ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಪ್ರವೇಶಿಸಿದ ಇ ಕಿರಾಣಿ ಸಂಸ್ಥೆ ಡೀಲ್ ಶೇರ್

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಯಶಸ್ಸಿನ ನಂತರ ದೇಶದಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಸ್ಟಾರ್ಟ್ ಅಪ್ ಕಂಪನಿಯಾಗಿರುವ ಡೀಲ್ ಶೇರ್ ಇಂದು ತನ್ನ ರಾಷ್ಟ್ರವ್ಯಾಪಿ ವಿಸ್ತರಣೆಯ ಭಾಗವಾಗಿ ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ಕಾರ್ಯ ಚಟುವಟಿಕೆ ಆರಂಭಿಸಿದೆ.

ಈ ಸೇವೆಯು ಬೆಂಗಳೂರಿನಲ್ಲಿ ಒಂಬತ್ತು ಕಡೆ ಲಭ್ಯವಿದೆ. ಆ ಸ್ಥಳಗಳೆಂದರೆ- ಮಡಿವಾಳ, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲು, ಕೋರಮಂಗಲ, ಬಿ.ಟಿ.ಎಂ, ಎಚ್.ಎಸ್.ಆರ್. ಲೇಔಟ್, ಹರಳೂರು ರಸ್ತೆ, ಬೆಳ್ಳಂದೂರು ಮತ್ತು ಕಸವನಹಳ್ಳಿ. ಈ ಮೂಲಕ ಡೀಲ್‍ಶೇರ್ ತನ್ನ ಸೇವೆಯನ್ನು ದೇಶದಾದ್ಯಂತ 26 ನಗರಗಳಿಗೆ ವಿಸ್ತರಿಸಿದಂತಾಗಿದೆ. ಮುಂದುವರಿದು ಅವರು, ಬಹುಭಾಷಿಕ ಗ್ರಾಹಕರನ್ನು ತಲುಪಲು ಹಿಂದಿ ಹೊರತಾಗಿ ಸಂಸ್ಥೆಯ ಆ್ಯಪ್ ಇಂಗ್ಲಿಷ್, ಕನ್ನಡ, ಮರಾಠಿ, ಗುಜರಾತಿ ಭಾಷೆಗಳಲ್ಲಿ ಲಭ್ಯವಿದೆ.

ಬೆಂಗಳೂರಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಫ್ಲಿಪ್ ಕಾರ್ಟ್-ಮೆರು ಒಪ್ಪಂದಬೆಂಗಳೂರಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಫ್ಲಿಪ್ ಕಾರ್ಟ್-ಮೆರು ಒಪ್ಪಂದ

ಸಂಸ್ಥೆಯ ವಿಸ್ತರಣೆ ಕಾರ್ಯಕ್ರಮಗಳನ್ನು ಕುರಿತು ಮಾತನಾಡಿದ ಡೀಲ್‍ಶೇರ್ ಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿನೀತ್ ರಾವ್ ಅವರು, 'ಕರ್ನಾಟಕದಲ್ಲಿ ನಮ್ಮ ವಹಿವಾಟು ವಿಸ್ತರಿಸಲು ನಮಗೆ ಖುಷಿಯಾಗಲಿದೆ. ಡೀಲ್‍ಶೇರ್‍ನಲ್ಲಿ ನಮ್ಮ ಪ್ರಾಥಮಿಕ ಉದ್ದೇಶ ಎಲ್ಲ ಸ್ತರದ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವುದೇ ಆಗಿದೆ. ಸದ್ಯ, ಅತ್ಯಂತ ಕಡಿಮೆ ಅವಧಿ ಅಂದರೆ 15 ತಿಂಗಳ ಅವಧಿಯಲ್ಲಿ ಡೀಲ್‍ಶೇರ್ ಸುಮಾರು 15 ಲಕ್ಷ ಗ್ರಾಹಕರಿಗೆ ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಸೇವೆ ಒದಗಿಸುತ್ತಿದ್ದು, ಸದ್ಯ ಈ ಗ್ರಾಹಕರು ನಿಯಮಿತವಾಗಿ ಆ್ಯಪ್ ಬಳಸುತ್ತಿದ್ದಾರೆ.

