ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋ ಪಾಲಿನ ಶೇ 9.9 ಷೇರುಗಳನ್ನು ಖರೀದಿಸಿದ ಫೇಸ್ಬುಕ್

|
Google Oneindia Kannada News

ನವದೆಹಲಿ, ಏಪ್ರಿಲ್ 22: ಟೆಲಿಕಾಂ ಕ್ಷೇತ್ರದಲ್ಲಿ ಅಗ್ರಪಂಕ್ತಿಯಲ್ಲಿರುವ ರಿಲಯನ್ಸ್ ಜಿಯೋ ಜೊತೆಗೆ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ಒಪ್ಪಂದ ಮಾಡಿಕೊಂಡಿದೆ. ಜಿಯೋದಲ್ಲಿರುವ ಶೇ 9.9ರಷ್ಟು ಪಾಲನ್ನು ಸುಮಾರು 5.7 ಬಿಲಿಯನ್ ಡಾಲರ್ (43,574 ಕೋಟಿ ರು ) ಮೊತ್ತಕ್ಕೆ ಫೇಸ್ಬುಕ್ ಖರೀದಿಸಿದೆ.

ಈ ಮೂಲಕ ಫೇಸ್ಬುಕ್ ತನ್ನ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದಾಗಿದ್ದರೆ, ರಿಲಯನ್ಸ್ ತನ್ನ ಸಾಲದ ಹೊರೆಯನ್ನು ಇನ್ನಷ್ಟು ತಗ್ಗಿಸಿಕೊಳ್ಳಬಹುದಾಗಿದೆ. ಒಟ್ಟಾರೆ ಈ ಒಪ್ಪಂದದ ಮೌಲ್ಯ 4.62 ಲಕ್ಷ ಕೋಟಿ ರು (65.95 ಬಿಲಿಯನ್ ಡಾಲರ್) ಎಂದು ಅಂದಾಜಿಸಲಾಗಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಇದು ಅತ್ಯಂತ ದೊಡ್ಡ ಪ್ರಮಾಣದ ಹೂಡಿಕೆಯಾಗಿದೆ, ಭಾರಿ ಪ್ರಮಾಣದ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿಐ) ಕೂಡಾ ಎನಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ವಕ್ತಾರರು ಹೇಳಿದ್ದಾರೆ.

Facebook buys 9.9% stake in Reliance Jio for Rs 43,574 crore

ಸುಮಾರು 388 ಮಿಲಿಯನ್ ಬಳಕೆದಾರರನ್ನು ಆನ್ ಲೈನ್ ಗೆ ಕರೆ ತಂದಿರುವ ರಿಲಯನ್ಸ್ ಜಿಯೋ ಕಳೆದ ಮುರ್ನಾಲ್ಕು ವರ್ಷಗಳಲ್ಲಿ ಟೆಲಿಕಾಂ, ಇಂಟರ್ನೆಟ್ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಿದೆ. ಜಿಯೋ ಮೂಲಕ ಭಾರತದಲ್ಲಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಫೇಸ್ಬುಕ್ ತಲುಪಲಿದೆ ಎಂದು ಫೇಸ್ಬುಕ್ ವಕ್ತಾರರು ಹೇಳಿದ್ದಾರೆ.

ಜಿಯೋ ಪ್ಲಾಟ್ ಫಾರ್ಮ್, ರಿಲಯನ್ಸ್ ರೀಟೈಲ್, ಫೇಸ್ಬುಕ್ ನ ವಾಟ್ಸಾಪ್ ನಡುವೆ ಒಪ್ಪಂದ ಏರ್ಪಟ್ಟಿದ್ದು, ಜಿಯೋ ಮಾರ್ಟ್ ಪ್ಲಾಟ್ ಫಾರ್ಮ್ ಮೂಲಕ ಸಣ್ಣ ಉದ್ದಿಮೆದಾರರನ್ನು ಆಕರ್ಷಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

English summary
Facebook has bought a 9.9% stake in Reliance Jio for $5.7 billion (Rs 43,574 crore), the telecom unit of Reliance Industries Ltd (RIL)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X