ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಸಾಫ್ಟ್‌ವೇರ್‌ ಉದ್ಯಮದ ಪಿತಾಮಹ ಎಫ್‌ಸಿ ಕೊಹ್ಲಿ ಇನ್ನಿಲ್ಲ

|
Google Oneindia Kannada News

ಬೆಂಗಳೂರು, ನವೆಂಬರ್ 26: ಭಾರತದ ಸಾಫ್ಟ್‌ವೇರ್‌ ಉದ್ಯಮದ ಪಿತಾಮಹ ಎಂದೇ ಕರೆಯಲ್ಪಡುವ ಫಕೀರ್ ಚಂದ್ ಕೊಹ್ಲಿ ಅಥವಾ ಎಫ್‌ಸಿ ಕೊಹ್ಲಿ ಅವರು ಗುರುವಾರ ಇಹಲೋಹ ತ್ಯಜಿಸಿದ್ದಾರೆ. 96 ವರ್ಷ ವಯಸ್ಸಿನ ಎಫ್‌ಸಿ ಕೊಹ್ಲಿ ಹಾಗೂ ಟಾಟಾ ಸಮೂಹದ ನಡುವೆ ಅವಿನಾಭಾವ ಸಂಬಂಧವಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌(ಟಿಸಿಎಸ್‌) ಮೊದಲ ಸಿಇಒ ಆಗಿದ್ದ ಅವರು ಸಾಫ್ಟ್‌ವೇರ್ ಸೇವೆಗಳಿಗಾಗಿ ಭಾರತವನ್ನು ಜಾಗತಿಕ ಹಬ್ ಆಗಿಸುವ ದೂರದೃಷ್ಟಿಯನ್ನು ಹೊಂದಿದ್ದರು.

''ಎಫ್‌ಸಿ ಕೊಹ್ಲಿಯವರು ದೂರದೃಷ್ಟಿಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದು, ಭಾರತದ ಪ್ರತಿಯೊಂದು ಉದ್ಯಮದ ಪರಿವರ್ತನೆಗೆ ಕಾರಣವಾದ ಉದ್ಯಮವನ್ನು ರಚಿಸಿದರು. ಲಕ್ಷಾಂತರ ಉನ್ನತ ಮಟ್ಟದ ಉದ್ಯೋಗಗಳನ್ನು ಸೃಷ್ಟಿಸಿದ ಐಟಿ ಉದ್ಯಮವನ್ನು ಪೋಷಿಸಿದ ಅವರಿಗೆ ಭಾರತದಲ್ಲಿ ಅನೇಕ ತಲೆಮಾರುಗಳ ಪುರುಷರು ಮತ್ತು ಮಹಿಳಾ ಐಟಿ ಉದ್ಯೋಗಿಗಳು ಋಣಿಯಾಗಿದ್ದಾರೆ. ಭಾರತವನ್ನು ಜಾಗತಿಕ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದ ಮತ್ತು ಸಾಮಾಜಿಕ ಸವಾಲುಗಳನ್ನು ಪರಿಹರಿಸಲು ತಂತ್ರಜ್ಞಾನದ ಶಕ್ತಿಯನ್ನು ನಂಬಲು ಸಹಾಯ ಮಾಡಿದೆ'' ಎಂದು ಕಾಗ್ನಿಜೆಂಟ್ ಇಂಡಿಯಾದ ಮಾಜಿ ಅಧ್ಯಕ್ಷ ರಾಮ್‌ಕುಮಾರ್ ಮೂರ್ತಿ ಹೇಳಿದ್ದಾರೆ.

FC Kohli, The First CEO Of TCS Passes Away

ರಾಮ್‌ಕುಮಾರ್ ಅವರು ಟಿಸಿಎಸ್‌ನಲ್ಲಿ, ಎಫ್‌ಸಿ ಕೊಹ್ಲಿಯವರೊಂದಿಗೆ ಕೆಲಸ ಮಾಡಿದ್ದಾರೆ ಮತ್ತು ದಶಕಗಳಿಂದ ಅವರೊಂದಿಗೆ ನಿಕಟವಾದ ಸಂಪರ್ಕವನ್ನು ಹೊಂದಿದ್ದಾರೆ.

