ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಪ್ರತಿಭಟನೆ ಪರಿಣಾಮ: ಎರಡು ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಗ್ರಾಹಕರನ್ನು ಕಳೆದುಕೊಂಡ ಜಿಯೋ

|
Google Oneindia Kannada News

ಅಮೃತಸರ, ಫೆಬ್ರವರಿ 27: ರೈತರ ಪ್ರತಿಭಟನೆ ವೇಳೆ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿ ಸಮೂಹದ ಉತ್ಪನ್ನಗಳನ್ನು ತಿರಸ್ಕರಿಸುವ ಚಳವಳಿ ನಡೆದಿತ್ತು. ಮುಖ್ಯವಾಗಿ ರಿಲಯನ್ಸ್ ಜಿಯೋ ಸಿಮ್‌ಅನ್ನು ಎಸೆಯುವ ಅಥವಾ ಪೋರ್ಟ್ ಮಾಡುವ ಚಳವಳಿ ತೀವ್ರಗೊಂಡಿತ್ತು. ಈ ಆಂದೋಲನವು 2020ರ ಡಿಸೆಂಬರ್‌ ತಿಂಗಳಿನಿಂದ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿಯೇ ರಿಲಯನ್ಸ್ ಜಿಯೋ ಸುಮಾರು 20 ಲಕ್ಷ ಗ್ರಾಹಕರನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದು ವರದಿಯೊಂದು ತಿಳಿಸಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ದತ್ತಾಂಶಗಳ ಪ್ರಕಾರ ಪಂಜಾಬ್ ಮತ್ತು ಹರ್ಯಾಣಗಳಲ್ಲಿ ರಿಲಯನ್ಸ್ ಜಿಯೋ ಭಾರಿ ಪ್ರಮಾಣದಲ್ಲಿ ಗ್ರಾಹಕರನ್ನು ಕಳೆದುಕೊಂಡಿದೆ. ಇದೆ ಸಮಯದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಈ ಎರಡೂ ರಾಜ್ಯಗಳಲ್ಲಿ ತನ್ನ ಗ್ರಾಹಕರನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದೆ. ಇತರೆ ಖಾಸಗಿ ದೂರಸಂಪರ್ಕ ಸೇವೆಗಳಿದ್ದರೂ, ರಿಲಯನ್ಸ್ ಮಾತ್ರ ದೊಡ್ಡ ಪ್ರಮಾಣದಲ್ಲಿ ಗ್ರಾಹಕರ ನಷ್ಟ ಅನುಭವಿಸಿದೆ.

"ಜಿಯೋ ರೈತ ವಿರೋಧಿಯಲ್ಲ'' ಆರೋಪ ನಿರಾಕರಿಸಿದ ಏರ್ ಟೆಲ್, ವಿಐಎಲ್

ರೈತರ ಪ್ರತಿಭಟನೆ ವೇಳೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಎದುರಿಸಿದ ಪ್ರತಿರೋಧಕ್ಕೂ, ಸಂಸ್ಥೆಯ ಗ್ರಾಹಕರ ಕುಸಿತಕ್ಕೂ ನೇರ ಸಂಬಂಧ ಇದೆ ಎಂದು ಈ ದತ್ತಾಂಶದಿಂದ ಹೇಳಲು ಸಾಧ್ಯವಾಗದು. ಆದರೆ ತನ್ನ ವಿರುದ್ಧ ದುರುದ್ದೇಶದ ಮತ್ತು ಪ್ರಚೋದಿತ ಪ್ರಚಾರ ನಡೆಯುತ್ತಿದೆ ಎಂದು ಜಿಯೋ ಆರೋಪಿಸಿತ್ತು. ಹೀಗಾಗಿ ಜಿಯೋದ ಹೆಚ್ಚಿನ ನಷ್ಟಕ್ಕೆ ಪ್ರತಿಭಟನೆ ಹಾಗೂ ಅದರ ಸುತ್ತಲಿನ ಘಟನೆಗಳು ಕಾರಣ ಎಂದು ಹೇಳಲಾಗಿದೆ.

