ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್19: ಕೇಂದ್ರ ಸರ್ಕಾರಿ ನೌಕರರಿಗೆ DA, DR ಎಲ್ಲಾ ಕಟ್

|
Google Oneindia Kannada News

ನವದೆಹಲಿ, ಏಪ್ರಿಲ್ 23: ಕೊರೊನಾವೈರಸ್ ಸೋಂಕು ಹರಡದಂತೆ ದೇಶದೆಲ್ಲೆಡೆ ಮೇ.3ರವರೆಗೆ ಲಾಕ್ಡೌನ್ ವಿಸ್ತರಿಸಲಾಗಿದೆ. ಈ ನಡುವೆ ಕೇಂದ್ರ ಸರ್ಕಾರದ ಉದ್ಯೋಗಿಗೆ ಹಾಗೂ ಪಿಂಚಣಿದಾರರಿಗೆ ನೀಡುವ ವಿವಿಧ ಭತ್ಯೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ವಿತ್ತ ಸಚಿವಾಲಯವು ನಿರ್ಧರಿಸಿದೆ.

50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 61 ಲಕ್ಷ ಪಿಂಚಣಿದಾರರಿಗೆ ತುಟ್ಟಿಭತ್ಯೆ(ಡಿಎ)ಯನ್ನು ಜುಲೈ 2021ರ ತನಕ ತಡೆ ಹಿಡಿಯಲಾಗಿದೆ

ಕಳೆದ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳ ಡಿಎ ಮತ್ತು ಡಿಆರ್‌ನಲ್ಲಿ ಶೇ. 21ಕ್ಕೆ ಹೆಚ್ಚಳ ಮಾಡಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈಗ ಈ ಹೆಚ್ಚುವರಿ ಭತ್ಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

Finance Ministry freezes increment on DA, DR for central govt employees, pensioners

ಸರ್ಕಾರದ ಈ ನಿರ್ಧಾರದಿಂದ ಸುಮಾರು 49.26 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 61.17 ಲಕ್ಷ ಪಿಂಚಣಿದಾರರ ಮೇಲೆ ಪರಿಣಾಮ ಬೀರಲಿದೆ.

ಆದರೆ, ಡಿಎ ಹಾಗೂ ಡಿಆರ್ ತಾತ್ಕಾಲಿಕ ತಡೆಯಿಂದಾಗಿ 37,530 ಕೋಟಿ ರು ಉಳಿತಾಯ ಹಾಗೂ ಇದೇ ರಾಜ್ಯ ಸರ್ಕಾರಗಳು ನೌಕರರ ಡಿಎ ಹಾಗೂ ಡಿ ಆರ್ ತಡೆ ನೀಡಿದರೆ 82,566 ಕೋಟಿ ರು ಉಳಿಯಲಿದೆ. ಒಟ್ಟಾರೆ, 1.20 ಲಕ್ಷ ಕೋಟಿ ರು ಗಳನ್ನು ಕೊವಿಡ್ 19 ವಿರುದ್ಧ ಹೋರಾಟಕ್ಕೆ ಬಳಬಹುದಾಗಿದೆ.

English summary
The finance ministry on Thursday decided to put on hold increment in dearness allowance (DA) for 50 lakh central government employees and 61 lakh pensioners till July 2021 due to the COVID-19 crisis
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X