ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಮಿಕರ ಕೆಲಸದ ಪರಿಸ್ಥಿತಿ ಅವಲೋಕನ: ಜೊಮ್ಯಾಟೊ, ಸ್ವಿಗ್ಗಿಗೆ ಕೊನೆಯ ಸ್ಥಾನ!

|
Google Oneindia Kannada News

ನವದೆಹಲಿ, ಡಿಸೆಂಬರ್ 17: ದೇಶದ ಪ್ರಮುಖ ಸ್ಟಾರ್ಟ್ಅಪ್ ಕಂಪನಿಗಳು ಸೇರಿದಂತೆ ಅನೇಕ ಪ್ರಮುಖ ಉದ್ಯಮಗಳಲ್ಲಿ ಕಾರ್ಮಿಕರ ಕೆಲಸದ ಪರಿಸ್ಥಿತಿಯು ಅತ್ಯಂತ ಕೆಳಮಟ್ಟದಲ್ಲಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

'ಫೇರ್‌ವರ್ಕ್ ಇಂಡಿಯಾ ರೇಟಿಂಗ್ಸ್ 2020: ಲೇಬರ್ ಸ್ಟ್ಯಾಂಡರ್ಡ್ಸ್ ಇನ್ ದಿ ಪ್ಲಾಟ್‌ಫಾರ್ಮ್ ಎಕಾನಮಿ' ಬುಧವಾರ ಬಿಡುಗಡೆಯಾದ ವರದಿಯ ಪ್ರಕಾರ, ಸ್ವಿಗ್ಗಿ, ಜೊಮ್ಯಾಟೊ ಮತ್ತು ಉಬರ್ ಇಂಡಿಯಾ ಕಾರ್ಮಿಕರ ಕೆಲಸದ ಕುರಿತು 10ರಲ್ಲಿ ಕೇವಲ 1 ಅಂಕವನ್ನು ಪಡೆಯುವ ಮೂಲಕ ರೇಟಿಂಗ್‌ನಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ.

Fairwork India Ratings 2020: Zomato, Swiggy Score 1/10 On Working Conditions For Workers

ಮತ್ತೊಂದೆಡೆ ಅರ್ಬನ್ ಕಂಪನಿ ಮತ್ತು ಫ್ಲಿಪ್‌ಕಾರ್ಟ್‌ನ ಲಾಜಿಸ್ಟಿಕ್ಸ್ ಅಂಗಸಂಸ್ಥೆ ಇಕಾರ್ಟ್ ಕ್ರಮವಾಗಿ 8/10 ಮತ್ತು 7/10 ಸ್ಕೋರ್‌ಗಳನ್ನು ಗಳಿಸಿವೆ.

Fairwork India Ratings 2020: Zomato, Swiggy Score 1/10 On Working Conditions For Workers

ಫೇರ್‌ವರ್ಕ್ ಇಂಡಿಯಾ ರೇಟಿಂಗ್ಸ್ 2020 ಪ್ರಮುಖ ಐದು ತತ್ವಗಳ ಮೇಲೆ ವರದಿಯನ್ನು ನಿರ್ಣಯಿಸಿದ್ದು, ನ್ಯಾಯೋಚಿತ ಪರಿಸ್ಥಿತಿಗಳು, ನ್ಯಾಯೋಚಿತ ಒಪ್ಪಂದಗಳು, ನ್ಯಾಯೋಚಿತ ನಿರ್ವಹಣೆ, ಮತ್ತು ನ್ಯಾಯೋಚಿತ ಪ್ರಾತಿನಿಧ್ಯ ಎಂಬುದರ ಮೇಲೆ ಆಧಾರಿತವಾಗಿದೆ.

ಇನ್ನು ಈ ರೇಟಿಂಗ್ ಹೊರಬಿದ್ದ ಮೇಲೆ ಜೊಮ್ಯಾಟೊ ಮೀಡಿಯಾ ಪ್ರೈ.ಲಿ.ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಿಂದರ್ ಗೋಯಲ್ ಮಾತನಾಡಿ ಮುಂದಿನ ವರ್ಷ ಶ್ರೇಯಾಂಕದಲ್ಲಿ ಉತ್ತಮ ಪ್ರದರ್ಶನ ತೋರುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ. ಕಳೆದ ವರ್ಷದ ವರದಿಯಲ್ಲಿ ಜೊಮ್ಯಾಟೊ 10ರಲ್ಲಿ 4 ಅಂಕಗಳನ್ನು ಪಡೆದಿತ್ತು.

English summary
Swiggy , zomato and Uber India scored 1/10, Urban Company and Flipkart’s logistics arm EKart scored the highest 8/10 and 7/10, respectively, ‘Fairwork India Ratings 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X