ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಸಾಲಗಳ ಮೌಲ್ಯಮಾಪನಕ್ಕೆ ಉಪಗ್ರಹದಿಂದ ಡೇಟಾ ತೆಗೆದುಕೊಳ್ಳುವ ಐಸಿಐಸಿಐ ಬ್ಯಾಂಕ್

|
Google Oneindia Kannada News

ನವದೆಹಲಿ, ಆಗಸ್ಟ್‌ 26: ಭಾರತದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ಐಸಿಐಸಿಐ ಬ್ಯಾಂಕ್ ಲಿಮಿಟೆಡ್‌ ಕೃಷಿ ಸಾಲಗಳ ಮೌಲ್ಯಮಾಪನಕ್ಕಾಗಿ ಉಪಗ್ರಹಗಳ ದತ್ತಾಂಶವನ್ನು ಬಳಕೆ ಮಾಡಿಕೊಳ್ಳುತ್ತಿದೆ. ಈ ಮೂಲಕ ರೈತರಿಗೆ ಸಾಲ ನೀಡುವ ವ್ಯವಸ್ಥೆಯಲ್ಲಿ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯ ಎಂದಿದೆ.

ಭಾರತದ ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಕಳೆದ ಎರಡು ವರ್ಷಗಳಿಂದ ಆಯ್ದ ಕೆಲವು ಹಳ್ಳಿಗಳಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ನಡೆಸುತ್ತಿದೆ ಮತ್ತು ಈಗ ಅದನ್ನು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ನ 500 ಹಳ್ಳಿಗಳಿಗೆ ವಿಸ್ತರಿಸುತ್ತಿದೆ.

8.4 ಲಕ್ಷ ಕೋಟಿ ರೂಪಾಯಿ ಸಾಲ ಪುನಾರಚನೆಗೆ ಬ್ಯಾಂಕುಗಳು ರೆಡಿ8.4 ಲಕ್ಷ ಕೋಟಿ ರೂಪಾಯಿ ಸಾಲ ಪುನಾರಚನೆಗೆ ಬ್ಯಾಂಕುಗಳು ರೆಡಿ

ಈ ಉದ್ದೇಶಕ್ಕಾಗಿ ಬ್ಯಾಂಕ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಯು.ಎಸ್.ನ ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತದಿಂದ ಸುಲಭವಾಗಿ ಲಭ್ಯವಿರುವ ಉಪಗ್ರಹ ಚಿತ್ರಗಳನ್ನು ಬಳಸುತ್ತಿದೆ.

Farm Loans: ICICI Bank Will Use Satellite Data To Determine Farmers Creditworthiness

"ಮುಂದಿನ ಒಂದು ತಿಂಗಳಲ್ಲಿ ನಾವು 25 ಸಾವಿರ ಹಳ್ಳಿಗಳನ್ನು ಒಳಗೊಳ್ಳುತ್ತೇವೆ ಮತ್ತು ಮುಂದಿನ ಎರಡು ತಿಂಗಳಲ್ಲಿ ಅದನ್ನು 63,000 ಹಳ್ಳಿಗಳಿಗೆ ಅಳೆಯುತ್ತೇವೆ" ಎಂದು ಐಸಿಐಸಿಐ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಅನುಪ್ ಬಾಗ್ಚಿ ಮಂಗಳವಾರ ಹೇಳಿದ್ದಾರೆ.

2020-21ರ ಮೊದಲ ತ್ರೈಮಾಸಿಕದಲ್ಲಿ ಐಸಿಐಸಿಐ ಬ್ಯಾಂಕಿನ ಕೃಷಿ ಸಾಲವು ವರ್ಷದಿಂದ ವರ್ಷಕ್ಕೆ ಶೇಕಡಾ 14.3ನಷ್ಟು ಹೆಚ್ಚಳವಾಗಿ ಸುಮಾರು 58,000 ಕೋಟಿ ರೂ.ಗಳಿಗೆ ತಲುಪಿದೆ ಎಂದು ಹೇಳಿದ್ದಾರೆ. ಉಪಗ್ರಹಗಳ ಫೋಟೋ ಬಳಕೆಯಿಂದ ಸ್ಥಳಕ್ಕೆ ಹೋಗುವ ವೆಚ್ಚ ಹಾಗೂ ಸಮಯ ಉಳಿತಾಯ ಸಾಧ್ಯ ಎಂದು ಬ್ಯಾಂಕ್ ಹೇಳಿದೆ.

English summary
The same satellite data that predicts when the next storm is going hit will now be used by ICICI Bank to determine farmer's creditworthiness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X