ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ದಿನ 700 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಣೆ

|
Google Oneindia Kannada News

ಬೆಂಗಳೂರು, ಸೆ.10: ದೇಶದ ಅತಿದೊಡ್ಡ ಇ-ಕಾಮರ್ಸ್ ಮಾರ್ಕೆಟ್‍ಪ್ಲೇಸ್ ಆಗಿರುವ ಫ್ಲಿಪ್‍ಕಾರ್ಟ್ ದೇಶಾದ್ಯಂತ 27,000 ಕಿರಾಣಿ ಅಂಗಡಿಗಳನ್ನು ತನ್ನ ಪೂರೈಕೆ ಜಾಲದಲ್ಲಿ ಸೇರ್ಪಡೆ ಮಾಡಿಕೊಂಡಿರುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ಮುಂಬರುವ ಹಬ್ಬದ ಸಂದರ್ಭದಲ್ಲಿ, ಬಿಗ್ ಬಿಲಿಯನ್ ದಿನಗಳಲ್ಲಿ ಇನ್ನೂ ಹೆಚ್ಚಿನ ಗ್ರಾಹಕರನ್ನು ತಲುಪಲು ಸಾಧ್ಯವಾಗಲಿದೆ.

ಹಾಲಿ ಇರುವ 160 ದಶಲಕ್ಷ ಗ್ರಾಹಕರಿಗೆ ವ್ಯಕ್ತಿಗತವಾದ ಇ-ಕಾಮರ್ಸ್ ಅನುಭವದ ಮಟ್ಟವನ್ನು ಹೆಚ್ಚಿಸುವುದರ ಜತೆಗೆ ಹೊಸ ಹೊಸ ಪ್ರದೇಶಗಳಿಗೆ ಮತ್ತು ಗ್ರಾಹಕರನ್ನು ತಲುಪುವುದು ಹಾಗೂ ಕಿರಾಣಗಳಿಗೆ ತಮ್ಮ ಆದಾಯವನ್ನು ಹೆಚ್ಚಿಸುವಂತೆ ಮಾಡಲು ಇದರಿಂದ ಸಾಧ್ಯವಾಗುತ್ತದೆ.

2 ಮತ್ತು 3 ನೇ ಹಂತದ ಪಟ್ಟಣಗಳಲ್ಲಿ ಸೇವೆ ಆರಂಭಿಸಿದ ಫ್ಲಿಪ್‍ಕಾರ್ಟ್2 ಮತ್ತು 3 ನೇ ಹಂತದ ಪಟ್ಟಣಗಳಲ್ಲಿ ಸೇವೆ ಆರಂಭಿಸಿದ ಫ್ಲಿಪ್‍ಕಾರ್ಟ್

ಕಿರಾಣಗಳನ್ನು ಪೂರೈಕೆ ಜಾಲಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಆರು ತಿಂಗಳ ಹಿಂದೆ ಆರಂಭ ಮಾಡಲಾಗಿತ್ತು. ದೊಡ್ಡ ಮಟ್ಟದಲ್ಲಿ ಹಬ್ಬದ ಸೀಸನ್ ಬುರತ್ತಿರುವ ಹಿನ್ನೆಲೆಯಲ್ಲಿ ಮಾರಾಟ ಮತ್ತಯ ವಿತರಣಾ ಜಾಲವನ್ನು ಮತ್ತಷ್ಟು ವಿಸ್ತರಣೆ ಮಾಡುವುದು ಹಾಗೂ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು.