ರೈತರ ಪ್ರತಿಭಟನೆಯಲ್ಲಿ ಸಿಮ್ ಬಹಿಷ್ಕಾರ: ಏರ್ಟೆಲ್, ವಿಐ ವಿರುದ್ಧ ಜಿಯೋ ಆರೋಪರೈತರ ಪ್ರತಿಭಟನೆಯಲ್ಲಿ ಸಿಮ್ ಬಹಿಷ್ಕಾರ: ಏರ್ಟೆಲ್, ವಿಐ ವಿರುದ್ಧ ಜಿಯೋ ಆರೋಪ

ಒಮ್ಮೆ ಕುಸಿತ ಕಂಡಿತ್ತು

ಒಮ್ಮೆ ಕುಸಿತ ಕಂಡಿತ್ತು

2016ರ ಸೆಪ್ಟೆಂಬರ್ ತಿಂಗಳಲ್ಲಿ ವಾಣಿಜ್ಯಾತ್ಮಕವಾಗಿ ಜಿಯೋ ಬಿಡುಗಡೆಯಾಗಿತ್ತು. ಈ ನಾಲ್ಕೇ ವರ್ಷಗಳಲ್ಲಿ ಅದು ದೇಶದ ಅತಿ ದೊಡ್ಡ ಟೆಲಿಕಾಂ ಕಂಪೆನಿಯಾಗಿ ಬೆಳೆದಿದೆ. ಇದಕ್ಕೂ ಮುನ್ನ ಅದು ಪಂಜಾಬ್‌ನಲ್ಲಿ ಒಮ್ಮೆ ಗ್ರಾಹಕರ ಕುಸಿತವನ್ನು ಎದುರಿಸಿತ್ತು. 2019ರ ಡಿಸೆಂಬರ್ ತಿಂಗಳಲ್ಲಿ ಬಿಎಸ್‌ಎನ್‌ಎಲ್ ಹೊರತುಪಡಿಸಿ ಪಂಜಾಬ್ ವಲಯದಲ್ಲಿ ಎಲ್ಲ ಪ್ರಮುಖ ಕಂಪೆನಿಗಳೂ ಚಂದಾದಾರರ ನಷ್ಟ ಅನುಭವಿಸಿದ್ದವು.

1.25 ಕೋಟಿ ಚಂದಾದಾರರು

1.25 ಕೋಟಿ ಚಂದಾದಾರರು

2020ರ ನವೆಂಬರ್ ತಿಂಗಳಲ್ಲಿ ಪಂಜಾಬ್‌ನಲ್ಲಿ 1.40 ಕೋಟಿ ಚಂದಾದಾರರನ್ನು ಹೊಂದಿದ್ದ ಜಿಯೋ, ಡಿಸೆಂಬರ್ ಅಂತ್ಯದ ವೇಳೆಗೆ 1.25 ಕೋಟಿ ಚಂದಾದಾರರಿಗೆ ಇಳಿಕೆ ಕಂಡಿದೆ. ಇದು 18 ತಿಂಗಳಲ್ಲಿಯೇ ಅತಿ ದೊಡ್ಡ ಕುಸಿತ. ತಮ್ಮ ವಾಣಿಜ್ಯಾತ್ಮಕ ಬಳಕೆ ಆರಂಭಿಸಿದ ಬಳಿಕ ಜಿಯೋ ತನ್ನ ಗ್ರಾಹಕರಲ್ಲಿ ಕುಸಿತ ಕಂಡಿರುವುದು ಇದು ಎರಡನೆಯ ಸಲವಷ್ಟೇ.

