ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರುಪಾಯಿ ದುರ್ಬಲ ಆಗುತ್ತಿದ್ದಂತೆ ವಿದೇಶಿ ಹಣದ ಹರಿವು ಹೆಚ್ಚಾಗಿದೆ ಏಕೆ?

|
Google Oneindia Kannada News

ಡಾಲರ್ ವಿರುದ್ಧ ರುಪಾಯಿ ಮೌಲ್ಯ ಬೀಳುತ್ತಲೇ ಇದೆ ಎಂಬ ಆತಂಕದಲ್ಲಿ ಸರಕಾರವಿದೆ. ಆದರೆ ವಿದೇಶಗಳಲ್ಲಿ ಉದ್ಯೋಗ ಮಾಡುವ ಭಾರತೀಯರು ಅಲ್ಲಿ ದುಡಿದ ಹಣವನ್ನು ಉಳಿತಾಯ ಮಾಡಿದ್ದ ಹಣವನ್ನೂ ಈಗ ಭಾರತಕ್ಕೆ ಕಳಿಸುತ್ತಿದ್ದಾರೆ.

ಡಾಲರ್ ವಿರುದ್ಧ ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡ ನಂತರ ಯಾವುದೇ ವಿದೇಶಿ ಕರೆನ್ಸಿಯನ್ನು ಭಾರತಕ್ಕೆ ಕಳಿಸಿದರೆ ಈ ಹಿಂದೆಂದಿಗಿಂತಲೂ ಹೆಚ್ಚಿನ ಹಣ ಸಿಗುತ್ತಿದೆ. ಒಂದು ಉದಾಹರಣೆ ನೋಡಿ 1 ಸಾವಿರ ಅಮೆರಿಕನ್ ಡಾಲರ್ ಖಾತೆಯಲ್ಲಿದ್ದವರಿಗೆ ಈ ಹಿಂದೆ 65 ಸಾವಿರ ರುಪಾಯಿ ಸಿಗುತ್ತಿತ್ತು.

ಡಾಲರ್ ವಿರುದ್ಧ ಮುಂದುವರಿದ ರುಪಾಯಿ ಮೌಲ್ಯ ಕುಸಿತ, ಇದು ನಿಲ್ಲೋದೆಲ್ಲಿ?ಡಾಲರ್ ವಿರುದ್ಧ ಮುಂದುವರಿದ ರುಪಾಯಿ ಮೌಲ್ಯ ಕುಸಿತ, ಇದು ನಿಲ್ಲೋದೆಲ್ಲಿ?

ಈಗ ಒಂದು ಡಾಲರ್ 71.87 ರುಪಾಯಿಗೆ ಏರಿಕೆ ಕಂಡಿದೆ. ಅದೇ ಒಂದು ಸಾವಿರ ಡಾಲರ್ ಗೆ 71,870 ರುಪಾಯಿ ಸಿಗುತ್ತದೆ. ಈ ವರ್ಷದಲ್ಲೇ ಡಾಲರ್ ವಿರುದ್ಧ ರುಪಾಯಿ ಮೌಲ್ಯ 10 ಪರ್ಸೆಂಟ್ ಕುಸಿದಿದೆ. ಯುಎಇ ಕರೆನ್ಸಿ ದಿರ್ಹಾಮ್ ರು. 19.3 ಇತ್ತು (ಆಗಸ್ಟ್ 30) ಮತ್ತು ದಿರ್ಹಾಮ್ ಒಟ್ಟಾಗಿ ಡಾಲರ್ ಪಡೆಯುತ್ತಾರೆ.

Fall in Rupee prompts Indians working abroad to send money back home

ರುಪಾಯಿ ಮೌಲ್ಯ ಡಾಲರ್ ವಿರುದ್ಧ ಕುಸಿದಿರುವ ಕಾರಣಕ್ಕೆ ದಿರ್ಹಾಮ್ ವಿರುದ್ಧ ಕೂಡ ರುಪಾಯಿ ಮೌಲ್ಯ ಇಳಿಕೆಯಾಗಿದೆ. ಈ ತಿಂಗಳಲ್ಲಿ ಮನೆಗಳಿಗೆ ಹಣ ವಾಪಸ್ ಕಳಿಸುತ್ತಿರುವವರು ಯುಎಇನಲ್ಲಿ ಹೆಚ್ಚಾಗಿದ್ದಾರೆ. ವಿದೇಶಗಳಲ್ಲಿ ದುಡಿಯುತ್ತಿರುವವರಿಗೆ ಹಿಂದೆಂದಿಗಿಂತ ಹೆಚ್ಚು ರುಪಾಯಿ ದೊರೆಯುತ್ತಿದೆ. ಆದರೆ ಇದು ಹೀಗೇ ಮುಂದುವರಿದರೆ ರುಪಾಯಿಯ ಖರೀದಿ ಶಕ್ತಿ ಇಳಿಯುತ್ತದೆ.

ಹೀಗಾದಲ್ಲಿ ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸಲು ಹೆಚ್ಚು ಹಣವನ್ನು ನೀಡಬೇಕಾಗುತ್ತದೆ.

English summary
The sharp fall in the value of Rupee may have left the policy makers worried, but for Indians working abroad its time to sent the money back home. Since the Rupee has hit an all time low against the Dollar, any conversion from foreign currency will fetch more Indian currency now than ever before.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X