ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಚೀನಾ ಷೇರು ಮಾರ್ಕೆಟ್ ನಲ್ಲಿ ಅಮೆರಿಕ ಡಾಲರ್ ನಡೆಯಲ್ಲವಾ?

By Anil Achar
|
Google Oneindia Kannada News

ನವದೆಹಲಿ, ಏಪ್ರಿಲ್ 30: ಚೀನಾ ಷೇರು ಮಾರ್ಕೆಟ್ ನಲ್ಲಿ ಇನ್ನು ಅಮೆರಿಕ ಡಾಲರ್ ವ್ಯವಹಾರ ಮಾಡುವುದಕ್ಕೆ ಆಗಲ್ಲವಂತೆ. ಡಾಲರ್ ವಿರುದ್ಧ ಮೌಲ್ಯವನ್ನು ರದ್ದು ಮಾಡುತ್ತದಂತೆ. ಇನ್ನೇನಿದ್ದರೂ ಎಲ್ಲ ಅಧಿಕೃತ ವ್ಯವಹಾರಗಳನ್ನೂ ಚೀನಾದ ಯುವಾನ್ ಕರೆನ್ಸಿಯಲ್ಲೇ ಮಾಡಬೇಕು. -ಹೀಗೊಂದು ಸುದ್ದಿ ಗಿರಗಿಟ್ಲೆ ಸುತ್ತುತ್ತಾ ಇದೆ. ಇನ್ನು ಇದೇ ಸುದ್ದಿಯಲ್ಲಿ ಇನ್ನೂ ಮುಂದುವರಿದು, ಹೀಗೇ ಆದರೆ ಅಮೆರಿಕದ ಡಾಲರ್ ಚೀನೀಯರ ವ್ಯವಹಾರದಿಂದ ಕಣ್ಮರೆ ಆಗುತ್ತದೆ ಎಂದಿದೆ.

ಅಷ್ಟಕ್ಕೇ ನಿಲ್ಲದೆ, ಇದರಿಂದ ಜಾಗತಿಕ ಮಾರುಕಟ್ಟೆ ಮೇಲೆ ಪ್ರಭಾವ ಆಗಲಿದೆ ಎಂದು ಹೇಳಲಾಗಿದೆ. ಇಷ್ಟು ವಿಚಾರವನ್ನು ತಮ್ಮದು ಅಂದುಕೊಂಡು ಎಲ್ಲಿ ಜನರು ನಂಬಲ್ಲವೋ ಅಂತ ಗೊತ್ತಾಗಿ, ಬಿಬಿಸಿ ವರ್ಲ್ಡ್ ಇಂಗ್ಲಿಷ್ ನಲ್ಲಿ ಮಧ್ಯಾಹ್ನದ ಕಾರ್ಯಕ್ರಮದ ಚರ್ಚಾ ವಿಷಯವೇ ಇದಾಗಿತ್ತು. ಇದು ಆರ್ಥಿಕ ಸಮರ. ಇದರಿಂದ ಇಡೀ ವಿಶ್ವವನ್ನು ಹಾಳು ಮಾಡುವ ಯುದ್ಧವಾಗಿದ್ದು, ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದಿದೆ.

ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಶವಪೆಟ್ಟಿಗೆ ರಹಸ್ಯ ಬಯಲುಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಶವಪೆಟ್ಟಿಗೆ ರಹಸ್ಯ ಬಯಲು

ಈ ನಿರ್ಧಾರದ ಹಿನ್ನೆಲೆಯಲ್ಲಿ ಅಮೆರಿಕ ಏನಾದರೂ ಮೂರ್ಖತನದಿಂದ ವರ್ತಿಸಿದರೆ 2021ರಲ್ಲಿ ಇಡೀ ವಿಶ್ವವನ್ನು ಚೀನಾ ಮುನ್ನಡೆಸುತ್ತದೆ. ಇದು ಚೀನಾ ಪಾಲಿನ ಹಳೇ ಕನಸು. ದಶಕಗಳಿಂದಲೂ ಇದೇ ಸಾಧನೆಗಾಗಿ ಯೋಜನೆ ರೂಪಿಸಿತ್ತು ಎಂದು ಆ ವರದಿಯಲ್ಲಿ ಹೇಳಲಾಗಿದೆ.

