ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021 ಎಫ್‍ಸಿಎ ಜೀಪ್ ಕಂಪಾಸ್ ಮಾರುಕಟ್ಟೆಗೆ ಬರಲು ಸಜ್ಜು

|
Google Oneindia Kannada News

ಬೆಂಗಳೂರು, ಜನವರಿ 7: ಎಫ್‍ಸಿಎ ಇಂಡಿಯಾ 2021 ಜೀಪ್ ಕಂಪಾಸ್ ಅನಾವರಣಗೊಳಿಸಿದೆ. ಹೊಸ ಜೀಪ್ ಕಂಪಾಸ್‍ನ ಭಾರತದಲ್ಲಿನ ಸ್ಥಳೀಯ ಉತ್ಪಾದನೆಯನ್ನು ಪುಣೆಯ ಸಮೀಪದ ರಂಜನ್‍ಗಾಂವ್‍ನಲ್ಲಿರುವ ಎಫ್‍ಸಿಎ ಜಂಟಿ ಉದ್ಯಮ ಉತ್ಪಾದನಾ ಕೇಂದ್ರದಲ್ಲಿ ಮುಂದುವರಿಸಲಾಗುವುದು.

ಹೊಸ ಜೀಪ್ ಕಂಪಾಸ್ ಉತ್ಪಾದನೆಯು ಈಗಾಗಲೇ ಪ್ರಾರಂಭವಾಗಿದ್ದು, ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ದೇಶಾದ್ಯಂತ ಜೀಪ್ ಬ್ರಾಂಡ್ ಮಾರಾಟಗಾರರಿಗೆ ಎಸ್‍ಯುವಿ ರವಾನೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಜನವರಿ 2021 ರ ಅಂತ್ಯದ ವೇಳೆಗೆ ಹೊಸ ಕಂಪಾಸ್ ದೇಶಾದ್ಯಂತ ಗ್ರಾಹಕ ಟೆಸ್ಟ್ ಡ್ರೈವ್‍ಗಳಿಗೆ ಲಭ್ಯವಿರುತ್ತದೆ.

2021 ಜೀಪ್ ಕಂಪಾಸ್‍ನ ಸಾಮರ್ಥ್ಯವನ್ನು ವಿವರಿಸುತ್ತಾ ಎಫ್‍ಸಿಎ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಪಾರ್ಥ ದತ್ತಾ ಹೇಳಿದರು, "ನಾವು ಹೊಸ ಜೀಪ್ ಕಂಪಾಸ್ ಅನ್ನು ಇನ್ನಷ್ಟು ಅನನ್ಯ ಪ್ರತಿಪಾದನೆಯನ್ನಾಗಿಸಿದ್ದೇವೆ ಮತ್ತು ಗ್ರಾಹಕರ ಪ್ರತಿಕ್ರಿಯೆಗಳ ಸಂಯೋಜನೆಯೊಂದಿಗೆ ಈಗ ಗುಣಮಟ್ಟವನ್ನು ಹೆಚ್ಚಿಸಿದ್ದೇವೆ. ಹೊಸ ಕಂಪಾಸ್ ಪ್ಯಾಕೇಜ್ ತನ್ನ ಜೀಪ್ ಡಿಎನ್‍ಎಗೆ ಗ್ರಾಹಕ ನಿಷ್ಠೆಯೊಂದಿಗೆ ಅತ್ಯುನ್ನತವಾದ ಆಧುನಿಕತೆ, ಸವಾರರ ಸೌಕರ್ಯ, ತಂತ್ರಜ್ಞಾನ ಮತ್ತು ಬಳಕೆದಾರ ಅನುಭವವನ್ನು ನೀಡುತ್ತದೆ. ''

ವಿಭಿನ್ನವಾದ ಹೊರಭಾಗಗಳು

ವಿಭಿನ್ನವಾದ ಹೊರಭಾಗಗಳು

ಹೊರಭಾಗದಲ್ಲಿ, 2021 ಜೀಪ್ ಕಂಪಾಸ್ ಸೆವೆನ್-ಸ್ಲಾಟ್ ಗ್ರಿಲ್ ಮತ್ತು ಟ್ರೆಪೀಜಾಯಿಡಲ್ ವೀಲ್ ಕಮಾನುಗಳನ್ನು ಒಳಗೊಂಡಂತೆ ಜೀಪ್ ಬ್ರಾಂಡ್ ಸ್ಟೈಲಿಂಗ್ ಅಂಶಗಳನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತದೆ. ಜೀಪ್ ಕಂಪಾಸ್‍ನ ಪ್ರಮುಖ ಗುಣವೈಶಿಷ್ಟ್ಯಗಳನ್ನು ಕಾಪಾಡಿಕೊಂಡು, ಬಾಹ್ಯ ಸ್ಟೈಲಿಂಗ್ ಅನ್ನು ಹೆಚ್ಚು ಆಧುನಿಕ, ನವೀನ ಮತ್ತು ಹೆಚ್ಚು ನಗರೀಕರಣವಾಗಿ ಪರಿಷ್ಕರಿಸಲಾಗಿದೆ. ಹೆಡ್‍ಲೈಟ್‍ಗಳು ಈಗ ರೂಪಾಂತರವನ್ನು ಅವಲಂಬಿಸಿ ರಿಫ್ಲೆಕ್ಟರ್ ಗಳು ಮತ್ತು ಎಲ್‍ಇಡಿ ಪ್ರೊಜೆಕ್ಟರ್ ಗಳೊಂದಿಗೆ ಬರುತ್ತವೆ. ಜೀಪ್ ಕಂಪಾಸ್ ಯಾವಾಗಲೂ ಗಮನಾರ್ಹವಾದ ರಸ್ತೆ ಉಪಸ್ಥಿತಿಯನ್ನು ಹೊಂದಿದೆ ಮತ್ತು ಈಗ ಅದರ ವರ್ಧಿತ ಸ್ಟೈಲಿಂಗ್‍ನೊಂದಿಗೆ, ಹೊಸ ಮಾದರಿಯು ಇನ್ನಷ್ಟು ಪ್ರಭಾವಶಾಲಿಯಾಗಿ ಕಾಣುತ್ತದೆ.