ಇದಕ್ಕೆ ಪ್ರಮುಖ ಕಾರಣ ದೇಶಾದ್ಯಂತ ಮೂಲೆ ಮೂಲೆಗಳಿಂದ ಗ್ರಾಹಕರಿಂದ ಬೇಡಿಕೆ ಹೆಚ್ಚಾದದ್ದು ಮತ್ತು ನಮ್ಮ ಕಿರಾಣ ಪಾಲುದಾರರ ವ್ಯವಹಾರ ವೃದ್ಧಿಯಾದದ್ದಾಗಿದೆ. ಮೃದು ಕೌಶಲ್ಯಗಳನ್ನು ಹೇಳಿಕೊಡುವುದು ಮತ್ತು ಗ್ರಾಹಕರಿಂದ ಬರುವ ವಿಚಾರಣೆಗಳನ್ನು ನಿಭಾಯಿಸುವ ಬಗೆ ಹೇಗೆ ಅಥವಾ ಸ್ಥಳದಲ್ಲಿಯೇ ಮನವಿಗಳನ್ನು ನಿಭಾಯಿಸುವ ಬಗೆಯ ಬಗ್ಗೆ ಸೂಕ್ತ ಕಸ್ಟಮೈಸ್ಡ್ ತರಬೇತಿ ನೀಡುವ ಕಾರ್ಯಕ್ರಮವನ್ನು ಫ್ಲಿಪ್‍ಕಾರ್ಟ್ ಕಿರಾಣ ಪಾಲುದಾರರಿಗೆ ಆರಂಭಿಸಿದೆ.

 2 ಮತ್ತು 3 ನೇ ಹಂತದ ಪಟ್ಟಣಗಳಲ್ಲಿ ಬಿಗ್ ಬಿಲಿಯನ್ ದಿನ

2 ಮತ್ತು 3 ನೇ ಹಂತದ ಪಟ್ಟಣಗಳಲ್ಲಿ ಬಿಗ್ ಬಿಲಿಯನ್ ದಿನ

ಫ್ಲಿಪ್‍ಕಾರ್ಟ್ ಈಗಾಗಲೇ ದೊಡ್ಡ ಮಟ್ಟದ ಪೂರೈಕೆ ಜಾಲವನ್ನು ಹೊಂದಿದ್ದು, ಪ್ರಸ್ತುತ 1 ದಶಲಕ್ಷಕ್ಕೂ ಅಧಿಕ ಶಿಪ್‍ಮೆಂಟ್‍ಗಳನ್ನು ಪ್ರತಿದಿನ ವಿತರಣೆ ಮಾಡುತ್ತಿದೆ. ಈ ಪ್ರಕ್ರಿಯೆ ದೇಶದ ಎಲ್ಲಾ ಭಾಗಗಳಲ್ಲಿಯೂ ನಡೆಯುತ್ತಿದೆ. ಇದೀಗ 27,000 ಹೆಚ್ಚುವರಿ ಕಿರಾಣಗಳ ಮೂಲಕ ಫ್ಲಿಪ್‍ಕಾರ್ಟ್ ತನ್ನ ಗ್ರಾಹಕರ ಅನುಭವವನ್ನು ಮೇಲ್ಮಟ್ಟಕ್ಕೆ ಹೆಚ್ಚಿಸುವುದಷ್ಟೇ ಅಲ್ಲ, ವಿಶೇಷವಾಗಿ 2 ಮತ್ತು 3 ನೇ ಹಂತದ ಪಟ್ಟಣಗಳಲ್ಲಿ ಬಿಗ್ ಬಿಲಿಯನ್ ದಿನಗಳಲ್ಲಿ ಲಕ್ಷಾಂತರ ಹೆಚ್ಚುವರಿ ವಿತರಣೆಗಳನ್ನು ಮಾಡಲಿದೆ. ಇದರಿಂದಾಗಿ ಕಿರಾಣ ಪಾಲುದಾರರ ಆದಾಯವನ್ನು ಹೆಚ್ಚಿಸಲು ಸಾಧ್ಯವಾಗಲಿದೆ.

