ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣ ವ್ಯಾಪಾರಗಳಿಗೆ ಪ್ರೋತ್ಸಾಹ, ಜಿಎಸ್ ಟಿ ಮಿತಿಯಲ್ಲಿ ಏರಿಕೆ: ಜೇಟ್ಲಿ

|
Google Oneindia Kannada News

ನವದೆಹಲಿ, ಜನವರಿ 10: ಸಣ್ಣ ವ್ಯಾಪಾರಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಜಿಎಸ್ ಟಿ ಕೌನ್ಸಿಲ್ ನಿಂದ ಸಂಯೋಜನಾ ಯೋಜನೆ ಅಡಿಯಲ್ಲಿ ವಾರ್ಷಿಕ ವಹಿವಾಟಿನ ಮಿತಿಯನ್ನು ದುಪ್ಪಟ್ಟುಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಹೇಳಿದ್ದಾರೆ.

ಈಶಾನ್ಯ ಭಾರತದ ಭಾಗಗಳಲ್ಲಿ ಜಿಎಸ್ ಟಿಯ ಈಗಿರುವ ವಾರ್ಷಿಕ ಮಿತಿ 10 ಲಕ್ಷ ರುಪಾಯಿಯನ್ನು 20 ಲಕ್ಷಕ್ಕೆ ಹಾಗೂ ದೇಶದ ಉಳಿದೆಡೆ ಇರುವ 20 ಲಕ್ಷದ ಮಿತಿಯನ್ನು 40 ಲಕ್ಷಕ್ಕೆ ಏರಿಸಲಾಗಿದೆ. ಅದೇ ರೀತಿ ಸಂಯೋಜನಾ ಯೊಜನೆ ಪಡೆಯಲು ಇರುವ ಮಿತಿಯನ್ನು ಏಪ್ರಿಲ್ 1, 2019ರಿಂದ 1ರಿಂದ 1.5 ಕೋಟಿಗೆ ಏರಿಸಲಾಗಿದೆ.

ಮನೆ ಖರೀದಿ, ಮಾರಾಟಗಾರರಿಗೆ ಜಿಎಸ್ಟಿ ಸಭೆಯಿಂದ ಶುಭ ಸುದ್ದಿ?ಮನೆ ಖರೀದಿ, ಮಾರಾಟಗಾರರಿಗೆ ಜಿಎಸ್ಟಿ ಸಭೆಯಿಂದ ಶುಭ ಸುದ್ದಿ?

ಸದ್ಯಕ್ಕೆ ಈ ಯೋಜನೆ ಅಡಿಯಲ್ಲಿ ಮೂರು ತಿಂಗಳಿಗೆ ಒಮ್ಮೆ ತೆರಿಗೆ ಪಾವತಿಸುತ್ತಿದ್ದು, ವರ್ಷಕ್ಕೆ ಒಮ್ಮೆ ರಿಟರ್ನ್ಸ್ ದಾಖಲಿಸುತ್ತಿದ್ದಾರೆ. ಕೌನ್ಸಿಲ್ ನಿಂದ ಸಂಯೋಜನಾ ಯೋಜನೆಗೆ ಸೇವಾ ವಲಯಕ್ಕೆ ಒಪ್ಪಿಗೆ ಸಿಕ್ಕಿದೆ ಎಂದಿದ್ದಾರೆ.

Exemption limit for GST hiked to 40 lakh from 20 lakh, Jaitley

ಇನ್ನು ಕೇರಳ ರಾಜ್ಯವು ಅಂತರರಾಜ್ಯ ವ್ಯಾಪಾರಕ್ಕೆ ಅರ್ಹವಾಗಿದೆ. ಗರಿಷ್ಠ ಒಂದು ಪರ್ಸೆಂಟ್ ಸೆಸ್ ಅನ್ನು ಎರಡು ವರ್ಷಗಳ ಅವಧಿಗೆ ವಿಧಿಸಬಹುದು ಎಂದಿದ್ದಾರೆ.

ಜನವರಿ 01ರಿಂದ ಯಾವೆಲ್ಲ ಸಾಮಗ್ರಿಗಳ ಬೆಲೆ ಇಳಿಕೆ, ಪಟ್ಟಿ ನೋಡಿಜನವರಿ 01ರಿಂದ ಯಾವೆಲ್ಲ ಸಾಮಗ್ರಿಗಳ ಬೆಲೆ ಇಳಿಕೆ, ಪಟ್ಟಿ ನೋಡಿ

ಲಾಟರಿ ಹಾಗೂ ರಿಯಲ್ ಎಸ್ಟೇಟ್ ಅನ್ನು ಜಿಎಸ್ ಟಿ ಅಡಿ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಭಿನ್ನವಾದ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಏಳು ಮಂದಿ ಸಚಿವರ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಯಿತು.

English summary
In a big boost to the small businesses, Union finance minister Arun Jaitley on Thursday said the GST Council has doubled the annual turnover exemption limit for the composition scheme. The council has increased the GST exemption limit to 20 lakh from 10 lakh for the north eastern states and 40 lakh, from 20 lakh, for the rest of the country, Jaitley added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X