ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರವಿಂದ್ ಫ್ಯಾಷನ್ಸ್ ನಲ್ಲಿ ಹೂಡಿಕೆ ಮಾಡಿದ ಫ್ಲಿಪ್ ಕಾರ್ಟ್

|
Google Oneindia Kannada News

ಬೆಂಗಳೂರು, ಜುಲೈ 10: ಅರವಿಂದ್ ಫ್ಯಾಷನ್ಸ್ ಲಿಮಿಟೆಡ್ (ಎಎಫ್ಎಲ್)ನಲ್ಲಿ ಫ್ಲಿಪ್ ಕಾರ್ಟ್ ಗ್ರೂಪ್ 260 ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಮಾಡುವ ಮೂಲಕ ಗಣನೀಯ ಅಲ್ಪ ಪ್ರಮಾಣದ ಪಾಲನ್ನು ಖರೀದಿ ಮಾಡಿದೆ.

ಫ್ಲೈಯಿಂಗ್ ಮಶಿನ್ ಬ್ರ್ಯಾಂಡ್ ನ ಮಾಲೀಕತ್ವವನ್ನು ಹೊಂದಿರುವ ಅರವಿಂದ್ ಯೂತ್ ಬ್ರ್ಯಾಂಡ್ ನ ಅಂಗಸಂಸ್ಥೆ ಎಎಫ್ಎಲ್ ಆಗಿದೆ. ಭಾರತದಲ್ಲಿನ ಯುವಪೀಳಿಗೆಯ ಫ್ಯಾಷನ್ ಅಗತ್ಯಗಳು ಮತ್ತು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಗ್ರೂಪ್ ಮತ್ತು ಎಎಫ್ಎಲ್ ಸಂಸ್ಥೆಗಳು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಈ ಪಾಲುದಾರಿಕೆಯನ್ನು ಮತ್ತಷ್ಟು ವೃದ್ಧಿಸಿಕೊಂಡಿವೆ.

Flipkart Buys Minority Stake In Arvind Fashions

ಕಳೆದ 40 ವರ್ಷಗಳಿಂದ ಭಾರತದ ಒಂದು ಐಕಾನಿಕ್ ಬ್ರ್ಯಾಂಡ್ ಆಗಿರುವ ಫ್ಲೈಯಿಂಗ್ ಮಶಿನ್ ಅನ್ನು ಫ್ಲಿಪ್ ಕಾರ್ಟ್ ಗ್ರೂಪ್ ಪ್ಲಾಟ್ ಫಾರ್ಮ್ ಗಳಾಗಿರುವ ಫ್ಲಿಪ್ ಕಾರ್ಟ್ ಮತ್ತು ಮೈಂತ್ರಾದಲ್ಲಿ ಕಳೆದ 6 ವರ್ಷಗಳಿಂದ ಮಾರಾಟ ಮಾಡಲಾಗುತ್ತಿದೆ. ಡೆನಿಮ್ ನ ಮೊದಲ ಬ್ರ್ಯಾಂಡ್ ಎನಿಸಿರುವ ಫ್ಲೈಯಿಂಗ್ ಮಶಿನ್ ಭಾರತದಲ್ಲಿ ಡೆನಿಮ್ ಬ್ರ್ಯಾಂಡ್ ಗಳಲ್ಲಿ ಮುಂಚೂಣಿಯಲ್ಲಿದೆ.

ಫ್ಲಿಪ್ ಕಾರ್ಟ್ ಫ್ಯಾಷನ್ ರಾಯಭಾರಿಗಳಾದ ರಣಬೀರ್ -ಆಲಿಯಾಫ್ಲಿಪ್ ಕಾರ್ಟ್ ಫ್ಯಾಷನ್ ರಾಯಭಾರಿಗಳಾದ ರಣಬೀರ್ -ಆಲಿಯಾ

ತನ್ನ ಬ್ರ್ಯಾಂಡ್ ಪರಂಪರೆ, ವಿನ್ಯಾಸದ ಸೂಕ್ಷ್ಮತೆಗಳು ಮತ್ತು ಯುವ ಪೀಳಿಗೆಯ ಆಕರ್ಷಣೆಯ ಮೂಲಕ ನಗರ ಮತ್ತು ಸಣ್ಣ ನಗರಗಳಲ್ಲಿ ಜನಪ್ರಿಯಗೊಂಡಿದೆ.

