• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ಮುಂದೆ ಫ್ಲಿಪ್ ಕಾರ್ಟ್ Appನಲ್ಲಿ ಕನ್ನಡದಲ್ಲಿ ವ್ಯವಹರಿಸಿ

|

ಬೆಂಗಳೂರು, ಜೂನ್ 24: ಭಾರತದ ದೇಸೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್, ತನ್ನ ಪ್ಲಾಟ್ ಫಾರ್ಮ್ ಗೆ ಕನ್ನಡ, ಮತ್ತು ತಮಿಳು ಭಾಷೆ ಸೇರ್ಪಡೆ ಮಾಡಿದೆ. ಈ ಮೂಲಕ ಆನ್ ಲೈನ್ ಕಾಮರ್ಸ್ ನಲ್ಲಿ ಭಾರತೀಯ ಭಾಷೆ ಬಳಕೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಹೊಂದಿದೆ. ಇ-ಕಾಮರ್ಸ್ ನಲ್ಲಿ ಸ್ಥಳೀಯ ಭಾಷೆ ಮಾತನಾಡುವವರಿಗೆ ಇದ್ದ ಅಡೆತಡೆಗಳನ್ನು ಈ ವ್ಯವಸ್ಥೆ ತೊಡೆದುಹಾಕಲಿದೆ.

ಕಳೆದ ವರ್ಷ ಹಿಂದಿ ಭಾಷೆಯನ್ನು ಅಳವಡಿಸಲಾಗಿದ್ದು, 'ಫ್ಲಿಪ್ ಕಾರ್ಟ್ ನ ಲೋಕಲೈಸೇಶನ್ ಅಂಡ್ ಟ್ರಾನ್ಸ್ ಲೇಶನ್ ಪ್ಲಾಟ್ ಫಾರ್ಮ್' ಮೂಲಕ ಈ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಇ-ಕಾಮರ್ಸ್ ನ ಜರ್ನಿಯನ್ನು ತಮ್ಮದೇ ಭಾಷೆಯಲ್ಲಿ ಪರಿಪೂರ್ಣಗೊಳಿಸಿಕೊಳ್ಳಲು ಗ್ರಾಹಕರನ್ನು ಸಬಲರನ್ನಾಗಿ ಮಾಡಲಾಗುತ್ತದೆ.

End of Season Sale ಗಾಗಿ 5 ಸಾವಿರ ಮಂದಿಗೆ ಉದ್ಯೋಗ

ಇ-ಕಾಮರ್ಸ್ ವ್ಯವಸ್ಥೆಯಲ್ಲಿ ಗ್ರಾಹಕರು ಎದುರಿಸುತ್ತಿರುವ ವಿವಿಧ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಸ್ಟೇಟ್-ಆಫ್-ಆರ್ಟ್ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಿ ಮೂರು ಪ್ರಾದೇಶಿಕ ಭಾಷೆಗಳನ್ನು ಪರಿಚಯಿಸಲಾಗಿದೆ. ಉದ್ಯಮದ ವರದಿಗಳ ಪ್ರಕಾರ, 2021 ರ ವೇಳೆಗೆ ಭಾರತೀಯ ಭಾಷೆಯ ಇಂಟರ್ನೆಟ್ ಬಳಕೆದಾರರ ಪ್ರಮಾಣ ಶೇ.75 ರಷ್ಟಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಸ್ಥಳೀಯ ಭಾಷೆಗಳ ಬಳಕೆದಾರರ ಪ್ರಮಾಣ ಹೆಚ್ಚುತ್ತಿದೆ

ಸ್ಥಳೀಯ ಭಾಷೆಗಳ ಬಳಕೆದಾರರ ಪ್ರಮಾಣ ಹೆಚ್ಚುತ್ತಿದೆ

ಸ್ಥಳೀಯ ಭಾಷೆಗಳ ಬಳಕೆದಾರರ ಪ್ರಮಾಣ ಹೆಚ್ಚುತ್ತಿದ್ದು, ವಿಶೇಷವಾಗಿ ಸಣ್ಣ ಸಣ್ಣ ಪಟ್ಟಣಗಳಲ್ಲಿ ಇದರ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶೀಕ ಭಾಷೆಗಳಲ್ಲಿ ಇ-ಕಾಮರ್ಸ್ ಅನ್ನು ಲಭ್ಯವಾಗುವಂತೆ ಮಾಡುವ ಮೂಲಕ ಗ್ರಾಹಕರಿಗೆ ವೈಯಕ್ತಿಕ ಅನುಭವವನ್ನು ಹೆಚ್ಚಿಸುವುದು ಪ್ರಮುಖವಾಗಿದೆ. ಇದು ದೇಶದಲ್ಲಿ ಲಕ್ಷಾಂತರ ಗ್ರಾಹಕರು ತಮ್ಮದೇ ಭಾಷೆಗಳಲ್ಲಿ ಆನ್ ಲೈನ್ ಶಾಪಿಂಗ್ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ. ದಕ್ಷಿಣ ರಾಜ್ಯಗಳು ಫ್ಲಿಪ್ ಕಾರ್ಟ್ ಗೆ ಒಂದು ಪ್ರಮುಖವಾದ ಮಾರುಕಟ್ಟೆಯಾಗಿವೆ. ಇಲ್ಲಿ ಪ್ರಾದೇಶಿಕ ಭಾಷೆಯನ್ನು ಅಳವಡಿಸಿಕೊಂಡರೆ ಇ-ಕಾಮರ್ಸ್ ವೇದಿಕೆಗೆ ಮತ್ತಷ್ಟು ಗ್ರಾಹಕರನ್ನು ಸೇರ್ಪಡೆ ಮಾಡಲು ಅನುಕೂಲವಾಗುತ್ತದೆ.