Fact check: Has China cancelled the dollar peg in stock exchange transactions

ಹೌದಾ, ಇದು ಹೀಗೆಲ್ಲ ಆಯಿತಾ ಎಂದು ಸತ್ಯ ತಿಳಿದುಕೊಳ್ಳುವುದಕ್ಕೆ ನಾವು ಪ್ರಯತ್ನ ಪಟ್ಟೆವು. ಅಂಥ ಯಾವ ನಿರ್ಧಾರವನ್ನೂ ಚೀನಾ ತೆಗೆದುಕೊಂಡಿಲ್ಲ. ಇನ್ನು ಅಲ್ಲಿನ ಕೇಂದ್ರೀಯ ಬ್ಯಾಂಕ್ ಅಮೆರಿಕ ಡಾಲರ್ ವಿರುದ್ಧ ಯುವಾನ್ ಮೌಲ್ಯವನ್ನು ಮತ್ತೊಮ್ಮೆ ನಿಗದಿಪಡಿಸುವ ಯತ್ನದಲ್ಲಿದೆ; ಅದು ಕೂಡ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ. ಕೊರೊನಾ ಬಿಕ್ಕಟ್ಟಿನಿಂದ ಉದ್ಭವಿಸಿರುವ ಬಿಕ್ಕಟ್ಟು ಇಂಥ ನಿರ್ಧಾರಕ್ಕೆ ಕಾರಣವಾಗಿದೆ ಎಂದು ತಜ್ಞರು ಹೇಳಿರುವುದನ್ನು ಉದಾಹರಿಸಿ scmp.com ತಿಳಿಸಿದೆ.

ಅಮೆರಿಕದ ಡಾಲರ್ ಗೆ ಬದಲಿಯಾಗಿ ಯುವಾನ್ ಬಳಸುವ ಬಗ್ಗೆ ಚೀನಾ ಕೇಂದ್ರ ಬ್ಯಾಂಕ್ ಎಂದಿಗೂ ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ಪೀಪಲ್ ಬ್ಯಾಂಕ್ ಡೆಪ್ಯೂಟಿ ಗೌರ್ನರ್ ಚೆನ್ ಯುಲು ಕಳೆದ ತಿಂಗಳು ಮಾತನಾಡಿ, ಭವಿಷ್ಯದಲ್ಲಿ ಡಾಲರ್ ವಿರುದ್ಧ 7 ಯುವಾನ್ ಆಸುಪಾಸಿನಲ್ಲಿ ಇರುತ್ತದೆ ಎಂದು ಹೇಳಿದ್ದಾರೆ ಎಂಬ ವರದಿ ಬಂದಿದೆ.

Fake: ಕೇಂದ್ರ ಸರ್ಕಾರಿ ನೌಕರರ LTC ಭತ್ಯೆ ಕಡಿತವಾಗುತ್ತಿಲ್ಲFake: ಕೇಂದ್ರ ಸರ್ಕಾರಿ ನೌಕರರ LTC ಭತ್ಯೆ ಕಡಿತವಾಗುತ್ತಿಲ್ಲ

ಇನ್ನು ಫೋರ್ಬ್ಸ್.ಕಾಮ್ ನಲ್ಲಿ ವರದಿಯೊಂದು ಬಂದಿದೆ. ಅದರ ಪ್ರಕಾರ, ಚೀನಾದ ಯುವಾನ್ ಕರೆನ್ಸಿ ಅಮೆರಿಕ ಡಾಲರ್ ಗೆ ಹತ್ತಿರದಲ್ಲೂ ಇಲ್ಲ. ಡಾಲರ್ ಅಂದರೆ ಅದೊಂಥರ ಚಿನ್ನಕ್ಕೆ ಸಮಾನ. ಯುರೋ ಕರೆನ್ಸಿಗೆ ಡಾಲರ್ ಸ್ಥಾನವನ್ನು ಕಸಿಯಲು ಆಗಲಿಲ್ಲ ಅಂದರೆ, ಇನ್ನು ಯುವಾನ್ ಗೆ ಖಂಡಿತಾ ಸಾಧ್ಯವಿಲ್ಲ.

ಜಾಗತಿಕ ಮಟ್ಟದಲ್ಲಿ ನಡೆಯುವ ವ್ಯವಹಾರಗಳಲ್ಲಿ ಚೀನಾ ಕರೆನ್ಸಿಯ ಪ್ರಮಾಣ 1.85 ಪರ್ಸೆಂಟ್. ಎಲ್ಲ ವ್ಯವಹಾರವೂ ಸೇರಿ ಮಾರ್ಚ್ 2018ರಲ್ಲಿ ಇದರ ಪ್ರಮಾಣ 1.6 ಪರ್ಸೆಂಟ್ ಇತ್ತು. ಮಾರ್ಚ್ 2018ರಲ್ಲಿ ಎಲ್ಲ ವ್ಯವಹಾರ ಸೇರಿ ಯು.ಎಸ್. ಡಾಲರ್ ಪ್ರಮಾಣ 39.4 ಪರ್ಸೆಂಟ್ ಇತ್ತು. ಅದೇ ಮಾರ್ಚ್ 2020ಕ್ಕೆ 44 ಪರ್ಸೆಂಟ್ ತಲುಪಿದೆ. ಇದು ಫೋರ್ಬ್ಸ್ ಮಾಡಿರುವ ವರದಿ.

English summary
There is a news doing the rounds stating that China has decided to cancel the dollar peg in the stock exchange transactions and decided to deal officially with the Chinese Yuan instead of the dollar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X