ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ಬುಕ್ ಹೂಡಿಕೆಯ ತಂತ್ರಜ್ಞಾನ ಸಂಸ್ಥೆ ಡೇಟಾ ಹ್ಯಾಕ್ಡ್

|
Google Oneindia Kannada News

ನವದೆಹಲಿ, ಮೇ 8: ಫೇಸ್ಬುಕ್ ಹೂಡಿಕೆ ಮಾಡಿರುವ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಅನ್ ಅಕಾಡೆಮಿ(unacademy) ಯ 20 ಮಿಲಿಯನ್ ಖಾತೆಗಳ ವಿವರ ಹ್ಯಾಕ್ ಆಗಿರುವ ಮಾಹಿತಿ ಬಂದಿದೆ. ಮಾಹಿತಿ ಕನ್ನ ಹಾಕಿರುವ ಸೈಬರ್ ಕ್ರಿಮಿನಲ್ ಗಳು ಇದನ್ನು ಡಾರ್ಕ್ ವೆಬ್ ನಲ್ಲಿ ಮಾರಾಟಕ್ಕಿಟ್ಟಿದ್ದಾರೆ ಎಂದು ಸೈಬರ್ ಸೆಕ್ಯುರಿಟಿ ಸಂಸ್ಥೆ ಸೈಬ್ಲ್ ಹೇಳಿದೆ.

ಅನ್ ಅಕಾಡೆಮಿಯ ಪೂರ್ತಿ ಡೇಟಾಬೇಸ್ ಹ್ಯಾಕ್ ಮಾಡಲಾಗಿದೆ. ಸದ್ಯಕ್ಕೆ ಬಳಕೆದಾರರ ಮಾಹಿತಿಯನ್ನು ಮಾತ್ರ ಸೋರಿಕೆ ಮಾಡಲಾಗಿದೆ. ಇನ್ಮುಂದೆ ಇನ್ನಷ್ಟು ಮಾಹಿತಿ ಹೊರ ಬರುವ ಸಾಧ್ಯತೆಯಿದೆ ಎಂದು ಸೈಬ್ಲ್ ಎಚ್ಚರಿಸಿದೆ.

Facebook-funded Unacademy data hacked, claims cybersecurity firm

ಮೇ 3 ರಂದು ನಟರೊಬ್ಬರು ಅನ್ ಅಕಾಡೆಮಿ ಬಳಕೆದಾರರ ಡೇಟಾಬೇಸ್ ಮಾಹಿತಿಯನ್ನು ಮಾರಾಟಕ್ಕಿಟ್ಟಿದ್ದು ತಿಳಿದು ಬಂದಿದೆ. 20 ಮಿಲಿಯನ್ ಖಾತೆ ಮಾಹಿತಿಗೆ 2000 ಯುಎಸ್ ಡಾಲರ್ ಮೊತ್ತ ಪಡೆಯಲು ಬಯಸಿದ್ದ ಎಂದು ಸೈಬ್ಲ್ ಹೇಳಿದೆ.

ಭಾರತದ ಅತಿದೊಡ್ಡ ಆನ್ ಲೈನ್ ಕಲಿಕೆ ವೇದಿಕೆ ಎನಿಸಿರುವ ಅನ್ ಅಕಾಡೆಮಿಯ ಮಾಹಿತಿ ಸೋರಿಕೆ ಜನವರಿಯಲ್ಲೇ ಆಗಿದೆ ಆದರೆ, ಈ ಬಗ್ಗೆ ಸಂಸ್ಥೆ ಹೆಚ್ಚಿನ ಗಮನ ಹರಿಸಿಲ್ಲ ಎಂದು ಸೈಬ್ಲ್ ಹೇಳಿದೆ.

ಸದ್ಯದ ಪರಿಸ್ಥಿತಿಯಲ್ಲಿ ಯಾವ ಡೇಟಾ ಲೀಕ್ ಆಗಿದೆ ಎಂದು ಸ್ಪಷ್ಟವಾಗಿ ಹೇಳಲು ಆಗುತ್ತಿಲ್ಲ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದ್ದು, ಯಾವುದೇ ಗೌಪ್ಯ ಮಾಹಿತಿ, ಆರ್ಥಿಕ ಅಂಕಿ ಅಂಶ, ವ್ಯಕ್ತಿಯ ಸ್ಥಳ ಮಾಹಿತಿ ಸೋರಿಕೆಯಾಗಿಲ್ಲ ಎಂದು ಅನ್ ಅಕಾಡೆಮಿಯ ಸಹ ಸ್ಥಾಪಕ ಹೆಮೆಶ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಇನ್ಫೋಸಿಸ್, ಟಿಸಿಎಸ್, ಕಾಗ್ನಿಜೆಂಟ್, ರಿಲಯನ್ಸ್, ಎಚ್ ಡಿ ಎಫ್ ಸಿ, ಆಕ್ಸೆಂಚರ್, ಐಸಿಐಸಿಐ, ಬ್ಯಾಂಕ್ ಆಫ್ ಬರೋಡ ಸೇರಿದಂತೆ ಹಲವು ಸಂಸ್ಥೆಗಳ ಮಾಹಿತಿ ಗೌಪ್ಯತೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂಬ ಸೈಬ್ಲ್ ಹೇಳಿದೆ.

English summary
Facebook-funded education technology firm Unacademy's data comprising over 20 million accounts has been hacked by cybercriminals and put up for sale in the dark web, according to cybersecurity firm Cyble.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X