• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2 ಮತ್ತು 3 ನೇ ಹಂತದ ಪಟ್ಟಣಗಳಲ್ಲಿ ಸೇವೆ ಆರಂಭಿಸಿದ ಫ್ಲಿಪ್‍ಕಾರ್ಟ್

|

ಬೆಂಗಳೂರು, ಸೆಪ್ಟಂಬರ್ 09, 2019: ಭಾರತದಲ್ಲಿ ಮುಂಚೂಣಿಯಲ್ಲಿರುವ ಇ-ಕಾಮರ್ಸ್ ಮಾರ್ಕೆಟ್‍ಪ್ಲೇಸ್ ಫ್ಲಿಪ್‍ಕಾರ್ಟ್ ಕಳೆದ ಆರು ತಿಂಗಳಲ್ಲಿ ಹೆಚ್ಚುವರಿಯಾಗಿ 800 ಕ್ಕೂ ನಗರಗಳು ಮತ್ತು ಪಟ್ಟಣಗಳಲ್ಲಿ ತನ್ನ ಪಿಕ್-ಅಪ್ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಉಪಕ್ರಮದಿಂದ ಸಾವಿರಾರು ಹೊಸ ಮಾರಾಟಗಾರರು, ಎಂಎಸ್‍ಎಂಇಗಳಿಗೆ, ತಯಾರಕರಿಗೆ ಮತ್ತು ಕುಶಲಕರ್ಮಿಗಳು ಇ-ಕಾಮರ್ಸ್ ಜಾಲದಲ್ಲಿ ಬರಲು ನೆರವಾಗಲಿದೆ.

ಫ್ಲಿಪ್‍ಕಾರ್ಟ್‍ನ 'ದಿ ರೀಚ್ ಪ್ರಾಜೆಕ್ಟ್' ಎಂಬ ಈ ಉಪಕ್ರಮವನ್ನು ಕಳೆದ ಫೆಬ್ರವರಿಯಲ್ಲಿ ಆರಂಭಿಸಲಾಗಿತ್ತು. ದೇಶದ ಸೇವೆ ಅಲಭ್ಯತೆ ಇರುವ ಭಾಗಗಳಲ್ಲಿ ಮಾರಾಟಗಾರರಿಂದ ಬಂದ ಮನವಿಗಳನ್ನು ಪೂರೈಸುವ ಮತ್ತು ಪಿಕ್-ಅಪ್ ಸಾಮಥ್ರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು.

ಪ್ಲಾಸ್ಟಿಕ್ ಬಳಕೆ ನಿರ್ಮೂಲನೆಯತ್ತ ಫ್ಲಿಪ್‍ಕಾರ್ಟ್ ದಾಪುಗಾಲು

ಈ ವಿಸ್ತರಣೆ ಯೋಜನೆಯಿಂದ ಈ ನಗರಗಳು ಮತ್ತು ಪಟ್ಟಣಗಳ 60,000 ಕ್ಕೂ ಅಧಿಕ ಮಾರಾಟಗಾರರಿಗೆ ವಿಶೇಷವಾಗಿ ಹಬ್ಬದ ಸಂದರ್ಭದಲ್ಲಿ ನೆರವಾಗಲಿದೆ. ಈ ಮೂಲಕ ದೇಶಾದ್ಯಂತ ಹೊಸದಾಗಿ ಶೇ.40 ಕ್ಕೂ ಹೆಚ್ಚು ಪಿನ್‍ಕೋಡ್‍ಗಳ ಸೇರ್ಪಡೆಯಾಗಿದೆ. 3 ನೇ ಹಂತದ ನಗರಗಳು ಮತ್ತು ಪಟ್ಟಣಗಳಲ್ಲಿ ಫ್ಲಿಪ್‍ಕಾರ್ಟ್ ಸೇವೆ ಆರಂಭವಾಗಿದ್ದು, ಈ ಮೂಲಕ ಫ್ಲಿಪ್‍ಕಾರ್ಟ್‍ನ ಈ ರೀಚ್ ಪ್ರಾಜೆಕ್ಟ್ ನಿಂದ ಬಹುತೇಕ ಶೇ. 50 ರಷ್ಟು ಪಿನ್‍ಕೋಡ್‍ಗಳಲ್ಲಿ ಸೇವೆಗಳನ್ನು ನೀಡುವಂತಾಗಿದೆ.

