• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಜಿಡಿಪಿ ಕುಸಿತ ಬಹುದೊಡ್ಡ ಎಚ್ಚರಿಕೆ: ರಘುರಾಮ್ ರಾಜನ್

|

ನವದೆಹಲಿ, ಸೆಪ್ಟೆಂಬರ್ 07: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ. 23.9ರಷ್ಟು ಕುಸಿತ ಕಂಡಿರುವುದು ಎಚ್ಚರಿಕೆಯ ಕರೆಗಂಟೆ ಎಂದು ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಪ್ರಸ್ತುತ ಬಿಕ್ಕಟ್ಟಿಗೆ ಹೆಚ್ಚು ಚಿಂತನಶೀಲ ಮತ್ತು ಸಕ್ರಿಯ ಸರ್ಕಾರದ ಅಗತ್ಯವಿದೆ. ದುರದೃಷ್ಟವಶಾತ್, ಆರಂಭಿಕ ಚಟುವಟಿಕೆಯ ಸ್ಫೋಟದ ನಂತರ, ಅದು ಚಿಪ್ಪಿನೊಳಗೆ ಹಿಮ್ಮೆಟ್ಟಿದಂತೆ ತೋರುತ್ತದೆ ಎಂದು ಅವರು ಹೇಳಿದರು.

ಭಾರತದ ಜಿಡಿಪಿ ಕುಸಿತ: 'ಆರ್ಥಿಕ ದುರಂತ' ಎಂದ ಪಿ. ಚಿದಂಬರಂ

ಅಧಿಕಾರದಲ್ಲಿದ್ದವರು ನಿದ್ರೆಯಿಂದ ಹೊರಬಂದು ಅರ್ಥಪೂರ್ಣ ಕ್ರಮ ತೆಗೆದುಕೊಳ್ಳಬೇಕು. ಪ್ರಸ್ತುತ ಬಿಕ್ಕಟ್ಟಿಗೆ ಹೆಚ್ಚು ಚಿಂತನಶೀಲ ಮತ್ತು ಕ್ರಿಯಾಶೀಲ ಸರ್ಕಾರಿ ನೀತಿ ಅಗತ್ಯವಿದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

"ಆರ್ಥಿಕ ಬೆಳವಣಿಗೆಯ ತೀವ್ರ ಕುಸಿತವು ನಮ್ಮೆಲ್ಲರಿಗೆ ಎಚ್ಚರಿಕೆ. ಭಾರತದಲ್ಲಿ ಶೇಕಡಾ 23.9 ರಷ್ಟು ಸಂಕೋಚನ (ಮತ್ತು ಅನೌಪಚಾರಿಕ ವಲಯದಲ್ಲಿನ ಹಾನಿಯ ಅಂದಾಜುಗಳನ್ನು ನಾವು ಪಡೆದಾಗ ಸಂಖ್ಯೆಗಳು ಇನ್ನಷ್ಟು ಕೆಟ್ಟದಾಗಿರಲಿದೆ. ) ಇಟಲಿಯಲ್ಲಿ ಶೇಕಡಾ 12.4 ರಷ್ಟು ಕುಸಿತದೊಂದಿಗೆ ಹೋಲಿಸುತ್ತೇನೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಶೇಕಡಾ 9.5 ರಷ್ಟು ಕುಸಿತ ದಾಖಲಾಗಿದೆ. ಆ ಎರಡೂ ಕೋವಿಡ್ -19 ಪೀಡಿತ ಮುಂದುವರಿದ ರಾಷ್ಟ್ರಗಳು." ರಾಜನ್ ತಮ್ಮ ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