Flipkart Buys Minority Stake In Arvind Fashions

ಈ ಹೂಡಿಕೆ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ಗ್ರೂಪ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಲ್ಯಾಣ್ ಕೃಷ್ಣಮೂರ್ತಿ ಅವರು,"ದೇಶಾದ್ಯಂತ ಫ್ಲೈಯಿಂಗ್ ಮಶಿನ್ ಮನೆ ಮಾತಾಗಿರುವ ಬ್ರ್ಯಾಂಡ್ ಆಗಿದೆ. ಯುವ ಪೀಳಿಗೆಯ ನೆಚ್ಚಿನ ಬ್ರ್ಯಾಂಡ್ ಆಗಿರುವ ಫ್ಲೈಯಿಂಗ್ ಮಶಿನ್ ಮೌಲ್ಯ ಮತ್ತು ಸ್ಟೈಲ್ ನ ಪ್ರತೀಕವಾಗಿದೆ. ಈ ಹೂಡಿಕೆ ಮೂಲಕ ನಾವು ಅರವಿಂದ್ ಯೂತ್ ಬ್ರ್ಯಾಂಡ್ಸ್ ನೊಂದಿಗಿನ ಪಾಲುದಾರಿಕೆಯನ್ನು ಮತ್ತಷ್ಟು ಸದೃಢಗೊಳಿಸಿಕೊಳ್ಳಲಿದ್ದೇವೆ. ತನ್ನ ಜನಪ್ರಿಯ ಬ್ರ್ಯಾಂಡ್ ನ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಿಸುವುದು ಮತ್ತು ಕಳೆದ ಕೆಲವು ದಶಕಗಳಲ್ಲಿ ನಿರ್ಮಾಣ ಮಾಡಿರುವ ಬ್ರ್ಯಾಂಡ್ ಈಕ್ವಿಟಿಯನ್ನು ಬಲಗೊಳಿಸಲಾಗುವುದು'' ಎಂದು ತಿಳಿಸಿದರು.

ಅರವಿಂದ್ ಫ್ಯಾಷನ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಸುರೇಶ್ ಅವರು ಮಾತನಾಡಿ,''ನಾವು ಅರವಿಂದ್ ಯೂತ್ ಬ್ರ್ಯಾಂಡ್ಸ್ ಮತ್ತು ಫ್ಲೈಯಿಂಗ್ ಮಶಿನ್ ಬ್ರ್ಯಾಂಡ್ ಗಳಿಗೆ ಒಮ್ನಿ-ಚಾನೆಲ್ ರೀಟೇಲ್ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಆದ್ಯತೆ ನೀಡುತ್ತಿದ್ದೇವೆ. ಎಕ್ಸ್ ಕ್ಲೂಸಿವ್ ಬ್ರ್ಯಾಂಡ್ ಸ್ಟೋರ್ ಗಳು, ಡಿಪಾರ್ಟ್ ಮೆಂಟ್ ಸ್ಟೋರ್ ಗಳು ಮತ್ತು ಮಲ್ಟಿ-ಬ್ರ್ಯಾಂಡ್ ಸ್ಟೋರ್ ಗಳ ಮೂಲಕವೂ ನಮ್ಮ ಆಫ್ ಲೈನ್ ಮಾರಾಟಗಳನ್ನು ಬೆಳವಣಿಗೆ ಮಾಡುವತ್ತ ಆದ್ಯತೆ ನೀಡುತ್ತಿದ್ದೇವೆ'' ಎಂದು ತಿಳಿಸಿದರು.

English summary
The e-commerce giant Flipkart announced an investment of Rs 260 crore for a minority stake in Arvind Fashions' recently-formed subsidiary Arvind Youth Brands which owns the Flying Machine brand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X