ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕಳೆದ 5 ವರ್ಷದಲ್ಲಿ 5 ವಾಹನ ಕಂಪನಿಗಳ ಕಾರ್ಯಾಚರಣೆ ಸ್ಥಗಿತ

|
Google Oneindia Kannada News

ನವದೆಹಲಿ, ಫೆಬ್ರವರಿ 10: ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಐದು ವಾಹನ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದೆ.

ಮ್ಯಾನ್ ಟ್ರಕ್ಸ್, ಜನರಲ್ ಮೋಟಾರ್ಸ್ ಮತ್ತು ಹಾರ್ಲೆ ಡೇವಿಡ್ಸನ್ ಭಾರತದಲ್ಲಿ ತಮ್ಮ ಕಾರ್ಯಾಚರಣೆಯನ್ನು ಮುಚ್ಚಿದ ಅಥವಾ ಕಡಿಮೆಗೊಳಿಸಿದ ಕಂಪನಿಗಳಲ್ಲಿ ಸೇರಿವೆ.

ಮಹೀಂದ್ರಾ ಕಾರುಗಳಿಗೆ ರಿಯಾಯಿತಿ: 80,000 ರೂ. ಉಳಿಸುವ ಅವಕಾಶಮಹೀಂದ್ರಾ ಕಾರುಗಳಿಗೆ ರಿಯಾಯಿತಿ: 80,000 ರೂ. ಉಳಿಸುವ ಅವಕಾಶ

''ಸಿಯಾಮ್‌ನಿಂದ ಪಡೆದ ಮಾಹಿತಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಈ ಕೆಳಗಿನ ವಾಹನ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಮುಚ್ಚಿವೆ: 1) ಮ್ಯಾನ್ ಟ್ರಕ್ಸ್ 2) ಜನರಲ್ ಮೋಟಾರ್ಸ್‌ 3) ಹಾರ್ಲೆ ಡೇವಿಡ್ಸನ್ 4) ಯುಎಂ ಮೋಟರ್ ಸೈಕಲ್ಸ್ 5) ಹೋಂಡಾ ಕಾರುಗಳು'' ಎಂದು ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಪ್ರಕಾಶ್ ಜಾವಡೇಕರ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

Five Auto Companies Shut Shop In India In Last Five Years

ಹೆಚ್ಚಿನ ತೆರಿಗೆಯಿಂದಾಗಿ ಕಂಪನಿಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ ಎಂಬ ವರದಿಗಳ ಬಗ್ಗೆ ಸರ್ಕಾರಕ್ಕೆ ತಿಳಿದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಂತಹ ಯಾವುದೇ ವಿಷಯ ವರದಿಯಾಗಿಲ್ಲ ಎಂದಿದ್ದಾರೆ.

ಜನರಲ್ ಮೋಟಾರ್ಸ್ ತನ್ನ ಕಾರು ಉತ್ಪಾದನಾ ಘಟಕವನ್ನು ಮಹಾರಾಷ್ಟ್ರದಲ್ಲಿ ಸ್ಥಗಿತಗೊಳಿಸಿದರೆ, ಹೋಂಡಾ ಕಾರ್ಸ್ ಉತ್ತರಪ್ರದೇಶದಲ್ಲಿ ಉತ್ಪಾದನೆ ಸ್ಥಗಿತಗೊಳಿಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಹಾರ್ಲೆ ಡೇವಿಡ್ಸನ್ ಭಾರತದಲ್ಲಿ ತನ್ನ ಮಾರಾಟ ಮತ್ತು ಉತ್ಪಾದನಾ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಘೋಷಿಸಿತು.

English summary
In the last five years, five automobile companies have shut their operations in the country, the government informed the Lok Sabha on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X