ಈ ವಿಸ್ತರಣೆ ಯೋಜನೆ ಬಗ್ಗೆ ಮಾತನಾಡಿದ ಫ್ಲಿಪ್‍ಕಾರ್ಟ್ ಗ್ರೂಪ್‍ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅವರು, "ಫ್ಲಿಪ್‍ಕಾರ್ಟ್‍ನ ಈ ಉಪಕ್ರಮದ ಮೂಲಕ ಹೆಚ್ಚಿನ ಪಿನ್‍ಕೋಡ್ ಅಂದರೆ ಇನ್ನೂ ಹೆಚ್ಚು ಸ್ಥಳಗಳಲ್ಲಿ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತಿದೆ. ಈ ಮೂಲಕ ಇ-ಕಾಮರ್ಸ್ ಅನ್ನು ಸಾರ್ವತ್ರಿಕಗೊಳಿಸುವ ಮತ್ತು ಮೆಟ್ರೋ ನಗರಗಳ ಹೊರತಾಗಿ ಇನ್ನಿತರೆ ಪಟ್ಟಣ-ನಗರಗಳ ಮಾರಾಟಗಾರರು, ಎಂಎಸ್‍ಎಂಇಗಳಿಗೆ ಹಾಗೂ ಕುಶಲಕರ್ಮಿಗಳಿಗೆ ಪ್ರಯೋಜನ ನೀಡುವ ವೇದಿಕೆಯನ್ನು ನಿರ್ಮಾಣ ಮಾಡುವ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದಂತಾಗಿದೆ.

ಮೋದಿ ಸ್ಕಿಲ್ ಇಂಡಿಯಾ: 20 ಸಾವಿರ ಸಿಬ್ಬಂದಿಗೆ ಫ್ಲಿಪ್ ಕಾರ್ಟ್ ಟ್ರೈನಿಂಗ್

ಹೆಚ್ಚು ಹೆಚ್ಚು ಸಣ್ಣ ಮತ್ತು ಮಧ್ಯಮ ವರ್ಗದ ವ್ಯವಹಾರಗಳನ್ನು ಸಬಲೀಕರಣಗೊಳಿಸುವ ಮೂಲಕ ಗ್ರಾಹಕರ ಸಂಖ್ಯೆಯನ್ನು 150 ದಶಲಕ್ಷಕ್ಕೆ ಹೆಚ್ಚಿಸಿಕೊಳ್ಳುವತ್ತ ಫ್ಲಿಪ್‍ಕಾರ್ಟ್ ಗಮನಹರಿಸಿದೆ. ಈ ಬಾರಿಯ ಹಬ್ಬದ ಸಂದರ್ಭವು ಫ್ಲಿಪ್‍ಕಾರ್ಟ್‍ಗೆ ಅತಿದೊಡ್ಡ ಅವಕಾಶವನ್ನು ಕಲ್ಪಿಸಿದ್ದು, ಎಂಎಸ್‍ಎಂಇಗಳು, ಮಾರಾಟಗಾರರರು, ಗ್ರಾಮೀಣ ಪ್ರದೇಶಗಳ ಉದ್ಯಮಿಗಳು, ಕುಶಲಕರ್ಮಿಗಳು ಮತ್ತು ನೇಕಾರರು ಇ-ಕಾಮರ್ಸ್ ವ್ಯವಹಾರದಲ್ಲಿ ಪಾಲ್ಗೊಳ್ಳಲು ನೆರವಾಗುತ್ತಿದೆ" ಎಂದು ತಿಳಿಸಿದರು.

ದೇಸೀಯ ಕಂಪನಿಯಾಗಿರುವ ಫ್ಲಿಪ್‍ಕಾರ್ಟ್ ದೇಶದ ಮೂಲೆಮೂಲೆಗಳಿಗೂ ತನ್ನ ಸೇವೆಯನ್ನು ತಲುಪಿಸುವ ಉದ್ದೇಶವನ್ನು ಹೊಂದಿದ್ದು, ಈ ಮೂಲಕ ಸಾರ್ವಜನಿಕರ ಸುಸ್ಥಿರವಾದ ಜೀವನೋಪಾಯ ಮತ್ತು ಕಲ್ಯಾಣವನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Flipkart said on Thursday it has expanded the reach of its pick-up operations in tier 2 and tier 3 cities of India in 800 additional cities and towns in the last six months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more