ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್‌ಕಾರ್ಟ್‌ನಿಂದ ಗ್ರಾಹಕರಿಗೆ ಇಎಂಐ ಸೌಲಭ್ಯ ವಿಸ್ತರಣೆ

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 14: ಮುಂಬರುವ ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್‌ಕಾರ್ಟ್ ತನ್ನ 'ಫ್ಲಿಪ್ ಕಾರ್ಟ್ ಪೇ ಲೇಟರ್' ಕೊಡುಗೆಯ ಪ್ರಯೋಜನಗಳನ್ನು ವಿಸ್ತರಣೆ ಮಾಡಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸುಲಭ ದರ ಮತ್ತು ಅನುಕೂಲಕರವಾದ ಖರೀದಿಗಳಿಗೆ ಈ ಕೊಡುಗೆ ಲಭ್ಯವಿದೆ. 'ಫ್ಲಿಪ್‌ಕಾರ್ಟ್ ಪೇ ಲೇಟರ್' 70,000 ರೂಪಾಯಿಗಳವರೆಗಿನ ಸಾಲಕ್ಕೆ ಇಎಂಐ ಸೌಲಭ್ಯವನ್ನು ಒದಗಿಸುತ್ತದೆ. ಈ ಹಣವನ್ನು 3, 6, 9 ಮತ್ತು 12 ತಿಂಗಳ ಅವಧಿಯಲ್ಲಿ ಪಾವತಿ ಮಾಡಲು ಅವಕಾಶವಿರುತ್ತದೆ. ಈ ಕೊಡುಗೆಯನ್ನು ಬಳಸಿಕೊಂಡು ಗ್ರಾಹಕರು ಹಬ್ಬದ ಸೀಸನ್‌ನಲ್ಲಿ ತಮ್ಮ ನೆಚ್ಚಿನ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.

ಫ್ಲಿಪ್‌ಕಾರ್ಟ್‌ನ ಫಿನ್ಟೆಕ್ ಮತ್ತು ಪೇಮೆಂಟ್ಸ್ ಗ್ರೂಪ್‌ನ ಮುಖ್ಯಸ್ಥ ರಂಜಿತ್ ಬೊಯನಪಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿ, ''ಗ್ರಾಹಕರ ಆಯ್ಕೆಗಳು ಬಹಳಷ್ಟು ನಿರೀಕ್ಷೆಗಳಿಂದ ಕೂಡಿರುತ್ತವೆ. ಈ ದಿಸೆಯಲ್ಲಿ ಗ್ರಾಹಕರಿಗೆ ಉತ್ಪನ್ನಗಳನ್ನು ಲಭ್ಯವಾಗುವಂತೆ ಮತ್ತು ಕೈಗೆಟುಕುವ ದರದಲ್ಲಿ ದೊರೆಯುವಂತೆ ಮಾಡುವುದು ನಮ್ಮ ಹೊಣೆಗಾರಿಕೆಯಾಗಿದೆ. ಹಬ್ಬದ ಸೀಸನ್ ವೇಳೆ ಅನೇಕ ಅಧಿಕ ಮೊತ್ತದ ಖರೀದಿಗಳು ಆಗುತ್ತವೆ ಮತ್ತು ಈ ಸಂದರ್ಭದಲ್ಲಿ ಗ್ರಾಹಕರು ತಮ್ಮ ಹಣಕಾಸು ವ್ಯವಹಾರ ಮತ್ತು ವೆಚ್ಚಗಳನ್ನು ನ್ಯಾಯಯುತವಾಗಿ ನಿರ್ವಹಣೆ ಮಾಡಿಕೊಡುವ ನಿಟ್ಟಿನಲ್ಲಿ ನಾವು ನಮ್ಮ ಇಎಂಐ ಕೊಡುಗೆಗಳನ್ನು ಬಲವರ್ಧನೆಗೊಳಿಸಿದ್ದೇವೆ. ಮುಂಬರುವ ದಿನಗಳಲ್ಲಿ ಗ್ರಾಹಕರು ತಮ್ಮ ಜೀವನಶೈಲಿಯನ್ನು ಸುಲಭವಾಗಿಸಿಕೊಳ್ಳಲು ನೆರವಾಗುವಂತಹ ಹೊಸ ಹೊಸ ಪಾಲುದಾರಿಕೆಗಳನ್ನು ಮಾಡಿಕೊಳ್ಳುವುದನ್ನು ನಾವು ಮುಂದುವರಿಸುತ್ತೇವೆ'' ಎಂದರು.

