ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಸುದ್ದಿ ತಗ್ಗಿಸಲು ವಾಟ್ಸಾಪ್ ಹೊಸ ವೈಶಿಷ್ಟ್ಯ: ಸುದ್ದಿ ಅಸಲಿಯೋ, ನಕಲಿಯೋ ಪರೀಕ್ಷಿಸಿ..!

|
Google Oneindia Kannada News

ನವದೆಹಲಿ, ಆಗಸ್ಟ್‌ 06: ನಕಲಿ ಸುದ್ದಿಗಳ ಫಾರ್ವಡ್‌ ಮೂಲಕ ಸಾಮಾಜಿಕ ಜಾಲತಾಣ ವಾಟ್ಸಾಪ್ ಯಾವಾಗಲೂ ಸುದ್ದಿಯಲ್ಲಿರುತ್ತೆ. ಆದರೆ, ಈ ನಕಲಿ ಸುದ್ದಿಗಳನ್ನು ಕಡಿಮೆ ಮಾಡಲು ವಾಟ್ಸಾಪ್ ಮುಂದಾಗಿದೆ. ಇದಕ್ಕಾಗಿಯೇ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ.

ವಾಟ್ಸಾಪ್‌ನ ಈ ವೈಶಿಷ್ಟ್ಯವನ್ನು ಬಳಸಿ, ನೀವು ವಾಟ್ಸ್ ಆಪ್ ನಲ್ಲಿ ಫಾರ್ವರ್ಡ್ ಗೊಂಡ ಯಾವುದೇ ಸಂದೇಶವನ್ನು ನೇರವಾಗಿ ಗೂಗಲ್ ನಲ್ಲಿ ಸರ್ಚ್ ಮಾಡಬಹುದು ಮತ್ತು ಆ ಸುದ್ದಿಯ ವಾಸ್ತವತೆಯನ್ನು ನೀವು ಗೂಗಲ್ ಮೂಲಕ ಕಂಡುಹಿಡಿಯಬಹುದು.

ವಾಟ್ಸಾಪ್ ಮೂಲಕ LPG ಸಿಲಿಂಡರ್ ಬುಕ್ ಮಾಡೋದು ಹೇಗೆ?ವಾಟ್ಸಾಪ್ ಮೂಲಕ LPG ಸಿಲಿಂಡರ್ ಬುಕ್ ಮಾಡೋದು ಹೇಗೆ?

ವಾಟ್ಸಾಪ್ ಇತ್ತೀಚೆಗಷ್ಟೇ ತನ್ನ ಹೊಸ ವೈಶಿಷ್ಟ್ಯ ಸರ್ಚ್ ದಿ ವೆಬ್ ಬಗ್ಗೆ ಮಾಹಿತಿ ನೀಡಿತ್ತು. ವಾಟ್ಸ್ ಆಪ್ ನಿರಂತರವಾಗಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನಕಲಿ ಸುದ್ದಿಗಳನ್ನು ತಡೆಯುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದೆ. ಇದರದೇ ಒಂದು ಭಾಗವಾಗಿ ಇಂದಿನಿಂದ, ವಾಟ್ಸಾಪ್ ತನ್ನ ಬಳಕೆದಾರರಿಗೆ ಫಾರ್ವರ್ಡ್ ಸಂದೇಶವನ್ನು ಪರಿಶೀಲಿಸಲು ಗೂಗಲ್‌ನಲ್ಲಿ ಹುಡುಕುವ ಆಯ್ಕೆಯನ್ನು ನೀಡಿದೆ. ಇದರಿಂದ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದು.

Fake Forwarded Messages: Whats App Brings A New Feature To Help Users Spot Fake MSG

ಚಾಟ್‌ನಲ್ಲಿ ಬಳಕೆದಾರರು ಟ್ಯಾಪ್ ಮಾಡುವ ಮೂಲಕ ಫಾರ್ವರ್ಡ್ ಮಾಡಿದ ಸಂದೇಶಗಳನ್ನು ಎರಡು ಬಾರಿ ಪರಿಶೀಲಿಸಬೇಕಾಗುತ್ತದೆ. ಹೀಗಾಗಿಯೇ ವಾಟ್ಸಾಪ್‌ನಿಂದ ಈ ಹೊಸ ಅವಕಾಶ ನೀಡಿದೆ.

ವಾಟ್ಸ್ ಆಪ್ ನ ಈ ನೂತನ ವೈಶಿಷ್ಟ್ಯದ ವಿಶೇಷತೆ ಎಂದರೆ, ಇದಕ್ಕಾಗಿ ಬಳಕೆದಾರರು ತಮ್ಮ ಅಪ್ಲಿಕೇಶನ್ ಅನ್ನು ಬಂದ್ ಮಾಡುವ ಅವಶ್ಯಕತೆ ಇಲ್ಲ. ವಾಟ್ಸ್ ಆಪ್ ನ ಈ ವೈಶಿಷ್ಟ್ಯ ಬಳಕೆದಾರರಿಗೆ ಫೇಕ್ ನ್ಯೂಸ ತಡೆಗಟ್ಟಲು ಬಳಕೆದಾರರು ತಮಗೆ ಫಾರ್ವರ್ಡ್ ಮಾಡಲಾಗಿರುವ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಅದನ್ನು ಡಿಲೀಟ್ ಮಾಡಬಹುದಾಗಿದೆ. ಈ ರೀತಿ ಮಾಡುವುದರಿಂದ ಫೇಕ್ ನ್ಯೂಸ್ ಇತರರಿಗೆ ಹರಡುವುದು ತಪ್ಪಲಿದೆ.

English summary
WhatsApp introduces 'search the web' feature to further spot fake forwarded messages. Here are the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X