ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಯ್ನುಡಿ ಬಳಸಿ, ತಂತ್ರಜ್ಞಾನ ಬೆಳಸಿ: ಮಾರ್ಕ್ ಕರೆ

By Mahesh
|
Google Oneindia Kannada News

ನವದೆಹಲಿ, ಅ.9: ಜಗತ್ತಿನೆಲ್ಲೆಡೆ ಇರುವ ಸಮಾನ ಮನಸ್ಕರ ನಡುವೆ ಸಂಪರ್ಕ ಸಾಧಿಸುವ ಕನಸನ್ನು ಫೇಸ್ ಬುಕ್ ನನಸು ಮಾಡಿದೆ. ಈಗ ಇಂಟರ್ನೆಟ್.ಆರ್ಗ್ ಮೂಲಕ 5 ಬಿಲಿಯನ್ ಬಳಕೆದಾರರನ್ನು ಹೊಂದಲು ಯೋಜನೆ ಹಾಕಿಕೊಂಡಿದೆ.

ಸ್ಥಳೀಯ ಭಾಷೆಗಳಲ್ಲಿ ನಿಮ್ನಿಮ್ಮ ತಾಯ್ನುಡಿಯಲ್ಲಿ ಅಪ್ಲಿಕೇಷನ್ ಅಭಿವೃದ್ಧಿಪಡಿಸಿ ತಂತ್ರಜ್ಞಾನ ಬೆಳೆಸಿ ಇದಕ್ಕಾಗಿ ಕೋಟ್ಯಂತರ ಹಣ ಅನುದಾನ ನೀಡಲು ಫೇಸ್ ಬುಕ್ ಸಿದ್ಧವಿದೆ ಎಂದು ಸಹ ಸ್ಥಾಪಕ, ಸಿಇಒ ಮಾರ್ಕ್ ಝುಕರ್ಬರ್ಗ್ ಹೇಳಿದ್ದಾರೆ.

ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಳ ಅಭಿಯಾನ ಹಾಗೂ ಸಾಧ್ಯತೆಗಳ ಕುರಿತಂತೆ ಮಾರ್ಕ್ ಉಪನ್ಯಾಸ ನೀಡಲು ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ್ದಾರೆ. ವಿಶ್ವದ ಯುವ ಕೋಟ್ಯಧಿಪತಿಗಳ ಸಾಲಿನಲ್ಲಿ ಅಗ್ರಗಣ್ಯರಾದ ಮಾರ್ಕ್(ಸುಮಾರು 33 ಬಿಲಿಯನ್ ಡಾಲರ್ ಆಸ್ತಿವಂತ) ಅವರು ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.

ತಾಯ್ನುಡಿಗೆ ಒತ್ತು ನೀಡಿ ಎಂದ ಮಾರ್ಕ್: ಸ್ಥಳೀಯ ಭಾಷೆಗಳಲ್ಲಿ ಸಾಫ್ಟ್ ವೇರ್ ಅಪ್ಲಿಕೇಷನ್ ಗಳನ್ನು ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಿ ನೀವು ನೀಡುವ ಆಪ್ಸ್ ರೈತರು, ವಿದ್ಯಾರ್ಥಿಗಳು, ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಪರಿಣಾಮ ಬೀರುವಂತಿರಲಿ ಇಂಥ ಕಾರ್ಯದಲ್ಲಿ ತೊಡಗಿಕೊಳ್ಳುವ ಉತ್ಸಾಹಿಗಳನ್ನು ಪ್ರೋತ್ಸಾಹಿಸಲು ಫೇಸ್ ಬುಕ್ 1 ಬಿಲಿಯನ್ ಡಾಲರ್ ನಿಧಿ ಎತ್ತಿಟ್ಟಿದೆ ಎಂದು ಮಾರ್ಕ್ ಹೇಳಿದರು.

Facebook CEO Mark Zuckerberg launches Internet.org

ಇಂಟರ್ನೆಟ್ ನಲ್ಲಿರುವ ಮಾಹಿತಿ, ಸುದ್ದಿ ಎಲ್ಲವೂ ಸುಮಾರು 10 ಭಾಷೆಗಳಲ್ಲಿ ಸುಲಭಕ್ಕೆ ಲಭ್ಯವಾಗುತ್ತಿದೆ. ನಿಮ್ಮಲ್ಲಿ 22ಕ್ಕೂ ಅಧಿಕ ಅಧಿಕೃತ ಭಾಷೆಗಳಿವೆ. ಭಾರತದಲ್ಲಿ ಭಾಷಾ ವೈವಿಧ್ಯತೆ ಇದ್ದರೂ ವೆಬ್ ನಲ್ಲಿ ಆಯಾ ಭಾಷಿಕರು ತಮ್ಮ ಭಾಷೆಯಲ್ಲೇ ಮಾಹಿತಿ ಪಡೆಯುವ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. 'Connectivity is a Human Right' ಎಂದು ಮಾರ್ಕ್ ತಮ್ಮ ಉಪನ್ಯಾಸದಲ್ಲಿ ಹೇಳಿದರು.[ವಿವಿಧ ಭಾಷೆಗಳಲ್ಲಿನ ಸುದ್ದಿ ಆಗರ ಒನ್ ಒಂಡಿಯಾ]

