ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ ನವೆಂಬರ್ ನಲ್ಲಿ ವಿದೇಶಿ ಬಂಡವಾಳದಲ್ಲಿ ಶೇ 60ರಷ್ಟು ಏರಿಕೆ

|
Google Oneindia Kannada News

ನವದೆಹಲಿ, ಫೆಬ್ರವರಿ 8: ವ್ಯಾಪಾರ ಆರಂಭಿಸುವವರಿಗೆ ಇರುವ ನಿಯಮಗಳನ್ನು ಸರಕಾರ ಸಡಿಲಗೊಳಿಸಿದ್ದರಿಂದ ಕಳೆದ ನವೆಂಬರ್ ನಲ್ಲಿ ವಿದೇಶಿ ನೇರ ಬಂಡವಾಳ ಶೇ 60ರಷ್ಟು ಹೆಚ್ಚಾಗಿ 4.68 ಬಿಲಿಯನ್ ಅಮೆರಿಕನ್ ಡಾಲರ್ ಭಾರತಕ್ಕೆ ಹರಿದುಬಂದಿದೆ. ನವೆಂಬರ್ 2015ರಲ್ಲಿ ವಿದೇಸಿ ನೇರ ಬಂಡವಾಳ 2.93 ಬಿಲಿಯನ್ ಅಮೆರಿಕನ್ ಡಾಲರ್ ಇತ್ತು.

2016ರ ನವೆಂಬರ್ ಅವಧಿಯಲ್ಲಿ ಸಿಂಗಾಪುರ್, ಮಾರಿಷಿಯಸ್, ಯುಕೆ, ಯುಎಸ್, ನೆದರ್ ಲ್ಯಾಂಡ್ಸ್ ಮತ್ತು ಜಪಾನ್ ನಿಂದ ಅತಿ ಹೆಚ್ಚು ಬಂಡವಾಳ ಭಾರತಕ್ಕೆ ಹರಿದುಬಂದಿದೆ ಎಮ್ದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷದ ಏಪ್ರಿಲ್-ನವೆಂಬರ್ ಮಧ್ಯೆ 32.49 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ವಿದೇಶಿ ಬಂಡವಾಳ ಬಂದಿದ್ದು, 2015ನೇ ಇಸವಿಯ ಇದೇ ಅವಧಿಯಲ್ಲಿ ಆ ಮೊತ್ತ 24.81 ಬಿಲಿಯನ್ ಇತ್ತು.[ಎಫ್ ಡಿಐ ಹೂಡಿಕೆ : ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ]

FDI zooms 60 per cent to 4.68 billion US dollar in November

ಕಳೆದ ವರ್ಷದ ಏಪ್ರಿಲ್-ನವೆಂಬರ್ ಮಧ್ಯೆ ಬಂಡವಾಳ ಹರಿದುಬಂದಿರುವ ಪ್ರಮುಖ ಕ್ಷೇತ್ರಗಳ ಮಾಹಿತಿ ಇಂತಿದೆ: ಸೇವಾ ವಲಯ (6.69 ಬಿಲಿಯನ್ ಅಮೆರಿಕನ್ ಡಾಲರ್), ಟೆಲಿಕಾಂ (5.47 ಬಿಲಿಯನ್ ಅಮೆರಿಕನ್ ಡಾಲರ್), ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ (1.61 ಬಿಲಿಯನ್ ಅಮೆರಿಕನ್ ಡಾಲರ್), ಎಲೆಕ್ಟ್ರಿಕಲ್ ವಸ್ತುಗಳು (2 ಬಿಲಿಯನ್ ಅಮೆರಿಕನ್ ಡಾಲರ್) ಮತ್ತು ಮಾಹಿತಿ ಮತ್ತು ಪ್ರಸಾರ (1.06 ಬಿಲಿಯನ್ ಅಮೆರಿಕನ್ ಡಾಲರ್).

ವಿದೇಶಿ ಬಂಡವಾಳ ಭಾರತಕ್ಕೆ ತುಂಬ ಮುಖ್ಯವಾದದ್ದು. ದೇಶದ ಮೂಲಸೌಕರ್ಯಗಳಾದ ಬಂದರು, ವಿಮಾನ ನಿಲ್ದಾಣ ಮತ್ತು ಹೆದ್ದಾರಿಗಳ ಅಭಿವೃದ್ಧಿ ಆಗಬೇಕೆಂದರೆ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ದೇಶಕ್ಕೆ ಹರಿದುಬರಬೇಕು. ಆದ್ದರಿಂದ ವಿದೇಶಿ ಬಂಡವಾಳ ಹೂಡಲು ಸಲೀಸಾಗಲಿ ಎಂಬ ಕಾರಣಕ್ಕೆ ಫಾರಿನ್ ಇನ್ವೆಸ್ಟ್ ಮೆಂಟ್ ಪ್ರಮೋಷನ್ ಬೋರ್ಡ್ (FIPB) ತೆಗೆದುಹಾಕಲು ಬಜೆಟ್ ನಲ್ಲಿ ಪ್ರಸ್ತಾವ ಮಾಡಲಾಗಿದೆ.

English summary
With the government taking steps to improve ease of doing business and relax regulations, foreign direct investment into the country surged by 60 per cent to USD 4.68 billion in November 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X