ಇನ್ಮುಂದೆ ಫ್ಲಿಪ್ ಕಾರ್ಟ್ Appನಲ್ಲಿ ಕನ್ನಡದಲ್ಲಿ ವ್ಯವಹರಿಸಿಇನ್ಮುಂದೆ ಫ್ಲಿಪ್ ಕಾರ್ಟ್ Appನಲ್ಲಿ ಕನ್ನಡದಲ್ಲಿ ವ್ಯವಹರಿಸಿ

''ಫ್ಲಿಪ್‌ಕಾರ್ಟ್ ಪೇ ಲೇಟರ್'' ಎಲ್ಲಾ ಉತ್ಪನ್ನಗಳ ಖರೀದಿಗೆ ಅನ್ವಯವಾಗುತ್ತದೆ. ಇಂದು 100 ಮಿಲಿಯನ್ ಗೂ ಅಧಿಕ ಪೂರ್ವ ಅನುಮೋದಿತ ಗ್ರಾಹಕರು ಈಗಾಗಲೇ ಉತ್ಪನ್ನದ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಇದರ ವಿಸ್ತರಣೆಯೊಂದಿಗೆ, 100 ಮಿಲಿಯನ್ ಗೂ ಮೀರಿದ ಆನ್ ಲೈನ್ ಗ್ರಾಹಕರು ತಮ್ಮ ಶಾಪಿಂಗ್ ಅಗತ್ಯತೆಗಳನ್ನು ಪೂರೈಸಲು ಕ್ರೆಡಿಟ್ ಗೆ ನೇರ ಪ್ರವೇಶವನ್ನು ಹೊಂದಿರುವುದಿಲ್ಲ ಮತ್ತು ಅಗತ್ಯ ಮಾಹಿತಿಯನ್ನು ಒದಗಿಸುವ ಮೂಲಕ ಉತ್ಪನ್ನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. 'ಫ್ಲಿಪ್‌ಕಾರ್ಟ್ ಪೇ ಲೇಟರ್' ಎಲ್ಲಾ ನಿರ್ಮಾಣಕ್ಕೆ ಮುಕ್ತವಾಗಿರುವುದರಿಂದ, ಫ್ಲಿಪ್‌ಕಾರ್ಟ್ ಸಾಲದ ಲಭ್ಯತೆ ಮತ್ತು ಗ್ರಾಹಕರ ಆಕಾಂಕ್ಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ, ಈ ಮೂಲಕ ಹಬ್ಬದ ಸೀಸನ್ ಅನ್ನು ದೇಶಾದ್ಯಂತ ಗ್ರಾಹಕರಿಗೆ ಉತ್ತಮವಾಗಿಸುತ್ತದೆ.

