ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ಲೋಕಕ್ಕೆ ಟ್ರಂಪ್ ರೀ ಎಂಟ್ರಿ, ಮಾಜಿ ಸಿಇಒ ನೋ ಎಂಟ್ರಿ!

|
Google Oneindia Kannada News

ನ್ಯೂಯಾರ್ಕ್, ಮೇ 12: ಟ್ವಿಟ್ಟರ್ ಖರೀದಿ ನಂತರ ಎಲಾನ್ ಮಸ್ಕ್ ಹಲವು ಬದಲಾವಣೆಗಳಿಗೆ ನಾಂದಿ ಹಾಡುವ ಸೂಚನೆಗಳು ಸಿಕ್ಕಿವೆ. ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಮೈಕ್ರೋಬ್ಲಾಗಿಂಗ್ ತಾಣಕ್ಕೆ ಮರಳುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿದೆ. ಈ ನಡುವೆ ಮಾಜಿ ಸಿಇಒ ಜಾಕ್ ಡಾರ್ಸಿ ಅವರು ತಮಗೆ ಒಲಿದು ಬರುವ ಟ್ವಿಟ್ಟರ್ ನಾಯಕತ್ವಕ್ಕೆ ನಿರಾಕರಿಸುವ ಸುದ್ದಿ ಬಂದಿದೆ.

ಟ್ವಿಟ್ಟರ್ ಸಂಸ್ಥೆ ಸಹ ಸ್ಥಾಪಕ ಹಾಗೂ ಮಾಜಿ ಸಿಇಒ ಜಾಕ್ ಅವರು ಮತ್ತೊಮ್ಮೆ ಟ್ವಿಟ್ಟರ್ ಸಂಸ್ಥೆ ಮುಂದಾಳತ್ವ ವಹಿಸಿಕೊಳ್ಳಲು ತಾವು ಸಿದ್ಧರಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಟ್ವಿಟ್ಟರ್ ಜೊತೆಗಿನ ತಮ್ಮ ಎರಡನೇ ಅಧ್ಯಾಯದ ಸಾಧ್ಯತೆಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಸದ್ಯ ಡಾರ್ಸಿ ಪೇಮೆಂಟ್ ಸಂಸ್ಥೆ ಬ್ಲಾಕ್ ಐಎನ್ ಸಿ ನಡೆಸುತ್ತಿದ್ದಾರೆ. ಟ್ವಿಟ್ಟರ್ ಸಂಸ್ಥೆಯಲ್ಲಿ ಜಾಕ್ ಶೇ 2.4 ರಷ್ಟು ಪಾಲು ಹೊಂದಿದ್ದಾರೆ.

Ex-CEO Jack Dorsey Says Not Interested To Head Twitter Again

ಏಪ್ರಿಲ್ 25ರಂದು ಸುಮಾರು 44 ಬಿಲಿಯನ್ ಡಾಲರ್ ಮೊತ್ತಕ್ಕೆ ಟ್ವಿಟ್ಟರ್ ಖರೀದಿಸಿದ ಮಸ್ಕ್ ಇನ್ನೂ ಸಂಸ್ಥೆಯ ಮುಂದಾಳತ್ವ ಯಾರು ವಹಿಸಿಕೊಳ್ಳಲಿದ್ದಾರೆ ಎಂಬುದರ ಗುಟ್ಟು ಬಿಟ್ಟು ಕೊಟ್ಟಿಲ್ಲ. ಭಾರತೀಯ ಮೂಲದ ಸಿಇಒ ಪರಾಗ್ ಬದಲಾವಣೆ ಸಾಧ್ಯತೆ ಬಗ್ಗೆಯೂ ಸ್ಪಷ್ಟನೆ ಇಲ್ಲ. ಮಸ್ಕ್ ಅವರು ತಾತ್ಕಾಲಿಕವಾಗಿ ಸಿಇಒ ಆಗಿ ಸಂಸ್ಥೆಯನ್ನು ಮುನ್ನಡೆಸುವ ಬಗ್ಗೆ ಕೂಡಾ ವರದಿಗಳಿವೆ.

