ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ಹೊಸ Jeep SUV ಉತ್ಪಾದನೆಗಾಗಿ 250 ಮಿಲಿಯನ್ ಡಾಲರ್ ಹೂಡಿಕೆ

|
Google Oneindia Kannada News

ಬೆಂಗಳೂರು, ಜನವರಿ 05: ಎಫ್‍ಸಿಎ (Fiat Chrysler Automobiles) ಇಂಡಿಯಾ 250 ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಸ್ಥಳೀಯ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ, ಎಫ್‍ಸಿಎ ತನ್ನ ಭಾರತೀಯ ಕಾರ್ಯಾಚರಣೆಗಳಲ್ಲಿ 700 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. 2022 ರ ಅಂತ್ಯದ ವೇಳೆಗೆ ಸ್ಥಳೀಯವಾಗಿ ಉತ್ಪಾದನೆ ಮಾಡಿದ ನಾಲ್ಕು ಹೊಸ ಉತ್ಪನ್ನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆ ಪ್ರಕಟಿಸಿದೆ.

ಹೊಸ ವಾಹನಗಳಲ್ಲಿ ಮೊದಲಿಗೆ ಹೊಸ ಜೀಪ್ ಕಂಪಾಸ್ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ, ಮೊಟ್ಟಮೊದಲ ಮಧ್ಯಮ ಗಾತ್ರದ ಮೂರು-ಸಾಲಿನ ಜೀಪ್ ಅಲ್ಲದೆ, ಜೀಪ್ ರಾಂಗ್ಲರ್ ಅನ್ನು ಸ್ಥಳೀಯವಾಗಿ ರಂಜನ್‍ಗಾಂವ್‍ನಲ್ಲಿ ಜೋಡಿಸಲಾಗುವುದು, ಜೊತೆಗೆ ಗ್ರ್ಯಾಂಡ್ ಚೆರೋಕಿಯನ್ನು ಸ್ಥಳೀಯವಾಗಿ ರಂಜನ್‍ಗಾಂವ್‍ನಲ್ಲಿ ಜೋಡಿಸಲಾಗುವುದು.

 ಬರಲಿದೆ ಜೀಪ್ 7 ಸೀಟರ್ ಎಸ್‌ಯುವಿ: ಪವರ್‌ಫುಲ್ 2.0 ಡೀಸೆಲ್ ಎಂಜಿನ್ ಬರಲಿದೆ ಜೀಪ್ 7 ಸೀಟರ್ ಎಸ್‌ಯುವಿ: ಪವರ್‌ಫುಲ್ 2.0 ಡೀಸೆಲ್ ಎಂಜಿನ್

ಒಟ್ಟಾರೆ, ನಾಲ್ಕು ಹೊಸ ಜೀಪ್ ಎಸ್‍ಯುವಿಗಳ ಉತ್ಪಾದನೆಗೆ 250 ಮಿಲಿಯನ್ ಡಾಲರ್ ಗಳಷ್ಟು ಹೂಡಿಕೆ ಮಾಡಲಾಗಿದೆ ಎಂದು ಎಫ್‍ಸಿಎ ಇಂದು ಹೇಳಿದೆ. ಅತಿ ನವೀನ ಸ್ಥಳೀಯ ವಾಹನಗಳ ಸಾಲಿನಲ್ಲಿ 2021 ಭಾರತ ನಿರ್ಮಿತ ಜೀಪ್ ಕಂಪಾಸ್, ಸ್ಥಳೀಯವಾಗಿ ತಯಾರಾದ ಮತ್ತು ಜಾಗತಿಕ-ಪ್ರಥಮ ಮೂರು-ಸಾಲಿನ ಜೀಪ್ ಎಸ್‍ಯುವಿ, ಜೊತೆಗೆ ಅಪ್ರತಿಮ ಜೀಪ್ ರಾಂಗ್ಲರ್ ಮತ್ತು ಮುಂದಿನ ಪೀಳಿಗೆಯ ಗ್ರ್ಯಾಂಡ್ ಚೆರೋಕಿ ಫ್ಲ್ಯಾಗ್‍ಶಿಪ್ ಸೇರಿವೆ. ರಂಜಂಗಾಂವ್‍ನಲ್ಲಿರುವ ಎಫ್‍ಸಿಎಯ ಜಂಟಿ ಉದ್ಯಮ ಉತ್ಪಾದನಾ ಕೇಂದ್ರದಲ್ಲಿ ಸ್ಥಳೀಯವಾಗಿ ಜೋಡಿಸಲಾಗುವುದು. 2022 ರ ಅಂತ್ಯದ ವೇಳೆಗೆ ನಾಲ್ಕು ಹೊಸ ಉತ್ಪನ್ನಗಳು ಭಾರತದಲ್ಲಿ ರಸ್ತೆಗೆ ಇಳಿಯಲಿವೆ.