ವಾಸ್ತವವಾಗಿ, ನಾವು ತಿಂಗಳಿನಿಂದ ತಿಂಗಳಿಗೆ ಈ ಮೂರು ರಾಜ್ಯಗಳಲ್ಲಿ ಶೇ 50 ರಷ್ಟು ಗ್ರಾಹಕರ ಸಂಖ್ಯೆಯಲ್ಲಿ ವೃದ್ಧಿಯನ್ನು ಕಾಣುತ್ತಿದ್ದೇವೆ. ಬೆಂಗಳೂರಿನಲ್ಲೂ ನಾವು ಇಂಥಹುದೇ ಪ್ರಗತಿಯನ್ನು ನಿರೀಕ್ಷೆ ಮಾಡುತ್ತಿದ್ದೇವೆ. ಬೆಂಗಳೂರು ನಗರ ಹೊಸ ಪ್ರಗತಿ, ಅನ್ವೇಷಣೆಯನ್ನು ಕ್ಷಿಪ್ತವಾಗಿ ಅಳವಡಿಸಿಕೊಳ್ಳುತ್ತಿರುವುದು ಇದಕ್ಕೆ ಕಾರಣ. ಮುಂದುವರಿದು, ನಾವು ನಮ್ಮ ವಹಿವಾಟು ವಿಸ್ತರಣೆಗೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದು, ಹಾಲಿ ಇರುವ ತಾಂತ್ರಿಕ ತಂಡದ ಗಾತ್ರವನ್ನು ಈಗಿನ 50ರಿಂದ 500 ಜನರಿಗೆ ಏರಿಸಲಿದ್ದೇವೆ' ಎಂದು ತಿಳಿಸಿದರು.

ಡೀಲ್‍ಶೇರ್ ಸ್ಥಾಪಕ ರಜತ್ ಶಿಖರ್

ಡೀಲ್‍ಶೇರ್ ಸ್ಥಾಪಕ ರಜತ್ ಶಿಖರ್

‘ಕರ್ನಾಟಕದಲ್ಲಿ ಸೇವೆಯನ್ನು ಆರಂಭಿಸುತ್ತಿರುವುದು ನಮಗೆ ಸಂತಸ ಮೂಡಿಸಿದೆ. ಲಾಕ್‍ಡೌನ್‍ನ ಈ ಅವಧಿಯಲ್ಲಿ ಪ್ರಮುಖ ಸಿಬ್ಬಂದಿಯ ಸಂಚಾರಕ್ಕೆ ಕಷ್ಟಕರವಾಗಿದೆ ಆದರೂ, ನಾವು ಉತ್ತಮ ಸೇವೆ ಮೂಲಕ ಗಣನೀಯ ಪರಿಣಾಮ ಉಂಟು ಮಾಡುವ ವಿಶ್ವಾಸದಲ್ಲಿದ್ದೇವೆ. ಮುಖ್ಯವಾಗಿ ಈ ಬಿಕ್ಕಟ್ಟಿನ ಸಂದರ್ಬದಲ್ಲಿ ಅಗತ್ಯ ವಸ್ತುಗಳನ್ನು, ಹಾಲಿ ಸೇವೆ ಒದಗಿಸುತ್ತಿರುವ ಇತರೆ ರಾಜ್ಯಗಳಂತೆಯೇ ಒದಗಿಸಲು ಒತ್ತು ನೀಡಲಿದ್ದೇವೆ. ಬೆಂಗಳೂರು ಹೊರತುಪಡಿಸಿ ಇನ್ನೂ 6-7 ನಗರಗಳಲ್ಲಿ ಮುಂದಿನ ಕೆಲವು ತಿಂಗಳಲ್ಲಿ ಸೇವೆಯನ್ನು ಆರಂಭಿಸಲಾಗುತ್ತದೆ' ಎಂದು ಡೀಲ್‍ಶೇರ್ ಸ್ಥಾಪಕ ಮತ್ತು ಸಿ.ಪಿ.ಒ ರಜತ್ ಶಿಖರ್ ಅವರು ಹೇಳಿದರು.

