ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಇನ್ನೂ ಕಡಿಮೆಯಾಗುತ್ತೆ! ಯಾಕೆ ಗೊತ್ತಾ?

|
Google Oneindia Kannada News

ಬೆಂಗಳೂರು, ಮಾರ್ಚ್ 06: ಚಿನ್ನ ಪ್ರಿಯರಿಗೆ ಮಹ ಸಂತಸದ ಸುದ್ದಿ. ಕಳೆದ ಹನ್ನೊಂದು ತಿಂಗಳಲ್ಲಿ ಶೇ. 20 ರಷ್ಟು ದರ ಇಳಿಕೆ ಕಂಡು ದಾಖಲೆ ಬರೆದಿದೆ. ಕಳೆದ ಆಗಸ್ಟ್ ನಲ್ಲಿ 5600 ರೂ. ಇದ್ದ ಒಂದು ಗ್ರಾಂ ಚಿನ್ನ ಹಂತ ಹಂತವಾಗಿ ಕಡಿಮೆಯಾಗಿ ಇದೀಗ 4100 ರೂ.ಗೆ ಇಳಿದಿದೆ .( ಜಿಎಸ್ ಟಿ ಹೊರತು ಪಡಿಸಿ) ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇನ್ನೂ ಕಡಿಮೆಯಾಗಲಿದೆ. ಚಿನ್ನ ಖರೀದಿ ಮಾಡಲಿಕ್ಕೆ ಸೂಕ್ತ ಕಾಲ. ಚಿನ್ನದ ಬೆಲೆ ಕಡಿಮೆ ಆಗುವ ಹಿಂದೆ ಎರಡು ಮಹತ್ವದ ಕಾರಣಗಳಿವೆ ! ಹೀಗಾಗಿ ಬರುವ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ಕಡಿಮೆಯಾಗಲಿದೆ ಅಂತ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅದಕ್ಕೆ ನೈಜ ಕಾರಣವೂ ವಿವರಿಸಿದ್ದಾರೆ.

ಕರೋನಾ ಸಂಕಷ್ಟ ಕಾಲದಲ್ಲೂ ಚಿನ್ನದ ಬೆಲೆ ಗಗನಕ್ಕೇರಿತ್ತು. 4,000 ಆಸು ಪಾಸಿನಲ್ಲಿದ್ದ ಒಂದು ಗ್ರಾಂ. ಚಿನ್ನದ ದರ ಏಕಾಏಕಿ 5600 ರೂ. ಜಿಗಿದಿತ್ತು. ಇದೀಗ ಹಂತ ಹಂತವಾವಾಗಿ ಇಳಿದು 4170 ರೂ. ( ಜಿಎಸ್ ಟಿ ಹೊರತು ಪಡಿಸಿ) ಆಗಿದೆ. ಇದೇ ಚಿನ್ನದ ಮಾರುಕಟ್ಟೆ ಇತಿಹಾಸದಲ್ಲಿ ಈ ಪರಿ ಕಡಿಮೆಯಾಗಿದೆ. ಇನ್ನೂ ಕೆಲವು ದಿನಗಳಲ್ಲಿ ಮತ್ತಷ್ಟು ಚಿನ್ನದ ದರ ಭಾರತದ ಮಾರುಕಟ್ಟೆಯಲ್ಲಿ ಕಡಿಮೆಯಾಗಲಿದೆ ಎಂದು ಷೇರು ಮಾರುಕಟ್ಟೆಯಲ್ಲಿ ಪರಿಣಿತ ಟ್ರೇಡರ್ ತಿಳಿಸಿದ್ದಾರೆ. ಇದರ ಹಿಂದೆ ನೈಜ ಕಾರಣವೂ ಇದೆ.

ಮಾರ್ಚ್ 6; ಹತ್ತು ತಿಂಗಳ ನಂತರ 20% ಇಳಿದ ಚಿನ್ನದ ಬೆಲೆಮಾರ್ಚ್ 6; ಹತ್ತು ತಿಂಗಳ ನಂತರ 20% ಇಳಿದ ಚಿನ್ನದ ಬೆಲೆ

ಕರೋನಾ ಕಾಲದಿಂದಲೂ ಭಾರತೀಯ ಷೇರು ಪೇಟೆ ವಿದೇಶಿ ಷೇರುಪೇಟೆಗೆ ಹೋಲಿಸಿದರೆ ನಿರೀಕ್ಷೆಗೂ ಮೀರಿ ಆಶಾದಾಯಕವಾಗಿದೆ. ಇದರ ಪರಿಣಾಮ ಭಾರತೀಯ ರೂಪಾಯಿ ಮೌಲ್ಯ ಏರುತ್ತಿದೆ. ಅಮೆರಿಕಾ ಡಾಲರ್ ಮೌಲ್ಯ ಭಾರತೀಯ ರೂಪಾಯಿ ಮೌಲ್ಯದ ಮುಂದೆ ಕುಸಿಯುತ್ತಿದೆ. ಇನ್ನೊಂದಡೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆ ಕಡಿಮೆಯಾಗುತ್ತಿದೆ. ಈ ರೀತಿಯ ಅಪರೂಪದ ಬೆಳವಣಿಗೆ ತೀರಾ ವಿರಳ. ಹೀಗಾಗಿಯೇ ದಾಖಲೆ ಪ್ರಮಾಣದಲ್ಲಿ ಶೇ. 20 ರಷ್ಟು ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿದೆ ಎಂದು ವಿಶ್ಲೇಷಿಸಿದ್ದಾರೆ.