''ಅವರು ಯಾವಾಗಲೂ ಮುಂದಿನ ಹೆಜ್ಜೆಯ ಕುರಿತು ಯೋಚಿಸುತ್ತಿದ್ದರು. ತೊಂಬತ್ತರ ದಶಕದಲ್ಲಿಯೇ ಅವರು ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಬಗ್ಗೆ ಮಾತನಾಡಲು ಪ್ರಾರಂಭಿಸಿದರು ಮತ್ತು ಎಲೆಕ್ಟ್ರಾನಿಕ್ಸ್ ಹಾರ್ಡ್‌ವೇರ್ ಕುರಿತು ನಾವು ಏನನ್ನೂ ಮಾಡುತ್ತಿಲ್ಲ ಎಂಬುದು ಅವರ ನಿರಂತರ ದುಃಖವಾಗಿತ್ತು'' ಎಂದು ಮಾಜಿ ನಾಸ್ಕಾಮ್ ಅಧ್ಯಕ್ಷ ಗಣೇಶ್ ನಟರಾಜನ್ ಎಕನಾಮಿಕ್ ಟೈಮ್ಸ್‌ಗೆ ತಿಳಿಸಿದ್ದಾರೆ.

ಎಫ್‌ಸಿ ಕೊಹ್ಲಿ 1924 ರ ಮಾರ್ಚ್ 19 ರಂದು ಬ್ರಿಟೀಷ್ ಆಡಳಿತದ ಪೇಶಾವರ್ನಲ್ಲಿ ಜನಿಸಿದರು. ಪೇಶಾವರದಲ್ಲಿಯೇ ಶಾಲಾ ಶಿಕ್ಷಣವನ್ನು ಮಾಡಿದ ಅವರು, ಲಾಹೋರ್‌ನ ಪಂಜಾಬ್ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಬಿಎಸ್ಸಿ ಪದವಿ ಪಡೆದರು, ಅಲ್ಲಿ ಅವರು ವಿಶ್ವವಿದ್ಯಾಲಯದ ಚಿನ್ನದ ಪದಕ ವಿಜೇತರಾಗಿದ್ದರು.

ನಂತರ 1948 ರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮುಗಿಸಿದರು. ಕೆನಡಿಯನ್ ಜನರಲ್ ಎಲೆಕ್ಟ್ರಿಕ್ ಕಂಪನಿಯಲ್ಲಿ ಒಂದು ವರ್ಷ ಕೆಲಸ ಮಾಡಿದರು ಮತ್ತು 1950 ರಲ್ಲಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಎಸ್ ಮಾಡಿದರು.

1951ರ ಆಗಸ್ಟ್ ಆರಂಭದಲ್ಲಿ ಅವರು ಭಾರತಕ್ಕೆ ಮರಳಿದರು. ನಂತರದಲ್ಲಿ ಟಾಟಾ ಎಲೆಕ್ಟ್ರಿಕ್ ಕಂಪನಿಗಳಿಗೆ ಸೇರುವ ಮೂಲಕ ಟಾಟಾ ಸಮೂಹದೊಂದಿಗಿನ ಸಂಬಂಧ ಬೆಳೆಯಿತು. ಸೆಪ್ಟೆಂಬರ್ 1969 ರಲ್ಲಿ ಅವರು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ಜನರಲ್ ಮ್ಯಾನೇಜರ್ ಆದರು. 1974 ರಲ್ಲಿ ಅವರನ್ನು ನಿರ್ದೇಶಕರಾಗಿ ಮತ್ತು 1994 ರಲ್ಲಿ ಟಿಸಿಎಸ್‌ನ ಉಪಾಧ್ಯಕ್ಷರನ್ನಾಗಿ ಮಾಡಲಾಯಿತು. ಟಿಸಿಎಸ್ ಅನ್ನು 1968 ರಲ್ಲಿ ಮುಂಬೈನಲ್ಲಿ ಸ್ಥಾಪಿಸಿದ ಬಳಿಕ, ಎಫ್‌ಸಿ ಕೊಹ್ಲಿಯನ್ನು ಟಿಸಿಎಸ್‌ನ ಮೊದಲ ಸಿಇಒ ಆಗಿ ನೇಮಿಸಲಾಯಿತು.

English summary
Faqir Chand Kohli or FC Kohli, often called the Father of the Indian software industry passed away at the age of 96 on Thursday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X