ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗಿಗಳನ್ನು 3 ಪಟ್ಟು ಹೆಚ್ಚು ಮಾಡಿಕೊಳ್ಳಲಿರುವ ಬೆಂಗಳೂರು ಕಂಪನಿ

|
Google Oneindia Kannada News

ಮೈಸೂರು, ಸೆಪ್ಟೆಂಬರ್. 22: ಭಾರತದ ಪ್ರಮುಖ ಕ್ಲ್ವೌಡ್ ಟೆಲಿಫೋನಿ ಕಂಪನಿ ಎಕ್ಸೋಟೆಲ್ 2016ರ ಅಂತ್ಯದ ವೇಳೆಗೆ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 3 ಪಟ್ಟು ಹೆಚ್ಚಳ ಮಾಡಿಕೊಳ್ಳಲಿದ್ದೇನೆ ಎಂದು ತಿಳಿಸಿದೆ.

ಸದ್ಯ ಕಂಪನಿಯಲ್ಲಿ 70 ಜನ ಕೆಲಸ ಮಾಡುತ್ತಿದ್ದು ಮುಂದಿನ 15 ತಿಂಗಳುಗಳಲ್ಲಿ ಅವರ ಸಂಖ್ಯೆಯನ್ನು 200ಕ್ಕೆ ಏರಿಸಲಾಗುವುದು ಎಂದು ತಿಳಿಸಿದೆ. ಪತ್ರಿಕಾ ಹೇಳಿಕೆಯಲ್ಲಿ ಸಂಸ್ಥೆಯ ಮುಂದಿನ ಯೋಜನೆಗಳನ್ನು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

Exotel Plans to Triple Headcount by End of Year 2016

ಬೆಂಗಳೂರಿನ ಹಲಸೂರು ಕೆರೆ ಬಳಿ ಹೊಸ ಕಚೇರಿಯನ್ನು ತೆರೆಯಲು ಮುಂದಾಗಿರುವ ಸಂಸ್ಥೆ ಒಂದು ಸಾವಿರಕ್ಕೂ ಅಧಿಕ ಗ್ರಾಹಕರನ್ನು ಹೊಂದಿದೆ ಎಂದು ಕಂಪನಿಯ ಸಿಇಒ ಶಿವಕುಮಾರ್ ಗಣೇಶನ್ ಮಾಹಿತಿ ನೀಡಿದ್ದಾರೆ.[ಎಚ್ ಪಿ ಕಂಪನಿಯಿಂದ 30 ಸಾವಿರ ಉದ್ಯೋಗ ಕಡಿತ]

ಐವಿಆರ್, ಕಾಲ್ ರೆಕಾರ್ಡಿಂಗ್, ಶಕ್ತಿಶಾಲಿ ಎಪಿಎಸ್ ಕುರಿತಂತೆ ಸಂಸ್ಥೆ ಉತ್ತಮ ಸೇವೆ ನೀಡುವುದರೊಂದಿಗೆ ಸದಾ ಸಂಶೋಧನೆಯಲ್ಲಿ ನಿರತವಾಗಿದೆ ಎಂದು ಸಂಸ್ಥೆಯ ಮತ್ತೊಬ್ಬ ಸಿಇಒ ಈಶ್ವರ್ ಶ್ರೀಧರನ್ ತಿಳಿಸಿದ್ದಾರೆ. 2011 ರಲ್ಲಿ ಆರಂಭವಾದ ಸಂಸ್ಥೆ ಇದೀಗ ಬೆಳವಣಿಗೆಯೊಂದಿಗೆ ಮುಂದೆ ಸಾಗುತ್ತಿದೆ.

English summary
Exotel, one of India's leading Cloud Telephony Company based out of Bengaluru, today announced the plans to triple their headcount by end of year 2016. Currently with 70 employees, the company is looking forward to increase headcount to over 200 people in the next 15 months, hiring across technology roles and sales positions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X