ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ರಿಟರ್ನ್ಸ್- ವಾಯಿದೆಗೆ ಮುಂಚೆ ಫೈಲ್ ಮಾಡಿದರೆ ಆಗುವ ಪ್ರಯೋಜನಗಳು

|
Google Oneindia Kannada News

2021-22 ಮತ್ತು 2022-23ರ ಹಣಕಾಸು ವರ್ಷದ ಆದಾಯ ತೆರಿಗೆ ವಿವರದ ಅರ್ಜಿಯನ್ನು ಸಲ್ಲಿಸಲು ಜುಲೈ 31 ಕೊನೆಯ ದಿನವೆಂದು ನಿಗದಿ ಮಾಡಲಾಗಿದೆ. ನೀವು ಅಧಿಕೃತ ತೆರಿಗೆ ಪಾವತಿದಾರರೆಂಬುದಕ್ಕೆ ಐಟಿ ರಿಟರ್ನ್ಸ್ ಪ್ರಮುಖ ಸಾಕ್ಷಿಯಾಗಿರುವುದರಿಂದ ಐಟಿಆರ್ ಫೈಲ್ ಮಾಡುವುದನ್ನು ಮರೆಯದಿರಿ.

ಬ್ಯಾಂಕ್ ಖಾತೆಯ ವಿವರವನ್ನು ಆಡಿಟ್ ಮಾಡುವ ಅಗತ್ಯ ಇರುವ ತೆರಿಗೆ ಪಾವತಿದಾರರಿಗೆ ಐಟಿಆರ್ ಸಲ್ಲಿಸಲು ಅಕ್ಟೋಬರ್ 31ರವರೆಗೆ ಸಮಯ ಕೊಡಲಾಗಿದೆ. ಅಂದರೆ, ಕಂಪನಿ ಇತ್ಯಾದಿ ಸಂಸ್ಥೆಗಳಿಗೆ ಹೆಚ್ಚಿನ ಸಮಯಾವಕಾಶ ಇದೆ. ಆದರೆ, ಸಂಬಳದಾರರು ಇತ್ಯಾದಿ ವ್ಯಕ್ತಿಗಳು ಐಟಿ ರಿಟರ್ನ್ಸ್ ಸಲ್ಲಿಸಲು ಜುಲೈ 31ರವರೆಗೆ ಮಾತ್ರ ಸಮಯ ಹೊಂದಿದ್ದಾರೆ.

ರೂಪಾಯಿ ಇನ್ನಷ್ಟು ಕುಸಿತ; ಡಾಲರ್ ಮಟ್ಟಕ್ಕೆ ಬಂದಿಳಿದ ಯೂರೋ; ಏನಿದರ ಪರಿಣಾಮ? ರೂಪಾಯಿ ಇನ್ನಷ್ಟು ಕುಸಿತ; ಡಾಲರ್ ಮಟ್ಟಕ್ಕೆ ಬಂದಿಳಿದ ಯೂರೋ; ಏನಿದರ ಪರಿಣಾಮ?

ಐಟಿ ರಿಟರ್ನ್ಸ್ ಅರ್ಜಿಯನ್ನು ವಾಯಿದೆಯೊಳಗೆ ಭರ್ತಿ ಮಾಡಿ ಸಲ್ಲಿಸಿದರೆ ಅನಗತ್ಯ ದಂಡ, ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಬಹುದು. ಐಟಿಆರ್‌ನಿಂದ ಬೇರೆ ಬೇರೆ ರೀತಿಯ ಪ್ರಯೋಜನೆಗಳೂ ಉಂಟು. ಇಂಥ ಕೆಲ ವಿವರಗಳು ಇಲ್ಲಿವೆ:

ಚೇತರಿಕೆ ಕಂಡ ರಿಯಲ್ ಎಸ್ಟೇಟ್ ಉದ್ಯಮ: ಆಸ್ತಿ ನೋಂದಣಿಯಲ್ಲಿ ಭಾರಿ ಹೆಚ್ಚಳ ಚೇತರಿಕೆ ಕಂಡ ರಿಯಲ್ ಎಸ್ಟೇಟ್ ಉದ್ಯಮ: ಆಸ್ತಿ ನೋಂದಣಿಯಲ್ಲಿ ಭಾರಿ ಹೆಚ್ಚಳ

 ದಂಡ ತಪ್ಪಿಸಿ

ದಂಡ ತಪ್ಪಿಸಿ

ಆದಾಯ ತೆರಿಗೆ ನಿಯಮದ ಪ್ರಕಾರ ನೀವು ನಿಗದಿತ ಅವಧಿಯೊಳಗೆ ಐಟಿ ರಿಟರ್ನ್ಸ್ ಸಲ್ಲಿಸದೇ ಹೋದಲ್ಲಿ 10 ಸಾವಿರ ರೂ ದಂಡ ತೆರಬೇಕಾಗಬಹುದು. 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234A ಅಡಿಯಲ್ಲಿರುವ ನಿಯಮದ ಪ್ರಕಾರ ನೀವು ವಾಯಿದೆಯೊಳಗೆ ಐಟಿಆರ್ ಫೈಲ್ ಮಾಡಿದಿದ್ದರೆ 10 ಸಾವಿರ ರೂ ದಂಡದ ಜೊತೆಗೆ ತೆರಿಗೆ ಮೊತ್ತದ ಮೇಲಿನ ಬಡ್ಡಿಯನ್ನೂ ಸೇರಿಸಿ ಕೊಡಬೇಕಾಗುತ್ತದೆ.