ಬೆಂಗಳೂರಿನಲ್ಲಿ ಡೀಲ್‍ಶೇರ್ ಸಂಸ್ಥೆಯು ಗ್ರಾಹಕರಿಗೆ ಸ್ಥಳೀಯವಾಗಿಯೇ ಸ್ವಾದೀನ ಪಡೆಯಲಾದ ದೇಶೀಯ, ಪ್ರಾದೇಶಿಕ ಹಂತದಲ್ಲಿ ಉತ್ಪಾದನೆಯಾಗಿರುವ, ಬ್ರಾಂಡ್‍ಗಳ ಉತ್ಪನ್ನಗಳನ್ನು ಅತ್ಯುತ್ತಮ ಬೆಲೆಗೆ ಪಡೆಯಬಹುದು. ಡೀಲ್‍ಶೇರ್ ಈ ನಿಟ್ಟಿನಲ್ಲಿ ಸುಮಾರು 150 ಮಂದಿ ಉತ್ಪಾದಕರ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಇವರಲ್ಲಿ 100 ಮಂದಿ ಸ್ಥಳೀಯ ಉತ್ಪಾದಕರಾಗಿದ್ದಾರೆ. ಈ ವಿಸ್ತರಣೆಯೊಂದಿಗೆ, ಒಟ್ಟಾರೆ ಉತ್ಪಾದಕರ ಬಲವು 250ರವರೆಗೂ ತಲುಪಲಿದೆ. ಸಂಸ್ಥೆಯು ಇದರ ಜೊತೆಗೆ ವಿಸ್ತಾರವದ ನೆಟ್‍ವರ್ಕ್ ಅನ್ನು ಸಣ್ಣ ಉದ್ಯಮಿಗಳ ನಡುವೆ ರೂಪಿಸಲು ಆದ್ಯತೆ ನೀಡಲಿದೆ. ಮುಂದುವರಿದು, ಸುಲಭವಾಗಿ ತಲುಪಿಸಲು ಹಾಗೂ ಇಂಗ್ಲೀಷ್ ಭಾಷಿಕರಲ್ಲದರಿಗೆ ಸ್ಥಳೀಯವಾಗಿ ಹಿಂದಿ ಮತ್ತು ಕನ್ನಡ ಭಾಷೆಯಲ್ಲಿಯೂ ಸಂವಹನದ ಲಭ್ಯತೆಯಿದೆ.

ಆಫೀಸರ್ ಸೂರ್ಜೆಯೆಂದು ಮೆಡ್ಡಾ

ಆಫೀಸರ್ ಸೂರ್ಜೆಯೆಂದು ಮೆಡ್ಡಾ

ಮುಂದುವರಿದು ಉತ್ಪನ್ನಗಳ ಶ್ರೇಣಿಯನ್ನು ಕುರಿತು ಮಾತನಾಡಿದ ಡೀಲ್‍ಶೇರ್ ಸ್ಥಾಪಕ, ಚೀಫ್ ಬ್ಯುಸಿನೆಸ್ ಆಫೀಸರ್ ಮತ್ತು ಚೀಫ್ ಫೈನಾನ್ಸ್ ಆಫೀಸರ್ ಸೂರ್ಜೆಯೆಂದು ಮೆಡ್ಡಾ ಅವರು, ‘ಒಟ್ಟಾರೆ ಶಾಪಿಂಗ್ ಅನುಭವಕ್ಕೆ ಹೊಸ ವ್ಯಾಖ್ಯಾನ ಬರೆಯುವುದರ ಜೊತೆಗೆ ನಾವು ಸ್ಥಳೀಯ ಉತ್ಪಾದಕರ ಜೊತೆಗೆ ಪಾಲುದಾರಿಕೆಯನ್ನು ಹೊಂದುತಿದ್ದೇವೆ. ತ್ವರಿತಗತಿಯಲ್ಲಿ ನಮ್ಮ ಗ್ರಾಹಕ ಬಲವನ್ನು ಉತ್ತಮಪಡಿಸುತ್ತಿದ್ದೇವೆ. ಬೆಂಗಳೂರು ದಕ್ಷಿಣ ಭಾರತದಲ್ಲಿ ಡೀಲ್‍ಶೇರ್‍ನ ಹಬ್ ಆಗಿದ್ದು, ಕರ್ನಾಟಕದ ಹಲವು ನಗರ, ಪಟ್ಟಣಗಳು ಹಾಗೂ ದಕ್ಷಿಣದ ರಾಜ್ಯಗಳಲ್ಲಿ ನಮ್ಮ ವಹಿವಾಟು ವಿಸ್ತರಿಸುತ್ತಿದ್ದೇವೆ. ನಾವು ಮುಂದಿನ ಕೆಲವು ತಿಂಗಳುಗಳಲ್ಲಿ ಚೆನ್ನೈ ಮತ್ತು ಹೈದರಾಬಾದ್‍ಗೆ ವಹಿವಾಟು ವಿಸ್ತರಿಸುತ್ತಿದ್ದೇವೆ. ಇದರ ಜೊತೆಗೆ ರಾಜ್ಯದಲ್ಲಿ ಸಣ್ಣ ಉತ್ಪಾದಕ ವಲಯಕ್ಕೂ ಚೇತರಿಕೆ ನೀಡುವ ಗುರಿಯನ್ನು ಹೊಂದಿದ್ದೇವೆ. ಡೀಲ್‍ಶೇರ್ ದೋಸ್ತ್ ಎಂಬುದು ನವೀನ ಕಾರ್ಯ ಕ್ರಮವಾಗಿದ್ದು, ಈ ಮೂಲಕ ಯಾವುದೇ ಸಣ್ಣ ಉದ್ಯಮಗಳು ಡೀಲ್‍ಶೇರ್ ಲಾಜಿಸ್ಟಿಕ್ ಜೊತೆಗೆ ಕೈಜೋಡಿಸಬಹುದಾಗಿದೆ. ಅಲ್ಲದೆ, ಮಾಸಿಕ ರೂ. 1 ಲಕ್ಷ ರೂಪಾಯಿವರೆಗೆ ಸಂಪಾದಿಸಬಹುದಾಗಿದೆ' ಎಂದು ತಿಳಿಸಿದರು.