Expert opinion: Gold Price in India will fall down soon

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆಯಾಗಲಿಕ್ಕೂ ಒಂದು ಕಾರಣವಿದೆ. ಜಗತ್ತಿನ ಶ್ರೀಮಂತ ಉದ್ಯಮಿ ವಾರೆನ್ ಬಫೆಟ್ ಇತ್ತೀಚೆಗೆ ತನ್ನಲ್ಲಿದ್ದ 565 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಚಿನ್ನವನ್ನು ಇತ್ತೀಚೆಗೆ ಮಾರಾಟ ಮಾಡಿದ್ದರು. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಪೂರೈಕೆ ಜಾಸ್ತಿಯಾಗಿ ಅದರ ಬೆಲೆ ಕುಸಿಯುತ್ತಿದೆ. ಇದೇ ಅವಧಿಯಲ್ಲಿ ಅಮೆರಿಕಾ ಡಾಲರ್ ಎದುರು ಭಾರತೀಯ ರೂಪಾಯಿ ಏರಿಕೆಯಾಗುತ್ತಿದೆ. ಈ ರೀತಿಯ ಬೆಳವಣಿಗೆ ತೀರಾ ಅಪರೂಪ.

ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಪೂರೈಕೆಯಾಗಿ, ಬೆಲೆ ಕಡಿಮೆಯಾದರೂ, ಭಾರತೀಯ ನಾಣ್ಯದ ಬೆಲೆ ಅಮೆರಿಕಾ ಡಾಲರ್ ಎದುರು ಕುಸಿದರೆ ಅದರ ಲಾಭ ಭಾರತೀಯರಿಗೆ ಸಿಗಲ್ಲ. ಯಾವಾಗಲೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಪೂರೈಕೆ ಜಾಸ್ತಿಯಾಗಿ ಬೆಲೆ ಕಡಿಮೆಯಾದರೂ, ಅಮೆರಿಕಾ ಡಾಲರ್ ಮುಂದೆ ಭಾರತೀಯ ರೂಪಾಯಿ ಮೌಲ್ಯ ಕುಸಿಯುತ್ತಿತ್ತು. ಒಂದು ವೇಳೆ ಚಿನ್ನದ ಪೂರೈಕೆ ಕಡಿಮೆಯಾಗಿ ಚಿನ್ನದ ಬೆಲೆ ಜಾಸ್ತಿಯಾದಾಗ ಮಾತ್ರ, ಅಮೆರಿಕಾದ ರೂಪಾಯಿ ಮುಂದೆ ಭಾರತೀಯ ರೂಪಾಯಿ ಚೇತರಿಸಿಕೊಳ್ಳುತ್ತಿತ್ತು.

Expert opinion: Gold Price in India will fall down soon

Recommended Video

ಅಬ್ಬಾ ! ಬೆಲೆ ಎಷ್ಟು ಕಡಿಮೆ ಆಗಿದೆ ಗೊತ್ತಾ !! | Oneindia Kannada

ಭಾರತ ವಿಶ್ವದಲ್ಲಿ ಚಿನ್ನವನ್ನು ಅಮದು ಮಾಡುಕೊಳ್ಳುವಳ್ಳಿ ಅಗ್ರಗಣ್ಯ ರಾಷ್ಟ್ರ. ಹಟ್ಟಿ ಚಿನ್ನದ ಗಣಿ ಹೊರತು ಪಡಿಸಿದರೆ ಭಾರತದಲ್ಲಿ ಚಿನ್ನದ ಗಣಿಗಾರಿಕೆ ಇಲ್ಲ. ಹೀಗಾಗಿ ಹೊರ ದೇಶಗಳಿಂದಲೇ ಚಿನ್ನವನ್ನು ಅಮದು ಮಾಡಿಕೊಳ್ಳುತ್ತಿದ್ದೇವೆ. ಆಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪೂರೈಕೆ ಜಾಸ್ತಿಯಾಗಿದ್ದು, ಬೇಡಿಕೆ ಇಳಿ ಮುಖವಾಗಿ ಬೆಲೆ ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ರೂಪಾಯಿ ಮೌಲ್ಯವೂ ಅಮೆರಿಕಾ ಡಾಲರ್ ಮುಂದೆ ಹೆಚ್ಚಾಗುತ್ತಿದ್ದು, ಅದರ ಪ್ರತಿಫಲ ಚಿನ್ನದ ದರ ದಾಖಲೆ ಪ್ರಮಾಣದಲ್ಲಿ ಶೇ. 20 ರಷ್ಟು ಗಣನೀಯವಾಗಿ ಇಳಿದಿದೆ. ಈಗಿನ ಅಂತಾರಾಷ್ಟೀಯ ಷೇರು ಮಾರುಕಟ್ಟೆ ಬೆಳವಣಿಗೆ ನೋಡಿದರೆ ಪ್ರತಿ ಗ್ರಾಂ ಚಿನ್ನದ ಮೇಲೆ ಇನ್ನೂ 200 ರೂ. ನಿಂದ 300 ರೂ. ಇಳಿಯುವ ಸಾಧ್ಯತೆಯಿದೆ ಎಂದು ನುರಿತ ತಜ್ಞರು ಒನ್ಇಂಡಿಯಾ ಕನ್ನಡಗೆ ತಿಳಿಸಿದ್ದಾರೆ.

English summary
Expert says there is all possibility that Gold rates will be slashed soon in India. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X