ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಮೇಲೆ ಹೂಡಿಕೆ ಮಾಡಿ, 42 ಸಾವಿರ ರು ಗಡಿ ದಾಟಲಿದೆ

|
Google Oneindia Kannada News

ನವದೆಹಲಿ, ಸೆ.10: ಸ್ಥಳೀಯ ಆಭರಣಗಾರರಿಂದ ಹಳದಿ ಲೋಹದ ಬೇಡಿಕೆ ಸದ್ಯಕ್ಕೆ ತಗ್ಗಿದೆ.. ಸೋಮವಾರದಂದು ದೆಹಲಿ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಮಂಗಳವಾರದಂದು ಏಷ್ಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಚಿನ್ನದ ಬೆಲೆ ಏರಿಳಿತವಿದ್ದರೂ ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಸಕಾಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರದಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂ. ಗಳಷ್ಟು ಇಳಿಕೆ ಆಗಿ, 39,225 ರೂ. ಗಳ ಮಟ್ಟ ತಲುಪಿತ್ತು. ಆದರೆ, ಈಗ ಡಾಲರ್ ಎದುರು ರುಪಾಯಿ ಮೌಲ್ಯ ಸ್ಥಿರತೆ ಕಂಡು ಬಂದಿದೆ. ಸ್ಥಳೀಯರಿಂದ ಬೇಡಿಕೆ ತಗ್ಗಿರುವುದು ಚಿನ್ನದ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಿದೆ. ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯಲ್ಲೂ ಅಪಾರ ಇಳಿಕೆ ಕಂಡು ಬಂದಿದ್ದು, ಕೆಜಿಗೆ 1,400 ರೂ. ನಷ್ಟು ಇಳಿಕೆಯಾಗಿ 48,500 ರೂ. ಗಳ ಮಟ್ಟ ತಲುಪಿತ್ತು.

ಈ ದಿನ ನಿಮ್ಮ ನಗರಗಳಲ್ಲಿನ ಚಿನ್ನ, ಬೆಳ್ಳಿ ದರ ಇಲ್ಲಿದೆ ನೋಡಿ

ಏರಿಳಿಕೆ ನಡುವೆ ಹೂಡಿಕೆ ಸಾಧುವೆ?: ಚಿನ್ನದ ಬೆಲೆ 10 ಗ್ರಾಂಗೆ 40,000 ರು ದಾಟಿದ್ದನ್ನು ಇಲ್ಲಿ ಸ್ಮರಿಸಬಹುದು. ಲಕ್ನೋ, ಆಗ್ರಾ ಹಾಗೂ ಉತ್ತರ ಭಾರತದ ಚಿನಿವಾರ ಪೇಟೆಗಳಲ್ಲಿನ ಟ್ರೆಂಡ್ ನಂತೆ ಚಿನ್ನದ ಬೆಲೆ ಮತ್ತೆ ಏರಿಕೆಯಾಗಲಿದೆ. ಜಾಗತಿಕ ಆರ್ಥಿಕ ಬೆಳವಣಿಗೆ ಮತ್ತು ದೇಶದಲ್ಲಿ ಆರ್ಥಿಕತೆ ಕುಸಿತ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲೆ ಆಸಕ್ತಿ ತೋರಿದ್ದರು.

Experts say Buy gold! Price set to hit Rs 42,000 per 10 gms by 2020

ಯುಎಸ್ ಹಾಗೂ ಚೀನಾ ನಡುವೆ ಅಕ್ಟೋಬರ್ ತಿಂಗಳಿನಲ್ಲಿ ವ್ಯಾಪಾರ- ವಹಿವಾಟು ಆರಂಭಗೊಳ್ಳುವ ಹಿನ್ನಲೆಯಲ್ಲಿ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಿದೆ. ಹಾಂಗ್ ಕಾಂಗ್ ಪ್ರತಿಭಟನೆ, ಬೋರಿಸ್ ಜಾನ್ಸನ್ ಬ್ರಿಟಿಷ್ ಸಂಸತ್ತಿನಲ್ಲಿ ಹಿನ್ನಡೆ ಎಲ್ಲವೂ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಿದೆ.

ಕಲಂ 370 ರದ್ದು, ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಕೇಳಿದರೆ ಬೆಚ್ಚುತ್ತೀರಿ!ಕಲಂ 370 ರದ್ದು, ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಕೇಳಿದರೆ ಬೆಚ್ಚುತ್ತೀರಿ!

"ದಿಢೀರ್ ಏರಿಳಿತದ ನಡುವೆಯೂ ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗಲಿದ್ದು, 2020ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 42,000 ರುಗೇರುವ ಮುನ್ಸೂಚನೆ ಸಿಕ್ಕಿದೆ" ಎಂದು ಏಂಜೆಲ್ ಬ್ರೋಕಿಂಗ್ ನ ಉಪಾಧ್ಯಕ್ಷ ಅನುಜ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡ ಬಳಿಕ ಕುಸಿದ ಚಿನ್ನ, ಬೆಳ್ಳಿ ದರದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡ ಬಳಿಕ ಕುಸಿದ ಚಿನ್ನ, ಬೆಳ್ಳಿ ದರ

ದೀಪಾವಳಿ ವೇಳೆಗೆ ಚಿನ್ನಾಭರಣ ಖರೀದಿ ಜೋರಾಗಲಿದ್ದು, 10ಗ್ರಾಂ ಚಿನ್ನದ ಬೆಲೆ 39 ಸಾವಿರ ರು ನಿಂದ 40 ಸಾವಿರ ರು ನಂತೆ ವಹಿವಾಟು ನಡೆಸುವ ಸಾಧ್ಯತೆಯಿದೆ. ಡಿಸೆಂಬರ್ 2019 ವೇಳೆ 41000ರು ದಾಟಿ ಚಿನ್ನದ ಬೆಲೆ ಮುನ್ನುಗ್ಗಲಿದೆ. ಜಾಗತಿಕವಾಗಿ ಪ್ರತಿ ಔನ್ಸಿಗೆ 1.450 ಡಾಲರ್ ನಿಂದ 1.6 ಡಾಲರ್ ಪ್ರತಿ ಔನ್ಸ್ ತನಕ ಟ್ರೆಂಡ್ ಆಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

English summary
Gold price in India has scaled a nearly 6-year high and have crossed Rs 40,000 per 10 gms in Indian spot markets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X