FCA India Expands Local Product Lineup with $250 Million Investment

2021 ರ ಜೀಪ್ ಕಂಪಾಸ್ ಅನ್ನು ಭಾರತದಲ್ಲಿ ಜನವರಿ 7, 2021 ರಂದು ಅನಾವರಣಕ್ಕೆ ಸಿದ್ಧವಾಗಿದೆ ಮತ್ತು ಈಗಾಗಲೇ ಉತ್ಪಾದನೆಯು ಪ್ರಾರಂಭವಾಗಿದೆ. ಎಚ್6 ಸಂಕೇತನಾಮದ ಐಷಾರಾಮಿ ಏಳು ಆಸನಗಳ ಮಧ್ಯಮ ಗಾತ್ರದ ಜೀಪ್ ಅನ್ನು 2022 ರಲ್ಲಿ ಬಿಡುಗಡೆ ಮಾಡಲಾಗುವುದು.

FCA India Expands Local Product Lineup with $250 Million Investment

ಎಫ್‍ಸಿಎ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪಾರ್ಥ ದತ್ತಾ ಹೇಳಿದರು, ''ನಮ್ಮ ಹೊಸ 250 ಮಿಲಿಯನ್ ಡಾಲರ್ ಹೂಡಿಕೆಯು ನಮ್ಮ ಹೊಸ ಜೀಪ್ ಎಸ್‍ಯುವಿಗಳು ರಂಜನ್‍ಗಾಂವ್‍ನಿಂದ ಹೊರಬೀಳುವುದರೊಂದಿಗೆ ಅನೇಕ ವಿಭಾಗಗಳಲ್ಲಿ ಸ್ಪರ್ಧಾತ್ಮಕ ಪ್ರಯೋಜನವನ್ನು ನೀಡುತ್ತದೆ.ಜೀಪ್ ಬ್ರಾಂಡ್‍ನ 80 ನೇ ವಾರ್ಷಿಕೋತ್ಸವ ವರ್ಷದಲ್ಲಿ ಭಾರತಕ್ಕೆ ನಮ್ಮ ನಿರಂತರ ಬದ್ಧತೆಯೊಂದಿಗೆ ನಮ್ಮ ಅತ್ಯಾಕರ್ಷಕ ಹೊಸ ಉತ್ಪನ್ನಗಳನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ'' ಎಂದರು.

FCA India Expands Local Product Lineup with $250 Million Investment

ಆಟೋಮೋಟಿವ್ ಗ್ರೂಪ್ ಇತ್ತೀಚೆಗೆ ತನ್ನ ಎಂಜಿನಿಯರಿಂಗ್ ಕಾರ್ಯಾಚರಣೆಯನ್ನು ವಿಸ್ತರಿಸಿತು ಮತ್ತು 2021 ರ ಅಂತ್ಯದ ವೇಳೆಗೆ ಕನಿಷ್ಠ 1000 ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ. 2015 ರಲ್ಲಿ, ಎಫ್‍ಸಿಎ ರಂಜನ್‍ಗಾಂವ್‍ನಲ್ಲಿನ ಜೀಪ್ ಕಂಪಾಸ್‍ನ ಸ್ಥಳೀಯ ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಹೂಡಿಕೆ ಮಾಡಿದೆ. ಜೀಪ್ ಬ್ರಾಂಡ್ ಭಾರತದಲ್ಲಿ 2016 ರಲ್ಲಿ ಪಾದಾರ್ಪಣೆ ಮಾಡಿತು, ನಂತರ 2017 ರಲ್ಲಿ ಪ್ರಶಸ್ತಿ ವಿಜೇತ ಜೀಪ್ ಕಂಪಾಸ್ ಅನ್ನು ಪ್ರಾರಂಭಿಸಿತು.

English summary
FCA today announced an expansion to the local product lineup in India, confirming that an investment of over $250 million has been committed towards the production of four new Jeep SUVs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X