5.4 ದಶಲಕ್ಷಕ್ಕೂ ಅಧಿಕ ಪದಗಳನ್ನು ಭಾಷಾಂತರ

5.4 ದಶಲಕ್ಷಕ್ಕೂ ಅಧಿಕ ಪದಗಳನ್ನು ಭಾಷಾಂತರ

ಭಾಷಿಕರ ಅಧ್ಯಯನದಲ್ಲಿ ಸೇಲಂ, ವಿಶಾಖಪಟ್ಟಣ ಮತ್ತು ಮೈಸೂರು ನಗರಗಳ ಜನರನ್ನು ಭಾಗಿದಾರರನ್ನಾಗಿಸಲಾಗಿತ್ತು. ಇಂತಹ ಸಭೆಗಳಲ್ಲಿ ಭಾಷೆ ಬಳಕೆ ಬಗ್ಗೆ ವ್ಯಕ್ತವಾದ ವೈವಿಧ್ಯಮಯ ಅಭಿಪ್ರಾಯಗಳನ್ನು ಸಂಗ್ರಹಿಸಿ ಕಾರ್ಯರೂಪಕ್ಕೆ ತರಲು ನೆರವಾದವು. ಉತ್ಪನ್ನಗಳ ವಿಶೇಷಣಗಳು, ಬ್ಯಾನರ್ ಗಳು ಮತ್ತು ಪಾವತಿ ಪುಟಗಳು ಸೇರಿದಂತೆ ಇನ್ನಿತರೆ ವಿಚಾರಗಳಿಗೆ ಸಂಬಂಧಿಸಿದಂತೆ ಮೂರು ಭಾಷೆಗಳಲ್ಲಿ 5.4 ದಶಲಕ್ಷಕ್ಕೂ ಅಧಿಕ ಪದಗಳನ್ನು ಭಾಷಾಂತರ ಮಾಡಲಾಗಿದೆ.

ಮೋದಿ ಕರೆಯಂತೆ ಮೇಡ್ ಇನ್ ಇಂಡಿಯಾ ಫರ್ನಿಚರ್: ಫ್ಲಿಪ್ ಕಾರ್ಟ್

ಹೊಸ ಭಾಷಾ ಸಂಪರ್ಕ ಸಾಧನಗಳು ಗ್ರಾಹಕರಿಗೆ ಶಾಪಿಂಗ್ ಅನ್ನು ಆಕರ್ಷಕವಾಗಿ ಮಾಡಲು ಪದಗಳ ಭಾಷಾಂತರ ಮತ್ತು ಲಿಪ್ಯಂತರದ ನ್ಯಾಯಯುತವಾದ ಮಿಶ್ರಣವನ್ನು ಬಳಸುತ್ತದೆ. ಇದು ತಮ್ಮದೇ ಆದ ಭಾಷೆಯಲ್ಲಿ ವೇದಿಕೆಯೊಂದಿಗೆ ಸಂವಹನ ನಡೆಸಲು ಮತ್ತು ಖರೀದಿ ನಿರ್ಧಾರಗಳ ಸ್ವಾತಂತ್ರ್ಯವನ್ನು ಉತ್ತೇಜಿಸುತ್ತದೆ. ಇದಕ್ಕೆ ಪೂರಕವಾಗಿ ವೇದಿಕೆಯನ್ನು ಅಭಿವೃದ್ಧಿಪಡಿಸಲು ತಂಡಕ್ಕೆ ನೆರವಾಗುವಂತಹ ಸಂಬಂಧಪಟ್ಟ ಒಳನೋಟಗಳನ್ನು ಪಡೆಯಲು ಹಲವಾರು ತಿಂಗಳ ಕಾಲ ಅಧ್ಯಯನ ನಡೆಸಿ ಅನುಷ್ಠಾನಕ್ಕೆ ತರಲಾಗಿದೆ.