 ಕಾನೂನು ಕ್ರಮ

ಕಾನೂನು ಕ್ರಮ

ನೀವು ಸರಿಯಾದ ಸಮಯಕ್ಕೆ ಐಟಿ ರಿಟರ್ನ್ಸ್ ಸಲ್ಲಿಸದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಐಟಿ ಇಲಾಖೆ ನೋಟೀಸ್ ನೀಡುತ್ತದೆ. ನೀವು ನೀಡುವ ವಿವರಣೆ ಸಮಂಜಸ ಎನಿಸದಿದ್ದರೆ ಐಟಿ ಇಲಾಖೆ ನಿಮ್ಮ ಮೇಲೆ ಕಾನೂನಾತ್ಮಕವಾಗಿ ಪ್ರಕರಣ ದಾಖಲಿಸಬಹುದು.

 ಸಾಲಕ್ಕೆ ಸುಲಭ

ಸಾಲಕ್ಕೆ ಸುಲಭ

ನೀವು ಪ್ರತೀ ವರ್ಷದ ತಪ್ಪದೇ ಐಟಿ ರಿಟರ್ನ್ಸ್ ಫೈಲ್ ಮಾಡಿದರೆ ಹಲವು ಪ್ರಯೋಜನಗಳುಂಟು. ಕ್ರೆಡಿಟ್ ಕಾರ್ಡ್ ಇತ್ಯಾದಿಯನ್ನು ಅತಿಯಾಗಿ ಬಳಸದೆ, ಯಾವ ಸಾಲದ ಕಂತನ್ನು ಸಮಯಕ್ಕೆ ಮುಂಚೆಯೇ ಪಾವತಿಸುತ್ತಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಬೆಳೆಯುತ್ತದೆ, ಅದರಿಂದ ನಿಮಗೆ ಬ್ಯಾಂಕ್ ಸಾಲ ಸುಲಭವಾಗಿ ಸಿಗುತ್ತದೆ ಎಂಬುದು ಗೊತ್ತಿರಬಹುದು. ಅದೇ ರೀತಿ ನೀವು ನಿಯಮಿತವಾಗಿ ಐಟಿಆರ್ ಅನ್ನು ಸಲ್ಲಿಸುತ್ತಾ ಬಂದಿದ್ದರೂ ಬ್ಯಾಂಕ್ ಸಾಲ ಪಡೆಯಲು ಸಹಕಾರಿಯಾಗುತ್ತದೆ. ಬ್ಯಾಂಕುಗಳಿಗೆ ನೀವು ಹೆಚ್ಚು ವಿಶ್ವಾಸಾರ್ಹರೆನಿಸುತ್ತೀರಿ.

 ವೀಸಾಗೆ ಅನುಕೂಲ

ವೀಸಾಗೆ ಅನುಕೂಲ

ನೀವು ಯಾವುದಾದರೂ ವಿದೇಶಕ್ಕೆ ಹೋಗಲು ವೀಸಾ ಪಡೆಯಲು ಐಟಿ ರಿಟರ್ನ್ಸ್ ಅನುಕೂಲ ಮಾಡಿಕೊಡುತ್ತದೆ. ವಿಸಾ ಪಡೆಯಲು ಸಲ್ಲಿಸಬೇಕಾದ ದಾಖಲೆಗಳಲ್ಲಿ ಐಟಿಆರ್ ಕೂಡ ಒಂದು. ನೀವು ಸರಿಯಾಗಿ ಐಟಿಆರ್ ಸಲ್ಲಿಕೆ ಮಾಡದೇ ಹೋದಲ್ಲಿ ತೆರಿಗೆ ವಂಚನೆಯ ಸಂದೇಹ ಬಂದು ತೊಡಕಾಗಬಹುದು. ನಿಮ್ಮ ಐಟಿಆರ್ ಇತಿಹಾಸ ಸ್ಥಿರವಾಗಿದ್ದರೆ ವೀಸಾ ಸರಾಗವಾಗಿ ಸಿಗಬಹುದು.

ಹಾಗೆಯೇ, ಡೆಡ್‌ಲೈನ್ ಒಳಗೆ ನೀವು ಐಟಿಆರ್ ಫೈಲ್ ಮಾಡಿದರೆ ಇನ್ನೊಂದು ಪ್ರಯೋಜನ ಎಂದರೆ ನಿಮ್ಮ ಹಣಕಾಸು ನಷ್ಟವನ್ನು ಮುಂದಿನ ಹಣಕಾಸು ವರ್ಷಕ್ಕೆ ವರ್ಗಾಯಿಸಬಹುದು. ಮುಂದಿನ ವರ್ಷದ ನಿಮ್ಮ ಆದಾಯಕ್ಕೆ ನೀವು ಪಾವತಿಸಬೇಕಾದ ತೆರಿಗೆಯಿಂದ ತುಸು ವಿನಾಯಿತಿ ಪಡೆಯಬಹುದು.

(ಒನ್ಇಂಡಿಯಾ ಸುದ್ದಿ)

Recommended Video

ಲಂಕಾದಲ್ಲಿ ನಡಿಬೇಕಾಗಿದ್ದ ಪಂದ್ಯಕ್ಕೆ ಕತ್ತರಿ !! | *Cricket | Oneindia Kannada

English summary
Here are few benefits you may get if your IT returns is filed on time, that is July 31st. Otherwise you may face penalty and legal action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X