"ಭೀಕರವಾದ ಜಿಡಿಪಿ ಕುಸಿತದಲ್ಲಿ ಚಿಕ್ಕ ಬೆಳ್ಳಿ ಗೆರೆ ಮೂಡಿದ್ದರೆ ಅದು ಆಶಾದಾಯಕವಾಗಿದೆ"ಪ್ರಸ್ತುತ ಚಿಕಾಗೊ ವಿಶ್ವವಿದ್ಯಾಲಯದ ಪ್ರಾದ್ಯಾಪಕರಾಗಿರುವ ರಾಜನ್ ಹೇಳಿದ್ದಾರೆ. ಕೋವಿಡ್ -19 ಸಾಂಕ್ರಾಮಿಕವು ಭಾರತದಲ್ಲಿ ಇನ್ನೂ ಉಲ್ಬಣಗೊಳ್ಳುತ್ತಿದೆ, ಆದ್ದರಿಂದ ವಿವೇಚನೆಯ ಖರ್ಚು, ವಿಶೇಷವಾಗಿ ಹೆಚ್ಚಿನ ವೈರಸ್ ಇರುವವರೆಗೂ ರೆಸ್ಟೋರೆಂಟ್‌ಗಳಂತಹ ಸಂಪರ್ಕ ಸೇವೆಗಳು ಮತ್ತು ಅದಕ್ಕೆ ಸಂಬಂಧಿಸಿದ ಉದ್ಯೋಗಗಳು ಕಡಿಮೆ ಇರಲಿದೆ. ಸರ್ಕಾರ ಹೆಚ್ಚಿನ ನೆರವನ್ನು ನೀಡಲು ಹಿಂಜರಿಯುತ್ತಿದೆ. ಏಕೆಂದರೆ ಅದು ಭವಿಷ್ಯದ ಖರ್ಚಿಗಾಗಿ ಸಂಪನ್ಮೂಲಗಳನ್ನು ಸಂರಕ್ಷಿಸಲು ಬಯಸಿದೆ. "ಈ ತಂತ್ರ ಸ್ವಯಂ ಸೋಲಿಗೆ ಕಾರಣವಾಗುತ್ತದೆ" ಅವರು ವಿಶ್ಲೇಷಿಸಿದ್ದಾರೆ.

ಆರ್ಥಿಕತೆಯನ್ನು ಒಬ್ಬ ರೋಗಿ ಎಂದು ಪರಿಗಣಿಸಿದ್ದರೆ ರೋಗಿಯು ಹಾಸಿಗೆಯ ಮೇಲೆ ಇರುವಾಗ ಮತ್ತು ರೋಗದ ವಿರುದ್ಧ ಹೋರಾಡುವಾಗ ರೋಗಿಗೆ ಅಗತ್ಯವಿರುವ ಆಹಾರ ಒದಗಿಸಲೇಬೇಕು. "ಪರಿಹಾರವಿಲ್ಲದೆ, ಮನೆಯವರು ಊಟವನ್ನು ತಪ್ಪಿಸಿದರೆ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಕೆಲಸಕ್ಕೆ ಅಥವಾ ಭಿಕ್ಷೆ ಬೇಡಲು ಕಳುಹಿದರೆ ತಮ್ಮ ಚಿನ್ನವನ್ನು ಎರವಲು ಇಡಲು ಬಯಸಿದರೆ ಇಎಂಐಗಳು ಮತ್ತು ಬಾಡಿಗೆ ಬಾಕಿಗಳನ್ನು ಸಂಗ್ರಹಿಸಿದ್ದಾರೆ. ಇದು ಮೂಲಭೂತವಾಗಿ, ರೋಗಿಯ ಕ್ಷೀಣತೆಗೆ ಕಾರಣವಾಗಲಿದೆ. " ಎಂದಿದ್ದಾರೆ.

ಸಾಂಕ್ರಾಮಿಕ ಪೂರ್ವ ಬೆಳವಣಿಗೆಯ ಮಂದಗತಿ ಮತ್ತು ಸರ್ಕಾರದ ಹಣಕಾಸಿನ ಸ್ಥಿತಿಯ ಕಾರಣದಿಂದಾಗಿ, ಪರಿಹಾರ ಮತ್ತು ಉತ್ತೇಜನ ಎರಡಕ್ಕೂ ಖರ್ಚು ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ನಂಬಿದ್ದಾರೆ ಎಂದು ರಾಜನ್ ಹೇಳಿದ್ದಾರೆ.

English summary
Terming the 23.9 per cent fall in economic growth in June quarter alarming, former Reserve Bank Governor Raghuram rajan has said bureaucracy should come out of complacency and take meaningful action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X