ಯಾವುದೇ ವೆಚ್ಚವಿಲ್ಲ ಇಎಂಐ ಕೊಡುಗೆ

ಯಾವುದೇ ವೆಚ್ಚವಿಲ್ಲ ಇಎಂಐ ಕೊಡುಗೆ

ಫ್ಲಿಪ್‌ಕಾರ್ಟ್ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಜೊತೆಗೆ ಯಾವುದೇ ವೆಚ್ಚವಿಲ್ಲ ಇಎಂಐ ಕೊಡುಗೆಗಳನ್ನು ನೀಡುತ್ತಿದೆ. ಇದರ ಜೊತೆಗೆ ಸ್ಟ್ಯಾಂಡರ್ಡ್ ಇಎಂಐಗಳು- ಅಮೆರಿಕನ್ ಎಕ್ಸ್‌ಪ್ರೆಸ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಬ್ಯಾಂಕ್ ಆಫ್ ಬರೋಡಾ, ಸಿಟಿ ಬ್ಯಾಂಕ್, ಫೆಡರಲ್ ಬ್ಯಾಂಕ್ ಸೇರಿದಂತೆ 18 ಪ್ರಮುಖ ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳ ಸಹಭಾಗಿತ್ವದಲ್ಲಿ, ಎಚ್‌ಡಿಎಫ್‌ಸಿ ಬ್ಯಾಂಕ್, ಹೋಂ ಕ್ರೆಡಿಟ್, ಎಸ್ಎಸ್‌ಬಿಸಿ, ಐಸಿಐಸಿಐ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಜೆ & ಕೆ ಬ್ಯಾಂಕ್, ಕೊಟಕ್ ಬ್ಯಾಂಕ್ ಆರ್‌ಬಿಎಲ್ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟರ್ಡ್, ಎಸ್‌ಬಿಐ, ಝೆಸ್ಟ್ ಮನಿ ಮತ್ತು ಇತರೆ ಬ್ಯಾಂಕುಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಈ ಸಂಸ್ಥೆಗಳು ಯಾವುದೇ ವೆಚ್ಚವಿಲ್ಲದೇ ಇಎಂಐ ಮತ್ತು ಪ್ರಮಾಣಿತ ಇಎಂಐಗಳ ಅವಧಿಯನ್ನು ಕ್ರಮವಾಗಿ 12 ತಿಂಗಳು ಮತ್ತು 36 ತಿಂಗಳವರೆಗೆ ನೀಡುತ್ತಿವೆ.

'ಫ್ಲಿಪ್‌ಕಾರ್ಟ್ ಪೇ ಲೇಟರ್' ಇಎಂಐ ಸೌಲಭ್ಯ

'ಫ್ಲಿಪ್‌ಕಾರ್ಟ್ ಪೇ ಲೇಟರ್' ಇಎಂಐ ಸೌಲಭ್ಯ

ಈ 'ಫ್ಲಿಪ್‌ಕಾರ್ಟ್ ಪೇ ಲೇಟರ್' ಇಎಂಐ ಸೌಲಭ್ಯ ಪಡೆಯಲು ಬಳಕೆದಾರರು ಕೇವಲ ತಮ್ಮ ಪಾನ್ ಮತ್ತು ಆಧಾರ್ ಸಂಖ್ಯೆಯನ್ನು ಆ್ಯಪ್ ನಲ್ಲಿ ನಮೂದಿಸಬೇಕು, ಒಟಿಪಿಯೊಂದಿಗೆ ಆಧಾರ್ ಸಂಖ್ಯೆಯನ್ನು ಮತ್ತು ತಮ್ಮ ಬ್ಯಾಂಕ್ ವಿವರಗಳನ್ನು ಪರಿಶೀಲಿಸಬೇಕು. ತಮ್ಮ ಖರೀದಿಗೆ ಬಳಕೆದಾರರು 'ಫ್ಲಿಪ್‌ಕಾರ್ಟ್ ಪೇ ಲೇಟರ್ ಇಎಂಐ' ಆಯ್ಕೆಯನ್ನು ಮಾಡಿಕೊಳ್ಳಬೇಕು ಮತ್ತು ತಮಗೆ ಸೂಕ್ತವಾದ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅರ್ಜಿಯ ಪ್ರಕ್ರಿಯೆ ತ್ವರಿತವಾಗಿರುತ್ತದೆ ಮತ್ತು ತಡೆರಹಿತವಾಗಿರುತ್ತದೆ. ಈ ಪ್ರಕ್ರಿಯೆಗಳನ್ನು ಫ್ಲಿಪ್‌ಕಾರ್ಟ್ ಆ್ಯಪ್‌ನಲ್ಲಿ ಅತ್ಯಂತ ಸುಲಭವಾಗಿ ನಿರ್ವಹಿಸಬಹುದಾಗಿದೆ. ಈ ವರ್ಷಾಂತ್ಯದ ವೇಳೆಗೆ ಡಿಜಿಟಲ್ ಪರಿಹಾರಗಳು ಮತ್ತು ಮೌಲ್ಯಾಧಾರಿತ ಸಾಲ ಸೌಲಭ್ಯಗಳ ಆಯ್ಕೆಗಳ ಮೂಲಕ 100 ಮಿಲಿಯನ್ ಗೂ ಅಧಿಕ ವ್ಯವಹಾರಗಳನ್ನು ನಡೆಸುವ ಗುರಿಯನ್ನು ಫ್ಲಿಪ್ ಕಾರ್ಟ್ ಹೊಂದಿದೆ.