 'ಅಲೋಕೇಶನ್ ಇಂಜಿನ್’ ಎಂಬ ತಂತ್ರಜ್ಞಾನ

'ಅಲೋಕೇಶನ್ ಇಂಜಿನ್’ ಎಂಬ ತಂತ್ರಜ್ಞಾನ

ವಿತರಣಾ ಪ್ರಕ್ರಿಯೆಯಲ್ಲಿ ಕಿರಾಣಿಗಳನ್ನು ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಫ್ಲಿಪ್‍ಕಾರ್ಟ್ 'ಅಲೋಕೇಶನ್ ಇಂಜಿನ್' ಎಂಬ ತಂತ್ರಜ್ಞಾನ ಪರಿಹಾರವನ್ನು ಅಭಿವೃದ್ಧಿಪಡಿಸಿದೆ. ಇದು ಶಿಪ್‍ಮೆಂಟ್‍ಗಳನ್ನು ನಿಗದಿಪಡಿಸಲು ವಿಶೇಷವಾಗಿ ಕಿರಾಣಗಳಿಗೆ ನೆರವಾಗಲಿದೆ. ಹಬ್ಬದ ಸಂದರ್ಭದಲ್ಲಿ ಹೆಚ್ಚಳವಾಗುವ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸಲು ಪ್ರಮುಖ ಪಾತ್ರ ವಹಿಸಲಿದೆ ಮತ್ತು ಗ್ರಾಹಕರ ಆದ್ಯತೆ ಆದ್ಯತೆ ಆಧಾರದಲ್ಲಿ ಉತ್ಪನ್ನಗಳನ್ನು ಹೈಸ್ಪೀಡ್‍ನಲ್ಲಿ ವಿತರಣೆ ಮಾಡಲು ನೆರವಾಗಲಿದೆ.

ಪ್ಲಾಸ್ಟಿಕ್ ಬಳಕೆ ನಿರ್ಮೂಲನೆಯತ್ತ ಫ್ಲಿಪ್‍ಕಾರ್ಟ್ ದಾಪುಗಾಲುಪ್ಲಾಸ್ಟಿಕ್ ಬಳಕೆ ನಿರ್ಮೂಲನೆಯತ್ತ ಫ್ಲಿಪ್‍ಕಾರ್ಟ್ ದಾಪುಗಾಲು

 ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಮಾತನಾಡಿ

ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಮಾತನಾಡಿ

ಫ್ಲಿಪ್‍ಕಾರ್ಟ್ ಗ್ರೂಪ್‍ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿಈ ಬಗ್ಗೆ ಮಾತನಾಡಿ,"ಹಬ್ಬದ ಸಂದರ್ಭ ಮತ್ತು ಬಿಗ್ ಬಿಲಿಯನ್ ದಿನಗಳ ಸಂದರ್ಭದಲ್ಲಿ ಸೇರ್ಪಡೆ ಮತ್ತು ಲಭ್ಯತೆಯ ತತ್ತ್ವಗಳ ಮಟ್ಟವನ್ನು ಮತ್ತಷ್ಟು ಹೆಚ್ಚಿಸುವ ಅದ್ಭುತ ಅವಕಾಶವನ್ನು ಒದಗಿಸುತ್ತದೆ. ಭಾರತದಲ್ಲಿ ಕಿರಾಣವು ಅತ್ಯಂತ ಹಳೆಯ ಮತ್ತು ವಿಸ್ತಾರವಾದ ರೀಟೇಲ್ ಮಾದರಿಯ ವ್ಯವಹಾರವಾಗಿದೆ. ನಾವು ಕಟ್ಟಕಡೆಯ ಪಾಲುದಾರರನ್ನು ನಮ್ಮ ಜಾಲಕ್ಕೆ ಸೇರಿಸಿಕೊಳ್ಳುವ ಮೂಲಕ ಅವರ ಆದಾಯ ಮಟ್ಟವನ್ನು ಹೆಚ್ಚಿಸಲು ನೆರವಾಗಲಿದ್ದೇವೆ. ಡಿಜಿಟಲ್ ಪೇಮೆಂಟ್ ವ್ಯವಸ್ಥೆಯ ನಂತರ ಇದೀಗ ಕಿರಾಣವು ಇ-ಕಾಮರ್ಸ್ ಕ್ಷೇತ್ರದಲ್ಲಿ ಒಂದು ದೊಡ್ಡ ಕ್ರಾಂತಿಯಾಗುತ್ತಿದೆ. ಇ-ಕಾಮರ್ಸ್ ದೃಷ್ಟಿಕೋನದಿಂದ ನೋಡುವುದಾದರೆ ಕಿರಾಣ ಮಳಿಗೆಗಳು ಅನುಕೂಲಕರವಾದ ಮರುಸ್ಥಾನವನ್ನು ಪಡೆಯುತ್ತಿವೆ. ಏಕೆಂದರೆ, ಫ್ಲಿಪ್‍ಕಾರ್ಟ್ ವಿತರಣೆ ಜಾಲದಲ್ಲಿ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಕಿರಾಣಗಳಿಗೆ ಹೊಸ ಬಗೆಯ ಆದಾಯವನ್ನು ತಂದುಕೊಡಲಾಗುತ್ತಿದೆ" ಎಂದು ಅಭಿಪ್ರಾಯಪಟ್ಟರು.

