ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್‌ಕಾರ್ಟ್‌ನಿಂದ ಕ್ಲಿಯರ್‌ಟ್ರಿಪ್ ಶೇ.100 ರಷ್ಟು ಸ್ವಾಧೀನ

|
Google Oneindia Kannada News

ಬೆಂಗಳೂರು, ಏಪ್ರಿಲ್ 15: ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಸಂಸ್ಥೆ ಫ್ಲಿಪ್ ಕಾರ್ಟ್ ಇಂದು ದೇಶದ ಪ್ರಮುಖ ಆನ್ ಲೈನ್ ಟ್ರಾವೆಲ್ ಟೆಕ್ನಾಲಜಿ ಕಂಪನಿಯಾಗಿರುವ ಕ್ಲಿಯರ್‌ಟ್ರಿಪ್ ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ.

ಕ್ಲಿಯರ್‌ಟ್ರಿಪ್‌ನ ಶೇ.100 ರಷ್ಟು ಷೇರುಗಳನ್ನು ಫ್ಲಿಪ್‌ಕಾರ್ಟ್‌ ಪಡೆದುಕೊಳ್ಳಲಿದೆ. ಈ ಮೂಲಕ ಕಂಪನಿಯು ಇನ್ನಷ್ಟು ಬಂಡವಾಳ ಹೂಡಿಕೆ ಮಾಡುವುದರೊಂದಿಗೆ ತನ್ನ ಡಿಜಿಟಲ್ ಕಾಮರ್ಸ್ ವಿಭಾಗವನ್ನು ಮತ್ತಷ್ಟು ಮೇಲ್ಮಟ್ಟಕ್ಕೆ ಏರಿಸಲಿದೆ ಹಾಗೂ ಗ್ರಾಹಕರಿಗೆ ಉತ್ತಮ ರೀತಿಯ ಸೇವೆಗಳನ್ನು ನೀಡಲಿದೆ ಎಂದು ಸಂಸ್ಥೆ ಹೇಳಿದೆ. ಈ ಒಪ್ಪಂದವು ಎಲ್ಲಾ ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ.

ಒಪ್ಪಂದದ ಪ್ರಕಾರ ಕ್ಲಿಯರ್‌ಟ್ರಿಪ್ ಅನ್ನು ಫ್ಲಿಪ್‌ಕಾರ್ಟ್‌ ಸ್ವಾಧೀನಪಡಿಸಿಕೊಳ್ಳಲಿದೆ ಮತ್ತು ಕ್ಲಿಯರ್‌ಟ್ರಿಪ್ ಪ್ರತ್ಯೇಕ ಬ್ರ್ಯಾಂಡ್ ಆಗಿ ಕಾರ್ಯನಿರ್ವಹಣೆ ಮಾಡಲಿದೆ. ಅಲ್ಲದೇ, ಎಲ್ಲಾ ಸಿಬ್ಬಂದಿಯನ್ನು ಹಾಗೆಯೇ ಉಳಿಸಿಕೊಂಡು ಫ್ಲಿಪ್‌ಕಾರ್ಟ್‌ ಜತೆಯಲ್ಲಿ ಸೇರಿಕೊಂಡು ಗ್ರಾಹಕರ ಪ್ರಯಾಣವನ್ನು ಸರಳ ಮತ್ತು ಆರಾಮದಾಯಕವಾಗುವಂತೆ ಮಾಡುವ ನಿಟ್ಟಿನಲ್ಲಿ ತಂತ್ರಜ್ಞಾನ ಪರಿಹಾರಗಳನ್ನು ಕಂಡುಕೊಳ್ಳಲಿದೆ.