ಹೊಸ ಡ್ಯಾಶ್‍ಬೋರ್ಡ್ ವಿನ್ಯಾಸ

ಹೊಸ ಡ್ಯಾಶ್‍ಬೋರ್ಡ್ ವಿನ್ಯಾಸ

ಹೊಸ ಡ್ಯಾಶ್‍ಬೋರ್ಡ್ ವಿನ್ಯಾಸವು ಅದರ ಗಮನ ಸೆಳೆಯುವ ಮಿಡ್ ಬೋಲ್ಸ್ಟರ್ ನೊಂದಿಗೆ ಸಮತಲದ ಭಾವನೆಯನ್ನು ನೀಡಿದ್ದು, ಇದು ಒಳಾಂಗಣವನ್ನು ಹೆಚ್ಚು ಸೊಗಸು ಮತ್ತು ಆಧುನಿಕವಾಗಿಸುತ್ತದೆ. ಬೋಲ್ಸ್ಟರ್ ನ ಕೆಳಗಿರುವ ನಯವಾದ ಲೋಹದ ಗಮನ ಸೆಳೆಯುವ ಡ್ಯಾಶ್‍ಬೋರ್ಡ್ ಹೆಚ್ಚು ಸಂಯೋಜಿತವಾಗಿ ಕಾಣುವಂತೆ ಮಾಡುತ್ತದೆ. ಹೊಸ ಕಂಪಾಸ್ ಪ್ರಯಾಣಿಕರ ಕ್ಯಾಬಿನ್ ಒಳಗೆ ಎರಡು ಪಟ್ಟು ಸಂಗ್ರಹ ಸ್ಥಳಾವಕಾಶವನ್ನು ಹೊಂದಿದೆ ಮತ್ತು ಸ್ಮಾರ್ಟ್ ಫೋನ್‍ಗಾಗಿ ವೈರ್‍ಲೆಸ್ ಚಾರ್ಜಿಂಗ್ ಸ್ಪಾಟ್ ಅನ್ನು ಸಹ ಹೊಂದಿದೆ. ಸೆಂಟರ್ ಕನ್ಸೋಲ್ ವಾಟರ್ ಫಾಲ್ ಅನ್ನು ನ್ಯಾವಿಗೇಟ್ ಮಾಡಲು ತಕ್ಕಂತೆ ಸುಗಮವಾಗಿ ವಿನ್ಯಾಸಗೊಳಿಸಲಾಗಿದೆ.

