ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ ಕಾಮರ್ಸ್ ಕಂಪೆನಿಗಳು ನಷ್ಟದಲ್ಲಿ ನಡೆಯುತ್ತಿವೆಯೇ?

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಆಗಸ್ಟ್ 22: ಫ್ಲಿಪ್ ಕಾರ್ಟ್ ನಲ್ಲಿ ಪರ್ಫಾಮೆನ್ಸ್ ಚೆನ್ನಾಗಿಲ್ಲ ಎಂದು ನೌಕರರನ್ನಷ್ಟೇ ಅಲ್ಲ, ಸಿಇಒ ಸ್ಥಾನದಿಂದ ಸಚಿನ್ ಬನ್ಸಾಲ್ ಅವರನ್ನೇ ತೆಗೆದುಹಾಕಲಾಗಿದೆ. ಇದನ್ನು ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಹಾಗೂ ಸಿಇಒ ಸಚಿನ್ ಖಚಿತಪಡಿಸಿದ್ದಾರೆ. ಪರ್ಫಾಮೆನ್ಸ್ ತೋರದ ಫ್ಲಿಪ್ ಕಾರ್ಟ್ ನ 300 ನೌಕರರನ್ನು ಕೆಲಸದಿಂದ ತೆಗೆಯಲಾಗುವುದು ಎಂದು ಕಂಪೆನಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಕಂಪೆನಿ ಕಚೇರಿಯಲ್ಲಿ ಸಚಿನ್ ಆಡಿರುವ ಮಾತುಗಳು ನೌಕರರಲ್ಲಿ ಆತಂಕಕ್ಕೆ ಕಾರಣವಾಗಿದೆ.

'ಆಗಾಗ ಈ ರೀತಿಯ ಟೌನ್ ಹಾಲ್ ಗಳು ನಡೆಯುತ್ತವೆ. ನಮ್ಮಲ್ಲಿರುವ ಮುಕ್ತ ಸಂಸ್ಕೃತಿಗೆ ಇದೇ ಆಧಾರ. ಇಲ್ಲಿ ಯಾರು ಬೇಕಾದರೂ ಪ್ರಶ್ನೆಗಳನ್ನು ಮಾಡಬಹುದು. ಸದ್ಯಕ್ಕೆ ಇರುವ ಕಂಪೆನಿ ನಿಯಮಗಳು ಹಾಗೂ ಇಲ್ಲಿ ಮುಂಚೂಣಿಯಲ್ಲಿರುವವರ ನಿರ್ಧಾರಗಳ ಬಗ್ಗೆಯೂ ಕೇಳಬಹುದು' ಎಂದು ಸಚಿನ್ ತಿಳಿಸಿದ್ದಾರೆ.[ಭಾರತದ ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಸಿಇಒ ಬದಲು!]

Flipkart ceo Sachin Bansal will be replaced by Binny Bansal

ಜನವರಿಯಲ್ಲಿ ಸಚಿನ್ ಬನ್ಸಾಲ್ ಅವರಿಂದ ತೆರವಾದ ಸಿಇಒ ಸ್ಥಾನಕ್ಕೆ ಸದ್ಯಕ್ಕೆ ಚೀಫ್ ಆಪರೇಟಿಂಗ್ ಆಫೀಸರ್ ಆಗಿದ್ದ ಬಿನ್ನಿ ಬನ್ಸಾಲ್ ಬಂದಿದ್ದಾರೆ. ಅಮೆಜಾನ್ ನ ಮಾಜಿ ಉದ್ಯೋಗಿಯಾದ ಬಿನ್ನಿ ಬನ್ಸಾಲ್, ಸಚಿನ್ ಅವರ ಸಂಬಂಧಿಕರೇನಲ್ಲ. ಭಾರತದ ಅತಿ ದೊಡ್ಡ ಇ ಕಾಮರ್ಸ್ ಕಂಪೆನಿಯಾದ ಫ್ಲಿಪ್ ಕಾರ್ಟ್ ಆರಂಭವಾಗಿದ್ದು 2007ರಲ್ಲಿ. ಕಂಪೆನಿಯು ಮೊಬೈಲ್ ಫೋನ್ ನಿಂದ ಸೂಟ್ ಕೇಸ್ ವರೆಗೆ, ಕಾಸ್ಮೆಟಿಕ್ಸ್, ಪುಸ್ತಕ ಇನ್ನೂ ಅನೇಕ ವಸ್ತುಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡುತ್ತದೆ.

ಕಳೆದ ವರ್ಷ 15 ಬಿಲಿಯನ್ ಡಾಲರ್ ನಷ್ಟಿದ್ದ ಫ್ಲಿಪ್ ಕಾರ್ಟ್ ಕಂಪೆನಿಯ ಮೌಲ್ಯ ಅಮೆಜಾನ್, ಸ್ನಾಪ್ ಡೀಲ್ ಕಂಪೆನಿಗಳ ಸ್ಪರ್ಧೆಯಿಂದ ಈ ವರ್ಷದ ಆರಂಭದಲ್ಲಿ 11 ಬಿಲಿಯನ್ ಡಾಲರ್ ಗೆ ಕುಸಿತ ಕಂಡಿತ್ತು. ಈ ಮಧ್ಯೆ ಜಬಾಂಗ್ ಫ್ಯಾಷನ್ ವೆಬ್ ಸೈಟ್ ಅನ್ನು 70 ಮಿಲಿಯನ್ ಡಾಲರ್ ಗೆ ಖರೀದಿಸುವುದಾಗಿ ಕಳೆದ ತಿಂಗಳು, ಫ್ಲಿಪ್ ಕಾರ್ಟ್ ಘೋಷಿಸಿತ್ತು.[ಫ್ಲಿಪ್ ಕಾರ್ಟ್ ಸಂಸ್ಥೆಗೆ ಹಿನ್ನಡೆ, ಹಿರಿಯ ಅಧಿಕಾರಿ ರಾಜೀನಾಮೆ!]

ಆಂತರಿಕ ಮೂಲಗಳ ಪ್ರಕಾರ, ಗ್ರಾಹಕರನ್ನು ಸೆಳೆಯುವ ಕಾರಣಕ್ಕೆ ಘೋಷಿಸಿದ ರಿಯಾಯ್ತಿಗಳು ಫ್ಲಿಪ್ ಕಾರ್ಟ್, ಸ್ನಾಪ್ ಡೀಲ್ ಹಾಗೂ ಅಮೆಜಾನ್ ಕಂಪೆನಿಗಳ ನಷ್ಟ ಪ್ರಮಾಣವನ್ನು ಹೆಚ್ಚಿಸುತ್ತಿವೆ. ಹಣಕಾಸು ನೆರವು ಕೂಡ ದೊರೆಯುತ್ತಿಲ್ಲ.

English summary
India's leading e commerce company Flipkrat CEO Sachin Bansal will be replaced by Binny Bansal. Flipkart sacking under performers. Now Sachin told, there is no exception for comapny CEO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X