ಡೀಲ್‍ಶೇರ್ ಬಿ2ಬಿ ವೇದಿಕೆಯನ್ನು ಆರಂಭಿಸಿದೆ

ಡೀಲ್‍ಶೇರ್ ಬಿ2ಬಿ ವೇದಿಕೆಯನ್ನು ಆರಂಭಿಸಿದೆ

ಬಿ2ಸಿ ವೇದಿಕೆಯ ಜೊತೆಗೆ ಡೀಲ್‍ಶೇರ್ ಬಿ2ಬಿ ವೇದಿಕೆಯನ್ನು ಆರಂಭಿಸಿದೆ. ಇದನ್ನು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳಿಗೆ ಅಗತ್ಯವಸ್ತುಗಳನ್ನು ನಿರಾಯಾಸವಾಗಿ ತನ್ನ ಗ್ರಾಹಕರಿಗೆ ಕೋವಿಡ್-19ನ ಈಗಿನ ಸಂದರ್ಭದಲ್ಲಿ ತಲುಪಿಸಲು ನೆರವಾಗಲಿದೆ.

ಸೆಪ್ಟೆಂಬರ್ 2018ರಲ್ಲಿ ಸ್ಥಾಪನೆಯಾದ ಡೀಲ್‍ಶೇರ್, ಈಗ ಪ್ರಮುಖ ಇ-ಗ್ರಾಸರಿ ಸಂಸ್ಥೆಯಾಗಿ ಹೊರ ಹೊಮ್ಮಿದೆ. ಇಲ್ಲಿ, ಇ-ಕಾಮರ್ಸ್ ಮತ್ತು ಸಾಮಾಜಿಕ ಜಾಲತಾಣದ ವೇದಿಕೆಯನ್ನು ಗ್ರಾಹಕರು ತಮಗೆ ಅಗತ್ಯವಿರುವ ಸರಕುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಅಗತ್ಯ ನೆರವು ನೀಡಲಾಗುವುದು, ಅಲ್ಲದೆ, ಸಮೂಹದ ಖರೀದಿಗೂ ಉತ್ತೇಜನ ನೀಡಲಾಗುವುದು. ಇ-ಗ್ರಾಸರಿ 2.0 ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವ ಡೀಲ್‍ಶೇರ್ ಸ್ಥಳೀಯ ಭಾಷೆಗಳಲ್ಲಿ ಸಂವಹನ ಮಾಡಲು ಇರುವ ತೊಡಕುಗಳನ್ನು ನಿವಾರಿಸಿದೆ. ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಡೀಲ್‍ಶೇರ್ ಈಗಾಗಲೇ ಸೀಡ್ ಮತ್ತು ಸೀರಿಸ್-ಎ ಸುತ್ತಿನಲ್ಲಿ ಒಟ್ಟು 11 ಮಿಲಿಯನ್ ಡಾಲರ್ ಬಂಡವಾಳವನ್ನು ಮ್ಯಾಟ್ರಿಕ್ಸ್ ಪಾರ್ಟ್‍ನರ್ಸ್ ಇಂಡಿಯಾ, ಫಾಲ್ಕನ್ ಎಡ್ಜ್ ಕ್ಯಾಪಿಟಲ್, ಪಾರ್ಟ್‍ನರ್ಸ್ ಆಫ್ ಡಿ.ಟಿ.ಎಸ್ ಗ್ಲೋಬಲ್, ಒಮಿಡಿಯರ್ ನೆಟ್‍ವರ್ಕ್ ಇಂಡಿಯಾ ಮತ್ತು ಇತರೆ ಹೂಡಿಕೆದಾರರಿಂದ ಸಂಗ್ರಹಿಸಿದೆ.