ಭಾರತದ ಇ-ಕಾಮರ್ಸ್ ಮಾರುಕಟ್ಟೆಗೆ ವೇಗವರ್ಧನೆ

ಭಾರತದ ಇ-ಕಾಮರ್ಸ್ ಮಾರುಕಟ್ಟೆಗೆ ವೇಗವರ್ಧನೆ

ಸಾಂಕ್ರಾಮಿಕವು ಭಾರತದ ಇ-ಕಾಮರ್ಸ್ ಮಾರುಕಟ್ಟೆಗೆ ವೇಗವರ್ಧನೆ ಮಾಡಿದೆ. ವಿಶೇಷವಾಗಿ ಮೆಟ್ರೋ ನಗರಗಳಲ್ಲಿ ನುಗ್ಗುವಿಕೆಯನ್ನು ಗಮನಾರ್ಹವಾಗಿ ವೇಗಗೊಳಿಸುತ್ತದೆ. ಬೇನ್ ಮತ್ತು ಕಂಪನಿಯ ಇತ್ತೀಚಿನ ವರದಿಯ ಪ್ರಕಾರ, ಪ್ರತಿ ಮೂರು ಜನರಲ್ಲಿ ಒಬ್ಬರು ಕಳೆದ ವರ್ಷ ಒಮ್ಮೆಯಾದರೂ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿದ್ದಾರೆ. ಗ್ರಾಹಕರು ತಮ್ಮ ಆನ್‌ಲೈನ್ ಖರೀದಿಗಳನ್ನು ಪೂರ್ಣಗೊಳಿಸಲು ಡಿಜಿಟಲ್ ಪಾವತಿ ಮತ್ತು ಕ್ರೆಡಿಟ್ ಅನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಪೇ ಲೇಟರ್ ಸೌಲಭ್ಯವು ಗ್ರಾಹಕರಿಗೆ ದೊಡ್ಡ ವೆಚ್ಚಗಳನ್ನು ಸಣ್ಣ, ಬಡ್ಡಿ ರಹಿತ ಇಎಂಐಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದು ದೈನಂದಿನ ಅಗತ್ಯ ವಸ್ತುಗಳ ಖರೀದಿ

ಇದು ದೈನಂದಿನ ಅಗತ್ಯ ವಸ್ತುಗಳ ಖರೀದಿ

ಇದು ದೈನಂದಿನ ಅಗತ್ಯ ವಸ್ತುಗಳ ಖರೀದಿಯನ್ನು ಸರಳಗೊಳಿಸುತ್ತದೆ ಮತ್ತು ಪ್ರೀಮಿಯಂ ಉತ್ಪನ್ನಗಳನ್ನು ಕೈಗೆಟುವುಂತೆ ಮಾಡುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ, ಪೇ ಲೇಟರ್ ಸೌಲಭ್ಯವು ಭಾರತದಲ್ಲಿ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಪಾವತಿ ವಿಧಾನವಾಗಿ ಹೊರಹೊಮ್ಮುತ್ತಿದೆ. ಎಫ್ಐಎಸ್‌ನಿಂದ ವರ್ಲ್ಡ್ ಪೇಯ ಜಾಗತಿಕ ಪಾವತಿ ವರದಿಯ ಪ್ರಕಾರ, ಇದು 2024 ರ ವೇಳೆಗೆ ಒಟ್ಟು ಮಾರುಕಟ್ಟೆ ಪಾಲಿನ ಶೇ.9 ರಷ್ಟನ್ನು ಹೊಂದಲಿದೆ ಎಂದು ಅಂದಾಜಿಸಲಾಗಿದೆ. ಚೆಕೌಟ್ ಸಮಯದಲ್ಲಿ ಫ್ಲಿಪ್‌ಕಾರ್ಟ್ ಪಾವತಿಯ ಸೇರ್ಪಡೆಯು ಪ್ರಸ್ತುತ ಶೇ.70 ರಷ್ಟಿದೆ.

English summary
Flipkart Pay Later EMI facility has extended its credit limit to Rs 70,000 from the earlier Rs 10,000. The credit can be paid back till up to 12 months, tenures such as 3 months, 6 months, 9 months and a year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X