 ಲಕ್ಷಾಂತರ ಮಾರಾಟಗಾರರಿಗೆ ನೆರವಾಗಲಿದೆ.

ಲಕ್ಷಾಂತರ ಮಾರಾಟಗಾರರಿಗೆ ನೆರವಾಗಲಿದೆ.

ಕಿರಾಣಗಳನ್ನು ಸೇರ್ಪಡೆ ಮಾಡಿಕೊಂಡಿರುವುದರಿಂದ ನಿರ್ಣಾಯಕವಾಗಿರುವ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಮಾರಾಟಗಾರರಿಗೆ ನೆರವಾಗಲಿದೆ. ಈ ವಿಸ್ತರಣೆಯಿಂದಾಗಿ ದೇಶಾದ್ಯಂತ ಮಾರುಕಟ್ಟೆಯನ್ನು ತಲುಪಲು ಸಾಧ್ಯವಾಗುತ್ತದೆ. ಸೌಲಭ್ಯಗಳು, ಮಧ್ಯಸ್ಥಿಕೆ, ಮಾಹಿತಿ, ಸೋರ್ಸಿಂಗ್ ಮತ್ತು ದರ ಸೇರಿದಂತೆ ಇನ್ನಿತರೆ ವಿಚಾರಗಳಲ್ಲಿ ಗ್ರಾಹಕರೊಂದಿಗೆ ದೀರ್ಘಕಾಲೀನ ಸಂಬಂಧ ವೃದ್ಧಿಗೆ ಈ ಸಪ್ಲೈ ಚೇನ್ ನೆರವಾಗಲಿದೆ. ಅಲ್ಲದೇ ಕಿರಾಣಗಳು ಕಟ್ಟಕಡೆಯ ಗ್ರಾಹಕರನ್ನು ಪರಿಣಾಮಕಾರಿಯಾಗಿ ತಲುಪಲು ಸಾಧ್ಯವಾಗುತ್ತದೆ.

ಫ್ಲಿಪ್‍ಕಾರ್ಟ್ ಒಂದು ಸಮೂಹವಾಗಿದ್ದು ಎಲ್ಲಾ ಪಾಲುದಾರರಿಗೆ ಪ್ರಗತಿ ಹೊಂದಲು ಪೂರಕವಾದ ಅತ್ಯುತ್ತಮವಾದ ಇ-ಕಾಮರ್ಸ್ ಅನುಭವವನ್ನು ನೀಡಲಿದೆ. ಮಿಂತ್ರಾದ ಮೆನ್ಸಾ ನೆಟ್‍ವರ್ಕ್ ಕಾರ್ಯಕ್ರಮದಡಿ ಕಿರಾಣ ಜಾಲವನ್ನು ಮೊದಲ ಬಾರಿಗೆ ಆರಂಭಿಸಿತ್ತು. ಎಲ್ಲಾ ಮೆಟ್ರೋಗಳು ಮತ್ತು 2 ನೇ ಹಂತದ ನಗರಗಳಲ್ಲಿ 12000 ಕ್ಕೂ ಅಧಿಕ ಕಿರಾಣಗಳನ್ನು ಹೊಂದಿದೆ.

English summary
Flipkart on Monday announced the onboarding of nearly 27,000 kirana shops across 700 cities to its pan-India supply chain, helping it reach out to millions of new consumers during the upcoming festive event, the Big Billion Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X