Ex-CEO Jack Dorsey Says Not Interested To Head Twitter Again

ಟ್ರಂಪ್ ರೀ ಎಂಟ್ರಿ ಬಗ್ಗೆ ಮಸ್ಕ್;
ಫ್ಯೂಚರ್ ಆಫ್ ಕಾರ್ಸ್ ಸಮಾವೇಶದಲ್ಲಿ ಈ ಕುರಿತು ಮಾತನಾಡಿದ ಎಲಾನ್ ಮಸ್ಕ್, ''ಅಮೆರಿಕದ ಕ್ಯಾಪಿಟಲ್ ಹಿಲ್ಸ್ ಗಲಭೆ, ಹಿಂಸಾಚಾರ ಘಟನೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಟ್ರಂಪ್ ಅವರು ಮಾಡಿದ್ದ ಟ್ವೀಟ್ ಆಧಾರದ ಮೇಲೆ ಟ್ವಿಟ್ಟರ್ ಸಂಸ್ಥೆ ಕೈಗೊಂಡ್ರ ಕ್ರಮ ಮೂರ್ಖತನದಿಂದ ಕೂಡಿತ್ತು. ಸಾಮಾಜಿಕ ಮಾಧ್ಯಮದಿಂದ ಟ್ರಂಪ್ ರನ್ನು ದೂರ ಮಾಡಿದ್ದು ಕೆಟ್ಟ ನಿರ್ಧಾರ, ಈ ರೀತಿ ಶಾಶ್ವತ ನಿರ್ಬಂಧ, ನಿಷೇಧ ಕ್ರಮದಿಂದ ಸಾರ್ವಜನಿಕರಿಗೆ ಟ್ವಿಟ್ಟರ್ ಮೇಲಿನ ವಿಶ್ವಾಸಕ್ಕೆ ಕುಂದುಂಟಾಗಲಿದೆ,'' ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಇಒ ಮಸ್ಕ್, ಯಾರೊಬ್ಬರ ಮೇಲೂ ಶಾಶ್ವತ ನಿಷೇಧ ಹೇರುವ ಹೇಳಿಕೆಗೆ ನನ್ನ ಸಹಮತವಾಗಿದೆ, ಈ ರೀತಿ ಕ್ರಮ ವೈಫಲ್ಯದಿಂದ ಕೂಡಿರುತ್ತದೆ ಎಂದಿದ್ದಾರೆ. ಜನವರಿ 14, 2021ರಂದು ಟ್ವಿಟ್ಟರ್ ಲೋಕದಿಂದ ಟ್ರಂಪ್ ಹೊರಹಾಕಿದ್ದಾಗ ಮಾತನಾಡಿದ್ದ ಜಾಕ್, ಇದು ಅಪಾಯಕಾರಿ ಮುನ್ಸೂಚನೆಗೆ ಕಾರಣವಾಗಿದೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಎಲಾನ್ ಮಸ್ಕ್ ಅವರು 44 ಬಿಲಿಯನ್ ಡಾಲರ್ (ಸುಮಾರು 3.36 ಲಕ್ಷಕೋಟಿ ರೂ) ಹಣಕ್ಕೆ ಟ್ವಿಟ್ಟರ್ ಅನ್ನು ಖರೀದಿಸಿದ್ದಾರೆ. ಅದಕ್ಕಾಗಿ ಇದೇ ಜನವರಿಯಿಂದಲೇ ಅವರು ಟ್ವಿಟ್ಟರ್‌ನ ಷೇರುಗಳನ್ನು ಬಹಳ ರಹಸ್ಯವಾಗಿ ಖರೀದಿಸಲು ಆರಂಭಿಸಿದ್ದರು. ಶೇ. 9.2ರಷ್ಟು ಷೇರುಗಳ ಒಡೆಯರಾದ ಬಳಿಕ ಅವರು ಕಾನೂನಾತ್ಮಕವಾಗಿ ಟ್ವಿಟ್ಟರ್ ಖರೀದಿಗೆ ಬಿಡ್ ಹಾಕಿ ಇತರ ಷೇರುದಾರರ ಮನವೊಲಿಸಿ ಕೊನೆಗೂ ಗೆಲುವು ಸಾಧಿಸಿದ್ದಾರೆ.

ಟ್ವಿಟ್ಟರ್‌ನ ಅಧಿಕಾರ ತೆಗೆದುಕೊಂಡ ಬಳಿಕ ಪರಾಗ್ ಅಗರ್ವಾಲ್ ಅವರ ಬದಲು ಬೇರೊಬ್ಬರನ್ನು ಸಿಇಒ ಸ್ಥಾನದಲ್ಲಿ ಕೂರಿಸುವ ಸಾಧ್ಯತೆ ದಟ್ಟವಾಗಿದೆ.

English summary
Twitter Inc co-founder Jack Dorsey said on Wednesday that he was not keen to retake the helm of the social media company, hinting at his limited involvement if Elon Musk manages to successfully close the takeover deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X