Flipkart acquires Cleartrip online travel segment

ಫ್ಲಿಪ್‌ಕಾರ್ಟ್‌ ಗ್ರೂಪ್‌ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅವರು ಈ ಸ್ವಾಧೀನದ ಬಗ್ಗೆ ಮಾತನಾಡಿ, ''ಡಿಜಿಟಲ್ ಕಾಮರ್ಸ್ ಮೂಲಕ ಗ್ರಾಹಕರ ಅನುಭವವನ್ನು ರೂಪಾಂತರಗೊಳಿಸಲು ಫ್ಲಿಪ್‌ಕಾರ್ಟ್‌ ಗ್ರೂಪ್ ಬದ್ಧವಾಗಿದೆ. ಕ್ಲಿಯರ್‌ಟ್ರಿಪ್ ಅನೇಕ ಗ್ರಾಹಕರ ಪ್ರಯಾಣದ ಸಂಗಾತಿಯಾಗಿದೆ ಹಾಗೂ ನಾವು ಬೆಳವಣಿಗೆಯ ಹೊಸ ಕ್ಷೇತ್ರಗಳನ್ನು ವೈವಿಧ್ಯಮಯಗೊಳಿಸುವತ್ತ ಗಮನಹರಿಸಲಿದ್ದೇವೆ. ಕ್ಲಿಯರ್‌ಟ್ರಿಪ್ ತಂಡವನ್ನು ಅವರ ಉತ್ತಮವಾದ ಉದ್ಯಮ ಜ್ಞಾನ ಮತ್ತು ತಂತ್ರಜ್ಞಾನ ಸಾಮರ್ಥ್ಯಗಳೊಂದಿಗೆ ಫ್ಲಿಪ್‌ಕಾರ್ಟ್‌ ಸಮೂಹಕ್ಕೆ ಸ್ವಾಗತವನ್ನು ಕೋರುತ್ತೇವೆ. ಈ ಮೂಲಕ ನಾವು ಒಟ್ಟಾಗಿ ಸೇರಿ ಗ್ರಾಹಕರಿಗೆ ಮೌಲ್ಯಯುತವಾದ ಸೇವೆಗಳು ಮತ್ತು ಅನುಭವವಗಳನ್ನು ನೀಡಲಿದ್ದೇವೆ'' ಎಂದರು.

ಕ್ಲಿಯರ್ ಟ್ರಿಪ್ ನ ಸಿಇಒ ಮತ್ತು ಸಹ-ಸಂಸ್ಥಾಪಕ ಸ್ಟುವರ್ಟ್ ಕ್ರಿಗ್ಟನ್ ಅವರು ಮಾತನಾಡಿ, ''ಕ್ಲಿಯರ್‌ಟ್ರಿಪ್ ನಮ್ಮ ಗ್ರಾಹಕರಿಗೆ ಪ್ರಯಾಣದ ಅನುಭವವನ್ನು ಸರಳೀಕರಣಗೊಳಿಸಲು ತಂತ್ರಜ್ಞಾನವನ್ನು ಬಂಡವಾಳ ಮಾಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಈ ಉತ್ಪನ್ನಚಾಲಿತ ಆದ್ಯತೆಯು ಈ ಕ್ಷೇತ್ರದ ವ್ಯಾಪಕ ಶ್ರೇಣಿಯ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ಆಯ್ಕೆಯ ಆದ್ಯತೆಯ ಪ್ರಯಾಣದ ಪಾಲುದಾರರಾಗಲು ನಮಗೆ ಸಹಾಯ ಮಾಡುತ್ತಿದೆ. ನಾವು ಫ್ಲಿಪ್‌ಕಾರ್ಟ್‌ ಕುಟುಂಬಕ್ಕೆ ಸೇರಿಕೊಳ್ಳಲು ನಮಗೆ ಸಂತಸವೆನಿಸುತ್ತಿದೆ. ಈ ಸಹಯೋಗವು ನಮ್ಮ ಗ್ರಾಹಕರಿಗೆ ಮತ್ತು ಸಾಮಾನ್ಯವಾಗಿ ಪ್ರವಾಸೋದ್ಯಮಕ್ಕೆ ಉಂಟು ಮಾಡುವ ಸಕಾರಾತ್ಮಕ ಪರಿಣಾಮದ ಬಗ್ಗೆ ಉತ್ಸುಕರಾಗಿದ್ದಾರೆ'' ಎಂದು ತಿಳಿಸಿದರು.

English summary
Walmart-backed Flipkart announces acquisition of 100% stake in Cleartrip, online travel segment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X