ಹರ್ಯಾಣದಲ್ಲಿ ಜಿಯೋ

ಹರ್ಯಾಣದಲ್ಲಿ ಜಿಯೋ

ಡಿಸೆಂಬರ್ 2020ರಲ್ಲಿ ಜಿಯೋ ಹರ್ಯಾಣ ರಾಜ್ಯದಲ್ಲಿ 89.07 ಲಕ್ಷ ವೈರ್‌ಲೆಸ್ ಚಂದಾದಾರ ಸಂಖ್ಯೆಗಳನ್ನು ಕಳೆದುಕೊಂಡಿದೆ. ಅದರ ಹಿಂದಿನ ತಿಂಗಳು ಹರ್ಯಾಣದಲ್ಲಿ 94.48 ಲಕ್ಷ ಗ್ರಾಹಕರಿದ್ದರು. ಈ ರಾಜ್ಯದಲ್ಲಿ ಜಿಯೋ 2016ರ ಸೆಪ್ಟೆಂಬರ್‌ನಲ್ಲಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಮೊದಲ ಬಾರಿ ಗ್ರಾಹಕರನ್ನು ಕಳೆದುಕೊಂಡಿದೆ.

ಪಂಜಾಬ್‌ನಲ್ಲಿ ಟೆಲಿಕಾಂ ಗ್ರಾಹಕರು

ಪಂಜಾಬ್‌ನಲ್ಲಿ ಟೆಲಿಕಾಂ ಗ್ರಾಹಕರು

ಈ ನಡುವೆ ಪಂಜಾಬ್‌ನಲ್ಲಿ ವೊಡಾಫೋನ್ ಐಡಿಯಾದ ಗ್ರಾಹಕರ ಸಂಖ್ಯೆ ಏರಿಕೆಯಾಗಿದೆ. ನವೆಂಬರ್ ತಿಂಗಳಲ್ಲಿ ವಿಐ ಚಂದಾದಾರರು 86.42 ಲಕ್ಷ ಇದ್ದರು. ಡಿಸೆಂಬರ್ ಅಂತ್ಯಕ್ಕೆ ಅದು 87.11 ಲಕ್ಷಕ್ಕೆ ಹೆಚ್ಚಿದೆ. ಹಾಗೆಯೇ ಏರ್‌ಟೆಲ್ ಕೂಡ 1.05 ಕೋಟಿಯಿಂದ 1.06 ಕೋಟಿಗೆ ಗ್ರಾಹಕರನ್ನು ಹೆಚ್ಚಿಸಿಕೊಂಡಿದೆ.

ಹರ್ಯಾಣದಲ್ಲಿ ಗ್ರಾಹಕರು

ಹರ್ಯಾಣದಲ್ಲಿ ಗ್ರಾಹಕರು

ಹರ್ಯಾಣದಲ್ಲಿ 2020ರ ನವೆಂಬರ್‌ನಲ್ಲಿ 49.56 ಲಕ್ಷ ಇದ್ದ ಏರ್‌ಟೆಲ್ ಗ್ರಾಹಕರ ಸಂಖ್ಯೆ ಡಿಸೆಂಬರ್‌ಗೆ 50.79 ಲಕ್ಷಕ್ಕೆ ಹೆಚ್ಚಿದೆ. ವೊಡಾಫೋನ್ ಐಡಿಯಾಕ್ಕೆ ನವೆಂಬರ್ ತಿಂಗಳಲ್ಲಿ 80.23 ಲಕ್ಷ ಚಂದಾದಾರರಿದ್ದರು. ಅದೀಗ 80.42 ಲಕ್ಷಕ್ಕೆ ತಲುಪಿದೆ. ಈ ಎರಡೂ ರಾಜ್ಯಗಳಲ್ಲಿ ಬಿಎಸ್‌ಎನ್‌ಎಲ್ ಕೂಡ ಗ್ರಾಹಕರನ್ನು ಹೆಚ್ಚಿಸಿಕೊಂಡಿದೆ. ಆದರೆ ಅದರ ಸಂಖ್ಯೆ ಲಭ್ಯವಾಗಿಲ್ಲ.

English summary
Farmers Protest: Reliance Jio recorded a fall around 20 lakh wireless subscribers in Punjab and Haryana in December 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X