2013ರಲ್ಲಿ 77.8 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್ ವರ್ಷಾಂತ್ಯಕ್ಕೆ 108.9 ಮಿಲಿಯನ್ ಮುಟ್ಟುವ ನಿರೀಕ್ಷೆಯಿದೆ. ಭಾರತದಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಳವಾಗುತ್ತಿದ್ದು ಇದಕ್ಕೆ ಪೂರಕವಾಗಿ ಸರ್ಕಾರ ಕೂಡಾ ಹಳ್ಳಿ ಹಳ್ಳಿಗೆ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೌಲಭ್ಯ ನೀಡುವ ಸಂಕಲ್ಪ ಹೊಂದಿದೆ.

ಇಂಟರ್ನೆಟ್.ಆರ್ಗ್ ಏಕೆ?: ಜ್ಞಾನ ವಾಹಿನಿಯ ಹರಿವು ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಅಲ್ಲಲ್ಲಿ ಕುಂಠಿತಗೊಳ್ಳುತ್ತಿದೆ. ಇದನ್ನು ನಿವಾರಿಸಲು ಇಂಟರ್ನೆಟ್.ಆರ್ಗ್ ಸ್ಥಾಪನೆ ಮಾಡಲಾಗಿದೆ. ಸದ್ಯ ಇಂಟರ್ನೆಟ್ ಸಂಪರ್ಕ ಸಾಧಿಸಲು ಕಷ್ಟಪಡುತ್ತಿರುವವರಿಗೆ internet. org ವರದಾನವಾಗಲಿದೆ.

Facebook CEO Mark Zuckerberg launches Internet.org

ವಿಶ್ವದ ಮೂರನೇ ಒಂದು ಭಾಗದಷ್ಟು ಜನ ಮಾತ್ರ ಇಂಟರ್ನೆಟ್ ಬಳಕೆ ಮಾಡುತ್ತಿದ್ದಾರೆ. ಅಂತರ್ಜಾಲ ಬಳಕೆ ವಾರ್ಷಿಕವಾಗಿ ಶೇ 9 ರಷ್ಟು ಪ್ರಗತಿ ಕಾಣುತ್ತಿದೆ. ಇಂಟರ್ನೆಟ್. ಆರ್ಗ್ ನಿಂದ ಈ ಚಿತ್ರಣ ಬದಲಾಗಲಿದೆ. [2.5 ಲಕ್ಷ ಗ್ರಾಮ ಪಂಚಾಯಿತಿಗೆ ವೈ ಫೈ ಸಿಗುತ್ತಂತೆ!]

ಇಂಟರ್ನೆಟ್. ಆರ್ಗ್‌ನ ಜತೆ ಫೇಸ್ ಬುಕ್, ಎರಿಕ್ಸನ್, ಮೀಡಿಯಾ ಟೆಕ್, ನೋಕಿಯಾ, ಒಪೆರಾ, ಕ್ವಲ್ ಕಾಮ್ ಹಾಗೂ ಸ್ಯಾಮ್ ಸಂಗ್ ಸಂಸ್ಥೆಗಳು ಜಂಟಿಯಾಗಿ ಕೈ ಜೋಡಿಸಿವೆ. ಜ್ಞಾನ ಹಂಚಿಕೆ, ಸಂಸ್ಥೆ ಪ್ರಸರಣ ಹಾಗೂ ಸರ್ಕಾರಗಳನ್ನು ಜಾಗತಿಕ ಮಟ್ಟದಲ್ಲಿ ಜೋಡಿಸುವ ಮಹತ್ವದ ಯೋಜನೆ ಇದಾಗಿದೆ.

ಕ್ಲೌಂಡ್ ಕಂಪ್ಯೂಟಿಂಗ್ ನ ನೈಜ ಉದಾಹರಣೆಯಾಗಿ ಈ ಯೋಜನೆ ಸಾಕಾರಗೊಳ್ಳುವ ಇರಾದೆ ಮಾರ್ಕ್ ಅವರಿಗಿದೆ. ಹೆಚ್ಚಿನ ಮಾಹಿತಿಗೆ ಇಂಟರ್ನೆಟ್.ಆರ್ಗ್ ತಾಣ ವೀಕ್ಷಿಸಿ

English summary
New Delhi: Facebook CEO Mark Zuckerberg today launched the global Internet project called internet.org. Mark is on a two-day visit to India. Internet.org, a global partnership with the goal of making internet access available to the next 5 billion people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X