 ದೂರದಿಂದಲೇ ವಾಹನದೊಂದಿಗೆ ಸಂವಹನ

ದೂರದಿಂದಲೇ ವಾಹನದೊಂದಿಗೆ ಸಂವಹನ

ಮೊಬೈಲ್ ಅಪ್ಲಿಕೇಶನ್‍ನೊಂದಿಗೆ ಗ್ರಾಹಕರು ದೂರದಿಂದಲೇ ವಾಹನದೊಂದಿಗೆ ಸಂವಹನ ನಡೆಸಬಹುದು:
• ಬಾಗಿಲುಗಳನ್ನು ಲಾಕ್ ಮತ್ತು ಅನ್ಲಾಕ್ ಮಾಡುವುದು
• ವಾಹನ ಸ್ಥಿತಿಯ ವರದಿಯು ಗ್ರಾಹಕರಿಗೆ ತಮ್ಮ ಜೀಪ್ ಕಂಪಾಸ್‍ನ ಸ್ಥಿತಿಯನ್ನು ತಿಳಿಯಲು ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಪ್ರವಾಸಗಳನ್ನು ಯೋಜಿಸಲು ಸಹಾಯ ಮಾಡುತ್ತದೆ
• ಚಾಲಕ ವಿಶ್ಲೇಷಣೆಗಳು ಚಾಲಕರಿಗೆ ತಮ್ಮ ಚಾಲನಾ ಶೈಲಿಯನ್ನು ವೀಕ್ಷಿಸಲು ಮತ್ತು ಸುಧಾರಿಸಲು ಸಹಾಯ ಮಾಡುತ್ತವೆ
• ಡ್ರೈವ್ ತ್ರಿಜ್ಯವನ್ನು ಮೇಲ್ವಿಚಾರಣೆ ಮಾಡಲು ಜಿಯೋ-ಫೆನ್ಸಿಂಗ್ ವೈಶಿಷ್ಟ್ಯವನ್ನು ಒದಗಿಸುವ ಸ್ಥಳ ಸೇವೆಗಳು
• ಅಪಘಾತದ ಸಂದರ್ಭದಲ್ಲಿ ತುರ್ತು ಸಂಪರ್ಕಿತರಿಗೆ ತಿಳಿಸಲು ಸುರಕ್ಷತಾ ಸೇವಾ ವೈಶಿಷ್ಟ್ಯ
• ವಾಹನವು ಕಳುವಾದ ಸಂದರ್ಭದಲ್ಲಿ ವಾಹನವನ್ನು ದೂರದಿಂದಲೇ ನಿಷ್ಕ್ರಿಯಗೊಳಿಸುವ ಸ್ಟೋಲೆನ್ ವೆಹಿಕಲ್ ಅಸಿಸ್ಟ್

360 ಡಿಗ್ರಿ ರಿಮೋಟ್ ಕ್ಯಾಮೆರಾ

360 ಡಿಗ್ರಿ ರಿಮೋಟ್ ಕ್ಯಾಮೆರಾ

ಹೊಸ ವೈಶಿಷ್ಟ್ಯಗಳಾದ 360 ಡಿಗ್ರಿ ರಿಮೋಟ್ ಕ್ಯಾಮೆರಾ, ಕ್ರೂಸ್ ಕಂಟ್ರೋಲ್ ಮತ್ತು ಬಟನ್-ಚಾಲಿತ ಪವರ್‍ಲಿಫ್ಟ್ ಗೇಟ್ ಅನ್ನು 2021 ಜೀಪ್ ಕಂಪಾಸ್‍ನಲ್ಲಿ ನೀಡಲಾಗುವುದು. ಹೊಸ ಜೀಪ್ ಕಂಪಾಸ್ 50 ಕ್ಕೂ ಹೆಚ್ಚು ಸುರಕ್ಷತೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
• ಸ್ವಯಂಚಾಲಿತ ಹೆಡ್‍ಲ್ಯಾಂಪ್‍ಗಳು ಮತ್ತು ಮಳೆ-ಸಂವೇದನಾ ವೈಪರ್ ಗಳು
• ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್
• ಬೆಟ್ಟ ಹತ್ತುವಾಗ ಹಿಡಿತ ಮತ್ತು ಬೆಟ್ಟದ ಇಳಿಜಾರಿನಲ್ಲಿನ ನಿಯಂತ್ರಣ (ಹಿಲ್ ಹೋಲ್ಡ್ ಮತ್ತು ಹಿಲ್ ಡೆಸೆಂಟ್ ನಿಯಂತ್ರಣ}
• ಸೆಲೆಕ್ಟರೈನ್ 4x4 ಸಿಸ್ಟಮ್
• ವಿಶೇಷ ಟ್ರಿಪ್‍ಸ್ಟೀಲ್‍ಗಳೊಂದಿಗೆ ಹಾಟ್ ಸ್ಟ್ಯಾಂಪ್ ಮತ್ತು ಲೇಸರ್ ವೆಲ್ಡ್ಡ್ ಪ್ಯಾನೆಲ್‍ಗಳು
• ಫ್ರೀಕ್ವೆನ್ಸಿ ಡ್ಯಾಂಪ್ಡ್ ಸಸ್ಪೆಂಶನ್ - ಸ್ಪೋಟ್ರ್ಸ್ ಕಾರುಗಳಲ್ಲಿ ಬಳಸಲಾಗುವ ಒಂದು ತಂತ್ರಜ್ಞಾನ
• ಆರು ಏರ್‍ಬ್ಯಾಗ್‍ಗಳು
• ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ
• ಪ್ಯಾನಿಕ್ ಬ್ರೇಕ್ ಸಹಾಯ
• ಬ್ರೇಕ್ ಲಾಕ್ ಡಿಫರೆನ್ಷಿಯಲ್
• ಎಲೆಕ್ಟ್ರಾನಿಕ್ ರೋಲ್ ಮಿಟಿಗೇಶನ್
• ಹೈಡ್ರಾಲಿಕ್ ವರ್ಧಕ ಪರಿಹಾರ
• ರೆಡಿ-ಅಲರ್ಟ್ ಬ್ರೇಕಿಂಗ್
• ಮಳೆಯ ಬ್ರೇಕ್ ಬೆಂಬಲ

English summary
FCA India today unveiled the 2021 Jeep Compass, setting a new benchmark for a premium ownership experience. The new Jeep Compass will continue to be locally manufactured in India at FCA’s joint venture manufacturing facility in Ranjangaon, near Pune.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X