ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭರಪೂರ ಕ್ಯಾಶ್ ಬ್ಯಾಕಿನೊಂದಿಗೆ ಫ್ಲಿಫ್ ಕಾರ್ಟ್ ಎಕ್ಸಿಸ್ ಕ್ರೆಡಿಟ್ ಕಾರ್ಡ್

|
Google Oneindia Kannada News

ಬೆಂಗಳೂರು, ಜುಲೈ 11: ಜನಪ್ರಿಯ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‍ಕಾರ್ಟ್ ಮತ್ತು ಆಕ್ಸಿಸ್ ಬ್ಯಾಂಕ್ ಸಹಭಾಗಿತ್ವದಲ್ಲಿ ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡನ್ನು ಬಿಡುಗಡೆ ಮಾಡಿವೆ. ಮಾಸ್ಟರ್ ಕಾರ್ಡ್ ಸಹಯೋಗ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಅತ್ಯುತ್ತಮ ಮಟ್ಟದ ಪ್ರಯೋಜನಗಳನ್ನು ಮತ್ತು ಅನಿಯಮಿತ ಕ್ಯಾಶ್‍ಬ್ಯಾಕ್ ಆಫರ್‍ಗಳನ್ನು ನೀಡಲಿದೆ.

ಗ್ರಾಹಕರು ಈ ಕಾರ್ಡ್ ಮೂಲಕ ಆನ್‍ಲೈನ್ ಮತ್ತು ಆನ್‍ಲೈನ್ ಶಾಪಿಂಗ್ ಮಾಡಿದರೆ ಈ ಆಫರ್ಸ್ ಸಿಗಲಿವೆ. ಫ್ಲಿಪ್‍ಕಾರ್ಟ್, ಎಕ್ಸಿಸ್ ಬ್ಯಾಂಕ್ ಮತ್ತು ಮಾಸ್ಟರ್ ಕಾರ್ಡಿನ ಈ ಹೊಸ ಯೋಜನೆಯಿಂದ ಗ್ರಾಹಕರಿಗೆ ಸಾಲ ಸೌಲಭ್ಯ ಮತ್ತಷ್ಟು ಸುಲಭವಾಗಲಿದೆ ಮತ್ತು ಭಾರತದಲ್ಲಿ ಕ್ಷಿಪ್ರಗತಿಯಲ್ಲಿ ಕ್ರೆಡಿಟ್ ಕಾರ್ಡ್ ಇಕೋಸಿಸ್ಟಮ್ ವಿಸ್ತರಣೆಗೆ ಸಹಕಾರಿಯಾಗಲಿದೆ.

ಫ್ಲಿಪ್‍ಕಾರ್ಟ್ ನಿಂದ ಮಹತ್ವದ ನಿರ್ಧಾರ, ಇ ವೆಹಿಕಲ್ ಬಳಕೆ ಹೆಚ್ಚಳಫ್ಲಿಪ್‍ಕಾರ್ಟ್ ನಿಂದ ಮಹತ್ವದ ನಿರ್ಧಾರ, ಇ ವೆಹಿಕಲ್ ಬಳಕೆ ಹೆಚ್ಚಳ

ಭಾರತದಲ್ಲಿ ಕ್ರೆಡಿಟ್ ಕಾಡ್ ಇಕೋಸಿಸ್ಟಮ್ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ ಮತ್ತು ಸ್ವೀಕಾರ ಹಾಗೂ ಲಭ್ಯತೆಯ ಭರವಸೆ ಹೆಚ್ಚಾಗತೊಡಗಿದೆ. ಹೆಚ್ಚು ಭಾರತೀಯರು ಅನೌಪಚಾರಿಕ ಸಾಲವನ್ನು ಪಡೆಯುತ್ತಿದ್ದಾರೆ. ಭಾರತದಲ್ಲಿ ಅಂದಾಜು 49 ದಶಲಕ್ಷ ಕ್ರೆಡಿಟ್ ಕಾರ್ಡ್‍ಗಳ ವಿತರಣೆಯಾಗಿವೆ. ಸಿಬಿಲ್‍ನ ಅಂದಾಜಿನ ಪ್ರಕಾರ ಕ್ರೆಡಿಟ್ ಕಾರ್ಡ್ ಪಡೆಯಲು ಸುಮಾರು 220 ದಶಲಕ್ಷ ಜನರು ಅರ್ಹರಿದ್ದಾರೆ. ಇವರಲ್ಲಿ ಮೂರನೇ ಒಂದು ಭಾಗದಷ್ಟು ಜನರನ್ನು ಔಪಚಾರಿಕವಾದ ಹಣಕಾಸು ಸಂಸ್ಥೆಗಳು ತಲುಪಿಲ್ಲ.

