ ಪೂರೈಕೆಗಳಿಗೆ ಬೇಡಿಕೆ ಹೆಚ್ಚಾಗುವುದರೊಂದಿಗೆ ಗ್ರಾಸರಿ ವಿಭಾಗವು ಅತ್ಯಂತ ಹೆಚ್ಚು ಬೆಳವಣಿಗೆ ಹೊಂದುತ್ತಿರುವ ವಿಭಾಗದಲ್ಲಿ ಒಂದೆನಿಸಿದೆ. ಇದೇ ಹಾದಿಯಲ್ಲಿ ನಾವು ದೇಶಾದ್ಯಂತ ನಮ್ಮ ಗ್ರಾಸರಿ ಕಾರ್ಯಾಚರಣೆಗಳಿಗೆ ಹೂಡಿಕೆ ಪ್ರಮಾಣವನ್ನು ಹೆಚ್ಚು ಮಾಡಿದ್ದೇವೆ ಮತ್ತು ನಮ್ಮ ಪರಿಸರವ್ಯವಸ್ಥೆಯ ಪಾಲುದಾರಿಕೆಗಳನ್ನು ಮತ್ತಷ್ಟು ಬಲಗೊಳಿಸಿದ್ದೇವೆ. ಇದರ ಮೂಲಕ ವಿಸ್ತಾರವಾದ ಉತ್ಪನ್ನಗಳ ಆಯ್ಕೆ, ಹೇರಳವಾದ ಸಪ್ಲೈ ಚೇನ್ ಮತ್ತು ಸುಲಲಿತವಾದ ಇನ್-ಆ್ಯಪ್ ಅನುಭವಗಳನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ. ಕಳೆದ ಒಂದು ವರ್ಷದಲ್ಲಿ ನಾವು 2 ನೇ ಶ್ರೇಣಿಯ ನಗರಗಳಲ್ಲಿ ಗ್ರಾಸರಿಗೆ ಬೇಡಿಕೆ ಹೆಚ್ಚಾಗಿರುವುದನ್ನು ಕಂಡಿದ್ದೇವೆ. ಮನೆಯಲ್ಲೇ ಇದ್ದುಕೊಂಡು ಗ್ರಾಹಕರು ಸಂಪರ್ಕರಹಿತವಾದ ಶಾಪಿಂಗ್ ಗೆ ಆದ್ಯತೆ ನೀಡುತ್ತಿರುವುದು ಹೆಚ್ಚಾಗಿದೆ. ಇದೇ ಟ್ರೆಂಡ್ ಇನ್ನೂ ಮುಂದುವರಿಯಬಹುದು ಎಂದು ನಾವು ಭಾವಿಸಿದ್ದೇವೆ ಮತ್ತು ಭಾರತದಲ್ಲಿ ಇ-ಗ್ರಾಸರಿ ವಿಭಾಗ ಸದೃಢವಾಗಿ ಬೆಳೆಯಲು ಅವಕಾಶ ಸಿಕ್ಕಿದಂತಾಗಿದೆ'' ಎಂದು ಅಭಿಪ್ರಾಯಪಟ್ಟರು.

English summary
Flipkart on Tuesday said it has expanded its grocery services to more than 50 cities via Marketplace, and aims to reach over 70 cities in the next six months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X