ಡೀಲ್‍ಶೇರ್ ಕುರಿತು

ಡೀಲ್‍ಶೇರ್ ಕುರಿತು

ಡೀಲ್‍ಶೇರ್ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಇ-ಗ್ರಾಸರಿ ಮಾದರಿಯನ್ನು ಒಳಗೊಂಡ ಉದ್ಯಮವಾಗಿದ್ದು, ಹೊಸಪೀಳಿಗೆಯ ಬಳಕೆದಾರರಿಗೆ ಇ-ರೀಟೇಲ್ ಕ್ಷೇತ್ರಕ್ಕೆ ಹೊಸ ವ್ಯಾಖ್ಯಾನ ಬರೆಯುತ್ತಿದೆ. ಜೈಪುರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, ಬೆಂಗಳೂರು, ಅಹಮದಾಬಾದ್, ಮುಂಬೈನಲ್ಲಿ ಕಚೇರಿಗಳನ್ನು ಹೊಂದಿದೆ. ಡೀಲ್‍ಶೇರ್ ಸ್ಥಳೀಯ ಮಟ್ಟದ ಇ-ರೀಟೇಲ್ ಉದ್ಯಮವಾಗಿದ್ದು 5ನೇ ಸೆಪ್ಟೆಂಬರ್ 2018ರಲ್ಲಿ ಸ್ಥಾಪನೆಯಾಯಿತು. ಡೀಲ್‍ಶೇರ್ ಪ್ರಸ್ತುತ ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದ ಎಲ್ಲ ಪ್ರಮುಖ ಮತ್ತು ಸಣ್ಣ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಡೀಲ್‍ಶೇರ್ ಎಂಬುದು ಅನ್ವೇಷಣೆ ಆಧಾರಿತ ಉದ್ಯಮವಾಗಿದೆ.

ಇದು, ಗ್ರಾಹಕರಿಗೆ ಹೊಸ ರಿಯಾಯಿತಿಯನ್ನು ಮನೆಬಳಕೆ ವಸ್ತುಗಳ ಮೇಲೆ ನೀಡಲಿದೆ. ಇಲ್ಲಿ ದೊರೆಯುವ ರಿಯಾಯಿತಿಗಳು ಸಾಮಾನ್ಯವಾಗಿ ಇತರೆ ಇ-ಗ್ರಾಸರಿ ವೇದಿಕೆಗಳಲ್ಲಿ ದೊರೆಯುವುದಕ್ಕಿಂತಲೂ ಭಿನ್ನವಾಗಿರುತ್ತದೆ. ಸರಾಸರಿ 2000ದರಷ್ಟು ಘಟಕಗಳು ಎಲ್ಲ ವರ್ಗದಲ್ಲಿ ದಾಸ್ತಾನು ಇರುತ್ತವೆ. ಡೀಲ್‍ಶೇರ್ ನಿತ್ಯ 30,000 ದಿಂದ 40,000 ಕಾರ್ಯಾದೇಶಗಳನ್ನು ಸ್ಥಳೀಯ ಕಿರಾಣಾ ಸ್ಟೋರ್‍ಗಳ ಪಾಲುದಾರರ ಮೂಲಕ ಕಾರ್ಯಗತಗೊಳಿಸುತ್ತಿದೆ. ಪ್ರಸ್ತುತ ಡೀಲ್ ಶೇರ್ ತನ್ನ ವ್ಯಾಪ್ತಿಯಲ್ಲಿ 150 ಉತ್ಪಾದಕರು ಮತ್ತು ವಿತರಕರನ್ನು ಹೊಂದಿದ್ದು, ಇವರ ಪೈಕಿ ಶೇ 70ರಷ್ಟು ಮಂದಿ ಸ್ಥಳೀಯರಾಗಿದ್ದಾರೆ.

English summary
DealShare, one of the fastest-growing e-commerce start-up, today announced their aggressive national expansion plans by launching their operations in Bengaluru, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X