Flipkart, Axis Bank launch co-branded credit card offering unlimited cashback

ಕ್ರೆಡಿಟ್ ಕಾರ್ಡ್‍ಗೆ ಅರ್ಹರಾಗಿರುವ ಭಾರತೀಯರು ಮತ್ತು ಈ ಹಿಂದೆ ಔಪಚಾರಿಕವಾದ ಸಾಲವನ್ನು ಪಡೆಯದೇ ಇರುವಂತಹ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಫ್ಲಿಪ್‍ಕಾರ್ಟ್-ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‍ನ್ನು ವಿನ್ಯಾಸಗೊಳಿಸಲಾಗಿದೆ. ದೇಶಾದ್ಯಂತ ಇರುವ ಎಕ್ಸಿಸ್ ಬ್ಯಾಂಕ್ & ಫ್ಲಿಪ್‍ಕಾರ್ಟ್‍ನ ಶಕ್ತಿಯುತವಾದ ಜಾಲ ಮತ್ತು ವಿತರಣೆ ಜಾಲದ ಮೂಲಕ ಈ ಕ್ರೆಡಿಟ್ ಕಾರ್ಡನ್ನು ಕಾರ್ಯಾಚರಣೆ ಮಾಡಲಾಗುತ್ತದೆ.

ಇದಕ್ಕೆ ಪೂರಕವಾಗಿ ಕೋ-ಬ್ರ್ಯಾಂಡ್ ಕಾರ್ಡ್ ಯೋಜನೆಗಳು ಮತ್ತು ಪಾವತಿ ತಂತ್ರಜ್ಞಾನಗಳ ನಾಯಕ ಸ್ಥಾನದಲ್ಲಿರುವ ಮಾಸ್ಟರ್‍ಕಾರ್ಡ್ ಸಹಯೋಗ ಹೊಂದಿದೆ. ಈ ಕಾರ್ಡ್ ಆಯ್ದ ಗ್ರಾಹಕರಿಗೆ ಜುಲೈನಿಂದ ಲಭ್ಯವಾಗಲಿದೆ. ಮುಂಬರುವ ವಾರಗಳಲ್ಲಿ ಎಲ್ಲಾ ಗ್ರಾಹಕರಿಗೆ ಲಭ್ಯವಾಗಲಿವೆ. ಗ್ರಾಹಕರು ಈ ಕಾರ್ಡ್ ಮೂಲಕ ತಮ್ಮ ವ್ಯವಹಾರವನ್ನು ಪರಿಪೂರ್ಣಗೊಳಿಸಿಕೊಳ್ಳಬಹುದಾಗಿದೆ.

54 ಲಕ್ಷ ಷೇರುಗಳನ್ನು ವಾಲ್ಮಾರ್ಟಿಗೆ ಮಾರಿದ ಬಿನ್ನಿ ಬನ್ಸಾಲ್54 ಲಕ್ಷ ಷೇರುಗಳನ್ನು ವಾಲ್ಮಾರ್ಟಿಗೆ ಮಾರಿದ ಬಿನ್ನಿ ಬನ್ಸಾಲ್

ಎಲ್ಲೆಲ್ಲಿ ಬಳಸಬಹುದು?: ಗ್ರಾಹಕರು ಈ ಕಾರ್ಡನ್ನು ಮೇಕ್‍ಮೈ ಟ್ರಿಪ್, ಗೋಇಬಿಬೊ, ಉಬರ್, ಪಿವಿಆರ್, ಗಾನಾ, ಕ್ಯೂರ್ ಫಿಟ್ ಮತ್ತು ಅರ್ಬನ್ ಕ್ಲಾಪ್ ಸೇರಿದಂತೆ ಮತ್ತಿತರೆ ವ್ಯವಹಾರಗಳಿಗೆ ಬಳಸಿಕೊಳ್ಳಬಹುದಾಗಿದೆ.

English summary
e-Commerce giant Flipkart and Axis Bank on Thursday jointly launched a Mastercard-powered credit card that offers unlimited cash back on all expenditures, online and offline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X