2 ನೇ ಹಂತದ ನಗರಗಳ ಗ್ರಾಹಕರಿಗೆ ನೆರವು

2 ನೇ ಹಂತದ ನಗರಗಳ ಗ್ರಾಹಕರಿಗೆ ನೆರವು

ಇಂದು ಶೇ.58 ರಷ್ಟು ನಮ್ಮ ಗ್ರಾಹಕರು 2 ನೇ ಹಂತದ ನಗರಗಳಿಗೆ ಸೇರಿದವರಾಗಿದ್ದಾರೆ. ತಮಿಳು, ತೆಲುಗು ಮತ್ತು ಕನ್ನಡವನ್ನು ಹೊಸದಾಗಿ ಸೇರ್ಪಡೆ ಮಾಡಿರುವುದರಿಂದ ಸರಳ ಮತ್ತು ಹೆಚ್ಚು ವೈಯಕ್ತಿಕಗೊಳಿಸುವುದರೊಂದಿಗೆ ಬಳಕೆದಾರರ ಇ-ಕಾಮರ್ಸ್ ಜರ್ನಿಯನ್ನು ಸುಧಾರಣೆ ಮಾಡಲಿದೆ ಎಂದು ಫ್ಲಿಪ್ ಕಾರ್ಟ್ ನ ಚೀಫ್ ಪ್ರಾಡಕ್ಟ್ ಅಂಡ್ ಟೆಕ್ನಾಲಜಿ ಆಫೀಸರ್ ಜಯೇಂದ್ರನ್ ವೇಣುಗೋಪಾಲ್ ಹೇಳಿದರು. 9 ತಿಂಗಳ ಹಿಂದೆ ಹಿಂದಿಯನ್ನು ಪರಿಚಯಿಸಿದ ಬೆನ್ನಲ್ಲೇ ಫ್ಲಿಪ್ ಕಾರ್ಟ್ ನಲ್ಲಿ ಮೂರು ಹೊಸ ಭಾಷೆಗಳನ್ನು ಸೇರಿಸಲಾಗಿದೆ. ಫ್ಲಿಪ್ ಕಾರ್ಟ್ ನ ಇಂಜಿನಿಯರ್ ಗಳು ಯುಐ ಮತ್ತು ಪ್ಲಾಟ್ ಫಾರ್ಮ್ ಆರ್ಕಿಟೆಕ್ಚರ್ ಗೆ ಸಂಬಂಧಿಸಿದ ಬಹು ತಾಂತ್ರಿಕ ಸವಾಲುಗಳನ್ನು ಬಗೆಹರಿಸುವಲ್ಲಿ ಶ್ರಮಿಸಿದ್ದಾರೆ.

ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಮಾತನಾಡಿ

ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಮಾತನಾಡಿ

ಫ್ಲಿಪ್ ಕಾರ್ಟ್ ಗ್ರೂಪ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಲ್ಯಾಣ್ ಕೃಷ್ಣಮೂರ್ತಿ ಅವರು ಮಾತನಾಡಿ, ''ಈ ಹಿಂದಿನ ವರ್ಷದಲ್ಲಿ ನಾವು ಲಕ್ಷಾಂತರ ಗ್ರಾಹಕರನ್ನು ಇ-ಕಾಮರ್ಸ್ ಸೇರ್ಪಡೆಗೆಂದು ವಾಯ್ಸ್, ವಿಡಿಯೋ ಮತ್ತು ಸರಳ ಭಾಷೆಗೆ ಸಂಬಂಧಿಸಿದ ಬಹು ಪರಿಹಾರಗಳನ್ನು ಪರಿಚಯಿಸಿದ್ದೇವೆ. ಭಾಷೆಯ ತೊಡಕನ್ನು ಉತ್ತಮ ರೀತಿಯಲ್ಲಿ ನಿವಾರಣೆ ಮಾಡಿದಲ್ಲಿ ತಲುಪದೇ ಇರುವ ಲಕ್ಷಾಂತರ ಗ್ರಾಹಕರನ್ನು ತಲುಪಲು ಸಾಕಷ್ಟು ಅವಕಾಶವನ್ನು ಹೊಂದಬಹುದೆಂಬ ವಿಶ್ವಾಸವನ್ನು ಹೊಂದಿದ್ದೇವೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಜತೆಯಲ್ಲಿ ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳನ್ನು ಪರಿಚಯಿಸುತ್ತಿರುವುದು ಒಂದು ಉತ್ತಮ ಹೆಜ್ಜೆಯಾಗಿದೆ. ಈ ಮೂಲಕ ಇ-ಕಾಮರ್ಸ್ ಅನ್ನು ಪ್ರಜಾಸತ್ತಾತ್ಮಕದೆಡೆಗೆ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದೇವೆ'' ಎಂದು ತಿಳಿಸಿದರು.

English summary
Walmart-owned Indian ecommerce company Flipkart has rolled out Kannada, Telugu, and Tamil languages support in its mobile application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more