ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ರಾಜ್ಯ ಪ್ರತಿನಿಧಿಗಳೊಂದಿಗೆ ಹಣಕಾಸು ಸಚಿವರ ಬಜೆಟ್ ಪೂರ್ವ ಪಾಲುದಾರರ ಸಮಾಲೋಚನೆ

|
Google Oneindia Kannada News

ನವದೆಹಲಿ, ಜನವರಿ 17: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೈಗಾರಿಕೆಗಳು, ವೃತ್ತಿಪರರು, ವ್ಯಾಪಾರ, ಶಿಕ್ಷಣ ತಜ್ಞರು, ಅರ್ಥಶಾಸ್ತ್ರಜ್ಞರು, ಮಹಿಳೆಯರು ಮತ್ತು ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳಂತಹ ವಿವಿಧ ಹಿನ್ನೆಲೆ ಮತ್ತು ಸಮುದಾಯಗಳಿಗೆ ಸೇರಿದ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯ ಪ್ರತಿನಿಧಿಗಳೊಂದಿಗೆ ಬಜೆಟ್ ಪೂರ್ವ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದರು.

ಈ ಚರ್ಚೆಯಲ್ಲಿ ಈಶಾನ್ಯ ರಾಜ್ಯಗಳಾದ ಮಿಜೋರಾಂ, ತ್ರಿಪುರಾ ಮತ್ತು ಜಾರ್ಖಂಡ್, ಛತ್ತೀಸ್‌ಗಢ, ಲಡಾಖ್ ಮತ್ತು ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ತೆಲಂಗಾಣ ಸೇರಿದಂತೆ 25 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಜನವರಿ 31ರಿಂದ ಬಜೆಟ್ ಅಧಿವೇಶನ; ಫೆ. 1ರಂದು ಬಜೆಟ್ ಮಂಡನೆ ಜನವರಿ 31ರಿಂದ ಬಜೆಟ್ ಅಧಿವೇಶನ; ಫೆ. 1ರಂದು ಬಜೆಟ್ ಮಂಡನೆ

ಕೇಂದ್ರ ಮತ್ತು ಉತ್ತರ ಭಾರತದ ಹಲವು ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಒರಿಸ್ಸಾದಂತಹ ರಾಜ್ಯಗಳು ತಮ್ಮ ಪ್ರದೇಶಗಳ ಅಭಿವೃದ್ಧಿಗೆ ಪರಿಣಾಮಕಾರಿ ವಿವರಗಳನ್ನು ನೀಡಿದೆ. ಕೆಲವು ಪ್ರಮುಖ ಚಿಂತಕರು ಮತ್ತು ಮೋರ್ಚಾ ಅಧ್ಯಕ್ಷರು ಸಹ ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಮಂಡಿಸಿದರು.

Finance Minister Holds Pre-Budget Stakeholder consultation with BJP functionaries

ಪಕ್ಷದ ಕೇಂದ್ರ ಕಛೇರಿಯಿಂದ ಹಿರಿಯ ಕೇಂದ್ರೀಯ ನಾಯಕರು ಕಾರ್ಯಕಲಾಪಗಳನ್ನು ನಡೆಸಿದರು. ಆಯಾ ರಾಜ್ಯ ಪಕ್ಷದ ಕಚೇರಿಗಳ ರಾಜ್ಯ ಪಕ್ಷದ ಅಧ್ಯಕ್ಷರು ಕೂಡ ಸಮಾಲೋಚನೆಯಲ್ಲಿ ಉಪಸ್ಥಿತರಿದ್ದರು. ಸುಮಾರು 20 ಲಿಖಿತ ಹೇಳಿಕೆಗಳು ಬಂದಿದ್ದು, ಅದನ್ನು ಸಂಗ್ರಹಿಸಿ ಹಣಕಾಸು ಸಚಿವರಿಗೆ ಸಲ್ಲಿಸಲಾಗುತ್ತದೆ.

ತಮ್ಮ ಸಮಾಲೋಚನೆಯಲ್ಲಿ ಸೀತಾರಾಮನ್ ಅವರು ತಮ್ಮ ಪ್ರಮುಖ ಹೇಳಿಕೆ, ವಿಚಾರಗಳ ಮಂಡನೆಗೆ ಭಾಗಿವಹಿಸದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಪಕ್ಷದ ಪದಾಧಿಕಾರಿಗಳು ತಮ್ಮ ಅಮೂಲ್ಯ ಸಮಯವನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.

ಬಜೆಟ್; ರೈಲ್ವೆ ಇಲಾಖೆಯಡಿಯ 6 ಸಂಸ್ಥೆಗಳ ವಿಲೀನ ಬಜೆಟ್; ರೈಲ್ವೆ ಇಲಾಖೆಯಡಿಯ 6 ಸಂಸ್ಥೆಗಳ ವಿಲೀನ

ಬಜೆಟ್‌ ಅಧಿವೇಶನ

Recommended Video

A Big Salute To Our Front Line Workers | Covid Warriors | Oneindia Kannada

ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ತಮ್ಮ ನಾಲ್ಕನೇ ಬಜೆಟ್ ಮಂಡಿಸಲಿದ್ದಾರೆ. ಇದುವರೆಗೂ ಭಾರತ 23 ಹಣಕಾಸು ಸಚಿವರನ್ನು ನೋಡಿದ್ದು, ಮೂವರು ಪ್ರಧಾನಿಗಳು ಹಣಕಾಸು ಖಾತೆ ತಮ್ಮ ಬಳಿಯೇ ಇಟ್ಟುಕೊಂಡು ಬಜೆಟ್ ಮಂಡನೆ ಮಾಡಿದ್ದರು. ಒಟ್ಟು 8 ಜನ ಹಣಕಾಸು ಸಚಿವರು ಮಾತ್ರ ಸತತ ನಾಲ್ಕು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಿರುವ ನಿರ್ಮಲಾ ಸೀತಾರಾಮನ್‌ ಸತತ ನಾಲ್ಕು ಬಜೆಟ್ ಮಂಡನೆ ಮಾಡಲಿರುವ 9ನೆ ಹಣಕಾಸು ಸಚಿವರು ಎಂಬ ಹೆಗ್ಗಳಿಕೆ ಪಡೆಯಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಬಜೆಟ್ ಮೇಲೆ ಅಪಾರವಾದ ನಿರೀಕ್ಷೆ ಇದೆ. ಆರೋಗ್ಯ, ಉದ್ಯೋಗ, ಕಾರ್ಮಿಕ ವಲಯಕ್ಕೆ ಹಲವಾರು ಕೊಡುಗೆಗಳನ್ನು ನೀಡುವ ಸಾಧ್ಯತೆ ಇದೆ. ಸಂಸತ್ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭವಾಗಲಿದೆ. ಮೊದಲ ದಿನ ರಾಷ್ಟ್ರಪತಿ ರಾಮನಾಥ್ ಕೋವಿಡ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಜನವರಿ 1 ರಿಂದ ಏಪ್ರಿಲ್‌ 8 ರ ತನಕ ಸಂಸತ್ ಬಜೆಟ್ ಅಧಿವೇಶನ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)

English summary
Finance Minister Holds Pre-Budget Stakeholder consultation with BJP functionaries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X