ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್‌ಸ್ಟಾಗ್ರಾಮ್‌ ಮೂಲಕ ಫೇಸ್‌ಬುಕ್ ಸ್ನೇಹಿತರ ಜೊತೆ ಚಾಟ್‌ ಮಾಡಬಹುದು

|
Google Oneindia Kannada News

ನವದೆಹಲಿ, ಆಗಸ್ಟ್‌ 18: ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ಅತಿದೊಡ್ಡ ಪ್ಲಾಟ್‌ಫಾರ್ಮ್‌ಗಳಾಗಿರುವ ಇನ್‌ಸ್ಟಾಗ್ರಾಮ್, ವಾಟ್ಸಾಪ್ ಹಾಗೂ ಫೇಸ್‌ಬುಕ್ ಮೆಸೆಂಜರ್‌ಗಳನ್ನು ಒಂದುಗೂಡಿಸುವ ಹೊಸ ಪ್ರಯತ್ನದಲ್ಲಿದೆ. ಈಗಾಗಲೇ ಪ್ರಯೋಗಾತ್ಮಕವಾಗಿ ಅಮೆರಿಕಾದಲ್ಲಿ ಚಾಲನೆ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್ ಮೆಸೆಂಜರ್ ಚಾಟ್ಸ್‌ನ ಹೊಸ ಒಂದುಗೂಡಿಸುವಿಕೆ ಪ್ರಯತ್ನವು ಹಲವು ಬಳಕೆದಾರರಿಗಾಗಿ ಈಗಾಗಲೇ ಲಭ್ಯವಿದೆ. ಈ ಕುರಿತಾಗಿ ಪ್ರಕಟಗೊಂಡಿರುವ ವರದಿಯೊಂದರ ಪ್ರಕಾರ ಇನ್‌ಸ್ಟಾಗ್ರಾಮ್‌ ಆ್ಯಪ್ ತನ್ನ ಬಳಕೆದಾರರಿಗೆ pop-ups ಬಿಡುಗಡೆ ಮಾಡಲು ಆರಂಭಿಸಿದೆ. ಇದರಿಂದ ಇನ್‌ಸ್ಟಾಗ್ರಾಮ್‌ ಮೂಲಕವೇ ಬಳಕೆದಾರರು ಫೇಸ್‌ಬುಕ್ ಮೆಸೆಂಜರ್ ಬಳಕೆ ಮಾಡಬಹುದು.

ಜುಲೈ 2021ರವರೆಗೆ ಫೇಸ್‌ಬುಕ್ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸಜುಲೈ 2021ರವರೆಗೆ ಫೇಸ್‌ಬುಕ್ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ

ಇನ್ನು ಈ ಹೊಸ ವೈಶಿಷ್ಟ್ಯವನ್ನು ಪಡೆಯಲು ಒಂದು ಬಾರಿ ಅಪ್ಡೇಟ್ ಮಾಡಿದ ಬಳಿಕ ಬಳಕೆದಾರರು ಬದಲಾವಣೆ ಮಾಡಬಹುದಾಗಿದೆ. ಜೊತೆಗೆ ಎರಡು ಚಾಟ್‌ ಬಾಕ್ಸ್‌ಗಳನ್ನು ಒಂದು ಮಾಡಬಹುದಾಗಿದೆ.

Facebook Instagram DM And Messenger Merge

ದಿ ವರ್ಜ್‌ನ ವರದಿಯ ಪ್ರಕಾರ, ಶುಕ್ರವಾರ ರಾತ್ರಿ ಅನೇಕ ಬಳಕೆದಾರರು ಹೊಸ ಸಂಯೋಜಿತ ಅನುಭವವನ್ನು ವಿವರಿಸುವ ಪಾಪ್ಅಪ್ ಸಂದೇಶಗಳನ್ನು ಪಡೆದರು. ಪಾಪ್ಅಪ್ ಪ್ರಕಾರ "ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಕಳುಹಿಸಲು ಹೊಸ ಮಾರ್ಗವಿದೆ" ಮತ್ತು ಮರುವಿನ್ಯಾಸಗೊಳಿಸಲಾದ ಇಂಟರ್ಫೇಸ್, ಪ್ರತ್ಯುತ್ತರಕ್ಕೆ ಸ್ವೈಪ್ ಮತ್ತು ಎಮೋಜಿ ಪ್ರತಿಕ್ರಿಯಿಸುವಂತಹ ಹೊಸ ವೈಶಿಷ್ಟ್ಯಗಳನ್ನು ಉಲ್ಲೇಖಿಸಲಾಗಿದೆ.

English summary
Facebook company is taking the first steps towards that by merging Instagram DMs and Messenger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X