ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗಿಗಳಿಗೆ ಚಿನ್ನದ ರೂಪದಲ್ಲಿ ಸಂಬಳ ಕೊಡಲಿದೆ ಈ ಕಂಪನಿ

|
Google Oneindia Kannada News

ಲಂಡನ್‌ ಮೇ 15: ಉದ್ಯೋಗಿಗಳಿಗೆ ಸಂಬಳವನ್ನು ನಗದು ರೂಪದಲ್ಲಿ ಪಾವತಿಸುವ ಬದಲಿಗೆ ಚಿನ್ನದ ರೂಪದಲ್ಲಿ ಪಾವತಿಸುವುದು ನಮಗೆ ಹಳೇ ಶಿಲಾಯುಗಕ್ಕೆ ಹೋದಂತೆ ಭಾಸವಾಗಬಹುದು. ಆದರೆ, ಯುನೈಟೆಡ್ ಕಿಂಗ್‌ಡಮ್‌ನ ರಾಜಧಾನಿ ಲಂಡನ್‌ನಲ್ಲಿರುವ ಫೈನಾನ್ಶಿಯಲ್‌ ಸರ್ವೀಸಸ್‌ ಕಂಪನಿಯೊಂದು ಈಗಿನ ಅಸ್ಥಿರ ಹಣಕಾಸಿನ ಪರಿಸ್ಥಿತಿಯಲ್ಲಿ ತಮ್ಮ ಉದ್ಯೋಗಿಗಳಲ್ಲಿ ಉಳಿತಾಯ ಮನೋಭಾವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರೋತ್ಸಾಹಿಸಲು ಚಿನ್ನದ ರೂಪದಲ್ಲಿ ಸಂಬಳವನ್ನು ಪಾವತಿಸಲು ಮುಂದಾಗಿದೆ.

'ಟ್ಯಾಲಿ ಮನಿ' ಎಂಬ ಸಂಸ್ಥೆಯು ತಮ್ಮ ಉದ್ಯೋಗಿಗಳಿಗೆ ಚಿನ್ನದ ರೂಪದಲ್ಲಿ ಸಂಬಳ ನೀಡಲು ಪ್ರಾಯೋಗಿಕವಾಗಿ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ನಗದು ರೂಪದಲ್ಲಿ ಸಂಬಳ ಪಾವತಿಸುವುದು ಹೆಚ್ಚು ಸಮಂಜಸವಲ್ಲ ಎಂದು ಕಂಪನಿಯ ಸಿಇಒ ಕೆಮೆರಾನ್‌ ಪರಿ ಅಭಿಪ್ರಾಯಪಟ್ಟಿದ್ದಾರೆ.

ಕಂಪನಿಯು ಕೇವಲ 20ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಹಾಗಾಗಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೆ ತರುವುದು ಅಷ್ಟು ಕಷ್ಟವಲ್ಲ. ಸದ್ಯ ಈಗ ಮೊದಲ ಹಂತದಲ್ಲಿ ಹಿರಿಯ ಉದ್ಯೋಗಿಗಳಿಗೆ ಪ್ರಾಯೋಗಿಕವಾಗಿ ಚಿನ್ನದ ರೂಪದಲ್ಲಿ ಸಂಬಳವನ್ನು ಪಾವತಿಸಲಾಗುತ್ತದೆ.

ಮುಂದಿನ ಹಂತದಲ್ಲಿ ಇದನ್ನು ಎಲ್ಲಾ ಉದ್ಯೋಗಿಗಳನ್ನು ವಿಸ್ತರಿಸುವ ಚಿಂತನೆಯಿದೆ. ಆದಾಗ್ಯೂ, ಚಿನ್ನದ ರೂಪದಲ್ಲಿ ಸಂಬಳವನ್ನು ಪಡೆಯುವುದು ಉದ್ಯೋಗಿಗಳ ಆಯ್ಕೆಯಾಗಿದೆ. ಅವರಿಗೆ ನಗದು ರೂಪದಲ್ಲೇ ಬೇಕೆಂದರೆ ಅವರು ಅದನ್ನೇ ಆಯ್ಕೆ ಮಾಡಲು ಸ್ವತಂತ್ರರು.

Financial Crisis: This company to pay salary in Gold instead of cash

ಚಿನ್ನದ ರೂಪದಲ್ಲಿ ಸಂಬಳ ಪಡೆಯುವುದು ಎಂದರೆ ಭೌತಿಕ ರೂಪದಲ್ಲಿ ಚಿನ್ನದ ನಾಣ್ಯಗಳನ್ನು ಪಡೆಯುವುದಲ್ಲ. ಬದಲಾಗಿ, ಅಂದಿನ ವಿನಿಮಯ ದರದಂತೆ ಚಿನ್ನವನ್ನು ಪೌಂಡ್‌ಗೆ ವಿನಿಮಯ ಮಾಡಿಕೊಂಡು ನಗದು ಪಡೆಯುವುದಾಗಿದೆ ಎಂದು ಕಂಪನಿ ತಿಳಿಸಿದೆ.

"ಯುನೈಟೆಡ್ ಕಿಂಗ್‌ಡಮ್‌ನ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ನಗದು ರೂಪದಲ್ಲಿ ಸಂಬಳ ಪಾವತಿಸುವುದು ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ. ಜೀವನ ನಿರ್ವಹಣೆ ವೆಚ್ಚ ಗಗನಕ್ಕೆ ಏರಿದೆ. ನಗದು ರೂಪದಲ್ಲಿ ಸಂಬಳ ನೀಡುವುದು ಗಾಯಕ್ಕೆ ಬ್ಯಾಂಡ್‌ ಏಡ್‌ ಹಾಕಿದಂತೆ,'' ಎಂದು 'ಟ್ಯಾಲಿ ಮನಿ' ಸಿಇಒ ಕೆಮೆರಾನ್‌ ಪರಿ ಅಭಿಪ್ರಾಯಪಡುತ್ತಾರೆ.

"ಚಿನ್ನವು ನಮ್ಮನ್ನು ಆರ್ಥಿಕ ದುಸ್ಥಿತಿಯಲ್ಲೂ ಕಾಪಾಡುವ ಸಾಧನವಾಗಿದೆ. ಸಹಸ್ರಮಾನಗಳಿಂದಲೂ ಅದು ತನ್ನ ಖರೀದಿ ಸಾಮರ್ಥ್ಯವನ್ನು ಉಳಿಸಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಪೌಂಡ್‌ ತನ್ನ ಮೌಲ್ಯ ಕಳೆದುಕೊಳ್ಳುತ್ತಿರುವಾಗ ಚಿನ್ನವು ಹಣದುಬ್ಬರವನ್ನು ಮುಂದೂಡಲು ಜನರಿಗೆ ಉತ್ತಮ ಅವಕಾಶವಾಗಿದೆ,'' ಎಂದು ಕೆಮರಾನ್‌ ಹೇಳಿದ್ದಾರೆ.

English summary
London company to pay salary in gold instead of cash to help employees battle financial crisis
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X