ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮತ್ತೊಂದು ಸುತ್ತಿನಲ್ಲಿ ಪರಿಹಾರ ಪ್ಯಾಕೇಜ್ ಘೋಷಿಸಬಹುದು: ಫಿಚ್

|
Google Oneindia Kannada News

ನವದೆಹಲಿ, ಜೂನ್ 22: ರೇಟಿಂಗ್ ಏಜೆನ್ಸಿ ಫಿಚ್ ರೇಟಿಂಗ್ಸ್ ಪ್ರಕಾರ, ಮುಂಬರುವ ತಿಂಗಳುಗಳಲ್ಲಿ ಕೇಂದ್ರ ಸರ್ಕಾರವು ಮತ್ತೊಂದು ಪರಿಹಾರ ಪ್ಯಾಕೇಜ್ ಅನ್ನು ಪ್ರಕಟಿಸಬಹುದು, ಇದು ಜಿಡಿಪಿಯ ಶೇಕಡಾ 1 ರಷ್ಟಿರಬಹುದು ಎಂದು ಹೇಳಿದೆ.

Recommended Video

Petrol ,diesel price increased for the 16th consecutive day | Oneindia Kannada

ಕಳೆದ ವಾರ ಭಾರತದ ಸಾರ್ವಭೌಮ ರೇಟಿಂಗ್ ದೃಷ್ಟಿಕೋನವನ್ನು ಋಣಾತ್ಮಕವಾಗಿ ತಿರುಗಿಸಿರುವ ಫಿಚ್, ಮತ್ತೊಂದು ಪರಿಹಾರ ಪ್ಯಾಕೇಜ್ ಅನ್ನು ಸಹ ಪರಿಗಣನೆಗೆ ತೆಗೆದುಕೊಂಡಿದೆ ಎಂದು ಹೇಳಿದೆ. ಫಿಚ್ ನಿರ್ದೇಶಕ ಥಾಮಸ್ ರುಕ್ಮೇಕರ್ ಅವರು ಭಾರತದಲ್ಲಿ ಇನ್ನೂ ಕೊರೊನಾವೈರಸ್ ಪ್ರಭಾವ ಹೆಚ್ಚಿದೆ ಮತ್ತು ಆರ್ಥಿಕತೆಯನ್ನು ಬೆಂಬಲಿಸಲು ಸರ್ಕಾರವು ಹಣಕಾಸಿನ ಕ್ರಮಗಳಿಗಾಗಿ ಸ್ವಲ್ಪ ಹೆಚ್ಚು ಖರ್ಚು ಮಾಡಬೇಕಾಗುತ್ತದೆ ಎಂದು "ಸಾಕಷ್ಟು ಸಾಮರ್ಥ್ಯವಿದೆ" ಎಂದು ಹೇಳಿದರು.

ಅನಿಶ್ಚಿತ ಸ್ಥಿತಿಯಲ್ಲಿದೆ ಭಾರತದ ಆರ್ಥಿಕತೆ: ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣ್ಯಂಅನಿಶ್ಚಿತ ಸ್ಥಿತಿಯಲ್ಲಿದೆ ಭಾರತದ ಆರ್ಥಿಕತೆ: ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣ್ಯಂ

ನಾವು ಈ ಮೊದಲು ದೊಡ್ಡ ಪ್ಯಾಕೇಜ್ ಅನ್ನು ನಿರೀಕ್ಷಿಸಿದ್ದೇವೆ, ಆದರೆ ಜಿಡಿಪಿಯಲ್ಲಿ ಕೇವಲ 1 ಪರ್ಸೆಂಟ್‌ನಷ್ಟು ಮಾತ್ರ ಸರ್ಕಾರ ಘೋಷಿಸಿದೆ ಎಂದು ಅವರು ಹೇಳಿದರು. ಅವರ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಜಿಡಿಪಿಯ 10% ಗೆ ಸಮಾನವಾದ ಪ್ಯಾಕೇಜ್‌ನಲ್ಲಿನ 9% ಕ್ರಮಗಳು ಹಣಕಾಸಿನೇತರವಾಗಿವೆ.

Fitch Report: India Likely To Announces Another Round Of Fiscal Stimulus Package

ಬಾಂಡ್ ವಿತರಣೆ ಮತ್ತು ಸರ್ಕಾರದ ಸಾಲದ ಅವಶ್ಯಕತೆಗಳನ್ನು ಸಹ ಘೋಷಿಸಲಾಯಿತು, ಇದು ಜಿಡಿಪಿಯ 2 ಪರ್ಸೆಂಟ್‌ಗೆ ಸಮಾನವಾಗಿರುತ್ತದೆ. ಜಿಡಿಪಿಯ 1 ಪರ್ಸೆಂಟ್‌ಗೆ ಸಮನಾದ ಪ್ಯಾಕೇಜ್ ಅನ್ನು ಮತ್ತಷ್ಟು ತರಬಹುದು ಎಂಬ ಸೂಚನೆಯಾಗಿ ಇದನ್ನು ಪರಿಗಣಿಸಲಾಗಿದೆ. ಕಳೆದ ತಿಂಗಳು ಘೋಷಿಸಿದ 21 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್‌ನಲ್ಲಿ ಸರ್ಕಾರದ ಕ್ರಮಗಳು ಮತ್ತು ಆರ್‌ಬಿಐ ದ್ರವ್ಯತೆ ಸೇರಿದೆ.

ಕೇಂದ್ರ ಸರ್ಕಾರವು ಅಂದಾಜು ಒಟ್ಟು ಮಾರುಕಟ್ಟೆ ಸಾಲವನ್ನು 7.8 ಲಕ್ಷ ಕೋಟಿಯಿಂದ 12 ಲಕ್ಷ ಕೋಟಿಗೆ ಹೆಚ್ಚಿಸಿದೆ. ಅಂದರೆ ಈಗ ಸರ್ಕಾರ ಹೆಚ್ಚಿನ ಸಾಲ ತೆಗೆದುಕೊಳ್ಳುತ್ತದೆ.

ಭಾರತದ ವಿದೇಶಿ ವಿನಿಮಯ ಮೀಸಲು ದಾಖಲೆಯ ಏರಿಕೆ: 493.48 ಬಿಲಿಯನ್ ಡಾಲರ್ಭಾರತದ ವಿದೇಶಿ ವಿನಿಮಯ ಮೀಸಲು ದಾಖಲೆಯ ಏರಿಕೆ: 493.48 ಬಿಲಿಯನ್ ಡಾಲರ್

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯಲ್ಲಿ 5 ಪರ್ಸೆಂಟ್‌ರಷ್ಟು ಕುಸಿತವನ್ನು ಫಿಚ್ ಮುನ್ಸೂಚನೆ ನೀಡಿದೆ. ಆದರೆ ಮುಂದಿನ ಹಣಕಾಸು ವರ್ಷದಲ್ಲಿ ಇದು 9.5 ಪರ್ಸೆಂಟ್‌ರಷ್ಟು ಬೆಳೆಯುವ ನಿರೀಕ್ಷೆಯಿದೆ. ಕೊರೊನಾ ಸಾಂಕ್ರಾಮಿಕವು ವ್ಯವಹಾರಗಳು ಮತ್ತು ಹಣಕಾಸು ಕ್ಷೇತ್ರದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಫಿಚ್ ಹೇಳಿದೆ.

English summary
India is very likely to come out with another round of Fiscal Stimulus package, worth about 1 per cent of GDP in the coming months, Fitch Ratings said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X